Skin Care: ತೂಕವೇನೋ ಇಳಿದಿದೆ, ಆದ್ರೆ ಸಡಿಲವಾದ ಚರ್ಮ ಸರಿಯಾಗೋದು ಹೇಗೆ? ಚಿಂತೆ ಬಿಡಿ, ಪರಿಹಾರ ಇಲ್ಲಿದೆ ಓದಿ

ತೂಕ ಇಳಿಕೆಯ ಅಡ್ಡ ಪರಿಣಾಮವೆಂದರೆ ಸಡಿಲವಾದ ಚರ್ಮ. ವ್ಯಾಯಾಮ ಮಾಡಿ ಅಥವಾ ಬಾರಿಯಾಟ್ರಿಕ್ ಸರ್ಜರಿಯ ಮೂಲಕ ತೂಕ ಕಡಿಮೆ ಮಾಡಿಕೊಂಡವರು ಸಡಿಲ ಚರ್ಮದಿಂದಾಗಿ ನಿರಾಶೆಗೊಳಗಾಗುತ್ತಾರೆ. ಇದನ್ನು ಸರಿಪಡಿಸಲು ಈ ರೀತಿ ಮಾಡಿದ್ರೆ ಸಾಕು...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಚೆಂದನೆಯ ದೇಹ ಎಲ್ಲರ ಕನಸು. ಅದರಲ್ಲೂ ಸಪುರನೆಯ ದೇಹ ಟೈಟ್‌ ಆದ ಸ್ಕಿನ್‌ ಹೊಂದಿರಲು ಎಲ್ಲರೂ ಬಯಸುತ್ತಾರೆ. ಬಹುತೇಕ ಜನರು ಒಬೆಸಿಟಿಯಿಂದ (Obesity) ಬಳಲುತ್ತಿರುವ ಈ ದಿನಗಳಲ್ಲಿ ತೂಕ ಇಳಿಸಿಕೊಳ್ಳೋದಕ್ಕೆ ಹೆಣಗಾಡುತ್ತಿರುತ್ತಾರೆ. ಆದ್ರೆ ಕಷ್ಟ ಪಟ್ಟು, ನಿಯಮಿತ ಆಹಾರ ತೆಗೆದುಕೊಂಡು, ಹಂಗೂ ಹಿಂಗೂ ಡಯೆಟ್‌ ಮಾಡಿ ತೂಕ ಇಳಿಸಿಕೊಂಡ (Weight Loss) ಮೇಲೆ ಕಾಡೋ ಸಮಸ್ಯೆಯೆಂದರೆ ಲೂಸ್‌ ಸ್ಕಿನ್‌  ನದ್ದು (Loose skin). ಉಬ್ಬಿ ಸಣ್ಣಗಾದ ದೇಹದಲ್ಲಿ ಚರ್ಮ ಜೋತು ಬಿದ್ದಂತೆ ಕಾಣುವುದು. ಹಾಗಿದ್ರೆ ಅದರಿಂದ ಹೇಗೆ ಹೊರಬರುವುದು.. ಅದನ್ನ ಹೇಗೆ ತಡೆಯೋದು ಅನ್ನೋದಕ್ಕೆ ಇಲ್ಲಿದೆ ಉಪಾಯ!

  ಹೆಲ್ತ್ ಶಾಟ್ಸ್ ನ ಕಾಸ್ಮೆಟಿಕ್ ಡರ್ಮಟಾಲಜಿಸ್ಟ್ ಮತ್ತು ದಿ ಎಸ್ತೆಟಿಕ್ ಕ್ಲಿನಿಕ್ಸ್‌ ನ ಡರ್ಮಟೊ-ಸರ್ಜನ್ ಆಗಿರೋ ಡಾ. ರಿಂಕಿ ಕಪೂರ್ ಹೇಳೋದೇನೆಂದರೆ, ಕಾಸ್ಮೆಟಿಕ್ ಅಂಶಗಳ ಹೊರತಾಗಿಯೂ ತೂಕ ಇಳಿಕೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಸರಿಯಾದ ತೂಕವನ್ನು ಕಾಪಾಡಿಕೊಳ್ಳುವುದು ಹೃದಯದ ಆರೋಗ್ಯ ಹಾಗೂ ಸರಿಯಾದ ಜೀರ್ಣಕ್ರಿಯೆಯ ಜೊತೆಗೆ ಆರೋಗ್ಯಕರ ಹೊಳೆಯುವ ತ್ವಚೆಯನ್ನು ನಾವು ಪಡೆದುಕೊಳ್ಳಬಹುದು.

  ತೂಕ ಇಳಿಕೆಯ ಅಡ್ಡ ಪರಿಣಾಮಗಳೇನು 
  ಆದರೆ ತೂಕ ಇಳಿಕೆಯ ಅಡ್ಡ ಪರಿಣಾಮವೆಂದರೆ ಸಡಿಲವಾದ ಚರ್ಮ. ವ್ಯಾಯಾಮ ಮಾಡಿ ಅಥವಾ ಬಾರಿಯಾಟ್ರಿಕ್ ಸರ್ಜರಿಯ ಮೂಲಕ ತೂಕ ಕಡಿಮೆ ಮಾಡಿಕೊಂಡವರು ಸಡಿಲ ಚರ್ಮದಿಂದಾಗಿ ನಿರಾಶೆಗೊಳಗಾಗುತ್ತಾರೆ. ಆದರೆ ನಿಮ್ಮ ಸಡಿಲ ಚರ್ಮ ನೀವು ಎಷ್ಟು ತೂಕ ಕಳೆದುಕೊಂಡಿದ್ದೀರಿ ಅನ್ನೋದರ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ ಅದು ನಿಮ್ಮ ಆಹಾರ ಪದ್ಧತಿ, ಜೆನೆಟಿಕ್ಸ್‌, ನೀವು ಎಷ್ಟು ಧೂಮಪಾನ ಮಾಡ್ತೀರಿ ಎನ್ನುವುದು ಹಾಗೂ ಸೂರ್ಯನ ಬಿಸಿಲಿಗೆ ನೀವೆಷ್ಟು ಒಡ್ಡಿಕೊಳ್ಳುತ್ತೀರಿ ಅನ್ನೋದನ್ನು ಅವಲಂಬಿಸಿದೆ.

  ಆದರೆ ಇದನ್ನು ನಾವು ತಡೆಗಟ್ಟೋಕೆ ಸಾಧ್ಯವಿದೆ ಅಂತಾರೆ ಡಾ. ಕಪೂರ್‌. ಹಾಗಿದ್ರೆ ತೂಕ ಇಳಿಕೆಯ ನಂತರ ಉಂಟಾದ ಸಡಿಲ ಚರ್ಮವನ್ನು ಹೇಗೆ ಟೈಟ್‌ ಮಾಡಬಹುದು ಅನ್ನೋದಕ್ಕೆ ಇಲ್ಲಿದೆ ನೋಡಿ 5 ಉಪಾಯ.

  ವ್ಯಾಯಾಮ:
  ನಮ್ಮ ಸ್ನಾಯುಗಳನ್ನು ಬಲಪಡಿಸುವ ದೈನಂದಿನ ಹಾಗೂ ನಿಯಮಿತ ವ್ಯಾಯಾಮಗಳು ಸ್ಕಿನ್‌ ಟೈಟ್‌ ಮಾಡೋದಕ್ಕೆ ಸಹಾಯ ಮಾಡುತ್ತವೆ. ಇದರಿಂದ ನಿಮ್ಮ ಚರ್ಮ ಮತ್ತಷ್ಟು ಚೆನ್ನಾಗಿ ಕಾಣುತ್ತದೆ.

  ಇದನ್ನೂ ಓದಿ:  Beauty Care: ಅಕಾಲಿಕ ವಯಸ್ಸಾಗುವುದನ್ನು ತಡೆಯಬೇಕಾ? ಹಾಗಿದ್ರೆ, ನಿಮ್ಮಲ್ಲಿರುವ ಈ ಸಮಸ್ಯೆಯನ್ನ ಸರಿದೂಗಿಸಿ

  ‌ಡಯೆಟ್:
  ಡಾ. ಕಪೂರ್‌ ಅವರು ಹೇಳುವ ಪ್ರಕಾರ ಹೆಚ್ಚಿನ ಪ್ರೋಟೀನ್‌ ಇರುವಂಥ ಆಹಾರಗಳನ್ನು ಸೇವಿಸಿದರೆ ನಿಮ್ಮ ಚರ್ಮಕ್ಕೆ ಒಳ್ಳೆಯದು. ನಿಮ್ಮ ಡಯೆಟ್‌ ನಲ್ಲಿ ಮೊಟ್ಟೆ, ಮಾಂಸ, ಮೀನಿನಂತಹ ಆಹಾರಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ವಿಟಾಮಿನ್‌ ಸಿ ಹಾಗೂ ಇ ಹೆಚ್ಚಾಗಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಅಲ್ಲದೇ ಹೆಚ್ಚು ನೀರು ಕುಡಿಯುವುದೂ ಕೂಡ ಒಳ್ಳೆಯದೇ.

  ಚರ್ಮ ಬಿಗಿಗೊಳಿಸುವ ಶಸ್ತ್ರಚಿಕಿತ್ಸೆ:
  ಸದ್ಯ ಚರ್ಮವನ್ನು ಬಿಗಿಗೊಳಿಸುವ ಸರ್ಜರಿಯನ್ನು ಸಾಕಷ್ಟು ಜನರು ಮಾಡಿಸಿಕೊಳ್ಳುತ್ತಾರೆ. ಅದರಲ್ಲೂ ಟಮ್ಮಿ ಟಕ್, ಆರ್ಮ್ ಲಿಫ್ಟ್, ಸ್ತನ ಲಿಫ್ಟ್, ಫೇಸ್ ಲಿಫ್ಟ್ ಮತ್ತು ಲೋವರ್ ಬಾಡಿ ಲಿಫ್ಟ್‌ಗಳಂತಹ ಶಸ್ತ್ರಚಿಕಿತ್ಸೆಗಳು ಜನಪ್ರಿಯವಾಗಿವೆ. ಇದರಲ್ಲಿ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲಾಗುತ್ತದೆ. ಇದರಿಂದ ಚರ್ಮ ಟೈಟ್‌ ಆಗುವುದಲ್ಲದೇ ಸುಂದರವಾಗಿ ಕಾಣುತ್ತದೆ.

  ಫರ್ಮಿಂಗ್‌ ಕ್ರೀಮ್‌ ಗಳು:
  ಸಡಿಲಗೊಂಡಿರುವ ಚರ್ಮವನ್ನು ಟೈಟ್‌ ಮಾಡಲು ಫರ್ಮಿಂಗ್‌ ಕ್ರೀಮ್‌ ಗಳು ತುಂಬಾ ಪರಿಣಾಮಕಾರಿಯಾದ ಪರಿಹಾರವೇನಲ್ಲ. ಆದರೆ ಇದನ್ನು ದಿನವೂ ಹಚ್ಚಿದಲ್ಲಿ ಇವು ಸ್ವಲ್ಪ ಮಟ್ಟಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತವೆ. ಈ ಫರ್ಮಿಂಗ್ ಕ್ರೀಮ್‌ಗಳು ಕೊಲಾಜನ್‌ ಉತ್ಪಾದನೆಯನ್ನು ಮತ್ತು ಎಲಾಸ್ಟಿನ್ ಅಣುಗಳನ್ನು ಹೆಚ್ಚಿಸುವ ಮೂಲಕ ಚರ್ಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

  ಇದನ್ನೂ ಓದಿ: Weight Lifting: ಬಾಡಿ ಬಿಲ್ಡಿಂಗ್ ಮಾಡುವುದು, ತೂಕ ಎತ್ತುವುದು ಹೃದಯ ಆರೋಗ್ಯಕ್ಕೆ ಎಷ್ಟು ಲಾಭಕಾರಿ?

  ತೀರಾ ಆಕ್ರಮಣಕಾರಿಯಲ್ಲದ ಚಿಕಿತ್ಸೆ:
  ನಾನ್‌ ಇನ್ವಾಸಿವ್‌ ಟ್ರೀಟ್‌ ಮೆಂಟ್‌ ನಂಥವು ಉತ್ತಮ ಚರ್ಮ ರೂಪುಗೊಳ್ಳಲು ಸಹಾಯ ಮಾಡುತ್ತವೆ. ರೇಡಿಯೊಫ್ರೀಕ್ವೆನ್ಸಿ ಮತ್ತು ಅತಿಗೆಂಪು ಬೆಳಕಿನ ಬಳಕೆಯಂತಹ ಚಿಕಿತ್ಸೆಗಳು ಚರ್ಮದ ಅಡಿಗೆ ತಲುಪುತ್ತವೆ ಮತ್ತು ಅಲ್ಲಿ ಹೊಸ ಕೊಲಾಜನ್‌ ಹಾಗೂ ಎಲಾಸ್ಟಿನ್ ರೂಪುಗೊಳ್ಳುವಂತೆ ಮಾಡುತ್ತವೆ. ಇದರಿಂದ ಹೊಳಪಿನ ಹಾಗೂ ಬಿಗಿಯಾದ ತ್ವಚೆ ರೂಪುಗೊಳ್ಳುತ್ತದೆ.

  ಈ ಎಲ್ಲಾ ಕ್ರಮಗಳನ್ನು ನೀವು ಅನುಸರಿಸಿದಲ್ಲಿ ಬಿಗಿಯಾದ ಹೊಳಪಿನ ತ್ವಚೆ ಪಡೆಯೋದ್ರಲ್ಲಿ ಸಂಶಯವೇ ಇಲ್ಲ.
  Published by:Ashwini Prabhu
  First published: