Breakfast Recipe: ಮಕ್ಕಳ ಫೇವರಿಟ್​ ಭೇಲ್​ ಪುರಿ ಸ್ಯಾಂಡ್​ವಿಚ್​ ಮನೆಯಲ್ಲಿಯೇ ಮಾಡಿ ಸವಿಯಿರಿ

Bhel Puri Sandwich: ಅದರಲ್ಲಿ ಬಳಸಲಾಗುವ ಮಸಾಲೆ ಹಾಗೂ ಕರಗುವ ಚೀಸ್ ಸ್ಯಾಂಡ್‌ವಿಚ್‌ಗೆ ವಿಶೇಷ ರುಚಿ ನೀಡಿ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಹಾಗಾದ್ರೆ ಭೇಲ್​ ಪುರಿ ಸ್ಯಾಂಡ್​ ವಿಚ್​ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಕ್ಕಳು (Children) ತರಕಾರಿಯನ್ನೇ ತಿನ್ನೋದಿಲ್ಲ ಅನ್ನೋದು ಪ್ರತಿಯೊಬ್ಬ ತಾಯಂದಿರ ದೂರಾಗಿರುತ್ತೆ. ಹೀಗಾಗಿ ಮಕ್ಕಳಿಗೆ ಬೇರೆಯದ್ದೇ ರೂಪದಲ್ಲಿ ನೀವು ತರಕಾರಿಗಳನ್ನ (Vegetables) ತಿನ್ನಿಸಬೇಕು. ಇದಕ್ಕೆ ಬೆಸ್ಟ್​ ಮಾರ್ಗ ಅಂದ್ರೆ ಅದು ಸ್ಯಾಂಡ್​ವಿಚ್ (Sandwich)​, ಮಕ್ಕಳಿಗೆ ಇಷ್ಟವಾಗುತ್ತೆ ಜೊತೆಗೆ ತರಕಾರಿ ಕೂಡ ಅವರ ದೇಹ ಸೇರುತ್ತೆ. ಸ್ಯಾಂಡ್‌ವಿಚ್ ಅನ್ನು ಮನೆಯಲ್ಲೇ (Home) ಸುಲಭವಾಗಿ ತಯಾರಿಸಬಹುದು. ರುಚಿಕರವಾದ ಬ್ರೆಡ್ (Bread) ರೆಸಿಪಿಯನ್ನು ವಿಧ ವಿಧವಾಗಿ ತಯಾರಿಸಿ ಬೆಳಗಿನ ಬ್ರೇಕ್‌ಫಾಸ್ಟ್ ನನ್ನು ವೈವಿಧ್ಯಮಯವಾಗಿಸಿ. ಟೋಸ್ಟ್‌ನಿಂದ ಹಿಡಿದು ಸ್ಯಾಂಡ್‌ವಿಚ್‌ವರೆಗೆ ನಿಮ್ಮ ಬ್ರೇಕ್‌ಫಾಸ್ಟ್ ಅನ್ನು ನೀವು ಯಮ್ಮಿಯನ್ನಾಗಿ ಮಾಡಿಕೊಳ್ಳಬಹುದು

ಸ್ಯಾಂಡ್‌ವಿಚ್ ಅನ್ನು ಕಡಿಮೆ ಸಾಮಾಗ್ರಿಯೊಂದಿಗೆ ಸರಳವಾಗಿ ತಯಾರಿಸಬಹುದು. ರುಚಿಕರವಾದ ಬ್ರೇಕ್‌ಫಾಸ್ಟ್ ರೆಸಿಪಿ ತಯಾರಿಸಲು ಮೊಟ್ಟೆ ಅಥವಾ ಆಲೂಗಡ್ಡೆ ಮಿಶ್ರಣವನ್ನು ಸೇರಿಸಬಹುದು. ಅದರಲ್ಲೂ ಸ್ಯಾಂಡ್​ವಿಚ್​ನಲ್ಲಿ ಹಲವಾರು ವಿಧಗಳಿದೆ. ಮುಖ್ಯವಾಗಿ ಭೆಲ್​ ಪುರಿ ಸ್ಯಾಂಡ್​ವಿಚ್​ . ಮಕ್ಕಳು ಇದನ್ನು ಹೊರಗಡೆ ಹೆಚ್ಚು ತಿನ್ನುತ್ತಾರೆ. ಹಾಗಾಗಿ ಮನೆಯಲ್ಲಿಯೆ ಮಾಡಿಕೊಟ್ಟರೆ, ಅವರಿಗೆ ಇಷ್ಟವಾಗುತ್ತದೆ. ಇದರಲ್ಲಿ ಬಳಸಲಾಗುವ ಮಸಾಲೆ ಹಾಗೂ ಕರಗುವ ಚೀಸ್ ಸ್ಯಾಂಡ್‌ವಿಚ್‌ಗೆ ವಿಶೇಷ ರುಚಿ ನೀಡಿ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಹಾಗಾದ್ರೆ ಭೇಲ್​ ಪುರಿ ಸ್ಯಾಂಡ್​ ವಿಚ್​ ಮಾಡುವುದು ಹೇಗೆ ಎಂಬುದು ಇಲ್ಲಿದೆ.

 ಭೇಲ್​ ಪುರಿ ಸ್ಯಾಂಡ್​ವಿಚ್​ ಮಾಡಲು ಬೇಕಾಗುವ ಸಾಮಾಗ್ರಿಗಳು:
ಮಂಡಕ್ಕಿ: 200 ಗ್ರಾಂ
ಈರುಳ್ಳಿ: ಒಂದು (ಸಣ್ಣದಾಗಿ ಹೆಚ್ಚಿಕೊಳ್ಳಿ)
ಟೊಮೇಟೊ: ಒಂದು (ಸಣ್ಣದಾಗಿ ಹೆಚ್ಚಿಕೊಳ್ಳಿ)
ಆಲೂಗೆಡ್ಡೆ: ಒಂದು (ಬೇಯಿಸಿ, ಸಣ್ಣದಾಗಿ ಕತ್ತರಿಸಿಕೊಳ್ಳಿ)
ಕ್ಯಾರೆಟ್ : ಒಂದು (ತುರಿದು ಇಟ್ಟುಕೊಳ್ಳಿ)
ಪುದಿನಾ ಚಟ್ನಿ: 2 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ನಿಂಬೆರಸ:1 ಚಮಚ
ಸೇವ್ ಪುರಿ: ಅಲಂಕಾರಕ್ಕೆ
ಕೊತ್ತಂಬರಿ ಸೊಪ್ಪು: ಒಂದು ಕಟ್ಟು, ಸಣ್ಣದಾಗಿ ಹೆಚ್ಚಿಕೊಳ್ಳಿ

ಇದನ್ನೂ ಓದಿ: ಈ ತರಕಾರಿಗಳನ್ನು ಬೇಯಿಸಿದ ನಂತರ ಪೋಷಕಾಂಶಗಳು ಹೆಚ್ಚಾಗುತ್ತಂತೆ

ಭೇಲ್​ ಪುರಿ ಸ್ಯಾಂಡ್​ವಿಚ್​ ಮಾಡುವ ವಿಧಾನ

ಮೊದಲು  ಒಂದು ಪಾತ್ರೆಯಲ್ಲಿ ಎಲ್ಲಾ ತರಕಾರಿ, ಈರುಳ್ಳಿ, ಆಲೂಗೆಡ್ಡೆ, ಟೊಮ್ಯಾಟೋ, ಕ್ಯಾರೆಟ್ ಮತ್ತು ಮಂಡಕ್ಕಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕಲಸಿ. ಎಲ್ಲಾ ಪದಾರ್ಥಗಳು ಸರಿಯಾಗಿ ಮಿಶ್ರಣವಾಗಬೇಕು.  ಈ ಪಾತ್ರೆಗೆ ಒಂದು ದೊಡ್ಡ ಚಮಚ ಪುದೀನಾ ಚಟ್ನಿ, ನಿಂಬೆರಸ, ಉಪ್ಪು ಸೇರಿಸಿ ಸರಿಯಾಗಿ ಕಲಸಬೇಕು. ನಿಮಗೆ ಪುದೀನಾ ಚಟ್ನಿಯನ್ನು ಮಾಡಲು ಸಮಯವಿತ್ತು ಎಂದರೆ ಮಾಡಬಹುದು. ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ಮಿಕ್ಸಿಯಲ್ಲಿ ಹಾಕಿ ಉಪ್ಪು ಹಾಗೂ ನೀರನ್ನು ಸೇರಿಸಿ ರುಬ್ಬಿಕೊಂಡರೆ ಪುದೀನಾ ಚಟ್ನಿ ರೆಡಿ.

ಇದನ್ನೂ ಓದಿ: ಮಹಿಳೆಯರು ಪ್ರತಿದಿನ ಈ ಟೀ ಕುಡಿದರೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ

ಈಗ ಈ ತರಕಾರಿಯ ಮಿಶ್ರಣಕ್ಕೆ  ಸೇವ್ ಪುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕಲಸಿ ಮಿಕ್ಸ್ ಮಾಡಿ.ಈಗ ಒಂದು ಹೋಳು ಬ್ರೆಡ್‌ನ ಒಂದು ಭಾಗಕ್ಕೆ ಸ್ವಲ್ವ ಚಟ್ನಿ ಹಚ್ಚಿ, ಅದರ ಮೇಲೆ ತಯಾರಾಗಿರುವ ಭೇಲ್ ಪುರಿಯನ್ನು ದಪ್ಪವಾಗಿ ಹರಡಿ. ಈಗ ಇನ್ನೊಂದು ಬ್ರೆಡ್​ ಹೋಳನ್ನು ಇದರ ಮೇಲಿಡಿ. ಅಥವಾ ಆ ಭೇಲ್​ ಪುರಿ ಮೇಲೆ ನೀವು ಚೀಸ್​ ಅನ್ನು ತುರಿದು ಹಾಕಬಹುದು. ಇಲ್ಲದಿದ್ದರೆ ಬ್ರೇಡ್​ ಮೇಲೆ ಸಹ ಹಾಕಬಹುದು. ಹೀಗೆ ಮಾಡಿದರೆ ರುಚಿಕರವಾದ ಭೇಲ್​ ಪುರಿ ಸ್ಯಾಂಡ್​ವಿಚ್​ ರೆಡಿ.
Published by:Sandhya M
First published: