ಪ್ರತೀ ವರ್ಷ 10 ಕೋಟಿಗಿಂತ ಹೆಚ್ಚಿನ ಜನ ಹೆಪಟೈಟಿಸ್-ಎ ಗೆ ಒಳಗಾಗುತ್ತಾರೆಂದು WHO ಅಂದಾಜಿಸಿದೆ

ಹೆಪಟೈಟಿಸ್-ಎ ರೋಗ, ತಡೆಗಟ್ಟುವಿಕೆ ಮತ್ತು ಲಸಿಕೆಯ ಬಗ್ಗೆ ನೀವು ತಿಳಿಯಬೇಕಾದ ಸಂಪೂರ್ಣ ಮಾಹಿತಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಹೆಪಟೈಟಿಸ್ ಎ ಉಂಟಾಗಲು ಕಾರಣಗಳೇನು ಎಂದು ಅರ್ಥಮಾಡಿಕೊಳ್ಳುವುದು
  ಹೆಪಟೈಟಿಸ್ ಎ ಎನ್ನುವುದು ಹೆಪಟೈಟಿಸ್ ಎ ವೈರಾಣುವಿನಿಂದ ಉಂಟಾಗುವ ಸಾಂಕ್ರಾಮಿಕವಾದ ಯಕೃತ್ತಿನ ಸೋಂಕಾಗಿದೆ.2 ಇದರ ತೀವ್ರತೆ ಅಲ್ಪದಿಂದ ಹೆಚ್ಚು ತೀವ್ರವಾಗಿದ್ದು, ಕೆಲವು ವಾರಗಳಿಂದ ತಿಂಗಳುಗಳವರೆಗೆ ಮುಂದುವರೆಯುತ್ತದೆ.

  ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಹೆಚ್ ಓ) ಜಾಗತಿಕವಾಗಿ ಪ್ರತೀ ವರ್ಷ 10 ಕೋಟಿಗಿಂತ ಹೆಚ್ಚಿನ ಜನ ಹೆಪಟೈಟಿಸ್ ಎ ಯಿಂದ ಬಳಲುತ್ತಾರೆಂದು ಅಂದಾಜಿಸಿದೆ1. ಇದು ಯಕೃತ್ತಿನ ಸೋಂಕಾಗಿದ್ದು, ಸಾಮಾನ್ಯವಾಗಿ ಮಕ್ಕಳಲ್ಲಿ ಇದು ಅಲ್ಪ ಹಾಗೂ ಸಾಧಾರಣವೆಂದು ಪರಿಗಣಿಸಲಾಗುತ್ತದೆ, ಆದರೆ ಕೆಲವು ಪ್ರಕರಣಗಳಲ್ಲಿ ಇದು ತೀವ್ರವಾಗಿರುತ್ತದೆ.3 ದೊಡ್ಡ ಮಕ್ಕಳು ಮತ್ತು ವಯಸ್ಕರಲ್ಲಿ, ಸೋಂಕು ಸಾಮಾನ್ಯವಾಗಿ ತೀವ್ರ ಲಕ್ಷಣಗಳನ್ನು ಹೊಂದಿದ್ದು, 70% ಗಿಂತ ಹೆಚ್ಚಿನ ಪ್ರಕರಣಗಳಲ್ಲಿ ಕಾಮಾಲೆ ಸಾಧಾರಣವಾಗಿ ಕಂಡುಬರುತ್ತದೆ.  ಹೆಪಟೈಟಿಸ್ ಎ ಸೋಂಕು ದೀರ್ಘಕಾಲೀನ ಕಾಯಿಲೆಗಳನ್ನು ಉಂಟುಮಾಡುವುದಿಲ್ಲ, ಬದಲಾಗಿ ಅವು ತೀವ್ರವಾಗಿರುತ್ತದೆ.5 ಅದನ್ನು ಪರೀಕ್ಷಿಸದೇ ಹಾಗೆಯೇ ಬಿಟ್ಟರೆ, ಕೆಲವು ಸಂದರ್ಭಗಳಲ್ಲಿ, ಇದು ತೀವ್ರ ಯಕೃತ್ತಿನ ವೈಫಲ್ಯತೆ ಹಾಗೂ ಅಪರೂಪದ ಸಂದರ್ಭಗಳಲ್ಲಿ ಮರಣಕ್ಕೂ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ವಿಶ್ವಾದ್ಯಂತ ಕಳಪೆ ನೈರ್ಮಲ್ಯದ ಸ್ಥಳಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ.6 ಆದ್ದರಿಂದಲೇ, ನೈರ್ಮಲ್ಯವಿರುವ ನಗರ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಲ್ಲಿ, ಜೀವನಶೈಲಿಯ ಕಾರಣದಿಂದ ಬಾಲ್ಯದಲ್ಲಿ ಹೆಪಟೈಟಿಸ್ ಎ ಸೋಂಕು ಉಂಟಾದರೂ, ಅದು ಮಾಯವಾಗಿ, ಅಪ್ರಾಪ್ತರು ಹಾಗೂ ವಯಸ್ಕರಾದಾಗ ತೀವ್ರ ಸೋಂಕಿನ ಅಪಾಯ ಉಂಟುಮಾಡುತ್ತದೆ.

  ಇದು ಹೇಗೆ ಹರಡುತ್ತದೆ?

  ಹೆಪಟೈಟಿಸ್ ಎ ವೈರಾಣುವಿನಿಂದ ಕಲುಷಿತವಾದ ನೀರು ಮತ್ತು ಆಹಾರ ಸೇವಿಸುವುದರಿಂದ ಹೆಪಟೈಟಿಸ್ ಎ ಹರಡುತ್ತದೆ. ಇದು ಮಲ-ಮೌಖಿಕ ರೂಪ ಅಥವಾ ಕಲುಷಿತ ನೀರು, ಹಾಲು ಅಥವಾ ನೈರ್ಮಲ್ಯವಲ್ಲದ ವಿಧಾನದಲ್ಲಿ ಸಿದ್ಧಪಡಿಸಿದ, ಸಂಗ್ರಹಿಸಿದ ಅಥವಾ ನೀಡಲಾಗುವ ಆಹಾರದಿಂದಲೂ ವ್ಯಕ್ತಿಯಿಂದ ವ್ಯಕ್ತಿಗೆ ಪ್ರಮುಖವಾಗಿ ಹರಡುತ್ತದೆ.

  ನೀವು ಸೋಂಕಿತ ಮಗುವಿನ ಡೈಪರ್ ಬದಲಾಯಿಸಿದ ನಂತರ ನಿಮ್ಮ ಕೈಗಳನ್ನು ತೊಳೆಯದಿರುವುದು, ಹೆಪಟೈಟಿಸ್ ಎ ಯಿಂದ ಕಲುಷಿತವಾದ ಯಾವುದೋ ಒಂದು ವಸ್ತುವನ್ನು ಆಕಸ್ಮಿಕವಾಗಿ ಸ್ಪರ್ಶಿಸುವುದರಿಂದ ಅಥವಾ ಸೇವಿಸುವುದರಿಂದ ಹೆಪಟೈಟಿಸ್ ಎ ಗೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತದೆ. ನೀವು ರೆಸ್ಟೋರೆಂಟ್ ನಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ ಆಹಾರ ಮತ್ತು ಪೇಯಗಳನ್ನು ಹಂಚಿಕೊಂಡಿದ್ದರೆ ಅಥವಾ ಪತ್ತೆಮಾಡಲಾಗದಂತಹ ಸೂಕ್ಷ್ಮವಾದ ಮಲದ ಕಣಗಳನ್ನು ಹೊಂದಿರುವ ವ್ಯಕ್ತಿ ಬಾಗಿಲ ಹಿಡಿಯನ್ನು ಸ್ಪರ್ಶಿಸಿ ಮತ್ತು ಅದನ್ನು ನೀವು ಸಹ ಸ್ಪರ್ಶಿಸಿದರೆ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

  ಈ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗಮನಿಸಿ:

  ಸೋಂಕಿತರಾದ ಎಲ್ಲಾ ವ್ಯಕ್ತಿಗಳಿಗೂ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಲಕ್ಷಣಗಳು (ಉಂಟಾಗಿದ್ದರೆ) ಸಾಮಾನ್ಯವಾಗಿ ಸೋಂಕಿನ ನಂತರದ 2 ರಿಂದ 6 ವಾರಗಳಲ್ಲಿ ಕಂಡುಬರುತ್ತದೆ. ಅವು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:

  • ಜ್ವರ

  • ವಾಂತಿ

  • ಬೂದು ಬಣ್ಣದ ಮಲ

  • ಆಯಾಸ

  • ಹೊಟ್ಟೆನೋವು

  • ಕೀಲುನೋವು

  • ಹಸಿವಿಲ್ಲದಿರುವುದು

  • ವಾಕರಿಕೆ

  • ಕಾಮಾಲೆ


  ನೆನಪಿಡಿ, ಸೋಂಕಿತರಾದ ಎಲ್ಲಾ ವ್ಯಕ್ತಿಗಳಿಗೂ ಎಲ್ಲಾ ಲಕ್ಷಣಗಳು ಕಂಡುಬರುವುದಿಲ್ಲ. ಕೆಲವು ಪ್ರಕರಣಗಳಲ್ಲಿ, ಲಕ್ಷಣಗಳು 6 ತಿಂಗಳಿನವರೆಗೆ ಮುಂದುವರೆಯಬಹುದು9

  ಹೆಪಟೈಟಿಸ್ ಎ- ಇದನ್ನು ತಡೆಗಟ್ಟಬಹುದೇ?

  ಹೌದು, ಹೆಪಟೈಟಿಸ್ ಎ ಸೋಂಕನ್ನು ತಡೆಗಟ್ಟಬಹುದು. ನಿಮ್ಮನ್ನು ರಕ್ಷಿಸಿಕೊಳ್ಳುವ ಸುಲಭ ವಿಧಾನಗಳೆಂದರೆ:

  1. ಸ್ವಚ್ಛವಾದ ನೀರು ಕುಡಿಯಿರಿ ಮತ್ತು ಆಹಾರವನ್ನು ಚೆನ್ನಾಗಿ ಬೇಯಿಸಿ. ಹಸಿ ಮಾಂಸ ಮತ್ತು ಶೆಲ್ ಫಿಶ್ ಸೇವಿಸಬೇಡಿ ಹಾಗೂ ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾದ ನೀರಿನಲ್ಲಿ ತೊಳೆಯಿರಿ.

  2. ನಿಮ್ಮ ಕೈಗಳನ್ನು ತೊಳೆಯುವುದನ್ನು ನೆನಪಿಡಿ ಶೌಚಾಲಯ ಬಳಸಿದ ನಂತರ, ಮಗುವಿನ ನ್ಯಾಪಿ ಬದಲಾಯಿಸಿದ ನಂತರ ಹಾಗೂ ಆಹಾರ ಸಿದ್ಧಪಡಿಸುವ ಮೊದಲು ಮತ್ತು ಆಹಾರ ಸೇವಿಸುವ ಮೊದಲು ಸೋಪು ಮತ್ತು ನೀರಿನಿಂದ ಕೈಗಳನ್ನು ತೊಳೆಯಿರಿ.

  3. ನೈರ್ಮಲ್ಯಯುಕ್ತ ವಾತಾವರಣವಿರಲಿ ನಿಮ್ಮ ಮನೆಯ ಸುತ್ತಮುತ್ತ ಸ್ವಚ್ಛವಾಗಿಡಿ.

  4.  ವ್ಯಾಕ್ಸಿನೇಷನ್ ಹೆಪಟೈಟಿಸ್ ಎ ಯಿಂದ ನಿಮ್ಮ ಮಗುವನ್ನು ರಕ್ಷಿಸಲು ನೆರವಾಗುತ್ತದೆ


  ಹೆಪಟೈಟಿಸ್ ಎ ಗೆ ಚಿಕಿತ್ಸೆ ಇದೆಯೇ?

  ಹೆಪಟೈಟಿಸ್ ಎ ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ, ಆದ್ದರಿಂದ ನಿವಾರಣಾತ್ಮಕ ಕ್ರಮಗಳ ಮೂಲಕ ರೋಗವನ್ನು ತಡೆಗಟ್ಟುವುದು ಬುದ್ಧಿವಂತಿಕೆ. ಹೆಪಟೈಟಿಸ್ ಎ ತಡೆಗಟ್ಟಲು ಲಸಿಕೆ ವಿಶ್ವಾಸಾರ್ಹ ವಿಧಾನವಾಗಿದೆ.

  ಹೆಪಟೈಟಿಸ್ ಎ ಲಸಿಕೆಯನ್ನು ಯಾವಾಗ ನೀಡಲಾಗುತ್ತದೆ?

  ಹೆಪಟೈಟಿಸ್ ಎ ಗೆ ಲಸಿಕೆಯನ್ನು ಒಂದು ವರ್ಷ ಮತ್ತು ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುತ್ತದೆ. ಆದ್ದರಿಂದಲೇ, ಜಾಗತಿಕ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಗಳಾದ ಡಬ್ಲ್ಯು ಹೆಚ್ ಓ ಮತ್ತು ಭಾರತೀಯ ಶಿಶುವೈದ್ಯ ಅಕಾಡೆಮಿ ಎಲ್ಲಾ ಅರ್ಹ ಮಕ್ಕಳಿಗೆ ಹೆಪಟೈಟಿಸ್ ಎ ಲಸಿಕೆ ಶಿಫಾರಸು ಮಾಡಿದೆ. ಹೆಪಟೈಟಿಸ್ ಎ ಮತ್ತು ನಿಮ್ಮ ಮಗುವಿಗೆ ಲಸಿಕೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಿಶುವೈದ್ಯರನ್ನು ಸಂಪರ್ಕಿಸಿ.

  ಪರಾಮರ್ಶನಗಳು:

  1. https://www.who.int/immunization/position_papers/PP_hep_A_july2012_summary.pdf , Accessed on 24th July 2021.

  2. https://www.cdc.gov/hepatitis/Hepatitis%20A/afaq.html , Accessed on 24th July 20213.

  3. Castaneda D, Gonzalez AJ, Alomari M, Tandon K, Zervos XB. From hepatitis A to E: A critical review of viral hepatitis. World J Gastroenterol. 2021;27(16):1691-17154.

  4. https://www.cdc.gov/vaccines/pubs/pinkbook/hepa.html, Accessed on 24th July 20215.

  5. https://www.who.int/news-room/fact-sheets/detail/hepatitis-a, Accessed on 24th July 20216.

  6. https://www.iamat.org /country/india/risk/hepatitis-a, Accessed on 24th July 20217.

  7. 124587-IAP-GUIDE-BOOK-ON-IMMUNIZATION-18-19.pdf (iapindia.org), Accessed on 29th July 2021


  ಹಕ್ಕುನಿರಾಕರಣೆ: GlaxoSmithKline Pharmaceuticals Limited, ಡಾ. ಅನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030 ರವರಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ಪ್ರಕಟಿಸಲಾಗಿದೆ. ಈ ಕೈಪಿಡಿಯಲ್ಲಿ ನೀಡಲಾಗಿರುವ ಮಾಹಿತಿ ಸಾರ್ವಜನಿಕ ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದರಲ್ಲಿರುವ ಯಾವುದೇ ವಿಷಯ ವೈದ್ಯಕೀಯ ಸಲಹೆಯನ್ನು ಒಳಗೊಂಡಿಲ್ಲ. ಯಾವುದೇ ವೈದ್ಯಕೀಯ ಸಲಹೆಗಳು ಅಥವಾ ನಿಮ್ಮ ಸ್ಥಿತಿಗೆ ಸಂಬಂಧಿಸಿದಂತೆ ನಿಮಗೆ ಹೆಪಟೈಟಿಸ್ ಎ  ಕುರಿತು ಯಾವುದೇ ಪ್ರಶ್ನೆಗಳು ಅಥವಾ ಕಾಳಜಿಗಳಿದ್ದರೆ ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಲಸಿಕೆ ನಿವಾರಣಾತ್ಮಕ ರೋಗದ ಪೂರ್ಣ ಪಟ್ಟಿಗಾಗಿ ಮತ್ತು ಪ್ರತೀ ರೋಗಕ್ಕೆ ಲಸಿಕೆ ನಿಗದಿಪಡಿಸಲು ದಯವಿಟ್ಟು ನಿಮ್ಮ ಶಿಶುವೈದ್ಯರನ್ನು ಸಂಪರ್ಕಿಸಿ. ಜಿ ಎಸ್ ಕೆ ಯ ಯಾವುದೇ ಉತ್ಪನ್ನಗಳಲ್ಲಿ ವ್ಯತಿರಿಕ್ತ ಪರಿಣಾಮವಿದ್ದಲ್ಲಿ,  ದಯವಿಟ್ಟು ಕಂಪನಿಯನ್ನು india.pharmacovigilance@gsk.com ನಲ್ಲಿ ಸಂಪರ್ಕಿಸಿ.

  This article has been created by the Studio18 team on behalf of GSK

  CL code: NP-IN-HAV-OGM-210010 , DoP Jul 2021
  Published by:Sharath Sharma Kalagaru
  First published: