ಹಾಲು ಉಕ್ಕದಂತೆ ತಡೆಯುವುದು ಹೇಗೆ ಅಂತ ಯೋಚನೆ ಮಾಡ್ತಿದ್ದೀರಾ? ಹಾಗಾದ್ರೆ ಹೀಗೆ ಮಾಡಿ

Kitchen Hacks: ಹಾಲು ಉಕ್ಕದಂತೆ ತಡೆಯುವುದು ಪ್ರಪಂಚದ ಅತಿ ದೊಡ್ಡ ಕೆಲಸ ಎಂದು ಹೇಳಬಹುದು. ಈ ರೀತಿ ಹಾಲು ಸುರಿದ ಒಲೆಯನ್ನು ಶುಚಿ ಮಾಡುವುದು ಬಹಳ ಕಷ್ಟವಾದ ಕೆಲಸ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಡುಗೆ ಮನೆಯಲ್ಲಿ ಆಹಾರ ತಯಾರಿಸಿದಾಗ ಒಂದೆಲ್ಲ ಒಂದು ಸಮಸ್ಯೆಯಾಗುತ್ತದೆ. ಸಾಂಬರ್ ಉಕ್ಕಿ ಬರುವುದು , ನೀರು ಚೆಲ್ಲುವುದು ಹೀಗೆ. ಈ ಅಡುಗೆ ಮನೆ ಸ್ವಚ್ಛ ಮಾಡುವುದೇ ಒಂದು ತಲೆನೋವಿನ ಕೆಲಸ. ಅಡುಗೆ ಮನೆ ಸ್ವಚ್ಛವಾಗಿದಷ್ಟು ಮನೆಯವರ ಆರೋಗ್ಯವೂ ಚನ್ನಾಗಿರುತ್ತದೆ. ಅಡುಗೆ ಮನೆ ಗಲೀಜಾಗಲು ಹಲವಾರು ಕಾರಣಗಳಿವೆ. ತರಕಾರಿ ಸಿಪ್ಪೆಗಳು, ನೀರು, ಹೀಗೆ. ಅದರಲ್ಲಿ ಮುಖ್ಯವಾದ್ದು, ಹಾಲು ಉಕ್ಕುವುದು. ಅದೆಷ್ಟೇ ಪ್ರಯತ್ನ ಮಾಡಿದರೂ ಸಹ ಹಾಲು ಉಕ್ಕುವುದನ್ನ ತಪ್ಪಿಸಲು ಸಾಧ್ಯವಾಗುವುದಿಲ್ಲ. ಹಾಲು ಉಕ್ಕದಂತೆ ತಡೆಯುವುದು ಪ್ರಪಂಚದ ಅತಿ ದೊಡ್ಡ ಕೆಲಸ ಎಂದು ಹೇಳಬಹುದು. ಈ ರೀತಿ ಹಾಲು ಸುರಿದ ಒಲೆಯನ್ನು ಶುಚಿ ಮಾಡುವುದು ಬಹಳ ಕಷ್ಟವಾದ ಕೆಲಸ. ನೀವು ಗಂಡಸರು ಮತ್ತು ಮಕ್ಕಳ ಬಳಿ ಹಾಲು ಉಕ್ಕದಂತೆ ನೋಡಿಕೊಳ್ಳಿ ಎಂದು ಹೇಳಿ ಹೋದರೆ, ಅದರ ಗತಿ ಮುಗಿದಂತೆ. ಹಾಲು ಖಂಡಿತವಾಗಿ ಚೆಲ್ಲಿರುತ್ತದೆ. ಒಮ್ಮೊಮ್ಮೆ ಹಾಲು ಉಕ್ಕಿ ಇಡೀ ಅಡುಗೆ ಮನೆಯನ್ನು ಸ್ವಚ್ಛ ಮಾಡುವ ಪರಿಸ್ಥಿತಿ ಬರುತ್ತದೆ. ಹಾಗಾದರೇ ಹಾಲು ಉಕ್ಕದಂತೆ ತಡೆಯಲು ಯಾವ ಮಾರ್ಗಗಳನ್ನು ಪಾಲಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಹಾಲು ಕಾಯಿಸಲು ನೀವು ಬಳಸುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ನಂತರ ಹಾಲನ್ನು ಹಾಕಿ. ಆಗ ಹಾಲು ಬಿಸಿಯಾದಾಗ ಸುರಿಯದಂತೆ ನೋಡಿಕೊಳ್ಳುತ್ತದೆ. ಮತ್ತೊಂದು ಸುಲಭವಾದ ಉಪಾಯವೆಂದರೆ ನಿಮ್ಮ ಹಾಲಿನ ಪ್ರಮಾಣಕ್ಕಿಂತ ಬಹಳ ದೊಡ್ಡದಾಗಿರುವ ಪಾತ್ರೆಯನ್ನು ತೆಗೆದುಕೊಂಡು ನಂತರ ಅದಕ್ಕೆ ನೀರನ್ನು ಸೇರಿಸಿ ನಂತರ ಹಾಲನ್ನು ಹಾಕಿ, ಆಗ ನಿಮ್ಮ ಹಾಲು ಉಕ್ಕಿ ಬರುವುದಿಲ್ಲ.

ನೀವು ಹಾಲು ಕಾಯಿಸುವ ಪಾತ್ರೆಯ ಅಂಚಿಗೆ ಬೆಣ್ಣೆಯನ್ನು ಸವರಿ ನಂತರ ಪಾತ್ರೆಗೆ ಹಾಲನ್ನು ಹಾಕಿ. ಹೀಗೆ ಮಾಡುವುದರಿಂದ ಪಾತ್ರೆಯಿಂದ ಹಾಲು ಉಕ್ಕಿ ಹೊರಗೆ ಸುರಿಯುವುದಿಲ್ಲ. ಬೆಣ್ಣೆಯಲ್ಲಿ ಎಣ್ಣೆಯ ಅಂಶವಿರುವುದರಿಂದ ಇದು ಹಾಲನ್ನು ಹೊರಗೆ ಹೋಗುವುದನ್ನು ತಪ್ಪಿಸುತ್ತದೆ.

ಇದನ್ನೂ ಓದಿ: ಅಡುಗೆ ಮಾಡುವಾಗ ಸಾಂಬಾರ್ ಉಕ್ಕಿ, ಚೆಲ್ಲುವುದನ್ನು ತಡೆಯಬೇಕೆ? ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ, ಮ್ಯಾಜಿಕ್ ನೋಡಿ

ಹಾಲನ್ನು ಕಾಯಿಸಲು ಇಟ್ಟಿರುವ ಪಾತ್ರೆಯ ಮಧ್ಯಕ್ಕೆ ಒಂದು ಮರದ ಚಮಚವನ್ನು ಇರಿಸಿ. ಹೀಗೆ ಮಾಡುವುದರಿಂದ ಹಾಲು ಉಕ್ಕಿ ಕೆಳಗೆ ಹರಿಯುವುದು ತಪ್ಪುತ್ತದೆ. ಇದೇ ಮಾರ್ಗವನ್ನು ಸಾಂಬರ್ ಉಕ್ಕಿ ಹರಿಯದಂತೆ ಸಹ ತಡೆಯಬಹುದು.

ಈ ಉಪಾಯ ಸ್ವಲ್ಪ ಕಷ್ಟವಾಗಬಹುದು. ನಿಮಗೆ ಯಾವಾಗ ಹಾಲು ಉಕ್ಕುತ್ತಿದೆ ಎಂದು ಅನಿಸುತ್ತದೆಯೋ ಆಗ ಹಾಲಿನ ಪಾತ್ರೆಯನ್ನು ಎತ್ತಿ ಅಲುಗಾಡಿಸಿ ನಂತರ ಕುದಿಯಲು ಮತ್ತೆ ಇಡಿ. ಈ ರೀತಿ ಮಾಡುವುದರಿಂದ ಹಾಲು ಕುದಿಯುತ್ತಾ ಕೆಳಗೆ ಉಕ್ಕಿ ಸರಿಯುವುದಿಲ್ಲ. ಹಾಲಿನ ಪಾತ್ರೆ ಬಿಸಿಯಿರುತ್ತದೆ, ಆ ಕಾರಣದಿಂದ ಹೆಚ್ಚು ಕಾಳಜಿವಹಿಸಿ ಅಲುಗಾಡಿಸಬೇಕು, ಇಲ್ಲದಿದ್ದಲ್ಲಿ, ಕಾಲಿನ ಮೇಲೆ ಹಾಲು ಚೆಲ್ಲಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಸಾಮಾನ್ಯವಾಗಿ ಹಾಲು ಉಕ್ಕಿ ಬರುವಾಗ ಹಾಲಿನ ಮೇಲೆ ನೊರೆ ನಿರ್ಮಾಣವಾಗಿರುತ್ತದೆ. ಇದರ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿದಾಗ ಅದು ಹಾಲು ಉಕ್ಕಿ ಹೊರಗೆ ಹರಿಯುವುದನ್ನು ತಪ್ಪಿಸುತ್ತದೆ.

ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Sandhya M
First published: