• Home
  • »
  • News
  • »
  • lifestyle
  • »
  • Piles Remedy: ಪೈಲ್ಸ್​ಗೆ ಪರಿಹಾರ ಪಡೆಯಲು ಇಲ್ಲಿದೆ ಸೂಪರ್ ಟಿಪ್ಸ್

Piles Remedy: ಪೈಲ್ಸ್​ಗೆ ಪರಿಹಾರ ಪಡೆಯಲು ಇಲ್ಲಿದೆ ಸೂಪರ್ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Prevent Piles Naturally: ಒಮ್ಮೊಮ್ಮೆ ಮಲ ವಿಸರ್ಜನೆಯ ಸಂದರ್ಭದಲ್ಲಿ ಜಡತ್ವವಿರುವ ಅವಶೇಷಗಳನ್ನು ಹೊರ ಹಾಕಲು ಬಲವಂತವಾಗಿ ಪ್ರಯತ್ನ ಪಡುತ್ತೇವೆ. ಆ ಸ್ಥಳದಲ್ಲಿ ಹೆಚ್ಚಿನ ಒತ್ತಡ ಹಾಕುವ ಮೂಲಕ ಮಲ ವಿಸರ್ಜಿಸಲು ಪ್ರಯತ್ನಿಸುತ್ತೇವೆ. ಇದು ಖಂಡಿತ ಸಲ್ಲದು ಎಂದು ವೈದ್ಯರ ನುಡಿಯಾಗಿದೆ.

ಮುಂದೆ ಓದಿ ...
  • Share this:

ಮೂಲವ್ಯಾಧಿ ಎಂದು ಕರೆಯಲ್ಪಡುವ ಪೈಲ್ಸ್ (Piles) ಮಲವಿಸರ್ಜನೆಯ ಸಂದರ್ಭದಲ್ಲಿ ಅನುಭವಿಸುವ ಒಂದು ಆರೋಗ್ಯದ ಸಮಸ್ಯೆಯಾಗಿದೆ (Health Problem). ಸಾಮಾನ್ಯವಾಗಿ ಇದು ಗುದದ್ವಾರದ ಒಳಗೆ ಅಥವಾ ಸುತ್ತಲಿನಲ್ಲಿ ಉಂಟಾಗುವ ಗಡ್ಡೆಗಳು ಅಥವಾ ಗಂಟುಗಳಾಗಿವೆ. 50 ವರ್ಷ ವಯಸ್ಸಿನ ಸುಮಾರು 50% ರಷ್ಟು ಜನರ ಮೇಲೆ ಇದರ ಪರಿಣಾಮ ಬೀರಬಹುದಾಗಿದ್ದು ಸಾಮಾನ್ಯವಾಗಿ ಇದು ಜಠರಗರುಳಿನ ಸಮಸ್ಯೆಗಳಲ್ಲಿ ಒಂದಾಗಿದೆ. ಆದಾಗ್ಯೂ, ಇದು ಉಂಟಾದಾಗ ಜನರು ಈ ಬಗ್ಗೆ ಬಹು ಪ್ರಕರಣಗಳಲ್ಲಿ ಭೇಟಿ ಮಾಡಲು ಇಷ್ಟ ಪಡುವುದಿಲ್ಲ, ಕಾರಣ ಇದರಿಂದಾಗುವ ಮುಜುಗರದಿಂದ. ಆದರೆ, ಇದರಿಂದ ಅಸ್ವಸ್ಥತೆ ತೀವ್ರವಾದಾಗ ಅನೇಕ ಜನರು ವೈದ್ಯಕೀಯ (Medical) ಆರೈಕೆಯನ್ನು ಪಡೆಯಲು ಮುಂದೆ ಬರುತ್ತಾರೆ. 


ಪೈಲ್ಸ್ ಅನ್ನು ಆಂತರಿಕ ಮತ್ತು ಬಾಹ್ಯ ಮೂಲವ್ಯಾಧಿ ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಹೆಸರೇ ಸೂಚಿಸುವಂತೆ, ಗುದ ಕಾಲುವೆಯೊಳಗೆ ಆಂತರಿಕ ಮೂಲವ್ಯಾಧಿ ಸಂಭವಿಸುತ್ತವೆ. ಆಂತರಿಕವಾಗಿರುವ ಪೈಲ್ಸ್ ಒಳಭಾಗದಲ್ಲೇ ಬೆಳೆಯಬಹುದು ಮತ್ತು ಕೆಲವು ಬಾರಿ ಗುದದ್ವಾರದಿಂದ ಹೊರಬರಬಹುದು. ಬಾಹ್ಯವಾಗಿ ಉಂಟಾಗುವ ಮೂಲವ್ಯಾಧಿ ಗುದದ್ವಾರದ ಕೊನೆಯಲ್ಲಿ ಅಥವಾ ಗುದದ್ವಾರದ ಅಂಚುಗಳಲ್ಲಿ ಬೆಳೆಯುತ್ತವೆ. ಮಲ ವಿಸರ್ಜನೆಗೆ ಸಂಬಂಧಿಸಿದಂತೆ ಇದು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ.  


ಪೈಲ್ಸ್ ಎಂಬುದು ನಿಧಾನವಾಗಿ ಉಲ್ಬಣಗೊಳ್ಳುವ ಸಮಸ್ಯೆಯಾಗಿದ್ದು ಮೊದಲೆ ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಸಹಜವಾಗಿ ಮತ್ತು ನೈಸರ್ಗಿಕವಾಗಿ ಈ ಸಮಸ್ಯೆ ಉಂಟಾಗದಂತೆ ಮಾಡಬಹುದಾಗಿದೆ. ಆದರೆ, ಇದನ್ನು ನಿರ್ಲಕ್ಷಿಸಿದರೆ ಮುಂದೆ ಇದು ಉಲ್ಬಣಗೊಂಡು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾದ ಹಂತದವರೆಗೂ ಬಂದು ತಲುಪಬಹುದು. ಹಾಗಾಗಿ ಈ ಸಮಸ್ಯೆ ಕುರಿತು ಅರಿತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪೈಲ್ಸ್ ಅನ್ನು ದೂರವಿಡಬಹುದಾಗಿದೆ. ಅದೃಷ್ಟವಶಾತ್, ಪೈಲ್ಸ್‌ಗೆ ಆರಂಭಿಕ ಹಂತಗಳಲ್ಲಿ ನೈಸರ್ಗಿಕವಾಗಿ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು. ಈ ಲೇಖನದಲ್ಲಿ, ಪೈಲ್ಸ್ ರೋಗಲಕ್ಷಣಗಳನ್ನು ನಿವಾರಿಸಲು ವಿವಿಧ ಪರಿಣಾಮಕಾರಿ ಮನೆಮದ್ದುಗಳು ಮತ್ತು ನೈಸರ್ಗಿಕವಾಗಿ ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ಇದನ್ನು ನಿಯಂತ್ರಿಸುವ ಬಗೆಯ ಬಗ್ಗೆ ತಿಳಿದುಕೊಳ್ಳೋಣ. 


ಹೆಚ್ಚು ಫೈಬರ್ ಇರುವ ಆಹಾರ ಸೇವಿಸಿ


ಸಾಮಾನ್ಯವಾಗಿ ಅಸಮನ್ವಯವಾದ ಮಲ ವಿಸರ್ಜನೆ ಅಥವಾ ಮಲಬದ್ಧತೆಯಿಂದ ಬಳಲುವವರು ಮೂಲವ್ಯಾಧಿ ಸಮಸ್ಯೆಗೆ ಸಿಲುಕುವುದು ಸರ್ವೇ ಸಾಮಾನಯವಾದ ವಿಷಯ. ಹಾಗಾಗಿ ಮಲಬದ್ಧತೆಯನ್ನು ಆರಂಭಿಕ ಹಂತದಲ್ಲೇ ನಿವಾರಿಸಿಕೊಳ್ಳುವುದರ ಮೂಲಕ ಮೂಲವ್ಯಾಧಿ ಉಂಟಾಗದಂತೆ ತಡೆಯಬಹುದು. ಪಚನ ಕ್ರಿಯೆ ಸುಧಾರಿಸುವ ನಿಟ್ಟಿನಲ್ಲಿ ಡಯಟಿಶಿಯನ್ ಗಳಾಗಲಿ ಅಥವಾ ನುರಿತ ವೈದ್ಯರಾಗಲಿ ಎಲ್ಲರೂ ಸಲಹೆ ನೀಡುವುದು ಫೈಬರ್ ಅಂಶಗಳಿಂದ ಸಮೃದ್ಧವಾದ ಪದಾರ್ಥಗಳನ್ನು ಆಹಾರದಲ್ಲಿ ಸೇವಿಸಬೇಕೆಂದು. ಕೆಲವು ತಜ್ಞರ ಪ್ರಕಾರ, ಹೆಚ್ಚಿನ ಫೈಬರ್ ದೇಹದಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಾಯು ಉತ್ಪತ್ತಿಯಾಗಲು ಕಾರಣವಾಗಬಹುದಾದರೂ ಇದು ಮೂಲವ್ಯಾಧಿಯಿಂದ ಖಂಡಿತವಾಗಿ ರಕ್ಷಣೆ ನೀಡುವುದರಿಂದ ಇದನ್ನು ಒಂದು ಪುಟ್ಟ ದಂಡ ಎಂದು ಪರಿಗಣಿಸಬೇಕೆಂದು ಹೇಳುತ್ತಾರೆ. ಫೈಬರ್ ಅಂಶವು ಶರೀರದ ಪಾಚನ ಕ್ರಿಯೆಯನ್ನು ಸರಾಗಗೊಳಿಸುವ ಮೂಲಕ ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ. 


ಫೈಬರ್ ಸಿಗಲು ಏನೆಲ್ಲ ಸೇವಿಸಬಹುದು?
* ದ್ವಿದಳ ಧಾನ್ಯಗಳು, ಉದಾಹರಣೆಗೆ ಸ್ಪ್ಲಿಟ್ ಬಟಾಣಿ, ಮಸೂರ, ಕಪ್ಪು ಬೀನ್ಸ್, ಲಿಮಾ ಬೀನ್ಸ್ ಮತ್ತು ಬೇಯಿಸಿದ ಬೀನ್ಸ್


* ಬಾರ್ಲಿ, ಓಟ್ಮೀಲ್ ಮತ್ತು ಕಂದು ಅಕ್ಕಿಯಂತಹ ಧಾನ್ಯಗಳು


* ಹಸಿರು ಬಟಾಣಿ, ಕೋಸುಗಡ್ಡೆ ಮತ್ತು ಬ್ರಸೆಲ್ಸ್ ಮೊಗ್ಗುಗಳಂತಹ ತರಕಾರಿಗಳು


* ರಾಸ್ ಬೆರಿಗಳು, ಪೇರಳೆ, ಸೇಬುಗಳು ಮತ್ತು ಬಾಳೆಹಣ್ಣುಗಳಂತಹ ಹಣ್ಣುಗಳು


ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ


ಹಾಗೇ ನೋಡಿದರೆ ನೈಸರ್ಗಿಕವಾಗಿ ಕೆಲವು ಕ್ರಮಗಳನ್ನು ನಾವು ಮೊದಲೇ ರೂಢಿಸಿಕೊಂಡಲ್ಲಿ ಮೂಲವ್ಯಾಧಿ ಖಂಡಿತ ನಮ್ಮ ಬಳಿ ಸುಳಿಯದು. ಇದರಲ್ಲಿ ಮತ್ತೊಂದು ಅತ್ಯಂತ ಉತ್ತಮ ಹಾಗೂ ಪರಿಣಾಮಕಾರಿ ಮತ್ತು ಅತ್ಯಂತ ಮಿತವ್ಯಯದ ಉಪಾಯವೆಂದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು. ದೇಹಕ್ಕೆ ಸಮರ್ಪಕವಾದ ನೀರು ಸಿಕ್ಕಲ್ಲಿ ಇದರಿಂದಲೂ ಮಲಬದ್ಧತೆ ಉಂಟಾಗುವುದಿಲ್ಲ, ಬದಲಾಗಿ ಪಚನ ಕ್ರಿಯೆ ಸರಾಗವಾಗಿ ನಡೆಯುತ್ತದೆ. ತಜ್ಞ ವೈದ್ಯರು ಹೇಳುವಂತೆ ದಿನಕ್ಕೆ ಕನಿಷ್ಠ ಆರರಿಂದ ಎಂಟು ಗ್ಲಾಸ್ ಗಳಷ್ಟು ನೀರು ಸೇವಿಸುವುದರಿಂದ ನಮ್ಮ ಚಯಾಪಚಯ ಕ್ರಿಯೆ ಸುಲಲಿತವಾಗಿ ನಡೆದು ಯಾವುದೇ ರೀತಿಯಲ್ಲಿ ಮಲಬದ್ಧತೆ ಉಂಟಾಗುವುದಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ನೀರು ಸೇವನೆ ಸಹ ಪೈಲ್ಸ್ ಅನ್ನು ತಡೆಗಟ್ಟಬಹುದಾದ ನೈಸರ್ಗಿಕ ವಿಧಾನವಾಗಿದೆ. 


ಇದನ್ನೂ ಓದಿ: ಚೀಸ್​ ಡಿಪ್ ನ್ಯಾಚೋಸ್​ ಮಸ್ತ್ ಆಗಿ ಸಿಗುವ ಬೆಂಗಳೂರಿನ ಸ್ಥಳಗಳಿವು, ಒಮ್ಮೆ ವಿಸಿಟ್​ ಮಾಡಿ


ದೈಹಿಕ ಚಟುವಟಿಕೆ/ವ್ಯಾಯಾಮ


ದೈಹಿಕ ಚಟುವಟಿಕೆಗಳು ಅಥವಾ ವ್ಯಾಯಾಮ ಪೈಲ್ಸ್ ತಡೆಗಟ್ಟಲು ಪರಿಣಾಮಕಾರಿಯಾಗಿದೆಯಾದರೂ ಎಲ್ಲ ವ್ಯಾಯಾಮಗಳಲ್ಲ ಎಂಬುದು ನೆನಪಿಡಿ. ಸಾಮಾನ್ಯವಾಗಿ ಹೊಟ್ಟೆಯ ಒಳ ಹಾಗೂ ಕೆಳ ಭಾಗಗಳಲ್ಲಿ ಒತ್ತಡ ಉಂಟು ಮಾಡುವ ವ್ಯಾಯಾಮಗಳು ಪೈಲ್ಸ್ ಉಂಟಾಗಲು ಕಾರಣವಾಗುವ ಸಾಧ್ಯತೆಯಿದೆ. ಉದಾಹರಣೆಗೆ ಅತಿಯಾಗಿ ಭಾರ ಎತ್ತುವುದು. ಅಲ್ಲದೆ ಬಹಳಷ್ಟು ಸಮಯ ಕೂರುವುದರಿಂದಲೂ ಹೊಟ್ಟೆಯ ಒಳ ಭಾಗದಲ್ಲಿ ಅಂದರೆ ಗುದದ್ವಾರದ ನಾಳಗಳಲ್ಲಿ ಸಾಕಷ್ಟು ಒತ್ತಡ ಉಂಟು ಮಾಡುತ್ತದೆ. ಹಾಗಾಗಿ ಅಂತಹ ಸಂದರ್ಭಗಳಿಗೆ ಅವಕಾಶ ಕೊಡದೆ ಇರಿ. ಬದಲಾಗಿ, ಈಜು, ಧ್ಯಾನ ಅಥವಾ ವಾಕಿಂಗ್ ನಂತಹ ಲಘು ವ್ಯಾಯಾಮಗಳನ್ನು ಮಾಡಿ ಹಾಗೂ ಯಾವಾಗಲೂ ಉತ್ಸಾಹದಿಂದ ನಿಮ್ಮ ದೇಹ ಇರುವಂತೆ ನೋಡಿಕೊಳ್ಳಿ. ಇದರಿಂದ ಮೂಲವ್ಯಾಧಿ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ನಿಮಗೆ ಈ ಹಿಂದೆ ಮೂಲವ್ಯಾಧಿ ಸಮಸ್ಯೆಯ ಇತಿಹಾಸ ಇದ್ದಲ್ಲಿ ಖಂಡಿತವಾಗಿ ಭಾರ ಹೊರುವಂತಹ ವರ್ಕೌಟ್ ಮಾಡಬೇಡಿ. ಇದು ಮತ್ತೆ ಸಮಸ್ಯೆ ಉಲ್ಬಣವಾಗುವಂತೆ ಮಾಡುತ್ತದೆ.


ವಿರೇಚಕ ಮಾತ್ರೆಗಳು


ನೀವು ಮಲಬದ್ಧತೆಯಿಂದ ಬಳಲುತ್ತಿರುವಾಗ, ಕೆಲವು ಫೈಬರ್ ಪೂರಕಗಳು, ನಿರ್ದಿಷ್ಟವಾಗಿ ಸೈಲಿಯಮ್ ಕ್ಯಾಪ್ಸುಲ್‌ಗಳು, ನೋವಿನ ಮೂಲವ್ಯಾಧಿಗಳನ್ನು ತಡೆಯಲು ನಿಮಗೆ ಹೆಚ್ಚು ನಿಯಮಿತವಾಗಿ ಸಹಾಯ ಮಾಡುವ ದಾಖಲೆಯನ್ನು ಹೊಂದಿವೆ. ಇವು ಮಲವರ್ಧಕ ಮಾತ್ರೆಗಳಾಗಿದ್ದು ನಿಮಗೆ ಪರಿಹಾರ ನೀಡಬಲ್ಲವು. ವೈದ್ಯರು ಹೇಳುವ ಪ್ರಕಾರ, ಸಾಮಾನ್ಯ ಶಾರೀರಿಕ ಚಟುವಟಿಕೆಗಳನ್ನು ಉತ್ತೇಜಿಸುವ ಅಥವಾ ಅನುಕರಿಸುವ ವಿರೇಚಕಗಳಿಗಿಂತ ನಿಮ್ಮ ದೇಹಕ್ಕೆ ಹೊಂದಿಕೊಂಡು ಕೆಲಸ ಮಾಡುವ ಲ್ಯಾಕ್ಸೇಟಿವ್ಸ್ ಅಥವಾ ವಿರೇಚಕ ಮಾತ್ರೆಗಳನ್ನು ಬಳಸುವುದು ಹೆಚ್ಚು ಸೂಕ್ತ. ಕೆಲವು ವಿರೇಚಕಗಳು ಕರುಳಿನ ಸಂಕೋಚನವನ್ನು ಉತ್ತೇಜಿಸುವ ಮೂಲಕ ಇತರೆ ವಸ್ತು ಚಲಿಸುವಂತೆ ಮಾಡುತ್ತವೆ. ಇದು ಮೂಲವ್ಯಾಧಿ ಉಂಟಾಗುವಂತೆ ಒತ್ತಡವನ್ನು ಹೆಚ್ಚಿಸಬಹುದು ಮತ್ತು ರೋಗಲಕ್ಷಣಗಳನ್ನು ಉಂಟುಮಾಡಬಹುದು. 


ಇದನ್ನೂ ಓದಿ: ಜೀವನದಿ ಕಾವೇರಿ ದಡದಲ್ಲಿದೆ ಸುಂದರ ದೇವಾಲಯ, ಮುಡುಕುತೊರೆಯ ಇತಿಹಾಸ ಇದು


ನೈಸರ್ಗಿಕ ಕರೆಗೆ ವಿಳಂಬ ನೀತಿ ಬೇಡ


ನೈಸರ್ಗಿಕ ಕರೆ ಎಂಬುದು ಸಹಜ ಕ್ರಿಯೆಯಾಗಿದ್ದು ಇದರ ಕರೆಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ವಿಳಂಬಿಸುವುದು ಖಂಡಿತ ಸೂಕ್ತವಲ್ಲ ಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಮಲ ವಿಸರ್ಜಿಸ ಬೇಕೆಂದೆನಿಸಿದರೆ ಕಾಯದೇ ಅದನ್ನು ಮೊದಲಿಗೆ ಈಡೇರಿಸಿಕೊಳ್ಳುವುದು ಉತ್ತಮ. ಈ ರೀತಿ ನೈಸರ್ಗಿಕ ಕರೆಗೆ ಓಗೋಟ್ಟರೆ ದೇಹವು ನಮ್ಮನ್ನು ಸಲಹುತ್ತದೆ. ಇಲ್ಲವಾದರೆ ಅನವಶ್ಯಕ ವಿಳಂಬ ನೀತಿಯು ಒತ್ತಡ ಉಂಟಾಗುವಂತೆ ಮಾಡಿ ಆ ಮೂಲಕ ಮೂಲವ್ಯಾಧಿ ಉಂಟಾಗಲು ಕಾರಣವಾಗಬಹುದು. ಹಾಗಾಗಿ ಮಲ ವಿಸರ್ಜಿಸಬೇಕೆಂಬ ಪುಟ್ಟ ಸುಳಿವೂ ಸಹ ಸಿಕ್ಕರೆ ಅದೇ ಸಮಯದಲ್ಲಿ ಅದನ್ನು ಪೂರೈಸಿಕೊಳ್ಳುವುದು ಶರೀರದ ಒಟ್ಟಾರೆ ಆರೋಗ್ಯ ಸ್ಥಿತಿ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.


ಹೆಚ್ಚು ಬಲವಂತ ಬೇಡ


ಒಮ್ಮೊಮ್ಮೆ ಮಲ ವಿಸರ್ಜನೆಯ ಸಂದರ್ಭದಲ್ಲಿ ಜಡತ್ವವಿರುವ ಅವಶೇಷಗಳನ್ನು ಹೊರ ಹಾಕಲು ಬಲವಂತವಾಗಿ ಪ್ರಯತ್ನ ಪಡುತ್ತೇವೆ. ಆ ಸ್ಥಳದಲ್ಲಿ ಹೆಚ್ಚಿನ ಒತ್ತಡ ಹಾಕುವ ಮೂಲಕ ಮಲ ವಿಸರ್ಜಿಸಲು ಪ್ರಯತ್ನಿಸುತ್ತೇವೆ. ಇದು ಖಂಡಿತ ಸಲ್ಲದು ಎಂದು ವೈದ್ಯರ ನುಡಿಯಾಗಿದೆ. ಈ ರೀತಿ ಮಲ ವಿಸರ್ಜಿಸುವಾಗ ಬಲ ಅಥವಾ ಒತ್ತಡ ಹಾಕುತ್ತಿದ್ದರೆ ಗುದನಾಳಗಳಲ್ಲಿ ಅತಿಯಾದ ಒತ್ತಡ ಬೀಳುವ ಮೂಲಕ ಪೈಲ್ಸ್ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅತಿಯಾದ ಭಾರ ಎತ್ತುವಿಕೆಯೂ ಸಹ ಹೊಟ್ಟೆಯ ಒಳಭಾಗದಲ್ಲಿ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ.  

Published by:Sandhya M
First published: