ಸಾಮಾನ್ಯವಾಗಿ ಬೆಳಗಿನ ತಿಂಡಿಯಲ್ಲಿ (Breakfast) ವೆರೈಟಿ ಇರಬೇಕು ಎಂದು ಬಯಸುವುದು ಸಹಜ. ಇಡ್ಲಿ, ದೋಸೆ (Dosa) , ಚಪಾತಿ (Chapati) ತಿಂದು ಬೋರ್ ಆಗಿಬಿಡುತ್ತದೆ. ಅದಕ್ಕೆ ಆಗೊಮ್ಮೆ ಈಗೊಮ್ಮೆ ಬೇರೆ ವಿಧದ ಆಹಾರ ಟ್ರೈ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮಲ್ಲಿ ಹಲವರಿಗೆ ಪಾವ್ಬಾಜಿ (Pav Baji) ಎಂದರೆ ಬಹಳ ಇಷ್ಟ. ಇದು ಉತ್ತರ ಭಾರತದ ಬೆಳಗಿನ ತಿಂಡಿಯಾಗಿದ್ದರೂ ಸಹ ದಕ್ಷಿಣ ಭಾರತದಲ್ಲಿ ಕೂಡ ತನ್ನದೇ ವೈಶಿಷ್ಠ್ಯವನ್ನು ಕಾಪಾಡಿಕೊಂಡು ಬಂದಿದೆ. ಇದನ್ನ ನೀವೂ ಸಂಜೆ, ಬೆಳಗ್ಗೆ, ಮಧ್ಯಾಹ್ನ ಯಾವಾಗ ಬೇಕಾದರೂ ತಿನ್ನಬಹುದು. ಇದನ್ನ ನೋಡಿದಾಗ ಎಲ್ಲರಿಗೂ ಮಾಡುವುದು ಬಹಳ ಕಷ್ಟ ಎನಿಸುತ್ತದೆ, ಆದರೆ ಒಮ್ಮೆ ಮಾಡಿ ಅಭ್ಯಾಸವಾದರೆ ನೀರು ಕುಡಿದಷ್ಟು ಸುಲಭವಾಗಿ ಪದೇ ಪದೇ ಮಾಡಬಹುದು. ಹಾಗಾದ್ರೆ ಮನೆಯಲ್ಲಿ ಪಾವ್ಬಾಜಿ ಮಾಡುವುದು ಹೇಗೆ ಎನ್ನುವ ರೆಸಿಪಿ ಇಲ್ಲಿದೆ ನೋಡಿ.
ಪಾವ್ಬಾಜಿ ಮಾಡಲು ಬೇಕಾಗುವ ಸಾಮಾಗ್ರಿಗಳು:
ಬೆಣ್ಣೆ
ಟೊಮ್ಯಾಟೋ
ಬಟಾಣಿ
ದೊಡ್ಡ ಮೆಣಸಿನಕಾಯಿ
ಆಲೂಗೆಡ್ಡೆ
ಇದನ್ನೂ ಓದಿ: ಸೇಮ್ ಇಡ್ಲಿ ತಿಂದು ಬೋರ್ ಆಗಿದ್ರೆ ಸೌತೆಕಾಯಿ ಇಡ್ಲಿ ಟ್ರೈ ಮಾಡಿ
ಉಪ್ಪು
ಖಾರದ ಪುಡಿ
ಅರಿಶಿಣ ಪುಡಿ
ಪಾವ್ ಬಾಜಿ ಮಸಾಲ
ಕಸ್ತೂರಿ ಮೇಥಿ
ಕೊತ್ತಂಬರಿ ಸೊಪ್ಪು
ಶುಂಠಿ- ಬೆಳ್ಳುಳಿ ಪೇಸ್ಟ್
ಈರುಳ್ಳಿ
ನಿಂಬೆ ಹಣ್ಣು
ಪಾವ್
ಪಾವ್ಬಾಜಿ ಮಾಡುವ ವಿಧಾನ
ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಬೆಣ್ಣೆ, ಟೊಮ್ಯಾಟೊ, ಬಟಾಣಿ, ಆಲೂಗಡ್ಡೆ ಮತ್ತು ಉಪ್ಪು ಹಾಕಿ ಬೇಯಿಸಿಕೊಳ್ಳಿ. 10 ನಿಮಿಷಗಳ ನಂತರ ಅದನ್ನು ಚನ್ನಾಗಿ ಸ್ಮ್ಯಾಷ್ ಮಾಡಬೇಕು. ಬಟಾಣಿ ಹೆಚ್ಚು ನುಣ್ಣಗೆ ಪೇಸ್ಟ್ ಆಗಿರಬಾರದು. ನಂತರ ಅದಕ್ಕೆ ಖಾರ, ಅರಿಶಿನ, ಪಾವ್ ಮಸಾಲ, ಕೊತ್ತಂಬರಿ, ಈರುಳ್ಳಿ ಮತ್ತು ಕಸ್ತೂರಿ ಮೇಥಿ ಸೇರಿಸಿ ಮಿಶ್ರಣ ಮಾಡಿ. ಎಲ್ಲಾ ಪದಾರ್ಥಗಳು ಚನ್ನಾಗಿ ಮಿಶ್ರಣ ಮಾಡಿದರೆ ಬಾಜಿ ರೆಡಿ.
ಮತ್ತೊಂದು ಬಾಣಲೆಯನ್ನು ತೆಗೆದುಕೊಂಡು ಬೆಣ್ಣೆ, ಖಾರದ ಪುಡಿ ಮತ್ತು ಪಾವ್ ಮಸಾಲ್ ಹಾಕಿ ಚನ್ನಾಗಿ ಕಲಸಿ. ಅದಕ್ಕೆ ಪಾವನ್ನು ಎರಡು ಭಾಗ ಮಾಡಿ ಬೆಣ್ಣೆ ಹಚ್ಚಿ ಬಿಸಿ ಮಾಡಬೇಕು. ಅದು ಫ್ರೈ ಮಾಡಿದ ರೀತಿ ಆಗುತ್ತದೆ. ಅದರ ಪರಿಮಳ ಸಹ ಬರುತ್ತದೆ.
ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್ನಲ್ಲಿ 15 ನಿಮಿಷದಲ್ಲಿ ಇಡ್ಲಿ ಸಾಂಬಾರ್ ಮಾಡ್ಬೇಕಾ..? ಇಲ್ಲಿದೆ ನೋಡಿ ರೆಸಿಪಿ
ನಂತರ ಒಂದು ತಟ್ಟೆಯಲ್ಲಿ ಬಾಜಿ ಮತ್ತು ಪಾವ್ ಇಟ್ಟು, ಅದಕ್ಕೆ ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಗೂ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿದರೆ ಪಾವ್ ಬಾಜಿ ರೆಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ