ನಾವು ಹೆಚ್ಚು ಮಸಾಲೆ ಪದಾರ್ಥ (Masala Ingredients) ಇಲ್ಲವೇ ಜಂಕ್ ಫುಡ್ ತಿಂದಾಗ ಹುಳಿ ಬೆಲ್ಚಿಂಗ್ ಆಗುವುದು, ಎದೆಯಲ್ಲಿ ಏನೋ ಇದ್ದಂತೆ ಅನ್ನಿಸುವುದು, ಎದೆಯುರಿ (Chest Burn) ಬರುವುದನ್ನು ನೀವು ಅನುಭವಿಸಿರಬಹುದು. ಒಂದೇ ಸಮಯದಲ್ಲಿ ಹೆಚ್ಚು ಆಹಾರ (Food) ಸೇವಿಸುವುದು ಸಹ ಹೊಟ್ಟೆಯ ಅಸ್ವಸ್ಥತೆ (Stomach Upset) ಮತ್ತು ಸಮಸ್ಯೆ ಉಂಟು ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳಲ್ಲಿ ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಸಮಸ್ಯೆ ಸಾಮಾನ್ಯವಾಗಿದೆ. ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಸಮಸ್ಯೆ ನಿವಾರಣೆಗೆ ಔಷಧ ಸೇವನೆ ಬೇಗ ಸಮಸ್ಯೆಯಿಂದ ಮುಕ್ತಿ ಹೊಂದಲು ಸಹಾಯ ಮಾಡುತ್ತದೆ. ಆದ್ರೆ ಇದಕ್ಕಾಗಿ ಕೇವಲ ಔಷಧ ಸೇವನೆ ಮಾಡುತ್ತಾ ಕೂರಬೇಡಿ. ನೈಸರ್ಗಿಕವಾಗಿ ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಸಮಸ್ಯೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಕಡಿಮೆ ಮಾಡುವುದು ಹೇಗೆ?
ಜೀವನಶೈಲಿ ಮತ್ತು ಆಹಾರದಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ನೈಸರ್ಗಿಕವಾಗಿ ಎದೆಯುರಿ ಸಮಸ್ಯೆ ನಿಯಂತ್ರಿಸಬಹುದು. ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಹಿಂತಿರುಗಿದ್ರೆ ಆಸಿಡ್ ರಿಫ್ಲಕ್ಸ್ ಸಮಸ್ಯೆ ಶುರುವಾಗುತ್ತೆ. ಎದೆಯಲ್ಲಿ ಸುಡುವ ಸಂವೇದನೆ ಉಂಟಾಗುತ್ತೆ. ಕೆಲವು ಮನೆಮದ್ದುಗಳ ಮೂಲಕ ಎದೆಯುರಿ ಸಮಸ್ಯೆ ಹೋಗಲಾಡಿಸಬಹುದು.
ಯಾರಲ್ಲಿ ಜೀರ್ಣಾಂಗ ವ್ಯವಸ್ಥೆ ತುಂಬಾ ದುರ್ಬಲವಾಗಿರುತ್ತದೆಯೋ ಅವರು ತಮ್ಮ ಆಹಾರ ಸೇವನೆ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳಬೇಕು. ಎಣ್ಣೆ ಮತ್ತು ಮಸಾಲೆ, ಕರಿದ ಪದಾರ್ಥಗಳ ಸೇವನೆ ಗಂಟಲು ನೋವು, ಎದೆಯಲ್ಲಿ ಉರಿ ಮತ್ತು ಹುಳಿ ಬೆಲ್ಚಿಂಗ್ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನೇ ಆಸಿಡ್ ರಿಫ್ಲಕ್ಸ್ ಸಮಸ್ಯೆ ಎಂದು ಕರೆಯುತ್ತಾರೆ.
ಎದೆಯುರಿ ಅಥವಾ ಆಸಿಡ್ ರಿಫ್ಲೆಕ್ಸ್ ಸಮಸ್ಯೆ ಇದ್ದಾಗ ಹೊಟ್ಟೆಯ ಆಮ್ಲವು ತಿಂದ ನಂತರ ಆಹಾರದ ಪೈಪ್ ಪ್ರವೇಶಿಸಿದರೆ ಈ ಸಮಸ್ಯೆ ಕಾಡುತ್ತದೆ. ಇದನ್ನು ಹೋಗಲಾಡಿಸಲು ಪರಿಹಾರ ಏನಿದೆ ಇಲ್ಲಿ ನೋಡೋಣ.
ಎದೆಯುರಿ ಅಥವಾ ಆಸಿಡ್ ರಿಫ್ಲೆಕ್ಸ್ ಕಡಿಮೆ ಮಾಡುವುದು ಹೇಗೆ?
ಆಸಿಡ್ ರಿಫ್ಲಕ್ಸ್, ಕೆಮ್ಮು ಮತ್ತು ಎದೆಯುರಿ ಸೇರಿ ಹಲವು ಲಕ್ಷಣ ತೋರಿಸುತ್ತದೆ. ಮಲಗಿರುವಾಗ ಅಥವಾ ಬಾಗಿದಾಗ ಈ ಸಮಸ್ಯೆ ಹೆಚ್ಚುತ್ತದೆ. ನೀವು ಮಲಗುವ ಭಂಗಿ ಸರಿಯಿಲ್ಲದೇ ಹೋದ್ರೆ ಅಥವಾ ತಪ್ಪು ಭಂಗಿಯಲ್ಲಿ ಮಲಗಿದ್ರೆ ಎದೆಯುರಿ, ಆಸಿಡ್ ರಿಫ್ಲೆಕ್ಸ್ ಸಮಸ್ಯೆ ಉಂಟಾಗುತ್ತದೆ.
ಎಡ ಭಾಗಕ್ಕೆ ತಿರುಗಿ ಮಲಗಬೇಕು
ಎದೆಯುರಿ ಅಥವಾ ಆಸಿಡ್ ರಿಫ್ಲೆಕ್ಸ್ ಇದ್ದಾಗ ನೀವು ಎಡ ಭಾಗಕ್ಕೆ ತಿರುಗಿ ಮಲಗಬೇಕು. ಎದೆಯುರಿ ಉಂಟಾದಾಗ ಬೆನ್ನಿನ ಮೇಲೆ ಮಲಗಬೇಡಿ. ಇದು ಆಸಿಡ್ ರಿಫ್ಲಕ್ಸ್ ಸಮಸ್ಯೆ ಹೆಚ್ಚಿಸುತ್ತದೆ.
ಆಹಾರದಲ್ಲಿ ಓಟ್ಸ್, ಬ್ರೌನ್ ರೈಸ್, ಬ್ರೊಕೊಲಿ, ಸಿಹಿ ಗೆಣಸು, ಕ್ಯಾರೆಟ್ ಪದಾರ್ಥಗಳನ್ನು ಹೆಚ್ಚು ಸೇರಿಸಿ. ಮಸಾಲೆ ಮತ್ತು ಎಣ್ಣೆ ಹಾಗೂ ಕರಿದ ಪದಾರ್ಥಗಳು, ಜಂಕ್ ಫುಡ್ ಸೇವನೆ ಕಡಿಮೆ ಮಾಡಿ. ಆಹಾರ ಕ್ರಮ ಪಾಲಿಸಿದರೆ ಬೆಸ್ಟ್.
ಆಪಲ್ ಸೈಡರ್ ವಿನೆಗರ್
ಇನ್ನು ಆಹಾರ ಸೇವನೆ ನಂತರ ತಿಂದಿದ್ದನ್ನು ಚೆನ್ನಾಗಿ ಅಗಿಯಿರಿ. ಆಸಿಡ್ ರಿಫ್ಲಕ್ಸ್ ಕಡಿಮೆ ಮಾಡುವ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿ.
ಎದೆಯುರಿ ನಿವಾರಣೆಗೆ ಆಪಲ್ ಸೈಡರ್ ವಿನೆಗರ್ ಬಳಸಿ. ಒಂದು ಚಮಚ ಆಪಲ್ ಸೈಡರ್ ವಿನೆಗರ್ ನ್ನು ನೀರಿನ ಜೊತೆ ಬೆರೆಸಿ ಸೇವಿಸಿ. ಇದು ನಿಮ್ಮ ಹೊಟ್ಟೆಯ ಆಮ್ಲದ ಮಟ್ಟ ಕಡಿಮೆ ಮಾಡುತ್ತೆ.
ಚೂಯಿಂಗ್ ಗಮ್ ಅಗಿಯಿರಿ
ಊಟದ ನಂತರ 30 ನಿಮಿಷ ಸಕ್ಕರೆ ಮುಕ್ತ ಚೂಯಿಂಗ್ ಗಮ್ ಅಗಿಯಿರಿ. ಇದು ಅನ್ನನಾಳದಲ್ಲಿನ ಆಮ್ಲದ ಮಟ್ಟ ಕಡಿಮೆ ಮಾಡಲು ಸಹಕಾರಿ.
ಇದನ್ನೂ ಓದಿ: ಕೂದಲ ಆರೈಕೆಗೆ ಕರಿಬೇವಿನ ಎಲೆ ಹೇಗೆ ಪ್ರಯೋಜನಕಾರಿ?
ಅಲೋವೆರಾ ಜ್ಯೂಸ್ ಕುಡಿಯಿರಿ. ಇದು ಎದೆಯುರಿ ಮತ್ತು ಹೊಟ್ಟೆಯ ಆಮ್ಲ ಕಡಿಮೆ ಮಾಡುತ್ತದೆ. ಸುಡುವ ಸಂವೇದನೆ ಕಡಿಮೆ ಮಾಡುತ್ತದೆ. ಬಾಳೆಹಣ್ಣು ತಿನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ