Child Care: ಮಕ್ಕಳಿಗೆ ಶೀತ, ಜ್ವರ ಬರದಂತೆ ತಡೆಯಲು ಡಾಕ್ಟರ್ ಹೇಳೋ ಈ ಟಿಪ್ಸ್ ಫಾಲೋ ಮಾಡಿ

Monsoon Health Care: ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸ್ವಚ್ಛತೆಯ ಮಹತ್ವವನ್ನು ಅರ್ಥಮಾಡಿಸಲು ಮತ್ತು ಅಭ್ಯಾಸ ರೂಢಿಸಿಕೊಳ್ಳಲು ಸಹಾಯ ಮಾಡಬೇಕು. ಆಹಾರ ಸೇವಿಸುವ ಮೊದಲು ಮತ್ತು ಅವರು ಶಾಲೆಯಲ್ಲಿದ್ದಾಗ ಕೈ ತೊಳೆಯುವ ಮಹತ್ವವನ್ನು ಮಕ್ಕಳಿಗೆ ಕಲಿಸುವುದು ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
“ಅಕ್ಷೀ!!” ಎಂದು ಯಾರಾದರೂ ಸೀನಿದರೆ, ಬಹುತೇಕರು, ಓ, ಇದು ಕೇವಲ ಒಂದು ಶೀತ ಜ್ವರವಷ್ಟೇ (Fever), ಸರಿಹೋಗುತ್ತದೆ ಎಂದು ಯೋಚಿಸುತ್ತಾರೆ. ಆದರೆ, ಇದು ಸಂಪೂರ್ಣ ಸತ್ಯವಾಗಿರಲಾರದು. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ನಾವು ಫ್ಲ್ಯೂ (Flu) ಅನ್ನು ಸಾಮಾನ್ಯ ಶೀತ,ಜ್ವರವೆಂದು ತಪ್ಪಾಗಿ ತಿಳಿಯುತ್ತೇವೆ. ಕೆಲವೊಮ್ಮೆ ಶೀತ (Cold) ಮತ್ತು ಜ್ವರನಲ್ಲಿ ಸಮಾನ ಲಕ್ಷಣಗಳಿರುತ್ತದೆ, ಜ್ವರ ಏಕಾಏಕಿ ಬರಬಹುದು ಮತ್ತು ಹಲವು ಲಕ್ಷಣಗಳನ್ನು ಹೊಂದಿರಬಹುದು. ನಾವು ಮಾಡುವ ಇನ್ನೊಂದು ತಪ್ಪು ಎಂದರೆ, ಎಲ್ಲಾ ಜ್ವರಗಳ ಪ್ರಕರಣಗಳು ಲಘುವಾಗಿರುತ್ತದೆ ಎಂದು ಭಾವಿಸುತ್ತೇವೆ. ವಾಸ್ತವದಲ್ಲಿ, ಶೀತ, ಜ್ವರದ ಸೋಂಕು ಲಘುವಿನಿಂದ ಗಂಭೀರದವರೆಗೆ ಎಲ್ಲಾ ಬಗೆಗಳಲ್ಲಿರುತ್ತದೆ. 5 ವರ್ಷದೊಳಗಿನ ಸಣ್ಣ ಮಕ್ಕಳು ವಿಶೇಷವಾಗಿ 2 ವರ್ಷದೊಳಗಿನ ಮಕ್ಕಳು, ಗಂಭೀರ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಅಲ್ಲದೆ, ತಮ್ಮ ದೇಹದಲ್ಲಿ ಶೀತ ಜ್ವರದ ಸೋಂಕು ಹೊಂದಿದವರು ಅದರ ಲಕ್ಷಣಗಳು ಕಾಣಿಸಿಕೊಳ್ಳುವ ಒಂದು ದಿನ ಮೊದಲೇ ವೈರಸ್‌ ಹರಡುವುದನ್ನು ಪ್ರಾರಂಭಿಸಬಹುದು ಮತ್ತು ಅದು 7 ದಿನಗಳವರೆಗೆ ಮುಂದುವರಿಯಬಹುದು. ಆದ್ದರಿಂದ ‘ಶೀತ ಜ್ವರಕ್ಕೆ ತುತ್ತಾಗುವುದು’ ತುಂಬಾ ಸುಲಭ ಮತ್ತು ಮಕ್ಕಳನ್ನು ಅದರಿಂದ ರಕ್ಷಿಸುವುದು ತುಂಬಾ ಅಗತ್ಯವಾಗಿದೆ. ಈ ಬಗ್ಗೆ ಬೆಂಗಳೂರಿನ  ಮದರ್‌ಹುಡ್‌ ಆಸ್ಪತ್ರೆಯ ಮುಖ್ಯ ಮಕ್ಕಳ ತಜ್ಞರಾದ ಡಾ.ಸುರೇಶ್‌ಗೌಡ ಮಾಹಿತಿ ನೀಡಿದ್ದಾರೆ.

ಈ ಆರೋಗ್ಯ ಸಮಸ್ಯೆಗಳಿಗೆ ಕಾರಣವೇನು? 

ಹಲವು ಪ್ರಕರಣಗಳಲ್ಲಿ ಶೀತ ಜ್ವರಕ್ಕೆ ತುತ್ತಾದ ಮಕ್ಕಳು ಒಂದು ವಾರದಲ್ಲಿ ಗುಣಮುಖರಾಗುತ್ತಾರೆ ಎಂಬುದು ಕೂಡ ಸತ್ಯ. ಆದರೆ, ಕೆಲ ಮಕ್ಕಳು ಶೀತ ಜ್ವರ-ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು, ಅದಕ್ಕೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯ ಬೀಳಬಹುದು. ಉದಾಹರಣೆಗೆ, ಕೆಲ ಮಕ್ಕಳು ತೀವ್ರ ಉಸಿರಾಟದ ತೊಂದರೆ ಅಥವಾ ನ್ಯೂಮೋನಿಯಾದಂತಹ ಸಮಸ್ಯೆಗಳು ಎದುರಿಸಬಹುದು. ಇಂತಹ ಸಂದರ್ಭಗಳಲ್ಲಿ ಶ್ವಾಸಕೋಶಕ್ಕೆ ತೊಂದರೆಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳ ದ್ರವ ಆಹಾರದ ಸೇವನೆ, ಅವರು ಕಳೆದುಕೊಳ್ಳುವ ದ್ರವದ ಪ್ರಮಾಣಕ್ಕಿಂತ ಕಡಿಮೆಯಿರುವುದರಿಂದ ಕೆಲ ಮಕ್ಕಳು ನಿರ್ಜಲೀಕರಣ ಸಮಸ್ಯೆ ಕೂಡ ಎದುರಿಸಬಹುದು. ಈಗಾಗಲೇ ಅಸ್ತಮಾ ಅಥವಾ ಹೃದಯ ಸಂಬಂಧಿ ಕಾಯಿಲೆ ಎದುರಿಸುತ್ತಿರುವವರು ಶೀತ ಜ್ವರದ ಕಾರಣದಿಂದ ಗಂಭೀರ ಸಮಸ್ಯೆಗಳನ್ನು ಎದುರಿಸಬಹುದು.

ಜ್ವರದ ಬಗ್ಗೆ ಜಾಗರೂಕರಾಗಿರಲು ಇನ್ನೊಂದು ಕಾರಣವೆಂದರೆ ಅದು ಒಂದು ಮಗುವಿನಿಂದ ಕುಟುಂಬದ ಉಳಿದವರಿಗೆ ಅಥವಾ ಇತರ ಮಕ್ಕಳಿಗೆ ಸುಲಭವಾಗಿ ಹರಡಬಹುದು. ಜ್ವರ ಹೊಂದಿರುವ ಯಾರಾದರೂ ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡುವಾಗ ಬಾಯಿಯಿಂದ ಗಾಳಿಗೆ ಹೊರಬೀಳುವ ಹನಿಗಳ ಮೂಲಕ ಸೋಂಕು ಹರಡುತ್ತದೆ. ಇವುಗಳು ಇನ್ನೊಬ್ಬರಿಗೆ ಅರಿವಿಲ್ಲದೆಯೇ ಅವರ ಮೂಗು ಅಥವಾ ಬಾಯಿಯ ಮೂಲಕ ದೇಹ ಪ್ರವೇಶಿಸಬಹುದು.

ಈ ವೈರಸ್‌ನಿಂದ ತುಂಬಿದ ಕೆಲವು ಹನಿಗಳು ಸಾಮಾನ್ಯವಾಗಿ ಬಳಕೆಯಲ್ಲಿರುವ ವಸ್ತುಗಳು ಅಥವಾ ಆಟಿಕೆ, ಲೇಖನಿ, ಪುಸ್ತಕಗಳು, ಫೋನ್‌ಗಳು, ಬಾಗಿಲ ಹಿಡಿ, ಹ್ಯಾಂಡಲ್ ಮುಂತಾದವುಗಳ ಮೇಲೆ ಶೇಖರಣೆಯಾಗಬಹುದು. ಇವುಗಳನ್ನು ಮುಟ್ಟಿ ನಂತರ ತಮ್ಮ ಮೂಗು, ಕಣ್ಣು ಅಥವಾ ಬಾಯಿಯನ್ನು ಸ್ಪರ್ಶಿಸುವ ಮಗುವಿಗೂ ಅದರ ಸೋಂಕು ಹರಡಬಹುದು. ಮಕ್ಕಳು ಶಾಲೆಯಲ್ಲಿ ಅಥವಾ ಆಟದ ಮೈದಾನದಲ್ಲಿದ್ದರೆ, ಅವರು ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ, ಅವರು ತಮ್ಮ ಬಾಯಿಗೆ ಸಿಕ್ಕಸಿಕ್ಕ ವಸ್ತುಗಳನ್ನು ಹಾಕುವುದಿಲ್ಲ ಅಥವಾ ಅವರ ಕಣ್ಣುಗಳನ್ನು ಉಜ್ಜುವುದಿಲ್ಲ ಎಂದು ನಿರಂತರವಾಗಿ ಖಚಿತಪಡಿಸಿಕೊಳ್ಳುವುದು ತುಂಬಾ ಕಷ್ಟ!

ಇದನ್ನೂ ಓದಿ: ಕನ್ನಡಿಗರ ಅಭಿಮಾನದ ಅಂಬಾರಿ ಹೊತ್ತ ಯೋಗಿಗೆ ಹುಟ್ಟುಹಬ್ಬದ ಸಂಭ್ರಮ, ಲೂಸ್‌ ಮಾದನ ದುನಿಯಾ ಕಥೆ ಇಲ್ಲಿದೆ

ಆದ್ದರಿಂದ ಈ ಮಳೆಗಾಲದಲ್ಲಿ ನಿಮ್ಮ ಮಕ್ಕಳನ್ನು ಜ್ವರದಿಂದ ರಕ್ಷಿಸುವುದು ಹೇಗೆ?

ನಿಮ್ಮ ಮಗುವನ್ನು ಜ್ವರದಿಂದ ರಕ್ಷಿಸಲು ವಾರ್ಷಿಕ ಜ್ವರ ಲಸಿಕೆ ಉತ್ತಮ ಮಾರ್ಗವಾಗಿದೆ. 6 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಶೀತ ಜ್ವರದ ಲಸಿಕೆ ನೀಡುವುದನ್ನು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (IAP) ಶಿಫಾರಸು ಮಾಡಿದೆ. ಮಗುವಿಗೆ ಮೊದಲ ಬಾರಿಗೆ ಲಸಿಕೆ ನೀಡಿದಾಗ ಎರಡು ಡೋಸ್ಗಳನ್ನು ನೀಡಲಾಗುತ್ತದೆ. ಮತ್ತು ಅದರ ನಂತರ, ವಾರ್ಷಿಕ ಲಸಿಕೆಯ ಒಂದು ಡೋಸ್ ಅನ್ನು ಸೂಚಿಸಲಾಗುತ್ತದೆ. ಲಸಿಕೆಯ ವೇಳಾಪಟ್ಟಿ ಮತ್ತು ಮುಂದಿನ ಡೋಸ್ ಅನ್ನು ಯಾವಾಗ ತೆಗೆದುಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಶಿಶುವೈದ್ಯರು ಸಹಾಯ ಮಾಡುತ್ತಾರೆ.

ಮಳೆಗಾಲದಲ್ಲಿ ಭಾರತದ ಹೆಚ್ಚಿನ ಭಾಗಗಳಲ್ಲಿ ಇನ್ಫ್ಲುಯೆನ್ಸ (ಜ್ವರ) ಪ್ರಕರಣಗಳು ಹೆಚ್ಚಾಗುತ್ತದೆ ಎಂದು ಹೆಚ್ಚಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಮೇ ಇಂದ ಜೂನ್ ವರೆಗೆ ಅಥವಾ ಮಳೆಗಾಲ ಪ್ರಾರಂಭವಾಗುವ ಮೊದಲು ಲಸಿಕೆಯನ್ನು ನೀಡಬೇಕು.
ಜ್ವರದ ಲಸಿಕೆಯನ್ನು 5 ವರ್ಷ ವಯಸ್ಸಿನವರೆಗೆ ಪ್ರತಿ ವರ್ಷ ವಾರ್ಷಿಕ ಡೋಸ್ ಆಗಿ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಕಾರಣವೆಂದರೆ ಇನ್ಫ್ಲುಯೆನ್ಸ ವೈರಸ್ ಆಗಾಗ್ಗೆ ಬದಲಾಗುತ್ತದೆ ಅಥವಾ 'ಮ್ಯೂಟೇಟ್' ಆಗಿರುತ್ತದೆ. ಆದ್ದರಿಂದ ಲಸಿಕೆ ಪರಿಣಾಮಕಾರಿಯಾಗಿರಲು ಅದನ್ನು ಪ್ರತಿ ವರ್ಷ ಬದಲಿಸಬೇಕಾಗುತ್ತದೆ.

ಜೊತೆಗೆ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸ್ವಚ್ಛತೆಯ ಮಹತ್ವವನ್ನು ಅರ್ಥಮಾಡಿಸಲು ಮತ್ತು ಅಭ್ಯಾಸ ರೂಢಿಸಿಕೊಳ್ಳಲು ಸಹಾಯ ಮಾಡಬೇಕು. ಆಹಾರ ಸೇವಿಸುವ ಮೊದಲು ಮತ್ತು ಅವರು ಶಾಲೆಯಲ್ಲಿದ್ದಾಗ ಕೈ ತೊಳೆಯುವ ಮಹತ್ವವನ್ನು ಮಕ್ಕಳಿಗೆ ಕಲಿಸುವುದು ಮುಖ್ಯ.

ಇದನ್ನೂ ಓದಿ: ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ಎಂದ ನಿಖಿತಾಗೆ ಹುಟ್ಟುಹಬ್ಬದ ಸಂಭ್ರಮ, ವಂಶಿ ಬೆಡಗಿ ಮತ್ತೆ ಸಿನಿಮಾ ಮಾಡ್ತಾರಾ?

ಸಾಬೂನು ಮತ್ತು ನೀರಿನಿಂದ ತಮ್ಮ ಕೈಗಳನ್ನು ಹೇಗೆ ಚೆನ್ನಾಗಿ ತೊಳೆಯಬೇಕು ಮತ್ತು ಸೂಕ್ತವಾದ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಹೇಗೆ ಬಳಸುವುದು ಎಂಬುದನ್ನು ಅವರಿಗೆ ತೋರಿಸಿ. ಮಾಡುವುದಕ್ಕಿಂತ ಹೇಳುವುದು ತುಂಬಾ ಸುಲಭ ಎಂಬುದು ನಿಜ. ಅದೂ ಚಿಕ್ಕ ಮಕ್ಕಳ ವಿಷಯದಲ್ಲಿ. ಅದೇನೇ ಇದ್ದರೂ, ಮಕ್ಕಳಲ್ಲೇ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಮೊದಲೇ ಬಿತ್ತುವುದು ಅತಿ ಮುಖ್ಯ.
Published by:Sandhya M
First published: