Breakfast Recipe: ಸೋಯಾ ಚಂಕ್ಸ್ ದೋಸೆ ಬಹಳ ಆರೋಗ್ಯಕರ, ಇಲ್ಲಿದೆ ರೆಸಿಪಿ

Soya Chunks Dosa Recipe: ಇದು ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಿಸಿ ಶುದ್ದೀಕರಣಗೊಳಿಸುತ್ತದೆ. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದವರಿಗೂ ಸೋಯಾ ಹೆಚ್ಚು ಪರಿಣಾಮಕಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತೀಯರ (South Indians) ಫೆವರೇಟ್‌ ತಿಂಡಿಗಳಲ್ಲಿ (Favorite Food) ಪ್ರಮುಖವಾದುದು ದೋಸೆ (Dose) ಮತ್ತು ಇಡ್ಲಿ (Idli). ಈ ಪೈಕಿ ಎರಡರಲ್ಲೂ ವೈರೆಟಿ ವೈರೆಟಿ ದೋಸೆ, ಇಡ್ಲಿಗಳಿವೆ. ಇನ್ನು ದೋಸೆ ವಿಚಾರಕ್ಕೆ ಬಂದ್ರೆ ಮಸಾಲೆ ದೋಸೆ (Masala Dose) ತುಂಬಾನೇ ಫೇಮಸ್. ಅದರಲ್ಲೂ ಮಸಾಲೆ ದೋಸೆ  masala Dose) ಅಂತ ಹೆಸರು ಕೇಳುತ್ತಿದ್ದಂತೆ ಆಹಾರ ಪ್ರಿಯರ ಬಾಯಲ್ಲಿ ನೀರೂರುವುದು ಗ್ಯಾರಂಟಿ! ಆದರೆ, ಸೋಯಾ ಚಂಕ್ಸ್​ ದೋಸೆ ಬಗ್ಗೆ ಕೇಳಿದ್ದೀರಾ? ಹೌದು, ಸೋಯಾ ಚಂಕ್ಸ್​ ಅನ್ನು ಹೆಚ್ಚಾಗಿ ನಾವು ಪಲಾವ್​ ಮಾಡುವಾಗ ಬಳಸುತ್ತೇವೆ , ಇಲ್ಲ ಅದರ ಬಿರಿಯಾನಿ ಮಾಡುತ್ತೇವೆ. ಆದರೆ ಅದರ ದೋಸೆ ಮಾಡುವುದು ಹೇಗೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ. 

ಸೋಯಾ ಚಂಕ್ಸ್ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಇದು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ತಾಮ್ರ, ಸತು, ಜೀವಸತ್ವಗಳು ಮತ್ತು ಸೆಲೆನಿಯಂನಲ್ಲಿ ಸಮೃದ್ಧವಾಗಿವೆ. ಅಲ್ಲದೇ, ಇದರಲ್ಲಿರುವ ಪೆಪ್ಟೈಡ್ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳ ವಿರುದ್ಧ ಹೋರಾಡುವಂತೆ ಶಕ್ತಿ ನೀಡುತ್ತದೆ. ಇನ್ನಿತರ ಪದಾರ್ಥಗಳಲ್ಲಿ ಲಭ್ಯವಿರದ ವಿಟಮಿನ್ ಮತ್ತು ಖನಿಜಾಂಶಗಳನ್ನೂ ಸೋಯಾ ಸೇವನೆಯಿಂದ ಪಡೆಯಬಹುದು. ಇದು ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಿಸಿ ಶುದ್ದೀಕರಣಗೊಳಿಸುತ್ತದೆ. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದವರಿಗೂ ಸೋಯಾ ಹೆಚ್ಚು ಪರಿಣಾಮಕಾರಿ

ಸೋಯಾ ಚಂಕ್ಸ್ ದೋಸೆ ಮಾಡಲು  ಬೇಕಾಗುವ ಪದಾರ್ಥಗಳು :

1 ಕಪ್ ಸೋಯಾ ಚಂಕ್ಸ್

1 ಟೊಮ್ಯಾಟೋ

2 ಒಣ ಮೆಣಸಿನಕಾಯಿ

1 ಇಂಚಿನ ಶುಂಠಿ

2 ಕಪ್ ನೀರು

1 ಟೀಸ್ಪೂನ್ ಉಪ್ಪು

1 ಕಪ್ ಗೋಧಿ ಹಿಟ್ಟು

ಕಾಲು ಕಪ್ ಅಕ್ಕಿ ಹಿಟ್ಟು

ಈರುಳ್ಳಿ 1

ಕ್ಯಾರೆಟ್ ಅರ್ಧ ಕಪ್ ತುರಿದುಕೊಂಡಿರಿ

ಕೊತ್ತಂಬರಿ ಸೊಪ್ಪು ಸ್ವಲ್ಪ

ಸೋಯಾ ಚಂಕ್ಸ್ ದೋಸೆ ಮಾಡುವ ವಿಧಾನ

ಮೊದಲು ಒಂದು ಬಾಣಲೆಯನ್ನು ತೆಗೆದುಕೊಳ್ಳಿ, ಅದಕ್ಕೆ  1 ಕಪ್ ಸೋಯಾ, 1 ಟೊಮ್ಯಾಟೋ, 2 ಒಣಮೆಣಸಿನಕಾಯಿ, 1 ಇಂಚಿನ ಶುಂಠಿ, 2 ಕಪ್ ನೀರು ಮತ್ತು 1 ಟೀಸ್ಪೂನ್ ಉಪ್ಪನ್ನು ಹಾಕಿ, 10 ನಿಮಿಷಗಳ ಕಾಲ ಮುಚ್ಚಿ ಚೆನ್ನಾಗಿ ಬೇಯಿಸಿ. ಎಲ್ಲಾ ಪದಾರ್ಥಗಳು ಬೆಂದ ನಂತರ ಅದನ್ನು ತಣ್ಣಗೆ ಮಾಡಿ. ನಂತರ ಟೊಮ್ಯಾಟೋ ಸಿಪ್ಪೆ ತೆಗೆದು, ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಹಾಗೆಯೇ ಸೋಯಾವನ್ನು ಸಹ ಪೇಸ್ಟ್​ ಮಾಡಿಕೊಳ್ಳಿ.




ಇದನ್ನೂ ಓದಿ: ಸೂಪರ್ ಪಲಾವ್​ ಸವಿಯೋಕೆ ಬೆಂಗಳೂರಿನ ಟಾಪ್ 5 ಸ್ಥಳಗಳೇ ಬೆಸ್ಟ್

ಈಗ ಒಂದು ಪಾತ್ರೆಯಲ್ಲಿ ಸೋಯಾ ಪೇಸ್ಟ್ ಹಾಕಿ ಅದಕ್ಕೆ  ಅದಕ್ಕೆ 1 ಕಪ್ ಗೋಧಿ ಹಿಟ್ಟು, ¾ ಕಪ್ ಅಕ್ಕಿ ಹಿಟ್ಟು, ಟೊಮ್ಯಾಟೋ ಪೇಸ್ಟ್ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ, ಅಗತ್ಯವಿರುವಂತೆ ನೀರು ಹಾಕಿ, ಚೆನ್ನಾಗಿ ಎಲ್ಲವನ್ನು ಮಿಶ್ರಣ ಮಾಡಿ.  ಈಗ ½ ಈರುಳ್ಳಿ, 1 ಕ್ಯಾರೆಟ್ ಮತ್ತು 2 ಚಮಚ ಕೊತ್ತಂಬರಿ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಹಿಟ್ಟು ಸಿದ್ಧವಾಗಿದೆ. 




ಇದನ್ನೂ ಓದಿ:ಬ್ರೇಕಪ್​ ಆದ ನಂತರ ಹುಡುಗಿಯರು ಈ 4 ಕೆಲಸಗಳನ್ನು ಮಾಡುತ್ತಾರಂತೆ

ಪ್ಯಾನ್ ತೆಗೆದುಕೊಂಡು ಎಣ್ಣೆ ಹಚ್ಚಿ, ಮಿಶ್ರಣವನ್ನು ರೊಟ್ಟಿ ಹಾಗೆಯೇ ತಟ್ಟಿ ಅಥವಾ ದೋಸೆಯ ರೀತಿ ಹಾಕಿ, ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ, ಸೋಯಾ ಚಂಕ್ಸ್ ದೋಸೆ ರೆಡಿ. 


Published by:Sandhya M
First published: