777 Charlie ಸಿನಿಮಾ‌ ನೋಡಿ ನಿಮ್ಗೂ ಅದೇ ಥರದ ನಾಯಿ ಸಾಕ್ಬೇಕು ಅನಿಸಿದ್ಯಾ? ಅದಕ್ಕೂ ಮುಂಚೆ ಈ ಡೀಟೆಲ್ಸ್ ತಿಳ್ಕೊಳಿ

Dog Care: ನಿಮ್ಮ ಮನೆಯಲ್ಲಿರುವ ವೈರಿಂಗ್ ಹಾಗೂ ಪೈಪ್​ಗಳಿಂದ ನಾಯಿಗಳನ್ನು ದೂರವಿರಿಸಬೇಕು. ಅವುಗಳು ಜೀವಕ್ಕೆ ಅಪಾಯವನ್ನು ಉಂಟು ಮಾಡಬಹುದು. ಅಲ್ಲದೇ, ಹಾಗೆಯೆ ಅವುಗಳನ್ನು ಕರೆದುಕೊಂಡು ಬಂದ ಮೊದಲ ದಿನದಿಂದಲೇ ಅವುಗಳಿಗೆ ನಿಮ್ಮ ಜೊತೆ ಮಲಗಿಸಿಕೊಂಡು ಅಭ್ಯಾಸ ಮಾಡಿಸಬೇಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಮ್ಮೆ ನಾಯಿ ಜೊತೆ ಸಂಬಂಧ (Relationship) ಬೆಳೆದರೆ ಸಾಕು ನಂತರ ಅವುಗಳನ್ನು ಬಿಟ್ಟು ಬದುಕುವುದು ಸುಲಭದ ಮಾತಲ್ಲ, ಬಹಳ ಕಷ್ಟವಾಗುತ್ತದೆ ಅಷ್ಟರ ಮಟ್ಟಿಗೆ ತಮ್ಮ ಜೀವನದ ಒಂದು ಭಾಗವಾಗಿ ಬಿಡುತ್ತದೆ. ನಮ್ಮ ಸಂಪೂರ್ಣ ಬದುಕನ್ನು ಆವರಿಸಿಕೊಳ್ಳುತ್ತದೆ. ಹಲವಾರು ಜನರಿಗೆ ನಾಯಿ ಸಾಕಬೇಕು ಎಂಬ ಆಸೆ ಇರುತ್ತದೆ. ಅದರಲ್ಲೂ 777 ಚಾರ್ಲಿ (777 Charlie) ಸಿನಿಮಾ ಬಂದ ನಂತರ ಲ್ಯಾಬ್ರಡಾರ್ ( Labrador) ನಾಯಿಯನ್ನು (dog) ಸಾಕಬೇಕು ಎಂಬ ಆಸೆ ಬಹಳಷ್ಟು ಜನರಲ್ಲಿ ಹುಟ್ಟಿಕೊಂಡಿದೆ. ಈ ನಾಯಿಗಳಲ್ಲಿ ಅನೇಕ ವಿಧಗಳಿಗೆ. ನಾವು ಸಾಮಾನ್ಯವಾಗಿ ಖರೀದಿ ಮಾಡುವಾಗ ಕೇವಲ ತಳಿಯ ಬಗ್ಗೆ ಆಲೋಚನೆ ಮಾಡುತ್ತೇವೆ. ಆದರೆ ಅವುಗಳನ್ನು ಸಾಕುವುದು ಸುಲಭದ ಮಾತಲ್ಲ. ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಹಲವಾರು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ನೀವು ಲ್ಯಾಬ್ರಡಾರ್ ನಾಯಿ ಸಾಕಬೇಕು ಎಂಬ ಆಸೆ ಹೊಂದಿದ್ದರೆ ಏನು ಮಾಡಬೇಕು ಎಂಬುದು ಇಲ್ಲಿದೆ.  

ನಿಮ್ಮ ಜೀವನದಲ್ಲಿ ಹೊಸ ಲ್ಯಾಬ್ರಡಾರ್ ನಾಯಿಮರಿಯನ್ನು ತಂದು ಸಾಕುವುದು ನಿಜಕ್ಕೂ ಒಂದು ಸುಂದರ ಕ್ಷಣ. ಲ್ಯಾಬ್ ನಾಯಿಮರಿಗಳನ್ನು ನೋಡಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಅವುಗಳ ಪ್ರೀತಿಯ ಮುಂದೆ ಇವೆಲ್ಲಾ ಗೌಣ.



ಲ್ಯಾಬ್ ನಾಯಿಮರಿಯನ್ನು ಹೇಗೆ ಖರೀದಿಸುವುದು?

ಹಲವಾರು ಜನರು ಇಂಟರ್ನೆಟ್​ನಲ್ಲಿ ಈ ಬಗ್ಗೆ ಹುಡುಕುತ್ತಾರೆ. ಈ ರೀತಿ ಹುಡುಕುವುದು ನಿಮಗೆ ಸರಿಯಾದ ದಾರಿ ತೋರಿಸುವುದು ಬಹಳ ಕಡಿಮೆ. ಲ್ಯಾಬ್ರಡಾರ್ ರಿಟ್ರೀವರ್‌ಗಳಿಗಾಗಿ ನೀವು ಹುಡುಕುತ್ತಿದ್ದರೆ, ಕೇವಲ ನಿಮ್ಮ ಪ್ರದೇಶದಲ್ಲಿ ಪ್ರತಿಷ್ಠಿತ ಬ್ರೀಡರ್​ಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಉತ್ತಮ ಬ್ರೀಡರ್ ನಿಮಗೆ ಸಹಾಯ ಮಾಡಬಹುದು. ಆರೋಗ್ಯ ಪರೀಕ್ಷೆಯ ಬಗ್ಗೆ ಮುಕ್ತ ಮತ್ತು ಪಾರದರ್ಶಕವಾಗಿರಬಹುದು.



 ನಿಮ್ಮ ಮನೆಯನ್ನು ಲ್ಯಾಬ್​ಗೆ ಸೂಕ್ತವಾಗುವಂತೆ ಮಾಡುವುದು ಹೇಗೆ?

ಮನೆ ಗಿಡಗಳು: ಆಫ್ರಿಕನ್ ವಯೋಲೆಟ್ಗಳು ಅಥವಾ ಅಲೋವೆರಾಗಳಂತಹ ಹಲವಾರು ಗಿಡಗಳು ನಾಯಿಗಳಿಗೆ ಸೂಕ್ತವಲ್ಲ. ಹಾಗಾಗಿ ಅವುಗಳನ್ನು ದೂರವಿರಿಸಿ.

ಔಷಧಿಗಳನ್ನು ದೂರವಿರಿಸಿ: ನೀವು ನಿಮ್ಮ ಔಷಧಿಗಳನ್ನು ನಾಯಿಗೆ ಸಿಗದಂತೆ ದೂರವಿರಿಸುವುದು ಉತ್ತಮ. ಅವುಗಳು ಮನೆಯ ಸುತ್ತ ಆಟವಾಡುವುದರಿಂದ ಅವುಗಳ ಬಾಯಿಗೆ ಸಿಗದಂತೆ ಇಡುವುದು ಉತ್ತಮ.



ನಿಮ್ಮ ಮನೆಯಲ್ಲಿರುವ ವೈರಿಂಗ್ ಹಾಗೂ ಪೈಪ್​ಗಳಿಂದ ನಾಯಿಗಳನ್ನು ದೂರವಿರಿಸಬೇಕು. ಅವುಗಳು ಜೀವಕ್ಕೆ ಅಪಾಯವನ್ನು ಉಂಟು ಮಾಡಬಹುದು. ಅಲ್ಲದೇ, ಹಾಗೆಯೆ ಅವುಗಳನ್ನು ಕರೆದುಕೊಂಡು ಬಂದ ಮೊದಲ ದಿನದಿಂದಲೇ ಅವುಗಳಿಗೆ ನಿಮ್ಮ ಜೊತೆ ಮಲಗಿಸಿಕೊಂಡು ಅಭ್ಯಾಸ ಮಾಡಿಸಬೇಡಿ. ಅವುಗಳನ್ನು ಬೇರೆ ಬೆಡ್​ ಮೇಲೆ ಮಲಗಿಸಿ.  ಇನ್ನು ನೀವು ಮನೆಯ ಹೊರಗೆ ನಾಯಿಯನ್ನು ಬಿಡುವ ಆಲೋಚನೆಯಲ್ಲಿದ್ದರೆ, ಬೇಲಿ ಹಾಕಿಸುವ ಮೂಲಕ ಸುರಕ್ಷತೆಯನ್ನು ನೋಡಿ. ಅವುಗಳು ಮನೆಯಿಂದ ಹೊರ ಹೋಗದಂತೆ ನೋಡಿಕೊಳ್ಳಿ.

GK10TW dog puppy puppies


ಲ್ಯಾಬ್ರಡಾರ್ ರಿಟ್ರೀವರ್ಗಳು ಫ್ಯಾಮಿಲಿಗೆ ಸೂಕ್ತವಾಗುವ ನಾಯಿಗಳಾಗಿದ್ದರೂ ಸಹ, ಲ್ಯಾಬ್ರಡಾರ್ ತಳಿ ಎಲ್ಲರಿಗೂ ಅಲ್ಲ ಎಂಬುದು ನೆನಪಿರಲಿ. ನಿಮ್ಮ ಲ್ಯಾಬ್ರಡಾರ್ ನಾಯಿ ಮೂರು  ಜೀವನ ಹಂತಗಳನ್ನು ಹೊಂದಿದೆ. ಮಗು, ವಯಸ್ಕ ಜೀವನ ಹೀಗೆ. ಆದರೆ, ಮರಿಯಾಗಿದ್ದಾಗ ಹಲವಾರು ಪ್ರಮುಖ ಬದಲಾವಣೆಗಳು ಮತ್ತು ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಹಂತಗಳನ್ನು ಒಳಗೊಂಡಿರುತ್ತದೆ.ಏಕೆಂದರೆ ನಿಮ್ಮ ಲ್ಯಾಬ್ರಡಾರ್ ತನ್ನ ಪ್ರಪಂಚದ ಬಗ್ಗೆ ಕಲಿಯುತ್ತಿರುತ್ತದೆ.



ನೀವು ಕೂಡ ನಾಯಿ ಸಾಕುವ ಆಲೋಚನೆಯಲ್ಲಿದ್ದರೆ ಮೊದಲು ಇವುಗಳ ಬಗ್ಗೆ ಗಮನ ನೀಡಿ. ಹಾಗೆಯೇ ಇವೆಲ್ಲದಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಆರ್ಥಿಕ ಪರಿಸ್ಥಿಯನ್ನು ಅವಲಂಭಿಸಿ ನಾಯಿಯನ್ನು ಹಾಕುವುದು ಉತ್ತಮ.
Published by:Sandhya M
First published: