Men Beauty Tips: ಶೇವ್ ಮಾಡಿದ್ರೆ ತುರಿಕೆ, ಕಿರಿಕಿರಿ ಆಗುತ್ತಾ? ಹಾಗಾದ್ರೆ ಇಲ್ಲಿದೆ ಟಿಪ್ಸ್

Men beauty tips: ನಿಮ್ಮ ಶವರ್ ಜೆಲ್‌ಗಳು ಅಥವಾ ಸಾಬೂನುಗಳನ್ನು ನಿಮ್ಮ ಶೇವಿಂಗ್‌ಗೆ ಬಳಸಬೇಡಿ. ನಿಮ್ಮ ಚರ್ಮದ ಪ್ರಕಾರವನ್ನು ಅವಲಂಬಿಸಿ, ಶೇವಿಂಗ್ ಕ್ರೀಮ್, ಫೋಮ್ ಅಥವಾ ಜೆಲ್ ಆಯ್ಕೆ ಮಾಡಿಕೊಂಡು ಬಳಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹಳಷ್ಟು ಪುರುಷರು(Men) ಪ್ರತಿದಿನ ಅಲ್ಲದೆ ಹೋದರೂ 2 - 3 ದಿನಗಳಿಗೊಮ್ಮೆ ಶೇವ್(Shave) ಮಾಡಿಕೊಳ್ಳುತ್ತಾರೆ. ಅವರಿಗೆ ಸ್ವಲ್ಪ ಗಡ್ಡ (Beard)ಬೆಳೆದರೂ ಕಿರಿಕಿರಿ ಅನ್ನಿಸುತ್ತದೆ. ಹಾಗಾಗಿ ಅವರು ತಮ್ಮ ಗಡ್ಡವನ್ನು ಕ್ಲೀನ್ ಶೇವ್ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಈ ಶೇವ್ ಮಾಡಿಕೊಂಡ ನಂತರ ಇರುತ್ತಲ್ಲ ಹಿಂಸೆ, ಕಿರಿಕಿರಿ ಅನುಭವಿಸಿದವರಿಗೆ ಗೊತ್ತು ಅದರ ಕಷ್ಟ. ಬಹುತೇಕರಿಗೆ ಶೇವ್ ಮಾಡಿಕೊಂಡ ನಂತರ ಚರ್ಮದಲ್ಲಿ ತುರಿಕೆ(itching)ಯಾಗುವುದು, ಕಿರಿಕಿರಿ ಅನ್ನಿಸುವುದು ಮತ್ತು ಬಿಸಿಲಿನಲ್ಲಿ(sunburns) ಹೋದರೆ ಮುಖ ಉರಿಯುತ್ತದೆ.ನೀವು ಶೇವ್ ಮಾಡಿಕೊಂಡ ನಂತರ ಯಾವುದೇ ಕಿರಿಕಿರಿ (irritation)ಅನ್ನಿಸದೆ ನಿಮ್ಮ ಚರ್ಮವು ತುಂಬಾನೇ ಮೃದುವಾಗಿರಲು ಸರಿಯಾದ ರೀತಿಯಲ್ಲಿ ಶೇವ್ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಬನ್ನಿ ಹಾಗಾದರೆ ಇದರ ಬಗ್ಗೆ ಫೈ ಅಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆದ ರಚಿತ್ ಮೆಹರಾ(Rachit Mehra) ಏನು ಸಲಹೆ ನೀಡುತ್ತಾರೆ ನೋಡೋಣ.

ಕಿರಿಕಿರಿ ಯಾವಾಗ ಕಾಣಿಸಿತ್ತೆ
ನೀವು ನಿಮ್ಮ ಗಡ್ಡದಿಂದ ಮುಕ್ತಿ ಪಡೆದಿದ್ದರೂ ನಂತರ ಚರ್ಮ ತುರಿಕೆ ಮತ್ತು ಕಿರಿಕಿರಿ ಶುರುವಾಗುತ್ತದೆ. ಕೆಲವರಿಗೆ ಈ ತುರಿಕೆ ಮತ್ತು ಕಿರಿಕಿರಿ 2 ಅಥವಾ 3ನೇ ದಿನ ಕಂಡು ಬರುತ್ತದೆ. ಇದನ್ನು ಗುರುತಿಸುವ ಒಂದು ಮಾರ್ಗವೆಂದರೆ ನೀವು ಶೇವ್ ಮಾಡಿದ ಕೆಲವು ಗಂಟೆಗಳ ನಂತರ ಚರ್ಮವು ಕೆಂಪಾಗುವಿಕೆ, (itching) ,ಶುಷ್ಕತೆ ಮತ್ತು ತುರಿಕೆ (irritation)ಉಂಟಾಗುವುದನ್ನು ನೀವು ಅನುಭವಿಸಬಹುದು. ಇದು ಮೊಡವೆಯಂತಹ ಉಬ್ಬುಗಳು, ಶೇವ್ ಮಾಡಿಕೊಳ್ಳುವಾಗ ರೇಜರ್ ಬರ್ನ್ ಅಥವಾ ಕೆಟ್ಟದಾಗಿರುವ ದದ್ದುಗಳು ನಿಮ್ಮ ರೇಜರ್‌ಗೆ ಸಿಕ್ಕಿಕೊಂಡು ತುಂಡಾಗುವುದು ಇರಬಹುದು.

 ಇದನ್ನೂ ಓದಿ: Skin Care Tips for Men: ಪುರುಷರ ತ್ವಚೆಯ ಆರೈಕೆಗೆ ಇಲ್ಲಿದೆ ಸಿಂಪಲ್ ಟಿಪ್ಸ್ .

ತುರಿಕೆ ಏಕೆ ಉಂಟಾಗುತ್ತದೆ?
ಪ್ರಪಂಚದಾದ್ಯಂತದ ಅನೇಕ ಬ್ರ್ಯಾಂಡ್‌ಗಳು ತಮ್ಮ ಲ್ಯಾಬ್‌ಗಳಲ್ಲಿ, ಶೇವ್ ಅನ್ನು ಹೇಗೆ ಸುರಕ್ಷಿತ, ಸೌಮ್ಯ ಮತ್ತು ಕಡಿಮೆ ಕಿರಿಕಿರಿ ಉಂಟುಮಾಡುವ ಅನುಭವ ನೀಡಲು ಪ್ರಯತ್ನಿಸುತ್ತಿವೆ. ಅದು ಮಲ್ಟಿ-ಬ್ಲೇಡ್ ಕ್ರಿಯೆಯಾಗಿರಲಿ ಅಥವಾ ಅಲೋವೆರಾದಂತಹ ಹಿತವಾದ ಉತ್ಪನ್ನಗಳಾಗಿರಲಿ ಹೀಗೆ ಅನೇಕ ಪರಿಹಾರಗಳನ್ನು ಪರಿಶೀಲಿಸುತ್ತಿದೆ. ಹಾಗಾದರೆ ಏಕೆ ನೀವು ಶೇವ್ ಮಾಡಿದ ನಂತರ ಕಿರಿಕಿರಿ ಆಗುತ್ತದೆ? ನೀವು ಶೇವ್ ಮಾಡುವಾಗ ನೀವು ಸಂಪೂರ್ಣ ಕೂದಲನ್ನು ತೆಗೆದು ಹಾಕಬೇಕಾಗಿಲ್ಲ.

ನೀವು ಶೇವ್ ಅನ್ನು ಚರ್ಮದ ಮಟ್ಟದಲ್ಲಿ, ಬುಡದಲ್ಲಿ ಮಾಡಿಕೊಳ್ಳುವುದರಿಂದ ನಿಮಗೆ ನಂತರದಲ್ಲಿ ಕಿರಿಕಿರಿ ಉಂಟಾಗುತ್ತದೆ. ಜೊತೆಗೆ ಬೆಳೆದ ದದ್ದುಗಳು ಚರ್ಮಕ್ಕೆ ಕಿರಿಕಿರಿ ಉಂಟುಮಾಡುತ್ತದೆ, ಇದು ತುರಿಕೆ, ಕೆಂಪಾಗುವಿಕೆ ಮತ್ತು ಉಬ್ಬುಗಳಿಗೆ ಕಾರಣವಾಗುತ್ತದೆ, ಇದನ್ನು ನಾವು ಸಾಮಾನ್ಯವಾಗಿ ಶೇವ್ ನಂತರದ ಕಿರಿಕಿರಿ ಎಂದು ಕರೆಯುತ್ತೇವೆ.

ಕಿರಿಕಿರಿ ಸಂಭವಿಸದಂತೆ ಹೇಗೆ ನೋಡಿಕೊಳ್ಳುವುದು?
ಈ ಶೇವ್ ಆದ ನಂತರದಲ್ಲಿ ಆಗುವಂತಹ ಕಿರಿಕಿರಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಯಾವುದೇ ಖಚಿತ ಮಾರ್ಗವಿಲ್ಲವಾದರೂ, ನೀವು ಶೇವ್ ಮಾಡಿದ ನಂತರದ ಕಿರಿಕಿರಿಯನ್ನು ಸುಗಮವಾಗಿ ಎದುರಿಸಲು ಕೆಲವು ಮಾರ್ಗಗಳು ಇಲ್ಲಿವೆ.

ಮೊದಲೇ ಚರ್ಮವನ್ನು ಹೈಡ್ರೇಟ್‌ ಮಾಡಿಕೊಳ್ಳಿ: ನಿಮ್ಮ ಚರ್ಮವು ಒಣಗಿದಷ್ಟೂ, ನೀವು ಶೇವ್ ಮಾಡಿದ ನಂತರ ಕಿರಿಕಿರಿ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಚರ್ಮವನ್ನು ತೇವಾಂಶ ಮತ್ತು ಹೈಡ್ರೇಟ್ ಮಾಡಿಕೊಳ್ಳಲು ಮಾಯಿಶ್ಚರೈಸರ್ ಅಥವಾ ಅಲೋ ಜೆಲ್‌ನೊಂದಿಗೆ ಶೇವಿಂಗ್ ಮಾಡುವ ಕನಿಷ್ಠ 6-12 ಗಂಟೆಗಳ ಮೊದಲು ನಿಮ್ಮ ಚರ್ಮಕ್ಕೆ ಹಚ್ಚಿ ಸಿದ್ದಮಾಡಿಕೊಳ್ಳಿ.

ಉದ್ದವಾದ ಕೂದಲನ್ನು ಮೊದಲು ಟ್ರಿಮ್ ಮಾಡಿಕೊಳ್ಳಿ: ನೀವು ನೇರವಾಗಿ ರೇಜರ್‌ನೊಂದಿಗೆ ಶೇವ್ ಮಾಡಿಕೊಂಡರೆ ಎಲ್ಲಾ ಕೂದಲನ್ನು ತೆಗೆದುಕೊಳ್ಳಲು ಒಂದೇ ಜಾಗದಲ್ಲಿ ಅನೇಕ ಬಾರಿ ಶೇವ್ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಚರ್ಮದ ಆ ಭಾಗವು ಹೆಚ್ಚಿನ ಆಘಾತಕ್ಕೆ ಒಳಗಾಗುತ್ತದೆ. ಶೇವಿಂಗ್ ಮಾಡುವ ಮೊದಲು ಉದ್ದವಾದ ಕೂದಲುಗಳನ್ನು ಮೊದಲು ಟ್ರಿಮ್ ಮಾಡಿಕೊಳ್ಳುವುದು ಉತ್ತಮ.

ಎಲ್ಲಿ ಕೂದಲು ಬೆಳೆದಿರುತ್ತದೆಯೋ ಅಲ್ಲಿ ಶೇವ್ ಮಾಡಿ: ನೆನಪಿಡಿ, ನೀವು ಕೂದಲು ಬೆಳೆದ ಜಾಗದಲ್ಲಿ ಮಾತ್ರ ನೀವು ಶೇವ್ ಮಾಡಿಕೊಳ್ಳಿ. ಅನಾವಶ್ಯಕವಾಗಿ ಕೂದಲು ಇರದ ಜಾಗದಲ್ಲಿ ನಿಮ್ಮ ಬ್ಲೇಡ್ ಆಡಿಸಿದರೆ ನೀವು ಕೂದಲಿನ ನೈಸರ್ಗಿಕ ಬೆಳವಣಿಗೆಯನ್ನು ಅಡ್ಡಿಪಡಿಸಿದ ಹಾಗೆ ಆಗುತ್ತದೆ.

ಸರಿಯಾದ ಶೇವಿಂಗ್ ಕ್ರೀಮ್ ಬಳಸಿ: ನಿಮ್ಮ ಶವರ್ ಜೆಲ್‌ಗಳು ಅಥವಾ ಸಾಬೂನುಗಳನ್ನು ನಿಮ್ಮ ಶೇವಿಂಗ್‌ಗೆ ಬಳಸಬೇಡಿ. ನಿಮ್ಮ ಚರ್ಮದ ಪ್ರಕಾರವನ್ನು ಅವಲಂಬಿಸಿ, ಶೇವಿಂಗ್ ಕ್ರೀಮ್, ಫೋಮ್ ಅಥವಾ ಜೆಲ್ ಆಯ್ಕೆ ಮಾಡಿಕೊಂಡು ಬಳಸಬೇಕು.

ಇದನ್ನೂ ಓದಿ: Cannabis Oil: ಕ್ಯಾನ್ಸರ್ ಗೆ ಗಾಂಜಾ ಎಣ್ಣೆ ರಾಮಬಾಣ, ಎಲ್ಲಿ ಸಿಗುತ್ತೆ? ಹೇಗೆ ಬಳಸೋದು? ಫುಲ್ ಡೀಟೆಲ್ಸ್

ತುರಿಕೆ ಆದರೆ ಆ ಭಾಗವನ್ನು ಕೈಯಿಂದ ಉಜ್ಜಿಕೊಳ್ಳಬೇಡಿ: ನಿಮಗೆ ತುರಿಕೆ ಇದ್ದರೆ, ಅದನ್ನು ಕೈಯಿಂದ ಉಜ್ಜಿಕೊಳ್ಳಬೇಡಿ. ತುರಿಕೆ ಉಲ್ಬಣಗೊಳ್ಳುವುದನ್ನು ತಪ್ಪಿಸಲು ನಿಮ್ಮ ತುರಿಕೆಯನ್ನು ಕೈಯಿಂದ ಉಜ್ಜಿಕೊಳ್ಳಬೇಡಿ.

ಕಿರಿಕಿರಿಯನ್ನು ಶಮನ ಗೊಳಿಸಿ: ನಿಮ್ಮ ಶೇವ್ ನಂತರ ಅಲೋವೆರಾ ಜೆಲ್ ಅಥವಾ ನಿಮ್ಮ ಚರ್ಮವನ್ನು ತಂಪಾಗಿಸುವ ಲೋಷನ್ ಹಚ್ಚುವುದರಿಂದ ಕಿರಿಕಿರಿ ಶಮನವಾಗುತ್ತದೆ.
Published by:vanithasanjevani vanithasanjevani
First published: