ದೇಹದ (Body) ಸದೃಢ ಆರೋಗ್ಯಕ್ಕೆ (Health) ಮುಖ್ಯವಾಗಿ ವಿಟಮಿನ್ ಡಿ (Vitamin D) ಬೇಕೇ ಬೇಕು. ದೇಹದಲ್ಲಿ ವಿಟಮಿನ್ ಡಿ ಕೊರತೆ (Deficiency) ಉಂಟಾದರೆ ಅದು ಹಲವು ಆರೋಗ್ಯ ಸಮಸ್ಯೆ (Health Problem) ಉಂಟು ಮಾಡುತ್ತದೆ. ಮುಖ್ಯವಾಗಿ ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಡಿ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಬೆಳಗಿನ ಎಳೆ ಬಿಸಿಲು ದೇಹಕ್ಕೆ ಪಡೆದರೆ ಅದು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲೇ ಏಳಬೇಕು ಎಂದು ಹೇಳಲಾಗುತ್ತದೆ. ಇದು ಹಲವು ಆರೋಗ್ಯ ಸಮಸ್ಯೆ ತೊಡೆದು ಹಾಕಲು ಪ್ರಯೋಜನ ನೀಡುತ್ತದೆ. ಹಾಗಾಗಿಯೇ ಬೆಳಗ್ಗೆ ಬೇಗ ಏಳುವುದು ದೇಹವು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
ವಿಟಮಿನ್ ಡಿ ಕೊರತೆ
ವಿಟಮಿನ್ ಡಿ ಕೊರತೆಯಿಂದ ದೇಹವು ಹಲವು ಆರೋಗ್ಯ ನಷ್ಟ ಅನುಭವಿಸುತ್ತದೆ. ಇದರಲ್ಲಿ ಮೂಳೆಗಳು ದುರ್ಬಲ ಆಗುತ್ತವೆ. ಈ ಪೋಷಕಾಂಶದ ಕೊರತೆಯು ಆಸ್ಟಿಯೊಪೊರೋಸಿಸ್ ಕಾಯಿಲೆ ಉಂಟು ಮಾಡುತ್ತದೆ. ಇದು ಮೂಳೆಗಳ ಒಳಗೆ ದೊಡ್ಡ ರಂಧ್ರಗಳು ರೂಪುಗೊಳ್ಳಲು ಕಾರಣ ಆಗುತ್ತದೆ.
ಹಾಗೂ ಮೂಳೆಗಳು ದುರ್ಬಲವಾಗಲು ಕಾರಣವಾಗುತ್ತದೆ. ವಿಟಮಿನ್ ಡಿ ಕೊರತೆ ಸರಿಪಡಿಸಲು ಸೂರ್ಯನಿಗೆ ಒಡ್ಡಿಕೊಳ್ಳುವುದು ನೈಸರ್ಗಿಕ ಮಾರ್ಗ ಹಾಗೂ ಮುಖ್ಯ ಕ್ರಮವಾಗಿದೆ. ಅದರ ಜೊತೆಗೆ ಕೆಲವು ವಿಟಮಿನ್ ಡಿ ಸಮೃದ್ಧ ಆಹಾರಗಳನ್ನೂ ಸಹ ಸೇವನೆ ಮಾಡಬೇಕಾಗುತ್ತದೆ.
ಸಾಲ್ಮನ್ ಮೀನು, ಮೊಟ್ಟೆಯ ಹಳದಿ ಭಾಗ, ಕಾಡ್ ಲಿವರ್ ಎಣ್ಣೆ, ಬಲವರ್ಧಿತ ಆಹಾರ ಸೇರಿದಂತೆ ಇತ್ಯಾದಿ ಪದಾರ್ಥಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಇದೆ. ಆದರೆ ಈ ಆಹಾರ ಸೇವನೆ ನಂತರವೂ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚು.
ಯಾಕಂದ್ರೆ ಇವುಗಳ ಪೋಷಕಾಂಶವನ್ನು ಹೀರಿಕೊಳ್ಳಲು ದೇಹಕ್ಕೆ ಡೈರಿ ಉತ್ಪನ್ನಗಳ ಸೇವನೆಯ ಅವಶ್ಯಕತೆ ಇದೆ ಅಂತಾರೆ ತಜ್ಞರು. ಹಾಗಾದ್ರೆ ಈ ಬಗ್ಗೆ ಸಂಶೋಧನೆ ಹಾಗೂ ತಜ್ಞರು ಹೇಳಿದ್ದೇನು ಅನ್ನೋದನ್ನ ನೋಡೋಣ.
ವಿಟಮಿನ್ ಡಿ ಆಹಾರದ ಜೊತೆಗೆ ಎಣ್ಣೆಯ ಅಗತ್ಯತೆ ಇದೆ
ವಿಟಮಿನ್ ಡಿ ಕೊಬ್ಬು ಕರಗುವ ವಿಟಮಿನ್ ಆಗಿದೆ. ಅನೇಕ ಸಂಶೋಧನೆಗಳ ಅಧ್ಯಯನ ಮಾಡಿದ ನಂತರ ಕಂಡು ಬಂದಿದ್ದು ಏನಂದ್ರೆ. ಅಂತಹ ಪೋಷಕಾಂಶಗಳು ದೇಹದಲ್ಲಿ ಕರಗಲು ಕೊಬ್ಬು ಅಥವಾ ಎಣ್ಣೆಯ ಅಗತ್ಯವಿದೆ. ಇದು ಹಾಲು ಅಥವಾ ಅದರಿಂದ ತಯಾರಿಸಿದ ಕೆನೆಯಂತಹ ಡೈರಿ ಉತ್ಪನ್ನಗಳಿಂದ ದೇಹಕ್ಕೆ ಸಿಗುತ್ತದೆ.
ಕ್ಯಾಲ್ಸಿಯಂ ಸೇವನೆ ಮಾಡಿ
ಮೂಳೆಗಳು ಕರಗುವುದನ್ನು ತಡೆಯಲು ಕ್ಯಾಲ್ಸಿಯಂ ಸೇವನೆ ತುಂಬಾ ಅತ್ಯಗತ್ಯವಾಗಿದೆ. ಡೈರಿ ಉತ್ಪನ್ನಗಳು ಮತ್ತು ವಿಟಮಿನ್ ಡಿ ಆಹಾರದ ಸಂಯೋಜನೆಯನ್ನು ಅತ್ಯುತ್ತಮ ಎಂದು ಹೇಳಿವೆ. ಯಾಕಂದ್ರೆ ಹಾಲು ಕ್ಯಾಲ್ಸಿಯಂ ಅನ್ನು ಸಹ ಒದಗಿಸಲು ಸಹಕಾರಿ. ವಿಟಮಿನ್ ಡಿ ಇದ್ದಾಗ ದೇಹವು ಕ್ಯಾಲ್ಸಿಯಂ ಅನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.
ಮೂಳೆಗಳು ವೀಕ್ ಆಗದಂತೆ ತಡೆಯುವುದು ಹೇಗೆ?
ಮೂಳೆಗಳ ಆರೋಗ್ಯ ಕಾಪಾಡಲು ಮತ್ತು ಮೂಳೆಗಳನ್ನು ಬಲವಾಗಿಡಲು ದಿನಕ್ಕೆ 10 ಎಂಸಿಜಿ ವಿಟಮಿನ್ ಡಿ ಅಗತ್ಯವಿದೆ ಎಂದು ವರದಿಯೊಂದು ಹೇಳುತ್ತದೆ. ದೇಹದಲ್ಲಿ ಅದರ ಕೊರತೆ ತಡೆಗೆ ಪ್ರತಿದಿನ ಅದೇ ಮಟ್ಟದ ವಿಟಮಿನ್ ಡಿ ಬೇಕಾಗುತ್ತದೆ.
ಸೂರ್ಯನ ಬೆಳಕು ನೈಸರ್ಗಿಕ ಚಿಕಿತ್ಸೆಯಾಗಿದೆ
ನಮ್ಮ ದೇಹವು ಪೋಷಕಾಂಶ ಉತ್ಪಾದಿಸುತ್ತದೆ. ಅದಕ್ಕೆ ಸೂರ್ಯನ ಬೆಳಕು ಬೇಕೇ ಬೇಕು. ಹಾಗಾಗಿ ಬೆಳಿಗ್ಗೆ ಮತ್ತು ಸಂಜೆ ಸೂರ್ಯನ ಬೆಳಕು ತೆಗೆದುಕೊಳ್ಳಿ. ಈ ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಹಾರ ಪದಾರ್ಥಗಳಲ್ಲಿ ಮಾತ್ರ ಕಡಿಮೆ ಪ್ರಮಾಣದಲ್ಲಿರುತ್ತದೆ.
ಇದನ್ನೂ ಓದಿ: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್ ಕಾಯಿಲೆಯ ಸೂಚನೆಯಂತೆ!
ವಿಟಮಿನ್ ಡಿ ಕೊರತೆ ಲಕ್ಷಣಗಳು
ಮೂಳೆ ನೋವು, ಆಯಾಸ, ನಿದ್ರಾಹೀನತೆ, ಕೂದಲು ಉದುರುವಿಕೆ, ಹಸಿವಿನ ಕೊರತೆ, ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುವುದು ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ