• Home
  • »
  • News
  • »
  • lifestyle
  • »
  • Food Protection: ಧೀರ್ಘಕಾಲ ಆಹಾರ ಸಂರಕ್ಷಿಸಲು ಈ ವಿಧಾನ ಬಳಸಿ

Food Protection: ಧೀರ್ಘಕಾಲ ಆಹಾರ ಸಂರಕ್ಷಿಸಲು ಈ ವಿಧಾನ ಬಳಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬೇಗನೆ ಹಾಳಾಗಬಾರದು, ವ್ಯರ್ಥವಾಗಬಾರದು ಎಂಬ ದೃಷ್ಟಿಯಿಂದ ಎಲ್ಲವನ್ನೂ ಫ್ರಿಡ್ಜ್‌ನಲ್ಲಿ ಇರಿಸಿ ಮರುದಿನ ಒವೆನ್‌ನಲ್ಲಿ ಬಿಸಿ ಮಾಡಿ ತಿನ್ನುವರ ಸಂಖ್ಯೆ ಹೆಚ್ಚಾಗಿದೆ.

  • News18 Kannada
  • Last Updated :
  • Karnataka, India
  • Share this:

ನಮ್ಮ ಒಟ್ಟಾರೆ ಆರೋಗ್ಯ ನಾವು ಏನು ತಿನ್ನುತ್ತೇವೆ (Eat), ಯಾವ ರೀತಿಯ ಆಹಾರ ತಿನ್ನುತ್ತೇವೆ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಎಲ್ಲರೂ ಒಪ್ಪುವಂತ ವಿಚಾರ. ತಾಜಾವಾಗಿ (Fresh) ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ರುಚಿ ಮಾತ್ರವಲ್ಲದೇ ಆರೋಗ್ಯದ (Health) ವಿಷಯಕ್ಕೂ ಇದು ಉತ್ತಮ. ಆದರೆ ಆಧುನಿಕ ಯುಗದಲ್ಲಿ ಫ್ರಿಡ್ಜ್‌, ಒವನ್‌, ಏರ್‌ ಫ್ರೈಯರ್‌ ಹಾವಳಿಗಳ ಮಧ್ಯೆ ತಾಜಾ ಆಹಾರ ಕೂಡ ಅಪರೂಪವಾಗಿದೆ. ಬೇಗನೆ ಹಾಳಾಗಬಾರದು, ವ್ಯರ್ಥವಾಗಬಾರದು ಎಂಬ ದೃಷ್ಟಿಯಿಂದ ಎಲ್ಲವನ್ನೂ ಫ್ರಿಡ್ಜ್‌ನಲ್ಲಿ ಇರಿಸಿ ಮರುದಿನ ಒವೆನ್‌ನಲ್ಲಿ ಬಿಸಿ (Hot) ಮಾಡಿ ತಿನ್ನುವರ ಸಂಖ್ಯೆ ಹೆಚ್ಚಾಗಿದೆ.


ಯಾರ ಮನೆಯ ಫ್ರಿಡ್ಜ್‌ ಓಪನ್‌ ಮಾಡಿದರೂ ಅಲ್ಲಿ ಉಪ್ಪಿನಕಾಯಿ, ನಿನ್ನೆಯ ಸಾರು, ಹಾಲು, ಮೊಸರು ಹೀಗೆ ಪ್ರತಿಯೊಂದನ್ನು ಸಂಗ್ರಹಿಸಿಟ್ಟಿರುತ್ತಾರೆ.


ಆಯುರ್ವೇದದ ಸಲಹೆ ಹಂಚಿಕೊಂಡ ಡಾ. ವರ ಯನಮಂದ್ರ


ಹೆಚ್ಚು ಕಾಲ ಕೆಡದಂತೆ, ರುಚಿ ಬದಲಾಗದಂತೆ ಹಾಗೂ ತಾಜಾ ಆಗಿಯೇ ಇರುವಂತೆ ಮಾಡಲು ಹಿಂದಿನವರು, ಆಯುರ್ವೇದದಲ್ಲಿ ಹೇಳುವಂತೆ ಆಹಾರವನ್ನು ಸಂಗ್ರಹಿಸಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊಂದಿದ್ದರು. ಫ್ರಿಡ್ಜ್‌ಗಳಂತಹ ಆಧುನಿಕ ಆಹಾರ ಶೇಖರಣಾ ಪರಿಹಾರಗಳು ಅಸ್ತಿತ್ವಕ್ಕೆ ಬರುವ ಬಹಳ ಹಿಂದೆಯೇ, ಆಯುರ್ವೇದ ಋಷಿಗಳು ಆಹಾರವನ್ನು ತಾಜಾವಾಗಿಡಲು ಹೇಗೆ ಸಂಗ್ರಹಿಸಬಹುದು ಎಂಬುದನ್ನು ನಮಗೆ ತಿಳಿಸಿಕೊಟ್ಟಿದ್ದಾರೆ.


ಈ ಬಗ್ಗೆ ಆಯುರ್ವೇದ ತಜ್ಞೆ ಡಾ. ವರ ಯನಮಂದ್ರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿವರವಾಗಿ ಪೋಸ್ಟ್‌ ಒಂದನ್ನು ಮಾಡಿದ್ದಾರೆ. ಆಯುರ್ವೇದದ ಪ್ರಕಾರ ಆಹಾರವನ್ನು ನಿರ್ದಿಷ್ಟ ಪಾತ್ರೆಗಳಲ್ಲಿ ಸಂಗ್ರಹಿಸಿಡುವುದರಿಂದ ಅವು ಬೇಗನೆ ಹಾಳಾಗುವುದಿಲ್ಲ ಎನ್ನುತ್ತಾರೆ ಡಾ. ವರ ಯನಮಂದ್ರ. ಹಾಗಾದರೆ ಯಾವ ಆಹಾರಗಳನ್ನು, ಯಾವ ಪಾತ್ರೆಯಲ್ಲಿ ಸಂಗ್ರಹಿಸಿಟ್ಟರೆ ಅದು ದೀರ್ಘಕಾಲ ಬರುತ್ತದೆ ಎಂಬುದರ ಬಗ್ಗೆ ಆಯುರ್ವೇದ ಏನು ಹೇಳಿದೆ ತಿಳಿಯೋಣ ಬನ್ನಿ.


ಇದನ್ನೂ ಓದಿ: ಅಣಬೆಗಳು ರುಚಿಯೊಂದೇ ಅಲ್ಲ, ರೋಗ ತಡೆಗಟ್ಟುವ ಮಾಂತ್ರಿಕ ಔಷಧಿಯೂ ಹೌದು!


ಆಯುರ್ವೇದ ಸಲಹೆಗಳು
* ಜ್ಯೂಸ್‌ಗಳು, ತಂಪು ಪಾನೀಯಗಳು ಮತ್ತು ಸಿರಪ್‌: ಈ ದ್ರವ ರೂಪದ ಆಹಾರವನ್ನು ಬೆಳ್ಳಿಯ ಪಾತ್ರೆಗಳಲ್ಲಿ ಶೇಖರಿಸಿಡಬೇಕು ಎನ್ನುತ್ತದೆ ಆಯುರ್ವೇದ. ಏಕೆಂದರೆ ಬೆಳ್ಳಿ ಪಾತ್ರೆ ತಂಪಾಗಿಸುವ ಗುಣವನ್ನು ಹೊಂದಿದ್ದು ಜ್ಯೂಸ್‌, ತಂಪು ಪಾನೀಯದಂತಹ ದ್ರವವನ್ನು ಹೆಚ್ಚು ಕಾಲ ತಾಜಾವಾಗಿರಿಸುತ್ತದೆ.


ಬೆಳ್ಳಿಯ ಸಾಮಾನುಗಳು 100% ಬ್ಯಾಕ್ಟೀರಿಯಾ-ಮುಕ್ತವಾಗಿದೆ ಮತ್ತು ಅದರಲ್ಲಿ ಸಂಗ್ರಹವಾಗಿರುವ ವಸ್ತುಗಳ ತಾಜಾತನವನ್ನು ಉಳಿಸಿಕೊಳ್ಳುತ್ತದೆ. ಇದು ಆಮ್ಲೀಯ ಆಹಾರಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎನ್ನುತ್ತಾರೆ ತಜ್ಞರು.


* ತುಪ್ಪ: ತುಪ್ಪವನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುವ ಬದಲು ಕಬ್ಬಿಣದ ಪಾತ್ರೆ ಅಥವಾ ಜಾಡಿಯಲ್ಲಿ ಶೇಖರಿಸಿಡಬೇಕು. ಇದರಿಂದ ತುಪ್ಪ ಹೆಚ್ಚು ಕಾಲ ತಾಜಾವಾಗಿ, ಸುವಾಸನೆಭರಿತವಾಗಿರುತ್ತದೆ.


* ಹುಳಿ ಆಹಾರ: ಲೋಹಗಳಂತೆ ಹುಳಿ ಆಹಾರಗಳೊಂದಿಗೆ ಕಲ್ಲು ಪ್ರತಿಕ್ರಿಯಿಸುವುದಿಲ್ಲವಾದ್ದರಿಂದ ಸಾಸ್ ಮತ್ತು ಬೇಯಿಸಿದ ಮಜ್ಜಿಗೆಯಂತಹ ಹುಳಿ ಆಹಾರಗಳನ್ನು ಕಲ್ಲಿನ ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ಆದರೆ ಕಬ್ಬಿಣದ ಪಾತ್ರೆಗಳಲ್ಲಿ ಮಾತ್ರ ಈ ರೀತಿಯಾದ ಹುಳಿ ಆಹಾರವನ್ನು ಸಂಗ್ರಹಿಸಿಡಬಾರದು ಎನ್ನುತ್ತಾರೆ ಆಯುರ್ವೇದ ತಜ್ಞರು.


ಇದನ್ನೂ ಓದಿ: ಕೊಬ್ಬಿನ ಯಕೃತ್ತಿನ ಸಮಸ್ಯೆ ನಿವಾರಣೆಗೆ ಯಾವ ಪದಾರ್ಥ ತಿನ್ನಬೇಕು?


*ವೈನ್, ಸಿರಪ್ ಮತ್ತು ಉಪ್ಪಿನಕಾಯಿ: ಇವುಗಳನ್ನು ಗಾಜು, ಕಲ್ಲು ಅಥವಾ ಹರಳುಗಳಿಂದ ಮಾಡಿದ ಪಾತ್ರೆಗಳಲ್ಲಿ ಶೇಖರಿಸಿಡಬೇಕು. ಮಾರುಕಟ್ಟೆಯಲ್ಲಿ ಉಪ್ಪಿನಕಾಯಿಯನ್ನು ಪ್ಲಾಸ್ಟಿಕ್‌ ಡಬ್ಬದಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ ನಾವು ಅದನ್ನು ಮನೆಗೆ ತಂದ ನಂತರ ಗಾಜಿನ ಪಾತ್ರೆಯಲ್ಲಿ ಇಡುವುದು ಉತ್ತಮ.


* ಬೇಯಿಸಿದ ಮಾಂಸ: ಆಯುರ್ವೇದದ ಪ್ರಕಾರ, ಮಾಂಸವನ್ನು ದೀರ್ಘಕಾಲದವರೆಗೆ ತಾಜಾವಾಗಿಡಬೇಕಾದರೆ, ಅದನ್ನು ಯಾವಾಗಲೂ ಬೆಳ್ಳಿಯ ಪಾತ್ರೆಯಲ್ಲಿ ಇರಿಸಬೇಕು.


* ಹಣ್ಣುಗಳು ಮತ್ತು ತಿಂಡಿಗಳು: ಪುನಃ ಸೇವಿಸಲು ಹಣ್ಣು-ಹಂಪಲು, ತಿಂಡಿಗಳನ್ನು ಸಂಗ್ರಹಿಸುವ ಮೊದಲು ತಾಜಾ ಎಲೆಗಳಲ್ಲಿ ಸುತ್ತಿಡಬೇಕು. ಹೀಗೆ ಮಾಡುವುದರಿಂದ ಹಣ್ಣುಗಳ ತಾಜಾವಾಗಿರುತ್ತವೆ ಮತ್ತು ಆರೋಗ್ಯವಾಗಿಯೂ ಇರುತ್ತದೆ. ಫ್ರಿಡ್ಜ್‌ನಲ್ಲಿ ಇಟ್ಟರೂ ಸಹ ಆದನ್ನು ಎಲೆಯಲ್ಲಿ ಸುತ್ತಿ ಇಡುವುದರಿಂದ ತಾಜಾತನ ಕಾಪಾಡಬಹುದು ಎನ್ನುತ್ತದೆ ಆಯುರ್ವೇದ.
* ನೀರು: ತಾಮ್ರ, ಬೆಳ್ಳಿ, ಹಿತ್ತಾಳೆ, ಮಣ್ಣಿನ ಪಾತ್ರೆಗಳಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಒಳ್ಳೆಯದು. ಬೆಳ್ಳಿ, ಹಿತ್ತಾಳೆ ಮತ್ತು ತಾಮ್ರವು ಸೂಕ್ಷ್ಮಜೀವಿಯ ವಿರೋಧಿ ಗುಣಗಳನ್ನು ಹೊಂದಿದ್ದು, ಕಾಲರಾ, ಟೈಫಾಯಿಡ್, ಭೇದಿ ಮತ್ತು ಹೆಪಟೈಟಿಸ್‌ನಂತಹ ನೀರಿನಿಂದ ಹರಡುವ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ.

First published: