Carrot Cake: ಟೇಸ್ಟಿ ಕ್ಯಾರೆಟ್ ಕೇಕ್​ ಮಾಡುವುದು ಹೇಗೆ? ಇಲ್ಲಿದೆ ಸೂಪರ್ ರೆಸಿಪಿ

Carrot Cake: , ಮೊಟ್ಟೆ ಹಾಕದೇ ರುಚಿಯಾಗಿ ಕ್ಯಾರೆಟ್​ ಕೇಕ್​ ಹೇಗೆ ಮಾಡುವುದು ಅಂತ ಇಲ್ಲಿದೆ ಡಿಟೇಲ್ಸ್​. ಇದು ಕೇವಲ ರುಚಿಯಷ್ಟೇ ಅಲ್ಲ, ಕ್ಯಾರೆಟ್​ ಕೇಕ್​ ನಿಮ್ಮ ಆರೋಗ್ಯಕ್ಕೂ ಉತ್ತಮ. ಅದರಲ್ಲೂ ನವರಾತ್ರಿಯ ಸಮಯದಲ್ಲಿ ಮನೆಯಲ್ಲಿಯೇ ಮಾಡಿ ಸವಿಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೇಕ್​ (Cake)ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೇಕ್​ ಅಂದರೆ ಬಹಳ ಇಷ್ಟ. ಕೇಕ್​ನಲ್ಲೂ ಬಗೆ ಬಗೆಯ ವಿಧಗಳಿವೆ. ಪೇಸ್ಟ್ರಿ ಕೇಕ್, ನಾರ್ಮಲ್​ ಕೇಕ್​, ಆ್ಯಪಲ್​ ಕೇಕ್​, ಕ್ರೀಂ ಕೇಕ್​, ಐಸ್​ ಕೇಕ್​ ಸೇರಿ ಹಲವು ವಿಧಗಳಲ್ಲಿ ಕೇಕ್​ನ ಸವಿಯಬಹುದು. ಬರ್ತ್​ಡೇ, ಎಂಗೆಜ್​ಮೆಂಟ್​, ಮದುವೆ ಹೀಗೆ ಹಲವು ಶುಭಸಮಾರಂಭಗಳಲ್ಲಿ ಕೇಕ್​ ಇರಲೇಬೇಕು. ಅದರಲ್ಲೂ ಮೊಟ್ಟೆ ಹಾಕಿದ ಕೇಕ್​ ತಿನ್ನಲು ಕೆಲವರಿಗೆ ಇಷ್ಟವಿರುವುದಿಲ್ಲ. ಮತ್ತೆ ಕೆಲವರಿಗೆ ಜಾಸ್ತಿ ಕ್ರಿಮ್​ ಇದ್ದರೆ ಇಷ್ಟವಾಗುವುದಿಲ್ಲ. ಹಬ್ಬದ ದಿನಗಳಲ್ಲಿ ಮೊಟ್ಟೆ ತಿನ್ನುವಂತಿಲ್ಲ ಆದರೂ ಕೇಕ್​ ತಿನ್ನುವ ಬಯಕೆ ನಿಮಗಿದ್ದರೆ, ಆದಕ್ಕೆ ಒಂದು ಟೇಸ್ಟಿ ಕೇಕ್​ ರೆಸಿಪಿ(Carrot cake Recipe) ಇಲ್ಲಿದೆ ನೋಡಿ.

    ಹೌದು, ಮೊಟ್ಟೆ ಹಾಕದೇ ರುಚಿಯಾಗಿ ಕ್ಯಾರೆಟ್​ ಕೇಕ್​ ಹೇಗೆ ಮಾಡುವುದು ಅಂತ ಇಲ್ಲಿದೆ ಡಿಟೇಲ್ಸ್​. ಇದು ಕೇವಲ ರುಚಿಯಷ್ಟೇ ಅಲ್ಲ, ಕ್ಯಾರೆಟ್​ ಕೇಕ್​ ನಿಮ್ಮ ಆರೋಗ್ಯಕ್ಕೂ ಉತ್ತಮ. ಅದರಲ್ಲೂ ನವರಾತ್ರಿಯ ಸಮಯದಲ್ಲಿ ಮನೆಯಲ್ಲಿಯೇ ಮಾಡಿ ಸವಿಯಬಹುದು.

    ಬೇಕಾಗಿರುವ ಸಾಮಾಗ್ರಿಗಳು;
    - ಸಣ್ಣಗೆ ಕತ್ತರಸಿದ ವಾಲ್​ ನಟ್​ - 1 ಕಪ್​
    - ತುರಿದ ಕ್ಯಾರೆಟ್​ - 1 ಕಪ್​
    - ಬೆಣ್ಣೆ - 2 ದೊಡ್ಡ ಚಮಚ
    - ಖರ್ಜೂರ - 1/2 ಕಪ್​
    - ಪುಡಿ ಮಾಡಿದ ಸಕ್ಕರೆ - 1
    - ಮೈದಾ ಹಿಟ್ಟು - 1 ಕಪ್​
    - ಬೇಕಿಂಗ್​ ಪೌಡರ್​- 1 ಟೀ ಸ್ಪೂನ್​
    - ಸೋಡಾ - 3 ಟೇಬಲ್​ ಸ್ಪೂನ್​
    - ಕೋಕೋ ಪೌಡರ್ - 1 ಟೇಬಲ್​ ಸ್ಪೂನ್​
    - ಚೋಕೋ ಚಿಪ್ಸ್ - ಒಂದು ಹಿಡಿ

    ಇದನ್ನೂ ಓದಿ: ಚಂದ್ರಾಘಂಟಾ ದೇವಿಯ ಆರಾಧನೆ ಮಾಡುವುದು ಹೇಗೆ? ನವರಾತ್ರಿ ಮೂರನೇ ದಿನದ ಪೂಜಾ ವಿಧಿ-ವಿಧಾನ ಹೀಗಿದೆ....

    ಟೇಸ್ಟಿ ಕ್ಯಾರೆಟ್​ ಕೇಕ್​ ಮಾಡುವುದು ಹೇಗೆ?
    ಮೊದಲು ಒಂದು ಕೇಕ್​ ಪ್ಯಾನ್​ಗೆ ವಾಲ್​ ನಟ್​, ತುರಿದ ಕ್ಯಾರೆಟ್​, ಸಕ್ಕರೆ ಪುಡಿ, ಬೆಣ್ಣೆ, ಖರ್ಜೂರ, ಚಾಕೋ ಚಿಪ್ಸ್​ ಹಾಗೂ ಚಾಕೋಲೇಟ್​ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಮತ್ತೊಂದು ಪ್ಯಾನ್​ಗೆ ಮೈದಾ ಹಿಟ್ಟು, ನೀರು, ಬೆಣ್ಣೆ, ಬೇಕಿಂಗ್ ಪೌಡರ್​, ಕೋಕೋ ಪೌಡರ್​ ಹಾಗೂ ಸೋಡಾ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

    ಇನ್ನೊಂದು ಬೌಲ್​ನಲ್ಲಿದ್ದ ಕ್ಯಾರೆಟ್​ ತುರಿ, ಸಕ್ಕರೆಯನ್ನೆಲ್ಲಾ ಇದಕ್ಕೆ ಸೇರಿಸಿ. ದೋಸೆ ಹಿಟ್ಟಿನ ಹದಕ್ಕೆ ಇದನ್ನುಬ ಕಲಸಿ ಇಟ್ಟುಕೊಳ್ಳಿ. ನಂತರ ಮೊದಲೇ ಬಿಸಿಮಾಡಿಕೊಂಡಿರುವ ಒವೆನ್​ನಲ್ಲಿ 20 ನಿಮಿಷ ಬೇಕ್​ ಮಾಡಿದರೆ ರುಚಿಕರ ಹಾಗೂ ಆರೋಗ್ಯಕರ ಚಾಕೋಲೇಟ್​ ಕ್ಯಾರೆಟ್​ ಕೇಕ್​ ತಿನ್ನಲು ರೆಡಿ

    ಇನ್ನೂ ಕ್ಯಾರೆಟ್​ನಿಂದ ದೇಹಕ್ಕೆ ಆಗುವ ಉಪಯೋಗಗಳ ಬಗ್ಗೆ ಇಲ್ಲಿದೆ ವಿವರ
    ಔಷಧ ಗುಣಗಳ ಕಣಜ ಕ್ಯಾರೆಟ್​!
    - ಕಣ್ಣಿನ ದೃಷ್ಟಿ ವೃದ್ಧಿಸಲು ಸಹಕಾರಿ ಕ್ಯಾರೆಟ್
    - ಕ್ಯಾರೆಟ್​ನಲ್ಲಿದೆ ಕ್ಯಾನ್ಸರ್ ಪ್ರತಿಬಂಧಕ ಶಕ್ತಿ
    - ನಿಮಗೆ ವಯಸ್ಸಾಗದಂತೆ ತಡೆಯುತ್ತೆ ಕ್ಯಾರೆಟ್​
    - ಚರ್ಮಕಾಂತಿ ನೀಡಲು ಉತ್ತೇಜನ ನೀಡುತ್ತೆ
    - ಹೃದ್ರೋಗ ತಡೆಯಲು ಬಹಳ ಸಹಕಾರಿ

    ಇದನ್ನೂ ಓದಿ: ಆಲೂಗೆಡ್ಡೆ ಜ್ಯೂಸ್ ಸೇವನೆ ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ

    - ಸೋಂಕು ತಡೆಯಲು ಸಹಾಯ ಮಾಡುತ್ತೆ ಕ್ಯಾರೆಟ್​
    ​ಕ್ಯಾರೆಟ್​ನಿಂದ ಇಷ್ಟೊಂದು ಉಪಯೋಗಗಳು ಇವೆ. ಇನ್ನು ಯಾಕೆ ತಡ ನವರಾತ್ರಿ ಹಬ್ಬಕ್ಕಾಗಿ ಕ್ಯಾರೆಟ್​ ಬಳಸಿ ಈ ಚಾಕೋಲೇಟ್ ಕ್ಯಾರೆಟ್​ ಕೇಕ್ ಮಾಡಿ ತಿಂದು, ಆನಂದಿಸಿ...

    (ವರದಿ - ವಾಸುದೇವ್​ . ಎಂ)
    Published by:Sandhya M
    First published: