Breakfast Recipe: ಚಪಾತಿ ಜೊತೆ ಏನ್ ಮಾಡೋದು ಚಿಂತೆ ಬಿಡಿ, ಸ್ಟಫ್ಡ್ ಪನೀರ್ ಮೆಣಸಿನಕಾಯಿ ಸಬ್ಜಿ ಮಾಡಿ

Stuffed Paneer Chilli Sabji: ವಿಭಿನ್ನ ರೀತಿಯ ಪಲ್ಯಗಳನ್ನು (Curry)  ಮಾಡುವುದು ಹೆಚ್ಚಿನ ರುಚಿ ನೀಡುತ್ತದೆ. ಚಪಾತಿ ಮಾಡಿದಾಗಲೆಲ್ಲಾ ಅದರ ಜೊತೆ ಏನು ಮಾಡುವುದು ಎಂಬ ತಲೆನೋವಿದ್ದರೆ, ನಿಮಗೆ ಇಲ್ಲೊಂದು ರುಚಿಕರವಾದ ರೆಸಿಪಿ ಇದೆ. ಅದೇ ಸ್ಟಫ್ಡ್ ಪನೀರ್ ಮೆಣಸಿನಕಾಯಿ ಸಬ್ಜಿ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ತಿಂಡಿ (Breakfast) ಮಾಡುವುದು ಒಂದು ತಲೆನೋವಿನ ಕೆಲಸ ಎನ್ನಬಹುದು. ದಿನ ಬೆಳಗಾದರೆ ಏನಪ್ಪಾ ಮಾಡುವುದು ಎಂಬ ಚಿಂತೆ ಎಲ್ಲರನ್ನು ಕಾಡುತ್ತದೆ. ಒಂದು ಸಹ ತಿಂಡಿ ಚಿಂತೆ ಆದ್ರೆ ಮತ್ತೊಮ್ಮೆ ಏನಪ್ಪಾ ಅದಕ್ಕೆ ಪಲ್ಯ ಅಥವಾ ಚಟ್ನಿ ಮಾಡುವುದು ಎನ್ನುವ ಸಮಸ್ಯೆ ಬರುತ್ತದೆ. ಅದರಲ್ಲೂ ಸಮಯ ಸಹ ಹೆಚ್ಚಿರುವುದಿಲ್ಲ. ಚಪಾತಿ (Chapati)  ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಮಾಡಲಾಗುತ್ತದೆ. ಅದಕ್ಕೆ ವಿಭಿನ್ನ ರೀತಿಯ ಪಲ್ಯಗಳನ್ನು (Curry)  ಮಾಡುವುದು ಹೆಚ್ಚಿನ ರುಚಿ ನೀಡುತ್ತದೆ. ಚಪಾತಿ ಮಾಡಿದಾಗಲೆಲ್ಲಾ ಅದರ ಜೊತೆ ಏನು ಮಾಡುವುದು ಎಂಬ ತಲೆನೋವಿದ್ದರೆ, ನಿಮಗೆ ಇಲ್ಲೊಂದು ರುಚಿಕರವಾದ ರೆಸಿಪಿ ಇದೆ. ಅದೇ ಸ್ಟಫ್ಡ್ ಪನೀರ್ ಮೆಣಸಿನಕಾಯಿ ಸಬ್ಜಿ. 

ಸ್ಟಫ್ಡ್ ಪನೀರ್ ಮೆಣಸಿನಕಾಯಿ ಸಬ್ಜಿ ಮಾಡಲು ಬೇಕಾಗುವ ಸಾಮಾಗ್ರಿಗಳು 

6 ಮೆಣಸಿನಕಾಯಿ
1 ಕಪ್ ಪನೀರ್
2 ಟೇಬಲ್ಸ್ಪೂನ್ ಈರುಳ್ಳಿ
1 ಮೆಣಸಿನಕಾಯಿ
2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು
½ ಟೀಸ್ಪೂನ್ ಜೀರಿಗೆ ಪುಡಿ
½ ಟೀಸ್ಪೂನ್ ಮೆಣಸಿನ ಪುಡಿ
½ ಟೀಸ್ಪೂನ್ ಆಮ್ಚೂರ್
¼ ಟೀಸ್ಪೂನ್ ಉಪ್ಪು
2 ಟೇಬಲ್ಸ್ಪೂನ್ ಎಣ್ಣೆ
1 ಈರುಳ್ಳಿ
1 ಇಂಚು ಶುಂಠಿ
4 ಎಸಳು ಬೆಳ್ಳುಳ್ಳಿ
2 ಟೊಮೆಟೊ
2 ಟೇಬಲ್ಸ್ಪೂನ್ ಎಣ್ಣೆ
1 ಪಲಾವ್ ಎಲೆ
3 ಪಾಡ್ ಏಲಕ್ಕಿ
1 ಟೀಸ್ಪೂನ್ ಜೀರಿಗೆ
½ ಟೀಸ್ಪೂನ್ ಅರಿಶಿನ
1 ಟೀಸ್ಪೂನ್ ಮೆಣಸಿನ ಪುಡಿ
¼ ಟೀಸ್ಪೂನ್ ಜೀರಿಗೆ ಪುಡಿ
1 ಟೀಸ್ಪೂನ್ ಕೊತ್ತಂಬರಿ ಪುಡಿ
¼ ಕಪ್ ಮೊಸರು
1½ ಕಪ್ ನೀರು
1 ಟೀಸ್ಪೂನ್ ಉಪ್ಪು
¼ ಟೀಸ್ಪೂನ್ ಗರಂ ಮಸಾಲಾ
1 ಟೀಸ್ಪೂನ್ ಕಸೂರಿ ಮೇಥಿ
2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು

ಸ್ಟಫ್ಡ್ ಪನೀರ್ ಮೆಣಸಿನಕಾಯಿ ಸಬ್ಜಿ ಮಾಡುವ ವಿಧಾನ

ಮೊದಲು ಮೆಣಸಿನಕಾಯಿಯನ್ನು ತೆಗೆದುಕೊಂಡು ಅದರಿಂದ ಬೀಜ ತೆಗೆದು ಸೀಳಿಕೊಳ್ಳಿ.  ಈಗ ಪನೀರ್ ತೆಗೆದುಕೊಂಡು ಚೆನ್ನಾಗಿ ತುರಿದು ಕೊಳ್ಳಿ. ಒಂದು ಪಾತ್ರೆಯಲ್ಲಿ ಅದನ್ನು ಹಾಕಿ, ಅದಕ್ಕೆ  ಸಣ್ಣದಾಗಿ ಹೆಚ್ಚಿಕೊಂಡ ಸ್ವಲ್ಪ ಈರುಳ್ಳಿ, 1 ಮೆಣಸಿನಕಾಯಿ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ½ ಟೀಸ್ಪೂನ್ ಜೀರಿಗೆ ಪುಡಿ, ½ ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಆಮ್ಚೂರ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಎಲ್ಲವನ್ನೂ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ  ಪನೀರ್ ಸ್ಟಫಿಂಗ್ ಅನ್ನು ಮೆಣಸಿನಕಾಯಿಗೆ ತುಂಬಿಸಿ ಒಂದೆಡೆ ಇಟ್ಟುಕೊಳ್ಳಿ. 

ಈಗ ಒಂದು ಬಾಣಲೆಯನ್ನು ತೆಗೆದುಕೊಂಡು  2 ಟೇಬಲ್ಸ್ಪೂನ್ ಎಣ್ಣೆಯನ್ನು ಹಾಕಿ ಕಾಯಿಸಿ. ಅದಕ್ಕೆ 1 ಈರುಳ್ಳಿ, 1 ಇಂಚು ಶುಂಠಿ ಮತ್ತು 4 ಎಸಳು ಬೆಳ್ಳುಳ್ಳಿ ಸೇರಿಸಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡುತ್ತಿರಿ. ಅದಕ್ಕೆ ಈಗ 2 ಟೊಮೆಟೊ ಸಣ್ಣದಾಗಿ ಹೆಚ್ಚಿಕೊಂಡು ಹಾಕಿ  ಚೆನ್ನಾಗಿ ಬಾಡಿಸಿ. ಟೊಮೆಟೊ  ಮೆತ್ತಗಾಗುವವರೆಗೆ ಫ್ರೈ ಮಾಡುತ್ತಲೇ ಇರಿ. 

ಈಗ ಈ ಮಿಶ್ರಣ ತಣ್ಣಗಾದ ನಂತರ ಅದನ್ನು ಅದನ್ನು ಪೇಸ್ಟ್​ ರೀತಿ ರುಬ್ಬಿಕೊಳ್ಳಿ. ಈಗ ದೊಡ್ಡ ಪಾತ್ರೆ ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ. ಅದಕ್ಕೆ  ಸ್ಟಫ್ಡ್ ಮೆಣಸಿನಕಾಯಿಯನ್ನು ಗುಳ್ಳೆಗಳು ಬರುವವರೆಗೂ ಹಾಕಿ ಫ್ರೈ ಮಾಡಿ, ಪಕ್ಕಕ್ಕೆ ಇಟ್ಟುಕೊಳ್ಳಿ.  ಈಗ ಅದೇ ಪಾತ್ರೆಯಲ್ಲಿ 1 ಪಲಾವ್ ಎಲೆ  3  ಏಲಕ್ಕಿ, 1 ಟೀಸ್ಪೂನ್ ಜೀರಿಗೆ ಸೇರಿಸಿ. ಮಸಾಲೆಗಳ ಪರಿಮಳ ಬರುವವರೆಗೂ ಚೆನ್ನಾಗಿ ಹುರಿಯಿರಿ. ಅದಕ್ಕೆ  ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, ¼ ಟೀಸ್ಪೂನ್ ಜೀರಿಗೆ ಪುಡಿ, 1 ಟೀಸ್ಪೂನ್ ಕೊತ್ತಂಬರಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ರುಬ್ಬಿಗೊಂಡಿರುವ ಪೇಸ್ಟ್​ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 

ಈಗ ಈ ಮಿಶ್ರಣಕ್ಕೆ  ¼ ಕಪ್ ಮೊಸರು ಸೇರಿಸಿ ಚೆನ್ನಾಗಿ ಬೇಯಿಸಿ. ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ ತಯಾರಿಸಿಕೊಂಡಿರುವ  ಮೆಣಸಿನಕಾಯಿಯನ್ನು ವರ್ಗಾಯಿಸಿ ಚೆನ್ನಾಗಿ ಕಲಸಿ. ಅದಕ್ಕೆ ¼ ಟೀಸ್ಪೂನ್ ಗರಂ ಮಸಾಲಾ, 1 ಟೀಸ್ಪೂನ್ ಕಸೂರಿ ಮೇಥಿ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿದರೆ ರುಚಿಕರವಾದ ಸ್ಟಫ್ಡ್ ಪನೀರ್ ಮೆಣಸಿನಕಾಯಿ ಸಬ್ಜಿ ರೆಡಿ. ಇದನ್ನು ಚಪಾತಿ, ರೋಟ್ಟಿ, ನಾನ್ ಜೊತೆ ಸವಿಯಬಹುದು. 
Published by:Sandhya M
First published: