Life Hacks: ಬಾಳೆಹಣ್ಣು ಹಾಳಾಗದಂತೆ ಕಾಪಾಡಲು ಹೀಗೆ ಮಾಡಿ..

How To Protect Banana From Ripening: ಅದೃಷ್ಟವಶಾತ್,  ವೇಗವಾಗಿ ಹಣ್ಣಾಗುವಂತೆ ಮಾಡಲು ಹ್ಯಾಕ್​ ಇರುತ್ತದೆ. ಬಾಳೆಹಣ್ಣಿನ ಹಳದಿ ಹಂತವನ್ನು ಹೆಚ್ಚಿಸಲು ಸರಳ ಮಾರ್ಗಗಳಿವೆ. ಆದರೆ ಅದು ಬೇಗ ಹಾಳಾಗದಂತೆ ಕಾಪಾಡಲು ಹೆಚ್ಚು ಮಾರ್ಗಗಳಿಲ್ಲ. ಆದರೂ ಕೂಡ , ಬಾಳೆ ಹಣ್ಣು ಬೇಗ ಹಾಳಾಗದಿರಲು ಇಲ್ಲಿದೆ ಉಪಾಯ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಳೆಹಣ್ಣು(Banana) ಸಾಮಾನ್ಯವಾಗಿ ಎಲ್ಲ ಸಮಯದಲ್ಲಿಯೂ ಸಿಗುತ್ತದೆ. ಅದರಲ್ಲಿರುವ ಹಲವಾರು ಪೋಷಕಾಂಶಗಳು ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ. ನಾವು ಸಾಮಾನ್ಯವಾಗಿ ಬಾಳೆಹಣ್ಣು ತರುವಾಗ ಹಳದಿ ಅಥವಾ ಹಸಿರು ಬಣ್ಣದ್ದು ಚನ್ನಾಗಿರುವುದನ್ನ ತರುತ್ತೇವೆ. ಆದರೆ ತಂದ ಎರಡು ದಿನದಲ್ಲಿ ಅದು ಹಾಳಾಗುತ್ತದೆ. ಆದರೆ ಕೆಲವೊಮ್ಮೆ ಬಾಳೆಹಣ್ಣುಗಳನ್ನು ಸಂಗ್ರಹಿಸುವುದು ಕಷ್ಟವಾಗುತ್ತದೆ. ಬೇರೆ ಹಣ್ಣುಗಳಂತೆ ಬಾಳೆಹಣ್ಣುಗಳು ಒಂದೊಂದೇ ಹಣ್ಣಾಗುವುದಿಲ್ಲ. ಬದಲಾಗಿ ಒಂದು ಹಣ್ಣು ಹಣ್ಣಾದರೆ ಎಲ್ಲವೂ ಸಹ ಹಳದಿ ಬಣ್ಣಕ್ಕೆ ತಿರುಗುವುದಲ್ಲದೆ, ಕಪ್ಪು ಬಣ್ಣಕ್ಕೆ ತಿರುಗಿ ಬಳಸಲು ಬರದಂತೆ (Ripening)ಆಗುತ್ತದೆ.

ಅದೃಷ್ಟವಶಾತ್,  ವೇಗವಾಗಿ ಹಣ್ಣಾಗುವಂತೆ ಮಾಡಲು ಹ್ಯಾಕ್​ ಇರುತ್ತದೆ. ಬಾಳೆಹಣ್ಣಿನ ಹಳದಿ ಹಂತವನ್ನು ಹೆಚ್ಚಿಸಲು ಸರಳ ಮಾರ್ಗಗಳಿವೆ. ಆದರೆ ಅದು ಬೇಗ ಹಾಳಾಗದಂತೆ ಕಾಪಾಡಲು ಹೆಚ್ಚು ಮಾರ್ಗಗಳಿಲ್ಲ. ಆದರೂ ಕೂಡ , ಬಾಳೆ ಹಣ್ಣು ಬೇಗ ಹಾಳಾಗದಿರಲು ಇಲ್ಲಿದೆ ಉಪಾಯ.

ಬಾಳೆಹಣ್ಣನ್ನು  ಸಲಾಡ್ ಅಥವಾ ಸ್ಮೂಥಿಗಳಲ್ಲಿ ಹಾಕಿರದಿದ್ದಲ್ಲಿ, ಅದನ್ನು ಬೇರೆ ಹಣ್ಣುಗಳ ಜೊತೆ ಸೇರಿಸುವುದು ಉತ್ತಮವಲ್ಲ. ಹಣ್ಣಾಗುತ್ತಿದ್ದಂತೆ ಬಹಳಷ್ಟು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುವ ಹಣ್ಣುಗಳಿಗೆ ಇದು ವಿಶೇಷವಾಗಿ ಸತ್ಯವಾಗಿದೆ. ಆವಕಾಡೊ, ಪೀಚ್, ಟೊಮೆಟೊ, ಸೇಬು ಮತ್ತು ಅಂಜೂರದ ಹಣ್ಣುಗಳ ಜೊತೆ ಬಾಳೆಹಣ್ಣನ್ನು ಸೇರಿಸಿ ಇಡಬೇಡಿ. ಪ್ರತ್ಯೇಕ ಬಾಳೆಹಣ್ಣು ಹ್ಯಾಂಗರ್ ಖರೀದಿಸಿ ಇಡಿ.

ಇದನ್ನೂ ಓದಿ: ಪ್ರಿಜ್ ಸ್ವಚ್ಛ ಮಾಡಲು ಪರದಾಡುತ್ತಿದ್ದೀರಾ? ಇಲ್ಲಿದೆ ಸೂಪರ್ ಟಿಪ್ಸ್

ಅಂಗಡಿಯಲ್ಲಿನ ಬಾಳೆ ಹಣ್ಣಿನ ಚಿಪ್ಪಿಗೆ ಪ್ಲಾಸ್ಟಿಕ್  ಸುತ್ತಿರುವುದನ್ನು ನೀವು ಗಮನಿಸಿರಬಹುದು. ಅದನ್ನು ಮುಂದುವರಿಸಿ. ಅಥವಾ ಬೇಕಾದರೆ ಮನೆಯಲ್ಲಿ ಪ್ಲಾಸ್ಟಿಕ್ ಸುತ್ತು ಹೆಚ್ಚು ಮಾಡಿ. ಹೀಗೆ ಕಟ್ಟುವುದರಿಂದ ಹಣ್ಣು ಹಾಳಾಗಲು ಕಾರಣವಾಗುವ ಗ್ಯಾಸ್ ಬಾಳೆಹಣ್ಣನ್ನು ಸೇರಲು ಸಾಧ್ಯವಾಗುವುದಿಲ್ಲ.

ನೀವು ಬಾಳೆಹಣ್ಣುಗಳನ್ನು ಹೆಚ್ಚು ದಿನ ಇಟ್ಟುಕೊಳ್ಳಬೇಕೆಂದಿದ್ದರೆ ಹಸಿರು ಬಾಳೆಹಣ್ಣುಗಳನ್ನು ಖರೀದಿಸಿರಿ. ಇದರಿಂದ ಬಾಳೆಹಣ್ಣುಗಳು ನಿಧಾನವಾಗಿ ಹಣ್ಣಾಗುವುದರಿಂದ ನೀವು ಅವುಗಳನ್ನು ಹೆಚ್ಚು ದಿನಗಳ ಕಾಲ ಬಳಕೆ ಮಾಡಬಹುದು.

ಮಾಗಿದ ಹಳದಿ ಬಣ್ಣಕ್ಕೆ ಅಥವಾ ಕಂದು ಬಣ್ಣಕ್ಕೆ ತಿರುಗಿದ ಬಾಳೆಹಣ್ಣುಗಳನ್ನು ಫ್ರಿಜ್ಜಿನಲ್ಲಿ ಇಡುವುದರಿಂದ ಹಣ್ಣು ಬೇಗ ಹಾಳಾಗುವುದಿಲ್ಲ. ಬಾಳೆಹಣ್ಣುಗಳು ಹಣ್ಣಾಗುವುದನ್ನು ತಡೆಯಲು ಬಾಳೆಹಣ್ಣುಗಳನ್ನು ಅಲ್ಯೂಮಿನಿಯಂ ಫಾಯಿಲ್ ನಲ್ಲಿ ಸುತ್ತಿ ಇಡಿ. ಹೀಗೆ ಮಾಡುವುದರಿಂದ ಬಾಳೆಹಣ್ಣುಗಳು ನಿಧಾನವಾಗಿ ಹಣ್ಣಾಗುತ್ತವೆ. ಪ್ರತಿ ಪ್ರತ್ಯೇಕ ಬಾಳೆಹಣ್ಣಿಗೆ ಇದನ್ನು ಸುತ್ತಿ ಇಡುವುದು ಉತ್ತಮ ಎಂದು ಹೇಳಲಾಗುತ್ತದೆ.

ಸೇಬು ಹೋಳುಗಳಂತೆ, ಸಿಪ್ಪೆ ಸುಲಿದ ಬಾಳೆಹಣ್ಣಿಗೆ ನಿಂಬೆ ರಸವನ್ನು ಸೇರಿಸುವುದರಿಂದ ಅವುಗಳ ತಾಜಾತನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಮೂಲಭೂತವಾಗಿ, ಸಿಟ್ರಸ್ ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನೀವು ನಿಂಬೆ ಕಿತ್ತಳೆ ರಸ ಅಥವಾ ಅನಾನಸ್ ರಸವನ್ನು ಕೂಡ ಬಳಸಬಹುದು. ನೀವು ಈಗಾಗಲೇ ಬಾಳೆಹಣ್ಣನ್ನು ಕತ್ತರಿಸಿದ್ದರೆ, ಅದನ್ನು ಒಂದು ಟೀಚಮಚ ಸಿಟ್ರಸ್ ರಸ ಸೇರಿಸಿ. ಸಿಟ್ರಸ್ ಅನ್ನು ಸೇರಿಸುವುದರಿಂದ ಬಾಳೆಹಣ್ಣಿನ ರುಚಿಯ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ.

ಇದು ವಿಚಿತ್ರವೆನಿಸಬಹುದು ಆದರೆ ವಿನೆಗರ್ ಸಿಟ್ರಸ್‌ಗೆ ಇನ್ನೊಂದು ಪರ್ಯಾಯವಾಗಿದೆ. ಸಿಟ್ರಸ್ ರಸದಂತೆ, ವಿನೆಗರ್ ಅನ್ನು ಬಾಳೆ ಹಣ್ಣಿನ ಹೋಳುಗಳ ಮೇಲೆ ಹಾಕಿ. ನೀವು ಇನ್ನೂ ಆ ಹಣ್ಣಿನಲ್ಲಿ ವಿನೆಗರ್‌ನ ವಾಸನೆ ಇರುವುದನ್ನ ಗಮನಿಸಿದರೆ, ಸೇವಿಸುವ ಮೊದಲು ನಿಮ್ಮ ಬಾಳೆಹಣ್ಣನ್ನು ಚೆನ್ನಾಗಿ ತೊಳೆಯಿರಿ.

ಇದನ್ನೂ ಓದಿ: ಕೂದಲು , ಚರ್ಮದ ಸಮಸ್ಯೆಗೆ ಬೆಳ್ಳುಳ್ಳಿ ಬಳಸಿ ಮ್ಯಾಜಿಕ್ ನೋಡಿ..

ನಿಮ್ಮ ಬಾಳೆಹಣ್ಣುಗಳನ್ನು ಕಾಪಾಡಲು , ಮತ್ತೊಂದು ಮಾರ್ಗವೆಂದರೆ ಅವುಗಳನ್ನು ಫ್ರೀಜ್ ಮಾಡಿ. ಈ ರೀತಿ ಮಾಡುವುದರಿಂದ ಬಾಳೆ ಹಣ್ಣುಗಳು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಈ ರೀತಿ ಇಟ್ಟಾಗ ಬಾಳೆಹಣ್ಣಿನ ಸಿಪ್ಪೆಗಳು ಕಪ್ಪಾಗುತ್ತದೆ.ಆದರೆ ಒಳಭಾಗದಲ್ಲಿರುವ ಹಣ್ಣಿಗೆ ಯಾವುದೇ ರೀತಿಯ ಹಾಳಾಗುವುದಿಲ್ಲ ಎಂದು ಸಾಬೀತಾಗಿದೆ
Published by:Sandhya M
First published: