Breakfast Recipe: ಕೇವಲ 10 ನಿಮಿಷದಲ್ಲಿ ಮಾಡಿ ಅಕ್ಕಿ ಹಿಟ್ಟಿನ ಈರುಳ್ಳಿ ದೋಸೆ, ಇಲ್ಲಿದೆ ರೆಸಿಪಿ

Rice Flour Onion Dosa: ಮುಂಜಾನೆ ಉಪಾಹಾರಕ್ಕಾಗಿ ಅಥವಾ ಟಿಫಿನ್ ಬಾಕ್ಸ್‌ಗೆ ಸಹ ಅಕ್ಕಿ ಈರುಳ್ಳಿ ಹಿಟ್ಟಿನಿಂದ ತಯಾರಿಸಿದ ಆರೋಗ್ಯಕರ ದಿಢೀರ್​ ದೋಸೆ ಉತ್ತಮವಾಗಿದೆ. ಇತರ ಸಾಂಪ್ರದಾಯಿಕ ದಕ್ಷಿಣ ಭಾರತದ ದೋಸೆ ಪಾಕವಿಧಾನಕ್ಕಿಂತ ಇದು ಭಿನ್ನವಾಗಿದೆ,

ದೋಸೆ

ದೋಸೆ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆದರೆ, ಇನ್ನಿತರೆ ಭಕ್ಷ್ಯಗಳನ್ನು ಕಡಿಮೆ ಜನರು ಪ್ರಯತ್ನಿಸಿ ಮಾಡಿಕೊಳ್ಳುವುದುಂಟು. ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆಯೋ ಹಾಗೆಯೇ ಕೆಲವರಿಗೆ ದೋಸೆಯಲ್ಲಿ ವಿಭಿನ್ನವಾದದ್ದನ್ನ ಪ್ರಯತ್ನಿಸುವ ಆಸೆ ಇರುತ್ತದೆ. ದೋಸೆ ಎಂದರೆ ಎಲ್ಲರಿಗೂ ನೆನಪಾಗುವುದು ಖಾಲಿ ದೋಸೆ, ಮಸಾಲೆ ದೋಸೆ, ಸೆಟ್​ ದೋಸೆ ಹೀಗೆ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಅಕ್ಕಿ ಹಿಟ್ಟಿನ ಈರುಳ್ಳಿ ದೋಸೆಯ (Rice Flour Onion Dosa) ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.

ಮುಂಜಾನೆ ಉಪಾಹಾರಕ್ಕಾಗಿ ಅಥವಾ ಟಿಫಿನ್ ಬಾಕ್ಸ್‌ಗೆ ಸಹ ಅಕ್ಕಿ ಈರುಳ್ಳಿ ಹಿಟ್ಟಿನಿಂದ ತಯಾರಿಸಿದ ಆರೋಗ್ಯಕರ ದಿಢೀರ್​ ದೋಸೆ ಉತ್ತಮವಾಗಿದೆ. ಇತರ ಸಾಂಪ್ರದಾಯಿಕ ದಕ್ಷಿಣ ಭಾರತದ ದೋಸೆ ಪಾಕವಿಧಾನಕ್ಕಿಂತ ಇದು ಭಿನ್ನವಾಗಿದೆ, ಅಕ್ಕಿ ಈರುಳ್ಳಿ ದೋಸೆ ಮಾಡುವ ವಿಧಾನ ಜನಪ್ರಿಯ ರವಾ ದೋಸೆ ವಿಧಾನಕ್ಕೆ ಹೋಲುತ್ತದೆ, ಅದು ಒಂದೇ ವಿನ್ಯಾಸ ಮತ್ತು ಗರಿಗರಿಯಾದ ಮಟ್ಟವನ್ನು ಹೊಂದಿರುತ್ತದೆ. ರವಾ ದೋಸೆಯಲ್ಲಿ, ಮೈದಾ ಅಥವಾ ಎಲ್ಲಾ ತರಹದ ಹಿಟ್ಟನ್ನು ಸೇರಿಸಲಾಗುತ್ತದೆ ಮತ್ತು ಅಕ್ಕಿ ಹಿಟ್ಟಿನ ಈರುಳ್ಳಿ ದೋಸೆಯಲ್ಲಿ ಅಕ್ಕಿ ಹಿಟ್ಟು ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನೂ ಈ ಅಕ್ಕಿ ಈರುಳ್ಳಿ ದೋಸೆಯನ್ನು ಕೇವಲ 10 ನಿಮಿಷದಲ್ಲಿ ಮನೆಯಲ್ಲಿ ಇರುವ ಕೆಲವೇ ಪದಾರ್ಥಗಳನ್ನು ಬಳಸಿ ತಯಾರಿಸಬಹುದಾಗಿದೆ. ಈಗ ಮಕ್ಕಳಿಗೆ ಶಾಲೆ ಆರಂಭವಾಗಿದೆ ಎಲ್ಲವೂ ಬೆಳಗ್ಗೆ ಗಡಿಬಿಡಿಯಾಗುವುದರಿಂದ ಈ ಸಮಯದಲ್ಲಿ ನಿಮಗೆ ಈ ದೋಸೆ ಸಹಾಯ ಮಾಡುತ್ತದೆ. ಹಾಗಾದ್ರೆ ಅಕ್ಕಿ ಈರುಳ್ಳಿ ದೋಸೆ ಮಾಡುವುದು ಹೇಗೆ ಇಲ್ಲಿದೆ.

ಅಕ್ಕಿ ಹಿಟ್ಟಿನ ಈರುಳ್ಳಿ ದೋಸೆ ಮಾಡುವ ವಿಧಾನ

ಅಕ್ಕಿ ಹಿಟ್ಟು – 2 1 ಕಪ್

ನೀರು – ಅಗತ್ಯಕ್ಕೆ ತಕ್ಕಷ್ಟು

ಉಪ್ಪು- ರುಚಿಗೆ ತಕ್ಕಷ್ಟು

ಜೀರಿಗೆ ಪುಡಿ- 2 ಟೀ ಚಮಚ

ಈರುಳ್ಳಿ- 2 ರಿಂದ 3 ( ಸಣ್ಣದಾಗಿ ಹೆಚ್ಚಿಕೊಳ್ಳಿ)

ಹಸಿಮೆಣಸು – 3 ರಿಂದ 4 (ಸಣ್ಣದಾಗಿ ಹೆಚ್ಚಿಕೊಳ್ಳಿ)

ಇದನ್ನೂ ಓದಿ: ಪ್ರತಿದಿನ ರಾತ್ರಿ ಹೀಗೆ ಮಾಡಿದ್ರೆ ನಿದ್ರೆ ಸಮಸ್ಯೆಯೇ ಆಗಲ್ವಂತೆ, ನೀವ್ಯಾಕೆ ಟ್ರೈ ಮಾಡ್ಬಾರ್ದು?

ಅಕ್ಕಿ ಹಿಟ್ಟಿನ ಈರುಳ್ಳಿ ದೋಸೆ ಮಾಡುವ ವಿಧಾನ

ಮೊದಲು ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿ ಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಕಲಸಿ. ಇದನ್ನು ಕಲಸುವಾಗ ಹೆಚ್ಚು ಜಾಗರೂಕತೆಯಿಂದ ಕಲಸಬೇಕು. ಇದು ಬಹು ಬೇಗ ಗಂಟು ಗಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ನೀರನ್ನು ಸಹ ಎಚ್ಚರಿಕೆಯಿಂದ ಹಾಕಬೇಕಾಗುತ್ತದೆ. ಒಂದು ಬಾರಿ ಸರಿಯಾಗಿ ಗಂಟು ಉಂಟಾಗದೆ ಮಿಶ್ರಣವಾದ ಮೇಲೆ ಅದಕ್ಕೆ ಉಪ್ಪು, ಜೀರಿಗೆ ಪುಡಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ನೀವು ಒಮ್ಮೆ ಹಿಟ್ಟಿನ ರುಚಿ ನೋಡಿ ಅಗತ್ಯವಿದ್ದರೆ ಉಪ್ಪನ್ನ ಹಾಕಬಹುದು.

ನಂತರ ಆ ಮಿಶ್ರಣಕ್ಕೆ ಹೆಚ್ಚಿಕೊಂಡ ಈರುಳ್ಳಿ ಮತ್ತು ಹಸಿ ಮೆಣಸನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ. ಈರುಳ್ಳಿ ಎಷ್ಟು ಸಾಧ್ಯವೋ ಅಷ್ಟು ಸಣ್ಣದಾಗಿ ಹೆಚ್ಚಿರಬೇಕು. ಇನ್ನು ಅಗತ್ಯವಿದ್ದರೆ ನೀವು ಈ ಮಿಶ್ರಣಕ್ಕೆ ಸಾಸಿವೆ ಒಗ್ಗರಣೆಯನ್ನು ಸಹ ಹಾಕಬಹುದು ಅದು ವಿಭಿನ್ನವಾದ ರುಚಿ ನೀಡುತ್ತದೆ, ಅಲ್ಲದೆ ಸ್ವಲ್ಪ ಖಾರದ ಪುಡಿ ಅಥವಾ ಚಾಟ್​ ಮಸಾಲೆ ಸೇರಿಸಿದರೆ ಇನ್ನು ಹೆಚ್ಚಿನ ರುಚಿ ನೀಡುತ್ತದೆ.

ಇದನ್ನೂ ಓದಿ: ವಯಸ್ಸಿಗೆ ತಕ್ಕಂತೆ ನಿಮ್ಮ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಇಷ್ಟಿರಬೇಕಂತೆ

ಇನ್ನು ಇವೆಲ್ಲದರ ಮಿಶ್ರಣದ ಮಾಡಿದರೆ ಹಿಟ್ಟು ಸಿದ್ದವಾದಂತೆ. ಅದನ್ನು ಈಗ ಒಂದು ತವಾ ವನ್ನು ಕಾಯಿಸಿ ದೋಸೆ ಮಾಡಿ, ಕಾಯಿ ಅಥವಾ ಬೆಳ್ಳುಳ್ಳಿ ಚಟ್ನಿ ಜೊತೆ ನೀಡಿದರೆ ಟೇಸ್ಟ್ ಸೂಪರ್.
Published by:Sandhya M
First published: