Breakfast Recipe: ಇಪ್ಪತ್ತೇ ನಿಮಿಷದಲ್ಲಿ ಮಾಡಿ ಸ್ವೀಟ್ ಕಾರ್ನ್ ಉಪ್ಪಿಟ್ಟು! ಸುಲಭದ ರೆಸಿಪಿ ಇಲ್ಲಿದೆ ಓದಿ

How to Prepare Sweet Corn Upma: ನೋಡಲು ವಿಭಿನ್ನವಾಗಿರುವ ಇದು ರುಚಿಕರ ಕೂಡ. ಸ್ವಲ್ಪ ಸ್ಪೈಸಿ, ಸ್ವಲ್ಪ ಹುಳಿ ಹೀಗೆ ವಿಧವಿಧವಾಗಿ ಇದನ್ನು ತಯಾರಿಸಬಹುದು. ಇಲ್ಲದ್ದಕ್ಕಿಂತ ಹೆಚ್ಚಾಗಿ ಅತಿ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ (South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆದರೆ, ಇನ್ನಿತರೆ ಭಕ್ಷ್ಯಗಳನ್ನು ಕಡಿಮೆ ಜನರು ಪ್ರಯತ್ನಿಸಿ ಮಾಡಿಕೊಳ್ಳುವುದುಂಟು. ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆ. ಹಾgeಯೇ ವಿವಿಧ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಲು ಬಯಸುತ್ತೇವೆ. ನಾವು ಒಂದು ಪದಾರ್ಥದಿಂದ ಹಲವಾರು ವಿಭಿನ್ನ ಪದಾರ್ಥಗಳನ್ನು ಮಾಡಲು ಇಷ್ಟಪಡುತ್ತೇವೆ. ಎಲ್ಲರಿಗೂ ಸ್ವಿಟ್​ ಕಾರ್ನ್ ಎಂದರೆ ಬಹಳ ಇಷ್ಟವಾಗುತ್ತದೆ. ಅದರಿಂದ ಸಹ ನಾವು ಹಲವಾರು ಪದಾಋ್ಥಗಳನ್ನು ತಯಾರಿಸುತ್ತೇವೆ. ಆದರೆ ಉಪ್ಪಿಟ್ಟು ಮಾಡುವುದು ಹೇಗೆ ಅಂತ ಗೊತ್ತಾ?

ಮಕ್ಕಳಿಗೆ ಮೊದಲೇ ಉಪ್ಪಿಟ್ಟು ಎಂದರೆ ಅಲರ್ಜಿ. ಹಾಗಾಗಿ ಉಪ್ಪಿಟ್ಟು ಎಂಬ ಹೆಸರು ಕೇಳಿದರೇ ಸಾಕು ಓಡಿ ಹೋಗುತ್ತಾರೆ. ಆದರೆ ಇದು ಸಾಮಾನ್ಯ ಉಪ್ಪಿಟ್ಟಿನಂತಲ್ಲ,ಬಹಳ ವಿಭಿನ್ನ. ಈ ಸ್ವೀಟ್​ ಕಾರ್ನ್ ಉಪ್ಪಿಟ್ಟು ಚಿಕ್ಕವರಿಂದ ದೊಡ್ಡವರವರೆಗೆ ಬಹಳ ಇಷ್ಟವಾಗುತ್ತದೆ.

ನೋಡಲು ವಿಭಿನ್ನವಾಗಿರುವ ಇದು ರುಚಿಕರ ಕೂಡ. ಸ್ವಲ್ಪ ಸ್ಪೈಸಿ, ಸ್ವಲ್ಪ ಹುಳಿ ಹೀಗೆ ವಿಧವಿಧವಾಗಿ ಇದನ್ನು ತಯಾರಿಸಬಹುದು. ಇಲ್ಲದ್ದಕ್ಕಿಂತ ಹೆಚ್ಚಾಗಿ ಅತಿ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದು ಎಂಬುದು ಇದರ ವಿಶಿಷ್ಟ ಗುಣ. ಹಾಗಾದ್ರೆ ಸ್ವೀಟ್​ ಕಾರ್ನ್ ಉಪ್ಪಿಟ್ಟು ಮಾಡೋದು ಹೇಗೆ ಇಲ್ಲಿದೆ.

ಸ್ವೀಟ್​ ಕಾರ್ನ್ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು

ಸ್ವೀಟ್​ ಕಾರ್ನ್ - 2 ಕಪ್

ರವೆ- 1 ಕಪ್

ಅರಿಶಿನ ಪುಡಿ-2  1ಟೀ ಚಮಚ

ಕರಿಬೇವು-5 ರಿಂದ 6 ಎಸಳು

ಹಸಿ ಮೆಣಸು -3 ರಿಂದ 4

ಈರುಳ್ಳಿ- 2 ( ಉದ್ದ ಉದ್ದವಾಗಿ ಹೆಚ್ಚಿಕೊಳ್ಳಿ)

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ: ಅಗತ್ಯಕ್ಕೆ ತಕ್ಕಂತೆ

ಉದ್ದಿನಬೇಳೆ- 1 ಟೀ ಚಮಚ

ಕಡಲೇ ಬೇಳೆ- 1 ಟೀ ಚಮಚ

ಸಾಸಿವೆ- 1 ಟೀ ಚಮಚ

ನಿಂಬೆ ಹಣ್ಣು- ಅರ್ಧ

ಸ್ವೀಟ್​ ಕಾರ್ನ್ ಮಾಡುವ ವಿಧಾನ

ಮೊದಲು ಸ್ವೀಟ್​ ಕಾರ್ನ್ ಅನ್ನು ತೊಳೆದು ಬೇಯಿಸಿಕೊಳ್ಳಿ. ಅಗತ್ಯವಿದ್ದರೆ ಉಪ್ಪು ಹಾಕಿ. ನಂತರ ಒಂದು ಬಾಟಲಿಯನ್ನು ತೆಗೆದುಕೊಳ್ಳಿ, ಅದಕ್ಕೆ ಎಣ್ಣೆ ಹಾಕಿ ಅದನ್ನು ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ  ಹಾಕಿ ಸಿಡಿಯಲು ಬಿಡಿ, ಹಾಗೆಯೇ ಅದಕ್ಕೆ ಉದ್ದಿನ ಬೇಳೆ ಮತ್ತು ಕಡಲೇ ಬೇಳೆ ಸೇರಿಸಿ ಚನ್ನಾಗಿ ಹುರಿದುಕೊಳ್ಳಿ. ಬೇಳೆಗಳು ಹುರಿಯುತ್ತಿರುವಾಗ ಅದಕ್ಕೆ ಶೇಂಗಾ ಹಾಕಿ ಮತ್ತೊಮ್ಮೆ ಹುರಿಯಿರಿ. ಈ ಸಮಯದಲ್ಲಿ ಸ್ವಲ್ಪ ಅರಿಶಿನ ಪುಡಿ ಹಾಕಿ ಮಿಶ್ರಣ ಮಾಡಿ.

ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೆಯದು ಅಂತ ಇವುಗಳನ್ನು ಅತಿಯಾಗಿ ತಿಂದ್ರೆ ಅಪಾಯವೇ ಜಾಸ್ತಿ

ಚನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಹಸಿ ಮೆಣಸನ್ನು ಹಾಕಿ, ಜೊತೆಗೆ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಹಾಕಿ ಹುರಿದುಕೊಳ್ಳಿ. ಈರುಳ್ಳಿ ಕಂದು ಬಣ್ಣ ಬರುವವರೆಗೂ ಹುರಿಯಬೇಕು. ಈಗ ನೀವು  ಸರಿಯಾಗಿ ಹುರಿದ ಮೇಲೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿ.

ಈ ಮಿಶ್ರಣಕ್ಕೆ ಬೇಯಿಸಿಕೊಂಡಿರುವ ಸ್ವಿಟ್​ ಕಾರ್ನ್ ಹಾಕಿ ಚನ್ನಾಗಿ ಕಲಸಿ. ಅಲ್ಲದೇ  ಉಪ್ಪು ಮತ್ತು ಇತರ ಮಸಾಲೆಗಳ ಅಗತ್ಯವಿದೆಯಾ ಎಂದು ಟೇಸ್ಟ್ ಮಾಡಿ ನೋಡಿ. ಇನ್ನು ಇದರ ರುಚಿ ಹೆಚ್ಚಾಗಲು ಇದಕ್ಕೆ ನಿಂಬೆ ಹುಳಿಯನ್ನು ಸೇರಿಸಿದರೆ ಅದ್ಭುತವಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಆಂಧ್ರ ಸ್ಪೆಷಲ್ ಊಟ ಹುಡುಕ್ತಿದ್ದೀರಾ? ಹಾಗಿದ್ರೆ ಈ ರೆಸ್ಟೋರೆಂಟ್‌ಗಳಿಗೆ ಮಿಸ್ ಮಾಡದೇ ವಿಸಿಟ್ ಕೊಡಿ!

ಸ್ವೀಟ್​ ಕಾರ್ನ್​ನಲ್ಲಿ ಹಲವಾರು ಪೋಷಕಾಂಶಗಳಿದ್ದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಸಹ ಇದು ಉತ್ತಮ. ಅಲ್ಲದೇ ತೂಕ ಇಳಿಸುವ ಪ್ರಕ್ರಿಯೆಯಲ್ಲಿರುವವರು ಇದನ್ನು ಸೇವಿಸುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.
Published by:Sandhya M
First published: