Health Tips: ಮೂತ್ರದ ಸೋಂಕಿನ ಲಕ್ಷಣಗಳೇನು ಗೊತ್ತಾ? ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಹೀಗೆ ಮಾಡಿ

UTIs: ಹೆಚ್ಚು ನೀರನ್ನು ಕುಡಿಯುವುದು ಸೋಂಕಿನಿಂದ ತಪ್ಪಿಸಲು ಸಹಾಯ ಮಾಡುತ್ತದೆ. . ಪ್ರಯಾಣದ ಸಮಯದಲ್ಲಿ ನೀರಿನ ಬಾಟಲಿಯನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೂತ್ರದ ಸೋಂಕು ಅಥವಾ ಉರಿ ಮೂತ್ರ ಹೆಚ್ಚು ಸಮಸ್ಯೆಯನ್ನು ಮಾಡುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಸಾಕಷ್ಟು ತೊಂದರೆಯನ್ನುಂಟುಮಾಡುತ್ತದೆ. ಇತರ ಆರೋಗ್ಯ ಸಮಸ್ಯೆಗಳು ಸಹ ಇದರಿಂದ ಕಾಡುವ ಸಾಧ್ಯತೆಗಳು ಹೆಚ್ಚು. ನೀರಿನ ಸೇವನೆ ಕಡಿಮೆ ಆದಾಗ ಅಥವಾ ಮೂತ್ರನಾಳದಲ್ಲಿ ಏನಾದರೂ ಸೋಂಕು ಉಂಟಾದಾಗ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇನ್ನು ಪ್ರಯಾಣದ ಸಮಯದಲ್ಲಿ ನೀರನ್ನು ಕಡಿಮೆ ಸೇವನೆ ಮಾಡುವುದು ಮತ್ತು ಮೂತ್ರವನ್ನು ದೀರ್ಘಕಾಲದವರೆಗೆ ತಡೆದುಕೊಳ್ಳುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹಾನಿಕಾರಕ ಬ್ಯಾಕ್ಟೀರಿಯಾಗಳು ದೇಹದ ಹೊರಗಿನ ಭಾಗದಿಂದ ಮೂತ್ರ ನಾಳವನ್ನು ಪ್ರವೇಶಿಸಿ, ಸೋಂಕು ಮತ್ತು ಉರಿಯೂತವನ್ನು ಉಂಟುಮಾಡುತ್ತವೆ. ಇದನ್ನೇ ಮೂತ್ರದ ಸೋಂಕು ಅಥವಾ ಯುಟಿಐ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ಶೇ. 50ರಷ್ಟು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ.

ಸೋಂಕಿಗೆ ಕಾರಣಗಳೇನು?

ಸ್ತ್ರೀಯರ ಮೂತ್ರ ನಾಳವು ಚಿಕ್ಕದಾಗಿರುತ್ತವೆ. ಜೊತೆಗೆ ಗುದದ್ವಾರಕ್ಕೆ ಸಮೀಪದಲ್ಲಿ ಇರುವುದರಿಂದ ಪುರುಷರಿಗಿಂತ ಮಹಿಳೆಯರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಹೆಚ್ಚಿನ ಸಮಯಗಳ ಕಾಲ ಬಸ್, ಕಾರು ಅಥವಾ ಟ್ರೇನ್ ಪ್ರಯಾಣ ಮಾಡಿದಾಗ ಮೂತ್ರದ ಸೋಂಕು ಕಾಣಿಸಿಕೊಳ್ಳುತ್ತದೆ.

ಅಶುದ್ಧವಾದ ಶೌಚಾಲಯ

ದುರ್ಬಲವಾದ ರೋಗನಿರೋಧಕ ಶಕ್ತಿ

ಪ್ರಯಾಣದ ಸಮಯದಲ್ಲಿ ನೀರನ್ನು ಕುಡಿಯದೆ ಇರುವುದು ಸೋಂಕಿಗೆ ಮುಖ್ಯ ಕಾರಣಗಳು.

ಉರಿ ಮೂತ್ರ  ಉಂಟಾದಾಗ ಕಾಣಿಸಿಕೊಳ್ಳುವ ಲಕ್ಷಣಗಳೇನು?

ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವಾಗುತ್ತದೆ.

ಮೂತ್ರದಲ್ಲಿ ರಕ್ತ ಮತ್ತು ವಾಸನೆ ಬರುತ್ತದೆ.

ಬೆನ್ನು ನೋವು ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ.

ಈ ಸಮಸ್ಯೆಗೆ ಪರಿಹಾರ ಏನು?

ವೈಯಕ್ತಿಕ ನೈರ್ಮಲ್ಯವನ್ನು  ಕಾಪಾಡಿಕೊಳ್ಳುತ್ತದೆ.

ಮೂತ್ರ ಮಾಡಿದ ನಂತರ ಮತ್ತು ಮಾಡುವ ಮೊದಲು ಜನನಾಂಗಗಳನ್ನು ತೊಳೆದುಕೊಳ್ಳಬೇಕು.

ಇದನ್ನೂ ಓದಿ: ಚರ್ಮದ ಉತ್ಪನ್ನಗಳನ್ನು ಖರೀದಿ ಮಾಡುವಾಗ ಈ ಅಂಶಗಳನ್ನು ಮರೆಯಬಾರದು

ಗುದದ್ವಾರವನ್ನು ಸರಿಯಾಗಿ ಸ್ವಚ್ಛಗೊಳಿಸುವುದು,

ಸ್ಯಾನಿಟರಿ ನ್ಯಾಪಕಿನ್ ಅನ್ನು ಆಗಾಗ ಬದಲಿಸಿಕೊಳ್ಳುವುದು,

ಸಂಭೋಗದ ನಂತರ ತೊಳೆದುಕೊಳ್ಳುವುದು

ಸೂಕ್ತ ಗರ್ಭ ನಿರೋಧಕ ಕ್ರಮ ಅನುಸರಿಸಬೇಕು.

ಋತುಸ್ರಾವದ ಸಮಯದಲ್ಲಿ ಸಂಭೋಗ ನಡೆಸಬಾರದು.

ಪ್ರಯಾಣ ಮಾಡುವಾಗ ಈ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.

ಹೆಚ್ಚು ನೀರನ್ನು ಕುಡಿಯುವುದು ಸೋಂಕಿನಿಂದ ತಪ್ಪಿಸಲು ಸಹಾಯ ಮಾಡುತ್ತದೆ. .

ಪ್ರಯಾಣದ ಸಮಯದಲ್ಲಿ ನೀರಿನ ಬಾಟಲಿಯನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ

ಪ್ರಯಾಣ ಮಾಡುವಾಗ  ಎಳನೀರು ಹಾಗೂ  ಜ್ಯೂಸ್ ಸೇವನೆ ಮಾಡುವುದು ಉತ್ತಮ

ಕ್ಯಾನ್ ಬೆರ್ರಿ ಹಣ್ಣಿನ ರಸವು ಮೂತ್ರದ ಸೋಂಕು ನಿಂಯತ್ರಿಸಲು ಸಹಾಯ ಮಾಡುತ್ತದೆ.

ಲೈಂಗಿಕ ಕ್ರಿಯೆಯ ನಂತರ ತಕ್ಷಣ ಮೂತ್ರ ವಿಸರ್ಜನೆ ಮಾಡಿ, ಆ ಜಾಗವನ್ನು ನೀರಿನಿಂದ ತೊಳೆದುಕೊಳ್ಳಿ.

ಅಪರಿಚಿತ ಪ್ರದೇಶಗಳಿಗೆ ಹೋದಾಗ ಅಥವಾ ಮಾಲ್‍ಗಳಲ್ಲಿ ಶೌಚಾಲಯವನ್ನು ಬಳಸುವಾಗ ಟಾಯ್ಲೆಟ್ ಸ್ಯಾನಿಟೈಸರ್ ಬಳಸಿ, ನಂತರ ಮೂತ್ರ ವಿಸರ್ಜನೆ ಮಾಡಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: