• Home
  • »
  • News
  • »
  • lifestyle
  • »
  • Mental Health: ಸಂಬಂಧದಲ್ಲಿ ಮಾನಸಿಕ ಆರೋಗ್ಯ ಹದಗೆಡದಂತೆ ಮುತುವರ್ಜಿ ವಹಿಸಿ

Mental Health: ಸಂಬಂಧದಲ್ಲಿ ಮಾನಸಿಕ ಆರೋಗ್ಯ ಹದಗೆಡದಂತೆ ಮುತುವರ್ಜಿ ವಹಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಂಬಂಧದಲ್ಲಿ ತಲೆದೋರುವ ಕೆಲವೊಂದು ಸಮಸ್ಯೆಗಳು ಮಾನಸಿಕ ಆರೋಗ್ಯಕ್ಕೂ ಧಕ್ಕೆಯುಂಟು ಮಾಡುತ್ತವೆ ಹಾಗೂ ಆ ಸಂದರ್ಭದಲ್ಲಿ ಮನಸ್ಸು ಪ್ರತಿಯೊಂದನ್ನು ರಾಜಿಮಾಡಿಕೊಳ್ಳುವ ಮನಸ್ಥಿತಿಗೆ ತಲುಪುತ್ತದೆ. ಹಾಗಿದ್ದರೆ ಅದನ್ನು ಪತ್ತೆಹಚ್ಚುವುದು ಮತ್ತು ನಿವಾರಿಸುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಮುಂದೆ ಓದಿ ...
  • Share this:

ಪ್ರತಿಯೊಬ್ಬರ ಜೀವನದಲ್ಲಿ ಸಂಬಂಧಗಳು (relationships) ಎನ್ನುವುದು ಪ್ರಮುಖ ಭಾಗವಾಗಿದೆ. ಉತ್ತಮ ಸಂಬಂಧಗಳು ಮಾನಸಿಕ ಆರೋಗ್ಯಕ್ಕೆ (Mental Health) ಮೂಲಾಧಾರವಾಗಿದೆ. ಮಾನಸಿಕ ಶಾಂತಿಗೆ ಭಂಗವನ್ನುಂಟು ಮಾಡುವ ಕೆಲವೊಂದು ಸಮಸ್ಯೆಗಳು ಸಂಬಂಧದಲ್ಲಿ ತಲೆದೋರಬಹುದು ಅವುಗಳನ್ನು ನಿವಾರಿಸುವುದು ಮುಖ್ಯವಾಗಿದೆ. ಮಾನಸಿಕ ಆರೋಗ್ಯ ಹದಗೆಡದಂತೆ ಮುಖ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಸಂಬಂಧದಲ್ಲಿ ರಾಜಿಮಾಡಿಕೊಳ್ಳುವುದು ಸಾಮಾನ್ಯವಾಗಿದ್ದರೂ ಮಾನಸಿಕ ಶಾಂತಿಯನ್ನು ರಾಜಿಮಾಡಿಕೊಳ್ಳುವುದು ಎಂದರೆ ಮಾನಸಿಕ ಶಾಂತಿಯನ್ನು ಹಾಳುಗೆಡವುದಕ್ಕೆ ಸಮನಾಗಿದೆ ಎಂಬುದು ಮಾನಸಿಕ ತಜ್ಞರ ಅಭಿಪ್ರಾಯವಾಗಿದೆ. ಸಂಬಂಧದಲ್ಲಿ ತಲೆದೋರುವ ಕೆಲವೊಂದು ಸಮಸ್ಯೆಗಳು (Problems) ಮಾನಸಿಕ ಆರೋಗ್ಯಕ್ಕೂ ಧಕ್ಕೆಯುಂಟು ಮಾಡುತ್ತವೆ ಹಾಗೂ ಆ ಸಂದರ್ಭದಲ್ಲಿ ಮನಸ್ಸು (Mind) ಪ್ರತಿಯೊಂದನ್ನು ರಾಜಿಮಾಡಿಕೊಳ್ಳುವ ಮನಸ್ಥಿತಿಗೆ ತಲುಪುತ್ತದೆ. ಹಾಗಿದ್ದರೆ ಅದನ್ನು ಪತ್ತೆಹಚ್ಚುವುದು ಮತ್ತು ನಿವಾರಿಸುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ


ಸಂಗಾತಿಯೊಂದಿಕೆ ಮಾತುಕತೆ ನಡೆಸಲು ಸಾಧ್ಯವಾಗದೇ ಇರುವುದು
ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳು ಮತ್ತು ಅನುಭವಗಳನ್ನು ಸಂವಹನ ಮಾಡಲು ಸಾಧ್ಯವಾಗುವುದು ಬಹಳ ಮುಖ್ಯ, ಸಂಗಾತಿಯೊಂದಿಗೆ ಮಾತನಾಡಲು ತೊಂದರೆ ಸಮಸ್ಯೆ ಇದೆ ಎಂದಾದಲ್ಲಿ ಅದು ಮಾನಸಿಕ ಶಾಂತಿಗೆ ಭಂಗವನ್ನುಂಟು ಮಾಡಬಹುದು.


ಬಹಿರಂಗವಾಗಿ ಮಾತುಕತೆ ಮಾಡಲು ಸಾಧ್ಯವಾಗದಿರುವುದು, ಅಪಹಾಸ್ಯಕ್ಕೊಳಗಾಗಿರುವೆ ಎಂಬ ಭಾವನೆ ಹಾಗೂ ಸಂಭಾಷಣೆಯ ಮುಕ್ತಾಯದಲ್ಲಿ ಸಾಮರಸ್ಯ ಇಲ್ಲದಿರುವುದು, ಸಂಬಂಧದಲ್ಲಿ ಅಪಸ್ವರವನ್ನೇರ್ಪಡಿಸುವ ಚಿಹ್ನೆಗಳು, ಇವು ಕೆಲವು ಮಾನಸಿಕತೆಗಳು ಎಂಬುದು ಮಾನಸಿಕ ತಜ್ಞರ ಅಭಿಪ್ರಾಯವಾಗಿದೆ.


ಇದನ್ನೂ ಓದಿ:  Weight Loss Tips: ನಂಬಿದ್ರೆ ನಂಬಿ ಈ ರುಚಿಕರ ಆಹಾರಗಳು ನಿಮ್ಮ ತೂಕ ಕಡಿಮೆ ಮಾಡುತ್ತೆ


ಈ ಸಮಯದಲ್ಲಿ ಮಾನಸಿಕ ಆರೋಗ್ಯ ಹದಗೆಡುತ್ತದೆ ಮತ್ತು ಇದರಿಂದ ನಿಮ್ಮ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ.


ಸಂಗಾತಿಯೊಂದಿಗೆ ಕೆಟ್ಟ ಮನಸ್ಥಿತಿಯಲ್ಲಿರುವುದು
ಸಂಗಾತಿಯೊಂದಿಗೆ ಇರುವಾಗ ಅಥವಾ ಅವರೊಂದಿಗೆ ಸಂಭಾಷಣೆ ನಡೆಸುವಾಗ ಮನಸ್ಥಿತಿಯ ಮೇಲೆ ಸಂಭಾಷಣೆಯ ಅಂಶಗಳು ಪ್ರಭಾವ ಬೀರುತ್ತವೆ ಎಂಬುದನ್ನು ಪ್ರತಿಯೊಬ್ಬ ಸಂಗಾತಿಗಳೂ ಅರ್ಥಮಾಡಿಕೊಳ್ಳಬೇಕು.


ಕಡಿಮೆ, ದುಃಖ, ಕೋಪ ಅಥವಾ ದ್ವೇಷದ ಭಾವನೆಯು ನಿಮ್ಮ ಸಂಗಾತಿಯೊಂದಿಗಿನ ಸಂಭಾಷಣೆಯ ನಂತರ ಮಾನಸಿಕ ಆರೋಗ್ಯದೊಂದಿಗೆ ರಾಜಿಯಾಗುವುದರ ಒಂದು ನಿರ್ದಿಷ್ಟ ಸಂಕೇತವಾಗಿದೆ.


ನಿಮ್ಮ ಅಗತ್ಯಗಳಿಗೆ ಗಮನ ನೀಡದೇ ಇರುವುದು
ನಿದ್ರೆ ಕಳೆದುಕೊಳ್ಳುವುದು, ಸರಿಯಾಗಿ ಆಹಾರ ಸೇವಿಸದೇ ಇರುವುದು ಮಾನಸಿಕ ನೆಮ್ಮದಿಗೆ ಭಂಗ ತರುವ ಅಂಶವಾಗಿದೆ. ಉದ್ವಿಗ್ನತೆ, ಆತಂಕ ಅಥವಾ ಖಿನ್ನತೆಯು ನಿಮ್ಮನ್ನು ನಿಮ್ಮ ದೈನಂದಿನ ಮೂಲಭೂತ ಅಗತ್ಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇರಿಸಿದ್ದಲ್ಲಿ, ನಿಮ್ಮ ಸಂಬಂಧವನ್ನು ಪುನಃ ಪರಿಶೀಲನೆ ಮಾಡುವ ಸಮಯ ಇದಾಗಿದೆ.


ಇವುಗಳ ಪರಿಹಾರ ಹೇಗೆ?


  • ಆದಷ್ಟು ನಿಮ್ಮ ಸಂಗಾತಿಯೊಂದಿಗೆ ಶಾಂತವಾಗಿ ಚರ್ಚೆಗಳನ್ನು ನಡೆಸಿ. ಆರೋಗ್ಯಕರ ಚರ್ಚೆಯೇ ಇಲ್ಲಿ ಪ್ರಧಾನವಾಗಿರಲಿ.

  • ಸಮಸ್ಯೆಗಳು ದೊಡ್ಡದಾಗಿದ್ದರೆ ಮುಖ್ಯ ಅಂಶಗಳಿಗೆ ಮಾತ್ರವೇ ಗಮನ ನೀಡಿ. ಸಂಬಂಧಕ್ಕೆ ಮಾರಕವಾಗಿರುವ ಚರ್ಚೆಗಳನ್ನು ನಡೆಸದಿರಿ

  • ಸಂಭಾಷಣೆಯಲ್ಲಿ ಮುಖ್ಯವಾಗಿ ಇರಬೇಕಾಗಿರುವುದು ಆಲಿಸುವುದಾಗಿದೆ. ಆದಷ್ಟು ಮತ್ತೊಬ್ಬರು ಹೇಳುವುದನ್ನು ಶಾಂತವಾಗಿ ಆಲಿಸಿ.

  • ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ತಿರಸ್ಕರಿಸದಿರಿ. ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಮಾತುಕತೆ ಆಧಾರವಾಗಿದೆ ಎಂಬುದು ಮಾನಸಿಕ ತಜ್ಞರ ಅಭಿಪ್ರಾಯವಾಗಿದೆ.


ಇದನ್ನೂ ಓದಿ:  Children Care: ನಿಮ್ಮ ಮಕ್ಕಳು ಹೆಚ್ಚಾಗಿ ವಿಡಿಯೋ ಗೇಮ್‌ ಆಡ್ತಾರಾ? ಯಾವೆಲ್ಲಾ ಸಮಸ್ಯೆಗೆ ತುತ್ತಾಗ್ತಾರೆ?

  • ಪ್ರತಿಯೊಬ್ಬರ ಭಾವನೆಗಳಿಗೂ ಗೌರವ ನೀಡುವುದು ಸಂಗಾತಿಗಳ ನಡುವಿನ ಮನಸ್ತಾಪವನ್ನು ಕಡಿಮೆಗೊಳಿಸುತ್ತದೆ

  • ಪರಸ್ಪರರನ್ನು ದೂಷಿಸುವುದನ್ನು ನಿಲ್ಲಿಸಿ ಹಾಗೂ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಕುರಿತು ಯೋಚಿಸಿ.

  • ಒಂದೇ ಪರಿಸ್ಥಿತಿಯನ್ನು ಇಬ್ಬರೂ ಪ್ರತ್ಯೇಕವಾಗಿ ನಿಭಾಯಿಸುತ್ತಾರೆ ಎಂಬ ಅಂಶವನ್ನು ಮನಗಾಣಿ. ಏಕೆಂದರೆ ಪರಿಸ್ಥಿತಿಯನ್ನು ನಿಭಾಯಿಸುವುದು ಸಮಾನವಾಗಿರುವುದಿಲ್ಲ ಎಂಬುದು ಇಲ್ಲಿ ಮುಖ್ಯವಾದ ವಿಷಯವಾಗಿದೆ.

  • ಯಾವುದೇ ಚರ್ಚೆಯು ಆರೋಗ್ಯಕರವಾಗಿಲ್ಲ ಹಾಗೂ ರಾಜಿ ಸಂಧಾನಕ್ಕೆ ಪೂರಕವಾಗಿಲ್ಲ ಎಂದನ್ನಿಸಿದಲ್ಲಿ ಇತರರ ಸಹಾಯವನ್ನು ಪಡೆದುಕೊಳ್ಳಿ. ಸಮಸ್ಯೆಯನ್ನು ಸರಿಪಡಿಸಲು ಪರಿಣಿತರ ಹಿರಿಯರ ಸಹಾಯವನ್ನು ಪಡೆದುಕೊಳ್ಳಿ.

Published by:Ashwini Prabhu
First published: