ಭಾರತವು ವಿಶ್ವದ ಡಯಾಬಿಟಿಕ್ ರಾಜಧಾನಿಯಾಗಿ ಹೊರಹೊಮ್ಮಲು ಸಿದ್ಧವಾಗಿದೆ. 2021ರ ವಯಸ್ಕ ಜನಸಂಖ್ಯೆಯಲ್ಲಿ ಅಂದಾಜು 74 ಮಿಲಿಯನ್ ಡಯಾಬಿಟೀಸ್ ಪ್ರಕರಣಗಳು ಇವೆ ಮತ್ತು ಈ ಸಂಖ್ಯೆಯು 2030ರಲ್ಲಿ 93 ಮಿಲಿಯನ್ಗೆ ಹಾಗೂ 2045ರಲ್ಲಿ 124 ಮಿಲಿಯನ್ಗೆ ತಲುಪಲಿದೆ ಎಂದು ದಿ ಇಂಟರ್ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್ನ ತಜ್ಞರು (The International Diabetes Federation) ಅಂದಾಜಿಸಿದ್ದಾರೆ.
ಡಯಾಬಿಟೀಸ್ ಕೇವಲ ಆಯಾಸ ಮತ್ತು ಸಿಡುಕುತನವನ್ನುಂಟು ಮಾಡುವುದಿಲ್ಲ. ಅದು ನಿಮ್ಮ ಶರೀರಕ್ಕೆ ನಿಜವಾದ ಹಾನಿ ಉಂಟು ಮಾಡಬಹುದು. ಡಯಾಬಿಟೀಸ್, ಅಧಿಕ ರಕ್ತದೊತ್ತಡ ಅಥವಾ ಇವೆರಡರ ಸಂಯೋಜನೆಯು, ಜಾಗತಿಕವಾಗಿ 80% ಜನರಿಗೆ ಕೊನೆಯ ಹಂತದ ಮೂತ್ರಪಿಂಡದ ರೋಗವನ್ನುಂಟು ಮಾಡುತ್ತದೆ2. ಡಯಾಬಿಟೀಸ್ ಮತ್ತು ಧೀರ್ಘಕಾಲದ ಮೂತ್ರಪಿಂಡದ ರೋಗಗಳು, ಹೃದಯರಕ್ತನಾಳದ ರೋಗಗಳೊಂದಿಗೆ ಡಯಾಬಿಟೀಸ್ನೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಡಯಾಬಿಟೀಸ್ ಇರುವ ಜನರ ರೋಗಕ್ಕೆ ಪ್ರಮುಖ ಮೂಲ ಕಾರಣಗಳಾದ ಡಯಾಬಿಟಿಕ್ ಪಾದ ಮತ್ತು ಕೆಳಭಾಗದ ಅಂಗಗಳ ತೊಡಕುಗಳು, ಜಾಗತಿಕವಾಗಿ 40 ರಿಂದ 60 ಮಿಲಿಯನ್ ಜನರ ಮೇಲೆ ಪರಿಣಾಮವನ್ನುಂಟು ಮಾಡಿವೆ2. ದೀರ್ಘಕಾಲದ ಅಲ್ಸರ್ ಮತ್ತು ಅಂಗವೈಫಲ್ಯಗಳಿಂದಾಗಿ ಜೀವನದ ಗುಣಮಟ್ಟ ಗಮನಾರ್ಹವಾಗಿ ಕುಸಿಯುತ್ತದೆ ಮತ್ತು ಶೀಘ್ರ ಸಾವು ಸಂಭವಿಸುವ ಅಪಾಯವನ್ನು ಹೆಚ್ಚಿಸುತ್ತದೆ2.
ಎಲ್ಲರಿಗೂ ತಿಳಿದಿರುವ ಡಯಾಬಿಟೀಸ್ನಿಂದ ಆಗುವ ಮತ್ತೊಂದು ತೊಡಕು ಏನೆಂದರೆ, ಡಯಾಬಿಟಿಕ್ ರೆಟಿನೋಪಥಿ- ಡಯಾಬಿಟೀಸ್ ಇರುವ ಜನರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವಂತಹ ಕಣ್ಣಿನ ತೊಂದರೆ ಎಂದರೆ ದೃಷ್ಟಿಮಾಂದ್ಯತೆ. 1980 ಮತ್ತು 2008ರ ಅವಧಿಯಲ್ಲಿ ಜಗತ್ತಿನಾದ್ಯಂತ ನಡೆಸಿದ 35 ಅಧ್ಯಯನಗಳ ವಿಶ್ಲೇಷಣೆಗಳನ್ನು ಆಧರಿಸಿ, ರೆಟಿನಾ ಚಿತ್ರಗಳನ್ನು ಉಪಯೋಗಿಸಿ ಡಯಾಬಿಟೀಸ್ ಇರುವ ಜನರಲ್ಲಿ, ಯಾವುದೇ ಡಯಾಬಿಟಿಕ್ ರೆಟಿನೋಪಥಿಯ ಹರಡುವಿಕೆಯನ್ನು 35% ಎಂದು ಅಂದಾಜಿಸಲಾಗಿದೆ ಹಾಗೂ ದೃಷ್ಟಿಹಾನಿ ಉಂಟು ಮಾಡುವ ಡಯಾಬಿಟಿಕ್ ರೆಟಿನೋಪಥಿಯು 12%ರಷ್ಟು ಜನರಲ್ಲಿ ಇದೆ ಎಂದು ಅಂದಾಜಿಸಲಾಗಿದೆ2. ಡಯಾಬಿಟೀಸ್ ಬಗೆಗಿನ ಅರಿವಿನ ಕೊರತೆ ಮತ್ತು ರೋಗನಿರ್ಣಯ ಮಾಡದೇ ಇರುವ ಡಯಾಬಿಟೀಸ್ನ ಹೆಚ್ಚು ಅನುಪಾತದಿಂದಾಗಿ, ಭಾರತದಲ್ಲಿ ಈ ಸಮಸ್ಯೆಯು ತುಂಬಾ ಸಂಕೀರ್ಣವಾಗಿದೆ. ಸುಮಾರು 43.9 ಮಿಲಿಯನ್ ಭಾರತೀಯರಿಗೆ ಡಯಾಬಿಟೀಸ್ ಇದ್ದು, ಅವರಿಗೆ ಇದುವರೆಗೂ ರೋಗನಿರ್ಣಯ ಮಾಡಲಾಗಿಲ್ಲ ಎಂದು ಅಂದಾಜಿಸಲಾಗಿದೆ2.
ಹಾಗಿದ್ದರೆ, ಡಯಾಬಿಟಿಕ್ ರೆಟಿನೋಪಥಿಯು ದೃಷ್ಟಿಗೆ ಹೇಗೆ ಹಾನಿಯನ್ನುಂಟು ಮಾಡುತ್ತದೆ? ರಕ್ತದಲ್ಲಿನ ಅಧಿಕ ಗ್ಲುಕೋಸ್ ಮಟ್ಟವನ್ನು ತಪಾಸಣೆ ಮಾಡಿಸದೇ ಇದ್ದರೆ, ಅದು ನಿಮ್ಮ ರೆಟಿನಾದ ಆರೋಗ್ಯವನ್ನು ಕಾಪಾಡುವ ಸಣ್ಣ ರಕ್ತನಾಳಗಳಲ್ಲಿ ಬ್ಲಾಕ್ಗಳನ್ನು ರಚಿಸುತ್ತದೆ. ರೆಟಿನಾವು ನಿಮ್ಮ ಕಣ್ಣಿನ ಹಿಂಭಾಗದಲ್ಲಿರುವ ಪೊರೆಯಾಗಿದ್ದು, ಅದು ಬೆಳಕನ್ನು ಚಿತ್ರಗಳನ್ನಾಗಿ ಸಂಸ್ಕರಿಸುತ್ತದೆ. ರಕ್ತನಾಳಗಳು ಊದಿಕೊಳ್ಳಬಹುದು, ದ್ರವ ಸೋರಿಕೆ ಆಗಬಹುದು ಅಥವಾ ರಕ್ತಸ್ರಾವ ಆಗಬಹುದು, ಇವೆಲ್ಲವೂ ದೃಷ್ಟಿ ಬದಲಾವಣೆಗಳಿಗೆ ಅಥವಾ ಕರುಡುತನಕ್ಕೆ ಕಾರಣವಾಗಬಹುದು. ಈ ಸ್ಥಿತಿಯು ಹೆಚ್ಚಾಗಿ ಎರಡೂ ಕಣ್ಣುಗಳಿಗೆ ಬಾಧಿಸುತ್ತದೆ. ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ, ಡಯಾಬಿಟಿಕ್ ರೆಟಿನೋಪಥಿಯು ನಿಮ್ಮ ರೆಟಿನಾಗೆ ಗಾಯಗೊಳಿಸಬಹುದು ಮತ್ತು ಹಾನಿ ಉಂಟು ಮಾಡಬಹುದು ಮತ್ತು ಕುರುಡುತನಕ್ಕೆ ಕಾರಣವಾಗಬಹುದು4.
ಡಯಾಬಿಟಿಕ್ ರೆಟಿನೋಪಥಿಯು ಎಲ್ಲಾ ಪ್ರಕಾರದ ಡಯಾಬಿಟಿಕ್ ರೋಗಿಗಳನ್ನು ಬಾಧಿಸುತ್ತದೆ – ಅದು ಟೈಪ್ I, ಟೈಪ್ II ಅಥವಾ ಗರ್ಭಾವಸ್ಥೆಯ ಡಯಾಬಿಟೀಸ್ ಆಗಿರಬಹುದು. ಟೈಪ್ II ಡಯಾಬಿಟೀಸ್ ರೋಗಿಗಳಲ್ಲಿ ಬಹುತೇಕ ಮೂರನೇ ಎರಡರಷ್ಟು ರೋಗಿಗಳಲ್ಲಿ ಮತ್ತು ಟೈಪ್ I ಡಯಾಬಿಟೀಸ್ ಇರುವ ಬಹುತೇಕ ಎಲ್ಲಾ ರೋಗಿಗಳಲ್ಲಿ ಕಾಲಕ್ರಮೇಣ ಡಯಾಬಿಟಿಕ್ ರೆಟಿನೋಪಥಿ ವೃದ್ಧಿಸುತ್ತದೆ ಎಂದು ನಿರೀಕ್ಷಿಸಲಾಗಿದೆ3.
ಪರಿಸ್ಥಿತಿಯು ವಿಕೋಪಕ್ಕೆ ಹೋಗುವವರೆಗೂ ನಿಮ್ಮಲ್ಲಿ ಡಯಾಬಿಟಿಕ್ ರೆಟಿನೋಪಥಿಯ ಯಾವುದೇ ಲಕ್ಷಣಗಳು ಇಲ್ಲದೇ ಇರಬಹುದು. ಹಾಗಾಗಿಯೇ ನಿಯಮಿತ ತಪಾಸಣೆ ಅಗತ್ಯ – ಇದೊಂದು ಸ್ಥಿತಿಯಾಗಿದ್ದು, ಅದನ್ನು ತಡೆಯಬಹುದು, ಆದರೆ ನಿರ್ಮೂಲನೆಗೊಳಿಸಲು ಆಗದು. ಮಸುಕಾದ ದೃಷ್ಟಿ, ಬಣ್ಣಗಳನ್ನು ನೋಡುವಲ್ಲಿನ ಅಸಮರ್ಥತೆ, ನಿಮ್ಮ ದೃಷ್ಟಿಯಲ್ಲಿನ ರಂಧ್ರಗಳು, ಫ್ಲೋಟರ್ಗಳು ಅಥವಾ ಕಪ್ಪು ಸ್ಪಾಟ್ಗಳು ಇವು ಡಯಾಬಿಟಿಕ್ ರೆಟಿನೋಪಥಿಯ ಲಕ್ಷಣಗಳಾಗಿವೆ. ಶೀಘ್ರವಾಗಿ ಕಂಡುಬರುವ ಲಕ್ಷಣವೆಂದರೆ ಓದುವಾಗ ಅಥವಾ ಚಾಲನೆ ಮಾಡುವಾಗ ಆಗುವ ತೊಂದರೆ4. ಹಾಗಾಗಿ ಒಂದು ವೇಳೆ ನೀವು ಇದನ್ನು ಗಮನಿಸಿದ್ದರೆ, ಮತ್ತು ನಿಮ್ಮ ರಕ್ತ ಪರೀಕ್ಷೆ ವರದಿಗಳು ನಿಮ್ಮನ್ನು ಡಯಾಬಿಟಿಕ್ ಅಥವಾ ಪ್ರಿ-ಡಯಾಬಿಟಿಕ್ ಶ್ರೇಣಿಯಲ್ಲಿ ಇಟ್ಟಿದ್ದರೆ, ಇದು ಪರೀಕ್ಷೆ ಮಾಡಿಸಿಕೊಳ್ಳಲು ಸರಿಯಾದ ಸಮಯ.
ಡಯಾಬಿಟಿಕ್ ರೆಟಿನೋಪಥಿಯ ಪರೀಕ್ಷೆಯ ಪ್ರಾಮುಖ್ಯತೆಯನ್ನು ಅರಿತುಕೊಂಡು, Novartis ಸಹಯೋಗದೊಂದಿಗೆ Network 18, 'Netra Suraksha' - India Against Diabetes ಉಪಕ್ರಮಪ್ರಾರಂಭಿಸಿದೆ. ಈ ಉಪಕ್ರಮವು ಡಯಾಬಿಟೀಸ್ ಮತ್ತು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಾದ ಡಯಾಬಿಟಿಕ್ ರೆಟಿನೋಪಥಿಯಂತಹ ದೃಷ್ಟಿಯ ನಿಶ್ಯಬ್ದ ಕಳ್ಳನ ಕುರಿತು ಅರಿವು ಉಂಟು ಮಾಡುವ ಧ್ಯೇಯವನ್ನು ಹೊಂದಿದೆ.ಇದನ್ನು ಭಾರತೀಯ ವೈದ್ಯಕೀಯ ಸಮುದಾಯ, ಥಿಂಕ್ ಟ್ಯಾಂಕ್ಸ್ ಮತ್ತು ನೀತಿ ನಿರೂಪಕರ ಸಹಕಾರದೊಂದಿಗೆ ಮಾಡುವ ಗುರಿ ಹೊಂದಿದೆ. ದುಂಡುಮೇಜಿನ ಚರ್ಚೆಗಳು ಮತ್ತು ನಿಯಮಿತ ಜಾಗೃತಿ ಶಿಬಿರಗಳಷ್ಟೇ ಅಲ್ಲದೆ, ಈ ಉಪಕ್ರಮವು Diabetic Retinopathy ಸ್ವಯಂತಪಾಸಣೆ ಅನ್ನು ಸಹ ರಚಿಸಿದೆ ಹಾಗೂ ಇದು ಹಲವಾರು ಲೇಖನಗಳು ಮತ್ತು ವೀಡಿಯೊಗಳನ್ನು ಪ್ರಕಟಿಸಿದ್ದು, ಅವು ಡಯಾಬಿಟೀಸ್ ಇರುವವರು (ಹಾಗೂ ಪ್ರಿ-ಡಯಾಬಿಟಿಕ್ ಇರುವವರು) ತಮ್ಮ ಒಟ್ಟಾರೆ ಆರೋಗ್ಯವನ್ನು ಹಾಗೂ ನಿರ್ದಿಷ್ಟವಾಗಿ ಅವರ ಕಣ್ಣುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ.
ನಿಮ್ಮ ಜವಾಬ್ದಾರಿ ನಿರ್ವಹಿಸಿ: ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ಇಂದೇ ಡಯಾಬಿಟಿಕ್ ರೆಟಿನೋಪಥಿ ಪರೀಕ್ಷೆ ಮಾಡಿಸಿಕೊಳ್ಳಿ. Diabetic Retinopathy ಸ್ವಯಂತಪಾಸಣೆಯೊಂದಿಗೆ ಪ್ರಾರಂಭಿಸಿ, ಹಾಗೂ ನೀವು ಅದನ್ನು ಮಾಡಿಕೊಳ್ಳುವಾಗ ನಿಮ್ಮ ರಕ್ತದ ಗ್ಲುಕೋಸ್ ಮಟ್ಟ ಹಾಗೂ ರಕ್ತದೊತ್ತಡ ಪರೀಕ್ಷಿಸಲು ಸಹ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ. ಒಂದು ವೇಳೆ ನಿಮ್ಮ ರಕ್ತದ ಗ್ಲುಕೋಸ್ ಹಾಗೂ ರಕ್ತದೊತ್ತಡ ಪರೀಕ್ಷೆಗಳು ಸ್ಪಷ್ಟವಾಗಿದ್ದರೂ, ಸಂಪೂರ್ಣ ಕಣ್ಣಿನ ಪರೀಕ್ಷೆಗಾಗಿ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಒಬ್ಬ ನೇತ್ರ ವೈದ್ಯರನ್ನು ಸಂಪರ್ಕಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಡಯಾಬಿಟಿಕ್ ರೆಟಿನೋಪಥಿಯ ಬೆಳವಣಿಗೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವಲ್ಲಿನ ಮೊದಲ ಹೆಜ್ಜೆ ಎಂದರೆ ಯಾತನೆ, ನೋವುರಹಿತವಾದ ಪರೀಕ್ಷೆ ಮಾಡಿಸಿಕೊಳ್ಳುವುದು. ನಿಮ್ಮ ಕಣ್ಣುಗಳ ರಕ್ತನಾಳಗಳಲ್ಲಿ ಏನಾದರೂ ಬದಲಾವಣೆಗಳು ಆಗಿವೆಯೇ ಎಂಬುದಕ್ಕೆ ಅಥವಾ ಯಾವುದಾದರೂ ಹೊಸ ರಕ್ತನಾಳಗಳು ಬೆಳೆದಿವೆಯೇ ಎಂದು ನೋಡಲು ನಿಮ್ಮ ವೈದ್ಯರು ನಿಮ್ಮ ಕಣ್ಣುಗುಡ್ಡೆಯನ್ನು ವಿಸ್ತರಿಸಿ ನೋಡುತ್ತಾರೆ. ನಿಮ್ಮ ಅಕ್ಷಿಪಟ (ರೆಟಿನಾ) ಊದಿಕೊಂಡಿದೆಯೇ ಅಥವಾ ಬೇರ್ಪಟ್ಟಿದೆಯೇ ಎಂಬುದನ್ನು ಅವರು ಪರಿಶೀಲಿಸುತ್ತಾರೆ. ಇದೆಲ್ಲವೂ ಒಂದು ಗಂಟೆಗೂ ಕಡಿಮೆ ಅವಧಿಯನ್ನು ತೆಗೆದುಕೊಳ್ಳುತ್ತದೆ.
ಒಂದು ವೇಳೆ ನೀವು ಡಯಾಬಿಟಿಕ್ ರೆಟಿನೋಪಥಿಗೆ ರೋಗನಿರ್ಣಯವನ್ನು ಸ್ವೀಕರಿಸಿದರೂ ಸಹ, ಗಾಬರಿಯಾಗುವ ಅಗತ್ಯವಿಲ್ಲ. ಡಯಾಬಿಟಿಕ್ ರೆಟಿನೋಪಥಿ ಎಂಬುದು ಒಂದು ನಿರ್ವಹಿಸಬಹುದಾದ ಸ್ಥಿತಿಯಾಗಿದೆ ಹಾಗೂ ಅದನ್ನು ಮೊದಲೇ ಕಂಡುಹಿಡಿದರೆ, ಇನ್ನಷ್ಟು ಬೆಳವಣಿಗೆಯಾಗದಂತೆ ಅದನ್ನು ತಡೆಯಲು ನೀವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು. ವಾಸ್ತವವಾಗಿ, ಟೈಪ್ II ಡಯಾಬಿಟೀಸ್ ಅನ್ನು, ನಿರ್ದಿಷ್ಟವಾಗಿ ಆರಂಭಿಕ ಹಂತಗಳಲ್ಲಿ ಗುಣಪಡಿಸಬಹುದಾದ ರೋಗ ಎಂದು ಈಗ ಪರಿಗಣಿಸಲಾಗಿದೆ5. ಪ್ರಾರಂಭದಲ್ಲೇ ಅದನ್ನು ಪತ್ತೆಹಚ್ಚುವ ಮೂಲಕ, ಅದನ್ನು ಸೋಲಿಸಲು ನೀವು ಪಣತೊಡಿ!
ಜೀವನಶೈಲಿಗಳು ಮತ್ತು ಆಹಾರದಲ್ಲಿನ ಬದಲಾವಣೆಗಳಿಂದಾಗಿ, ಡಯಾಬಿಟಿಕ್ ರೆಟಿನೋಪಥಿಯು ಭಾರತದಲ್ಲಿನ ಕಣ್ಣಿನ ಆರೋಗ್ಯಕ್ಕೆ ಒಂದು ಹೆಚ್ಚುತ್ತಿರುವ ಗಂಭೀರ ಅಪಾಯದ ಅಂಶವಾಗಿದೆ. Netra Suraksha ಉಪಕ್ರಮ ಕುರಿತು ಇನ್ನಷ್ಟು ಅಪ್ಡೇಟ್ಗಳಿಗಾಗಿ News18.com ಅನ್ನು ಅನುಸರಿಸಿ ಮತ್ತು ಡಯಾಬಿಟೀಸ್ ಮತ್ತು ಡಯಾಬಿಟಿಕ್ ರೆಟಿನೋಪಥಿಯಿಂದ ನಿಮ್ಮ ಪ್ರೀತಿಪಾತ್ರರನ್ನು ಉಳಿಸಲು ಈ ಹೋರಾಟದಲ್ಲಿ ಸೇರಿಕೊಳ್ಳಿ.
IDF Atlas, International Diabetes Federation, 10th edition, 2021
IDF Atlas, International Diabetes Federation, 9th edition, 2019