Chicken Curry Recipe: ಮನೆಯಲ್ಲಿಯೇ ಮಾಡಿ ರುಚಿಯಾದ ಮಸಾಲೆ ಚಿಕನ್ ಕರ್ರಿ

ನೀವು ಚಿಕನ್ ಅನ್ನು ತುಂಬಾನೇ ಇಷ್ಟ ಪಡುತ್ತಿದ್ದರೆ, ಬಾಯಲ್ಲಿ ನೀರೂರಿಸುವ ಈ ಪಾಕವಿಧಾನವನ್ನು ನೀವು ಒಮ್ಮೆಯಾದರೂ ನಿಮ್ಮ ಮನೆಯಲ್ಲಿ ಟ್ರೈ ಮಾಡಲೇಬೇಕು. ನಾವು ನಿಮಗಾಗಿ ಮಸಾಲೆಯುಕ್ತ ಚಿಕನ್ ಕರಿ ಪಾಕವಿಧಾನವನ್ನು ತಂದಿದ್ದೇವೆ ನೋಡಿ.

ಚಿಕನ್ ಕರಿ

ಚಿಕನ್ ಕರಿ

  • Share this:
ಭಾರತೀಯ ಅಡುಗೆಮನೆಗಳಲ್ಲಿ (Indian Kitchen) ತಯಾರಿಸುವ ಹಸಿರು ತರಕಾರಿಗಳ ಪಲ್ಯಗಳು (Veg) ಮತ್ತು ಮಾಂಸಾಹಾರಗಳು (Non Veg) ನಾವು ಬಳಸುವ ಮಸಾಲೆ ಪದಾರ್ಥಗಳಿಂದ ಬೇರೆಯದ್ದೆ ರುಚಿಯನ್ನು ನೀಡುತ್ತವೆ ಮತ್ತು ಇವುಗಳನ್ನು ಸೇವಿಸುವವರಿಗೆ ತುಂಬಾ ಆಯ್ಕೆಗಳನ್ನು ನೀಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ವೀಕೆಂಡ್ ಅಂತ ಬಂದರೆ ಬಹುತೇಕರು ಚಿಕನ್ ಕರಿ (Chicken Curry), ಮಟನ್ ಕೀಮಾ ಮತ್ತು ಮಟನ್ ಕರಿ ಅಂತ ಅನೇಕ ರೀತಿಯ ಭಕ್ಷ್ಯಗಳನ್ನು ಮಾಡಿಕೊಂಡು ತಿನ್ನುತ್ತಾರೆ. ಹೊಸ ಹೊಸ ಪಾಕವಿಧಾನಗಳನ್ನು (Recipe) ಟ್ರೈ ಮಾಡುವುದನ್ನು ನಾವು ನೋಡುತ್ತೇವೆ. ಈ ಭಕ್ಷ್ಯಗಳು ನಿಜಕ್ಕೂ ಜನರ ಬಾಯಲ್ಲಿ ನೀರು ಬರುವಂತೆ ಮಾಡುತ್ತವೆ ಎಂದು ಹೇಳಿದರೆ ಸುಳ್ಳಲ್ಲ.

ಬಾಯಲ್ಲಿ ನೀರೂರಿಸುವ ಈ ಪಾಕವಿಧಾನ

ಹೆಚ್ಚಿನ ಮಾಂಸಾಹಾರಿ ಊಟದ ಪ್ರಿಯರಿಗೆ ಅತ್ಯಂತ ಆದ್ಯತೆಯ ಆಯ್ಕೆಗಳಲ್ಲಿ ಒಂದಾದ ಮೇಲೋಗರಗಳಿಗೆ ಹೆಚ್ಚಿನ ಮಾಂಸವನ್ನು ಸೇರಿಸಿದಾಗ ಅದು ಇನ್ನಷ್ಟು ಆಹ್ಲಾದಕರ ಮತ್ತು ಹಿತಕರವಾಗಿರುತ್ತವೆ.

ನೀವು ಚಿಕನ್ ಅನ್ನು ತುಂಬಾನೇ ಇಷ್ಟ ಪಡುತ್ತಿದ್ದರೆ, ಬಾಯಲ್ಲಿ ನೀರೂರಿಸುವ ಈ ಪಾಕವಿಧಾನವನ್ನು ನೀವು ಒಮ್ಮೆಯಾದರೂ ನಿಮ್ಮ ಮನೆಯಲ್ಲಿ ಟ್ರೈ ಮಾಡಲೇಬೇಕು. ನಾವು ನಿಮಗಾಗಿ ಮಸಾಲೆಯುಕ್ತ ಚಿಕನ್ ಕರಿ ಪಾಕವಿಧಾನವನ್ನು ತಂದಿದ್ದೇವೆ ನೋಡಿ.

ಇದನ್ನೂ ಓದಿ:  Morning Breakfast Recipe: ಬೆಳಗಿನ ಉಪಹಾರಕ್ಕೆ ಹೆಲ್ದೀ ರಾಗಿ ಚಿಲ್ಲಾ ಮಾಡಿ; ಇದರ ಸ್ಪೆಷಲ್ ರೆಸಿಪಿ ಇಲ್ಲಿದೆ

ಈ ಮಸಾಲೆಯುಕ್ತ ಚಿಕನ್ ಕರಿ ಪಾಕವಿಧಾನವು ಸುವಾಸನೆಯಿಂದ ತುಂಬಿದ್ದು ಮತ್ತು ಇದು ತಯಾರಿಸಲು ಸುಲಭವಾದ ಮತ್ತು ತ್ವರಿತವಾದ ಚಿಕನ್ ಪಾಕವಿಧಾನಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಇದು ಪ್ರೋಟೀನ್ ಗಳಿಂದ ತುಂಬಿರುವುದರಿಂದ ಬಾಯಿಗೆ ರುಚಿಕರ ಮಾತ್ರವಲ್ಲದೇ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಬಹುದು.

ಈ ಚಿಕನ್ ಕರಿಯನ್ನು ನೀವು ಪರಾಠಾ, ನಾನ್ ಅಥವಾ ಹಬೆಯಲ್ಲಿ ಬೇಯಿಸಿದ ಅನ್ನದೊಂದಿಗೆ ಹಚ್ಚಿಕೊಂಡು ತಿಂದರೆ ಆ ರುಚಿಯನ್ನು ನೀವು ತುಂಬಾನೇ ಆನಂದಿಸುತ್ತೀರಿ. ಇದು ಖಂಡಿತವಾಗಿಯೂ ನಿಮ್ಮ ಮುಂದಿನ ಔತಣಕೂಟದ ಹೈಲೈಟ್ ಆಗಿರುತ್ತದೆ. ಆದ್ದರಿಂದ, ಇದನ್ನು ಹೇಗೆ ಮಾಡಿಕೊಳ್ಳುವುದು ಎಂದು ನೋಡೋಣ ಬನ್ನಿ.

ಮಸಾಲೆಯುಕ್ತ ಚಿಕನ್ ಕರಿ ಪಾಕವಿಧಾನ

ಮಸಾಲೆಯುಕ್ತ ಚಿಕನ್ ಕರಿಯನ್ನು ತಯಾರಿಸುವುದು ಹೇಗೆ ಎಂದು ನಿಮಗೆ ಅದರ ಪಾಕವಿಧಾನ ಹೇಳುವುದಾದರೆ ಮೊದಲಿಗೆ ನೀವು ಒಂದು ದೊಡ್ಡ ಪಾತ್ರೆಯಲ್ಲಿ, ಎಣ್ಣೆ ಮತ್ತು ತುಪ್ಪವನ್ನು ಒಟ್ಟಿಗೆ ಹಾಕಿಕೊಂಡು ಮಧ್ಯಮ ಉರಿಯಲ್ಲಿ ಅದನ್ನು ಬಿಸಿ ಮಾಡಿಕೊಳ್ಳಿರಿ.

ನಂತರ ಕಂದು ಬಣ್ಣವನ್ನು ಪಡೆಯಲು ಈರುಳ್ಳಿ ಪೇಸ್ಟ್ ಅನ್ನು ಅದಕ್ಕೆ ಸೇರಿಸಿ ಮತ್ತು ಒಂದು ಅಥವಾ ಎರಡು ನಿಮಿಷಗಳ ಕಾಲ ಅದನ್ನು ಚೆನ್ನಾಗಿ ಬೇಯಿಸಿಕೊಳ್ಳಿರಿ. ಅದಕ್ಕೆ ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿಕೊಳ್ಳಿರಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿರಿ.

ಈಗ, ಪ್ಯಾನ್ ಅನ್ನು ಮುಚ್ಚಿ ಮತ್ತು ಸ್ವಲ್ಪ ದಪ್ಪವಾದ ಪೇಸ್ಟ್ ಪಡೆಯಲು ಕೆಲವು ನಿಮಿಷಗಳ ಕಾಲ ಬೇಯಲು ಬಿಡಿ. ಪೇಸ್ಟ್ ಸೀದು ಹೋಗದಂತೆ ಎಚ್ಚರ ವಹಿಸಿ.

ಇದನ್ನೂ ಓದಿ: North Karnataka Recipe: ಉತ್ತರ ಕರ್ನಾಟಕ ಶೈಲಿಯ ಖಾರವಾದ ಚೂಡಾ ಮಾಡೋದು ಹೇಗೆ ಗೊತ್ತಾ?

ಇದು ಚೆನ್ನಾಗಿ ಬೆಂದ ನಂತರ, ಬಾಣಲೆಯನ್ನು ತೆರೆಯಿರಿ ಮತ್ತು ಅರಿಶಿನ ಪುಡಿಯನ್ನು ಉಪ್ಪಿನೊಂದಿಗೆ ಸೇರಿಸಿ. ಇದು ಹಳದಿ ದಪ್ಪ ಪೇಸ್ಟ್ ಆಗಿ ಕಾಣುವವರೆಗೆ ಚೆನ್ನಾಗಿ ಕಲಕಿ. ಟೊಮೆಟೊ ಪ್ಯೂರಿಯನ್ನು ಅದಕ್ಕೆ ಸೇರಿಸಿ ಮತ್ತು ಒಂದು ನಿಮಿಷ ಬೇಯಿಸಿ.

ನಂತರ ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಗರಂ ಮಸಾಲಾವನ್ನು ಆ ಮಿಶ್ರಣಕ್ಕೆ ಸೇರಿಸಿಕೊಳ್ಳಿರಿ.

ಕೊನೆಯಲ್ಲಿ ಚಿಕನ್ ಲೆಗ್ ಪೀಸ್ ಗಳನ್ನು ಆ ಸಿದ್ದವಾಗಿರುವ ಗ್ರೇವಿಯಲ್ಲಿ ಹಾಕಿ ಮತ್ತು 10-15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿದರೆ ಮಸಾಲೆಯುಕ್ತ ಚಿಕನ್ ಕರಿ ಬಿಸಿ ಬಿಸಿ ಮೃದುವಾದ ಚಪಾತಿ, ಪರಾಠ ಅಥವಾ ಬಿಸಿ ಬಿಸಿ ಅನ್ನದೊಂದಿಗೆ ಸೇವಿಸಿ.
Published by:Ashwini Prabhu
First published: