Weight Loss: ಹೊಟ್ಟೆಯ ಬೊಜ್ಜು ಕರಗಿಸಲು ಬೆಳಗಿನ ಉಪಹಾರ, ರಾತ್ರಿಯ ಊಟವನ್ನು ಹೇಗೆ? ಯಾವಾಗ ಮಾಡ್ಬೇಕು?

ವ್ಯಾಯಾಮವು ತೂಕವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಜೊತೆಗೆ ಕಠಿಣ ಪರಿಶ್ರಮವಿಲ್ಲದೆ ಸರಿಯಾದ ಸಮಯಕ್ಕೆ ಬೆಳಗಿನ ಉಪಾಹಾರ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
     ಅಧಿಕ ಹೊಟ್ಟೆ ಕೊಬ್ಬು (Over Belly Fat) ಅಥವಾ ಹೊಟ್ಟೆಯ ಬೊಜ್ಜು, ತೂಕ ಹೆಚ್ಚಾಗುವಾಗ (Weight Gain) ಜನರಿಗೆ ಅನೇಕ ಕಾಯಿಲೆಗಳಿಗೆ (Disease) ತುತ್ತಾಗುವಂತೆ ಮಾಡುತ್ತದೆ. ಜೊತೆಗೆ ಜನರು (Beautiful) ಸೌಂದರ್ಯವೂ ಕುಂದುತ್ತದೆ. ಹೀಗಾಗಿ ಜನರು ಹೆಚ್ಚು ಅಸಮಾಧಾನಗೊಳ್ಳುತ್ತಾರೆ. ಅಧಿಕ ತೂಕವು ಅನೇಕ ರೀತಿಯ ಕಾಯಿಲೆಗಳನ್ನು ಉಂಟು ಮಾಡುತ್ತದೆ. ಆದರೆ ಸ್ಥೂಲಕಾಯ ಜನರಲ್ಲಿ ಆತ್ಮವಿಶ್ವಾಸದ ಕೊರತೆ ಉಂಟು ಮಾಡುತ್ತದೆ. ಪ್ರತಿಯೊಬ್ಬರೂ ಈ ದಿನಗಳಲ್ಲಿ ಸ್ಲಿಮ್ ಮತ್ತು ಆರೋಗ್ಯಕರವಾಗಿ ಕಾಣಬೇಕೆಂದು ಇಷ್ಟ ಪಡುತ್ತಾರೆ. ಆದರೆ ಇಂದಿನ ಜೀವನಶೈಲಿ, ಆಹಾರ ಪದ್ಧತಿಯು ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿ ಪರಿಣಮಿಸಿದೆ. ಮತ್ತು ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತಾ ಹೋಗುತ್ತದೆ.

    ಬೆಳಗಿನ ಉಪಾಹಾರ

    ವ್ಯಾಯಾಮವು ತೂಕವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ನೀವು ವ್ಯಾಯಾಮ ಅಥವಾ ಯೋಗ ಮಾಡುವುದನ್ನು ನಿಲ್ಲಿಸಿದರೆ, ನಂತರ ತೂಕವು ಮತ್ತೆ ಹೆಚ್ಚಾಗುತ್ತದೆ. ಆಗ ನೀವು ಕಠಿಣ ಪರಿಶ್ರಮದಿಂದ ಕಡಿಮೆ ಮಾಡಿದ್ದ ಹೊಟ್ಟೆಯ ಕೊಬ್ಬು ಮತ್ತೆ ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ಕಠಿಣ ಪರಿಶ್ರಮವಿಲ್ಲದೆ ಸರಿಯಾದ ಸಮಯಕ್ಕೆ ಬೆಳಗಿನ ಉಪಾಹಾರ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಬಹುದು.

    ತಜ್ಞರ ಪ್ರಕಾರ, ಉಪಹಾರದ ಸಮಯವನ್ನು ಬದಲಾಯಿಸುವ ಮೂಲಕ ಜನರು ಐದು ಕಿಲೋ ತೂಕ ಕಳೆದುಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಯಾವ ಸಮಯದಲ್ಲಿ ಉಪಹಾರ ಸೇವಿಸಬೇಕು ಎಂದು ತಿಳಿಯೋಣ.

    ಇದನ್ನೂ ಓದಿ: ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಲು ಮುಖ್ಯ ಕಾರಣಗಳು ಮತ್ತು ಸಮಸ್ಯೆಗಳು ಯಾವವು?

    ಬೆಳಗಿನ ಉಪಾಹಾರಕ್ಕೆ ಸರಿಯಾದ ಸಮಯ ಯಾವುದು?

    ಹಿಂದಿನ ಜನರು ಮುಂಜಾನೆ ಮತ್ತು ಸೂರ್ಯಾಸ್ತದ ನಂತರ ಕತ್ತಲೆಯಾಗುವ ಮೊದಲು ರಾತ್ರಿಯ ಊಟ ಮಾಡುತ್ತಿದ್ದರು. ಹೀಗಾಗಿ ಜನರು ಬೆಳಗಿನ ಉಪಾಹಾರ ಮತ್ತು ಸೂರ್ಯ ಮುಳುಗುವವರೆಗೆ ರಾತ್ರಿಯ ಊಟ ಮಾಡುತ್ತಾರೆ.

    ಬೆಳಗಿನ ಉಪಾಹಾರಕ್ಕೂ ರಾತ್ರಿ ಊಟಕ್ಕೂ ಬಹಳ ಅಂತರವಿದೆ. ತಜ್ಞರ ಪ್ರಕಾರ, ರಾತ್ರಿಯ ಊಟ ಮತ್ತು ಉಪಹಾರದ ನಡುವೆ ಕನಿಷ್ಠ 14 ರಿಂದ 16 ಗಂಟೆಗಳ ಅಂತರ ಹೊಂದಿರುವುದು ಜನರನ್ನು ಆರೋಗ್ಯಕರ ಮತ್ತು ಫಿಟ್ ಆಗಿರಿಸುತ್ತದೆ.

    ಊಟ ಮತ್ತು ಉಪಹಾರದ ನಡುವಿನ ಅಂತರ

    ಬದಲಾಗುತ್ತಿರುವ ಮತ್ತು ಹದಗೆಡುತ್ತಿರುವ ಜೀವನಶೈಲಿಯಲ್ಲಿ ಜನರ ಊಟ-ತಿಂಡಿಗಳ ಸಮಯವೂ ಹದಗೆಟ್ಟಿದೆ. ಜನರು ತಡರಾತ್ರಿಯವರೆಗೂ ಎಚ್ಚರವಾಗಿರುತ್ತಾರೆ ಮತ್ತು ಏನನ್ನಾದರೂ ತಿನ್ನುತ್ತಾರೆ. ಮತ್ತೊಂದೆಡೆ, ಬೆಳಿಗ್ಗೆ ಕಾಲೇಜು ಅಥವಾ ಕಚೇರಿಯಿಂದಾಗಿ ಊಟ ಮತ್ತು ತಿಂಡಿಯ ಸಮಯ ಸಾಕಷ್ಟು ವ್ಯತ್ಯಯ ಆಗುತ್ತದೆ. ಹಾಗಾಗಿ ಅವರಿಗೆ ರಾತ್ರಿಯ ಊಟ ಮತ್ತು ಉಪಹಾರದ ನಡುವೆ ಯಾವುದೇ ಅಂತರ ಇಟ್ಟುಕೊಳ್ಳಲು ಸಾಧ್ಯವಾಗಲ್ಲ. ಇದು ಹೊಟ್ಟೆಯ ಕೊಬ್ಬು ಹೆಚ್ಚು ಮಾಡುತ್ತದೆ.

    ಮಧ್ಯಂತರ ಉಪವಾಸ ಎಂದರೇನು?

    ತಜ್ಞರು ಜನರಿಗೆ ಮಧ್ಯಂತರ ಉಪವಾಸವನ್ನು ಶಿಫಾರಸು ಮಾಡುತ್ತಾರೆ. ಇದರಲ್ಲಿ ಬೆಳಗಿನ ಉಪಾಹಾರ ಮತ್ತು ರಾತ್ರಿಯ ಊಟದ ನಡುವೆ ಹೆಚ್ಚು ಅಂತರ ಇರುತ್ತದೆ. ಇದಕ್ಕಾಗಿ ಬೆಳಗಿನ ಉಪಹಾರದ ಸಮಯವನ್ನು ಬೆಳಗ್ಗೆ 11ಕ್ಕೆ ಬದಲಾಯಿಸಿ ಎನ್ನುತ್ತಾರೆ ತಜ್ಞರು. ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಜೆನೆಟಿಕ್ ಎಪಿಡೆಮಿಯಾಲಜಿಯ ಪ್ರಾಧ್ಯಾಪಕರು, ತೂಕ ನಷ್ಟಕ್ಕೆ ಬೆಳಗಿನ ಉಪಾಹಾರ 11 ಗಂಟೆಯವರೆಗೆ ಸೇವಿಸಬಾರದು ಎನ್ನುತ್ತಾರೆ.

    14 ಗಂಟೆಗಳ ಕಾಲ ಉಪವಾಸ

    ಊಟ ಮಾಡಿದ ನಂತರ ಬೆಳಗಿನ ಉಪಹಾರದಲ್ಲಿ ಕನಿಷ್ಠ 14 ಗಂಟೆಗಳ ಕಾಲ ಅಂತರ ಇರಬೇಕು. ಊಟದ ಸಮಯ ರಾತ್ರಿ 8 ಅಥವಾ 9 ಆಗಿದ್ದರೆ, ಬೆಳಗಿನ ಉಪಾಹಾರದ ಸಮಯವನ್ನು 11 ಗಂಟೆಗೆ ಇರಿಸಿ.

    ಇದನ್ನೂ ಓದಿ: ಹೊಟ್ಟೆಯ ಆಮ್ಲ ಸಮಸ್ಯೆಯ ಲಕ್ಷಣಗಳು ಮತ್ತು ನಿವಾರಣೆಗೆ ಮನೆಮದ್ದು ಯಾವವು?

    ಬೆಳಗಿನ ಉಪಾಹಾರವನ್ನು 9 ಗಂಟೆಯೊಳಗೆ ಮಾಡಿದರೆ ರಾತ್ರಿ ಊಟವನ್ನು ಸಂಜೆ 6-7 ಗಂಟೆಗೆ ಮಾಡಿ. ಸುಮಾರು 14 ಗಂಟೆಗಳ ಉಪವಾಸ ಇಟ್ಟುಕೊಳ್ಳಬೇಕು. ಇದು ತೂಕ ನಿಯಂತ್ರಿಸುತ್ತದೆ.
    Published by:renukadariyannavar
    First published: