Breakfast Recipe: ಬೆಳಗಿನ ತಿಂಡಿಗೆ ಬಿಸಿಬಿಸಿ ಸೋಯಾಬೀನ್​ ಇಡ್ಲಿ ರೆಸಿಪಿ ಇಲ್ಲಿದೆ

Soya Bean Idli Recipe: ಇಡ್ಲಿಯನ್ನು ಮೆಚ್ಚುವ ಜನರು ಎಷ್ಟರ ಮಟ್ಟಿಗೆ ಇದ್ದಾರೆ ಎಂದರೆ, ಇಂದು ನಾವು ನಮ್ಮ ದೇಶದ ಮೂಲೆ ಮೂಲೆಯಲ್ಲಿ ಕನಿಷ್ಠ ಒಂದಾದರೂ ಇಡ್ಲಿ ಮಾರುವ ಹೋಟೆಲ್ ಅನ್ನು ಕಾಣಬಹುದು. ಅನೇಕರು ಮನೆಯಲ್ಲಿಯೂ ಇಡ್ಲಿಗಳನ್ನು ತಯಾರಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ ತಿಂಡಿಗಳಲ್ಲಿ ಇಡ್ಲಿ, ದೋಸೆ ಪ್ರಮುಖ ಪಾತ್ರವಹಿಸುತ್ತದೆ. ಶುಭ ಕಾರ್ಯದಿಂದ ಹಿಡಿದು ಪಾರ್ಟಿಗಳಲ್ಲಿ ಸಹ ಇದು ಇದ್ದೇ ಇರುತ್ತದೆ. ಇಡ್ಲಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬೆಳಗ್ಗೆಯ ಉಪಾಹಾರಕ್ಕೆ ಆರೋಗ್ಯಕರವೆಂದೇ ಪರಿಗಣಿಸಿರುವ ಇಡ್ಲಿಯನ್ನು (Healthy Idli) ವಿಭಿನ್ನವಾಗಿ ಮಾಡುವುದು ಉಂಟು. ತಟ್ಟೆ ಇಡ್ಲಿ, ರವೆ ಇಡ್ಲಿ, ಪುಡಿ ಇಡ್ಲಿ, ಕಾಂಚಿಪುರಂ ಇಡ್ಲಿ ಹೀಗೆ ಅನೇಕ ತರಹದ ಇಡ್ಲಿಗಳನ್ನು (Varieties of Idli) ಮಾಡುತ್ತಾರೆ. ಇಲ್ಲಿ ಇನ್ನೊಂದು ವಿಭಿನ್ನ ತರಹದ ಇಡ್ಲಿಯನ್ನು ನಿಮಗಾಗಿ ಮಾಡುವ ವಿಧಾನ ಹೇಳಿಕೊಡಲಿದ್ದೇವೆ. ಇಡ್ಲಿಯನ್ನು ಕೇವಲ 20 ನಿಮಿಷಗಳಲ್ಲಿಯೇ (20 minute breakfast) ಮಾಡಿಕೊಳ್ಳಬಹುದು.

ದಕ್ಷಿಣ ಭಾರತದ ಪಾಕ ಪದ್ಧತಿಯಲ್ಲಿ ಎರಡನೇ ಅತ್ಯಂತ ಜನಪ್ರಿಯ ಭಕ್ಷ್ಯವೆಂದರೆ ಅದು ಇಡ್ಲಿ. ಹಬೆಯಲ್ಲಿ ಬೇಯಿಸಿದ ಅಕ್ಕಿ ಇಡ್ಲಿ (Steamed Delicacy), ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಇಡ್ಲಿ ದಿನದ ಯಾವುದೇ ಸಮಯದಲ್ಲಿ ಸೇವಿಸಿದರೂ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಇದು ತುಂಬಾ ಹಗುರ ಮತ್ತು ಮೃದುವಾಗಿದ್ದು ಸೇವಿಸಲು ಒಳ್ಳೆಯ ಭಕ್ಷ್ಯ (Tasty Food) ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇಡ್ಲಿಯನ್ನು ಮೆಚ್ಚುವ ಜನರು ಎಷ್ಟರ ಮಟ್ಟಿಗೆ ಇದ್ದಾರೆ ಎಂದರೆ, ಇಂದು ನಾವು ನಮ್ಮ ದೇಶದ ಮೂಲೆ ಮೂಲೆಯಲ್ಲಿ ಕನಿಷ್ಠ ಒಂದಾದರೂ ಇಡ್ಲಿ ಮಾರುವ ಹೋಟೆಲ್ ಅನ್ನು ಕಾಣಬಹುದು. ಅನೇಕರು ಮನೆಯಲ್ಲಿಯೂ ಇಡ್ಲಿಗಳನ್ನು ತಯಾರಿಸುತ್ತಾರೆ. ಇಡ್ಲಿ ತಯಾರಕ ಮತ್ತು ತ್ವರಿತ ಇಡ್ಲಿ ಮಿಶ್ರಣದ ಸಹಾಯದಿಂದ, ಮನೆಯಲ್ಲಿ ಈ ದಕ್ಷಿಣ ಭಾರತದ ಪ್ರಧಾನ ಭಕ್ಷ್ಯವನ್ನು ಬಹುತೇಕರು ತುಂಬಾ ಸುಲಭವಾಗಿ ಮಾಡುತ್ತಾರೆ. ಆದರೆ ಇಡ್ಲಿ ಪಾಕ ವಿಧಾನವು ದಕ್ಷಿಣ ಭಾರತದ ಪ್ರದೇಶಗಳಲ್ಲಿ ಅನೇಕ ವ್ಯತ್ಯಾಸಗಳನ್ನು ಹೊಂದಿದೆ.

ಇದನ್ನೂ ಓದಿ: ಸೇಮ್ ಇಡ್ಲಿ ತಿಂದು ಬೋರ್​ ಆಗಿದ್ರೆ ಸೌತೆಕಾಯಿ ಇಡ್ಲಿ ಟ್ರೈ ಮಾಡಿ

ಸಾಮಾನ್ಯವಾಗಿ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಈ ಎರಡು ರುಚಿಯನ್ನು ಹೊರತು ಪಡಿಸಿ ಹೊಸ ರುಚಿ ಬೇಕೆನ್ನುವವರು ಸೋಯಾಬೀನ್​ ಇಡ್ಲಿ ಸಹ ಟ್ರೈ ಮಾಡಬಹುದು. ಇದು ಕೇಳಲು ವಿಚಿತ್ರವಾಗಿದ್ದರೂ ಸಹ ರುಚಿಕರ. ಸೋಯಾಬೀನ್​ ಇಡ್ಲಿ ಮಾಡುವುದು ಹೇಗೆ ಇಲ್ಲಿದೆ. 

ಸೋಯಾಬೀನ್​ ಇಡ್ಲಿ ಮಾಡಲು  ಬೇಕಾಗುವ ಸಾಮಗ್ರಿಗಳು:
ಸೋಯಾಬೀನ್- 1 ಕಪ್‌
ಬಿಳಿ ಉದ್ದಿನ ಬೇಳೆ 1 ಕಪ್‌
ಮೆಂತ್ಯ – ಸ್ವಲ್ಪ
ಇಡ್ಲಿ ರೈಸ್ 2 ಕಪ್‌
ಚನ್ನಾ ದಾಲ್- ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು

ಸೋಯಾಬೀನ್​ ಇಡ್ಲಿ ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಬೇಳೆ, ಅಕ್ಕಿ ಮತ್ತು ಸೋಯಾಬೀನ್‌ ನೆನೆಸಿಟ್ಟುಕೊಳ್ಳಿ. ಸುಮಾರು ಅರ್ಧ ಗಂಟೆಗಳ ಕಾಲ ನೆನೆಸಿದ ನಂತರ, ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ದಪ್ಪ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು.

ಈಗ ಅದಕ್ಕೆ ಉಪ್ಪನ್ನು ಸೇರಿಸಿ ಚನ್ನಾಗಿ ಮಿಶ್ರಣ ಕಲಸಿಕೊಳ್ಳಿ. ನಂತರ  ಕನಿಷ್ಠ 6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಇಡಬಹುದು. ನಿಮ್ಮ ಹದಕ್ಕೆ ತಕ್ಕಂತೆ. ಬೆಳಗ್ಗೆ ಅದನ್ನು ಮತ್ತೊಮ್ಮೆ ಕಲಸಿ, ಉಪ್ಪು ಬೇಕು ಅಂದ್ರೆ ಹಾಕಿ ಚನ್ನಾಗಿ ಮಿಶ್ರಣ ಮಾಡಿ.

ಇದನ್ನೂ ಓದಿ: ದೋಸೆ, ಚಪಾತಿ ಬದ್ಲು ನೀವ್ಯಾಕೆ ಪಾವ್​ ಬಾಜಿ ಟ್ರೈ ಮಾಡ್ಬಾರ್ದು

ಈ ಹಿಟ್ಟನ್ನು ಇಡ್ಲಿ ಸ್ಟೀಮರ್‌ನಲ್ಲಿ ಹಾಕಿ ಬೇಯಿಸಿದರೆ ಬಿಸಿಬಿಸಿ ಸೋಯಾಬೀನ್ ಇಡ್ಲಿ ರೆಡಿ.  ಇದನ್ನ ಸಾಂಬಾರ್​ಗಿಂತ ಕಾಯಿ ಚಟ್ನಿಯ ಜೊತೆ ತಿನ್ನುವುದು ಹೆಚ್ಚು ರುಚಿ ನೀಡುತ್ತದೆ. ಅಲ್ಲದೇ ಸೋಯಾಬೀನ್​ ಆರೋಗ್ಯಕ್ಕೂ ಸಹ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ.
Published by:Sandhya M
First published: