• Home
  • »
  • News
  • »
  • lifestyle
  • »
  • Breakfast Recipe: ಈ ಬೇಳೆಗಳನ್ನು ಹಾಕಿ ಆರೋಗ್ಯಕರ ದೋಸೆ ಮನೆಯಲ್ಲಿಯೇ ಮಾಡಿ

Breakfast Recipe: ಈ ಬೇಳೆಗಳನ್ನು ಹಾಕಿ ಆರೋಗ್ಯಕರ ದೋಸೆ ಮನೆಯಲ್ಲಿಯೇ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Dal Dosa Recipe: ಈ ರೀತಿ ಆರೋಗ್ಯವಾಗಿರಲು ನಿಮಗೆ ಸಹಾಯ ಮಾಡಲು ಇಲ್ಲೊಂದು ತಿಂಡಿ ಇದ್ದು ಅದು ದೋಸೆ. ದೋಸೆ ಎಂದರೆ, ಮೂಗು ಮುರಿಯುವವರಿದ್ದಾರೆ. ಆದರೆ, ಈ ದೋಶೆ ಬಹಳ ವಿಭಿನ್ನ ಇದನ್ನು ಬೇಳೆ ಕಾಳು ಬಳಸಿ ಮಾಡಲಾಗುತ್ತದೆ.  

  • Share this:

ಇಡ್ಲಿ ಸಾಂಬಾರ್, ದೋಸೆ (Dosa) ಮತ್ತೆ ತೆಂಗಿನಕಾಯಿ ಚಟ್ನಿ ಅಥವಾ ಪೋಹಾ ಇವೆಲ್ಲವೂ ಭಾರತೀಯರು (Indian) ಇಷ್ಟಪಟ್ಟು ತಿನ್ನುವ ಬೆಳಗಿನ ಉಪಹಾರ. ಆದರೆ ಮಕ್ಕಳು ಹಾಗಲ್ಲ. ಅವರಿಗೆ ಪ್ರತಿ ತಿಂಡಿಗಳು ಆಗುವುದಿಲ್ಲ. ಅವರಿಗೆ ತಿಂಡಿ, ಊಟ ಮಾಡುವುದೇ ದೊಡ್ಡ ತಲೆನೋವಿನ ಸಂಗತಿ. ತಾಯಂದಿರು ಮಕ್ಕಳಿಗೆ ಆಹಾರ ತಿನ್ನುವ ಸಲುವಾಗಿ ವಿವಿಧ ಪದಾರ್ಥಗಳನ್ನು ಟ್ರೈ ಮಾಡುತ್ತಾರೆ. ಮಧ್ಯಾಹ್ನದ ಊಟದವರೆಗೆ (Kids) ಮಕ್ಕಳಿಗೆ ಆಕ್ಟಿವ್ ಆಗಿರುವಂತೆ ಮಾಡುವ ತಿಂಡಿ ಬಹಳ ಮುಖ್ಯವಾಗುತ್ತದೆ. ಅವರ ದೇಹಕ್ಕೆ ಹೆಚ್ಚು ಪೋಷಕಾಂಶಗಳಿರುವ ಆಹಾರ (food) ನೀಡುವುದು ಸವಾಲಿನ ಕೆಲಸ.  


ಒಂದೆಡೆ ಮಕ್ಕಳ ಚಿಂತೆಯಾದರೆ, ಆರೋಗ್ಯ ವಿಚಾರದಲ್ಲಿ ಸ್ವಲ್ಪ ಏರುಪೇರಾದರೆ ಸಾಕು ನಾವು ಆಹಾರದ ವಿಚಾರದಲ್ಲಿ ಗೊಂದಲಕ್ಕೀಡಾಗುತ್ತೇವೆ. ದೇಹದ ತೂಕ ಹೆಚ್ಚಾದರೆ ಊಟ ತಿಂಡಿ ಬಿಟ್ಟು ಬಿಡುತ್ತೇವೆ. ಅದರಲ್ಲೂ ಕೆಲವರಂತೂ ಬೆಳಗಿನ ತಿಂಡಿಯನ್ನು ತಿನ್ನುವುದೇ ಇಲ್ಲ. ಆದರೆ ನಮ್ಮ ದೇಹದ ಆರೋಗ್ಯದ ದೃಷ್ಟಿಯಿಂದ ಬೆಳಗಿನ ತಿಂಡಿ ಬಹಳ ಮುಖ್ಯವಾಗುತ್ತದೆ.


ಯಾವುದೇ ಕಾರಣಕ್ಕೂ ಅದನ್ನು ತಪ್ಪಿಸಬಾರದು. ತಿಂಡಿ ಪರಿಪೂರ್ಣವಾಗಿ ತಿನ್ನದಿದ್ದರೆ ಕೊನೆ ಪಕ್ಷ ದೇಹಕ್ಕೆ ಪೋಷಕಾಂಶಗಳನ್ನು ನೀಡುವ ಆಹಾರ ಪದಾರ್ಥಗಳನ್ನು ಸೇವಿಸುವುದು ಮುಖ್ಯವಾಗುತ್ತದೆ. ಈ ರೀತಿ ಆರೋಗ್ಯವಾಗಿರಲು ನಿಮಗೆ ಸಹಾಯ ಮಾಡಲು ಇಲ್ಲೊಂದು ತಿಂಡಿ ಇದ್ದು ಅದು ದೋಸೆ. ದೋಸೆ ಎಂದರೆ, ಮೂಗು ಮುರಿಯುವವರಿದ್ದಾರೆ. ಆದರೆ, ಈ ದೋಶೆ ಬಹಳ ವಿಭಿನ್ನ ಇದನ್ನು ಬೇಳೆ ಕಾಳು ಬಳಸಿ ಮಾಡಲಾಗುತ್ತದೆ.


ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು


ಇಟಾಲಿಯನ್ ಅಕ್ಕಿ - 1 ಕಪ್​


ಕಡಲೆ - 1/2 ಕಪ್


ಉದ್ದಿನ ಬೇಳೆ- 1/2 ಕಪ್


ಹೆಸರುಕಾಳು- 1/4 ಕಪ್


ತೊಗರಿ ಬೇಳೆ - 1/4 ಕಪ್


ಒಣ ಮೆಣಸಿನಕಾಯಿ – 6


ಕ್ಯಾರೆಟ್ - 1 1/2 ಕಪ್


ಹಸಿ ಮೆಣಸಿನಕಾಯಿ - 2


ಕರಿಬೇವಿನ ಎಲೆಗಳು – 5 ಎಸಳು


ಜೀರಿಗೆ - ½ ಚಮಚ


ಈರುಳ್ಳಿ 2


ಸ್ಪೆಷಲ್ ದೋಸೆ ಮಾಡುವ ವಿಧಾನ


ಮೇಲೆ ಕೊಟ್ಟಿರುವ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ, 2 ಬಾರಿ ತೊಳೆದುಕೊಳ್ಳಿ. ಅದನ್ನು ಚೆನ್ನಾಗಿ ತೊಳೆದ ನಂತರ 4 ಗಂಟೆಗಳ ಕಾಲ ನೆನೆಸಿಡಿ. 4 ಗಂಟೆಗಳ ನಂತರ ನೀರನ್ನು  ಸೋಸಿ, ನೀರು ಸೇರಿಸಿ ಬೇಳೆಕಾಳುಗಳನ್ನು ರುಬ್ಬಿಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಮತ್ತು ರುಬ್ಬಿಕೊಳ್ಳಿ. ಹಿಟ್ಟು ದಪ್ಪವಾಗಿರಬೇಕು. ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಬೇಕು.


ಇದನ್ನೂ ಓದಿ: ಪ್ರತಿದಿನ ಒಂದು ಕಪ್ ದ್ರಾಕ್ಷಿ ತಿಂದ್ರೆ ಸಾಕು ತೂಕ ಇಳಿಸೋದು ಸುಲಭವಾಗುತ್ತೆ


ಹಿಟ್ಟನ್ನು ರುಬ್ಬಿಕೊಂಡ ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ನಂತರ ಹಿಟ್ಟಿಗೆ ಕ್ಯಾರೆಟ್​, ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಜೀರಿಗೆ, ಈರುಳ್ಳಿ ಹಾಕಿ ಮಿಶ್ರಣ ಮಾಡಬೇಕು.  ಪದಾರ್ಥಗಳನ್ನು ಸೇರಿಸಿ ಮಿಶ್ರಣ ಮಾಡಿ ಉಪ್ಪು ಹಾಕಿ.



ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಪ್ಯಾಣ್​ ಇಟಟು, ಎಣ್ಣೆ ಹಚ್ಚಿ ಕಾಯಿಸಿ. ಕಾದ ನಂತರ ಅದಕ್ಕೆ ಹಿಟ್ಟು ಹಾಕಿ ದೋಸೆ ಮಾಡಿ. ಇದಕ್ಕೆ ತೆಂಗಿನಕಾಯಿ ಚಟ್ನಿ ಇದ್ದರೆ ಬಹಳ ಚೆನ್ನಾಗಿರುತ್ತದೆ.


ಧಾನ್ಯಗಳಲ್ಲಿ ಹೆಚ್ಚು ಆ್ಯಂಟಿ ಆಕ್ಸಿಡೆಂಟ್​ಗಳಿದ್ದು, ಅವು ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಧಾನ್ಯಗಳ ಸೇವನೆಯಿಂದ ಊರಿಯೂತ ಉಂಟು ಮಾಡುವ ತೊಂದರೆಗಳಿಂದ ಕಾಪಾಡುತ್ತದೆ. ಜೊತೆಗೆ ಅವುಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು ಮತ್ತು ಕಬ್ಬಿಣದಂತಹ ಖನಿಜಗಳನ್ನು ತುಂಬಿವೆ.


ಇದನ್ನೂ ಓದಿ: ಕೇಕ್​ ಉಳಿದು ಹೋದ್ರೆ ಚಿಂತೆ ಬಿಡಿ, ಈ ಟೇಸ್ಟಿ ರೆಸಿಪಿ ಮಾಡಿ


ಈ ಧಾನ್ಯಗಳು ಒಟ್ಟಾರೆಯಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹೃದಯ ಸಂಬಂಧಿಸಿದ ಆರೋಗ್ಯ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಬರದಂತೆ ರಕ್ಷಿಸುತ್ತದೆ. ಈ ಧಾನ್ಯಗಳಲ್ಲಿ ಕಂಡುಬರುವ ಬಿ ಜೀವಸತ್ವಗಳು ನಿಮ್ಮ ದೇಹವು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೆಳಗಿನ ಉಪಹಾರದಲ್ಲಿ ಧಾನ್ಯಗಳನ್ನು ಸೇರಿಸಿ.

Published by:Sandhya M
First published: