Food Recipe: ರೆಸ್ಟೊರೆಂಟ್ ಶೈಲಿಯ ಪಿಜ್ಜಾವನ್ನು ಮನೆಯಲ್ಲಿಯೇ ತಯಾರಿಸಬೇಕಾ? ಇಲ್ಲಿದೆ ಸಿಂಪಲ್ ರೆಸಿಪಿ
ರೆಸ್ಟೊರೆಂಟ್ ಶೈಲಿಯ ಮೃದುವಾದ, ರುಚಿಕರ ಮತ್ತು ಸುವಾಸನೆಭರಿತ ಪಿಜ್ಜಾ ಮಾಡಲು ಅದರದ್ದೇ ಆದ ಕೆಲವು ನಿಯಮಗಳಿವೆ. ಹಾಗಂತ ಅದೇನು ಬ್ರಹ್ಮ ವಿದ್ಯೆಯಲ್ಲ, ನೀವು ಕೂಡ ಅದನ್ನು ಮಾಡಬಹುದು. ನಾವು ಇಲ್ಲಿ ಹೇಳಿರುವ ಸರಳ ವಿಧಾನಗಳನ್ನು ಅನುಸರಿಸಿ, ರೆಸ್ಟೊರೆಂಟ್ ಶೈಲಿಯ ಪಿಜ್ಜಾ ತಯಾರಿಸಿ.
ಪಿಜ್ಜಾ (Pizza) ತಿನ್ನಬೇಕು ಎನಿಸಿದಾಗಲೆಲ್ಲಾ ಮನೆಯಲ್ಲೇ ಪಿಜ್ಜಾ ಮಾಡಿಕೊಂಡು ತಿಂದರೆ ಚೆನ್ನಾಗಿರುತ್ತದೆ ಅಲ್ಲವೇ? ಹಿಟ್ಟು, ಉಪ್ಪು, ನೀರು ಮತ್ತು ಈಸ್ಟ್ – ಈ ನಾಲ್ಕು ಸಾಮಾಗ್ರಿಗಳು (Recipe) ಇದ್ದರೆ ಪಿಜ್ಜಾ ಹಿಟ್ಟು ಸಿದ್ಧವಾಗುತ್ತದೆ. ಜೊತೆಗೆ ನಮಗಿಷ್ಟದ ಟಾಪಿಂಗ್ಸ್ ಹಾಕಿದರಾಯಿತು. ಆದರೂ ರೆಸ್ಟೊರೆಂಟ್ (Restaurant) ರುಚಿ ಮನೆಯ ಪಿಜ್ಜಾಗೆ ಬರುವುದಿಲ್ಲ ಎನ್ನುತ್ತೀರಾ? ಹೌದು, ರೆಸ್ಟೊರೆಂಟ್ ಶೈಲಿಯ ಮೃದುವಾದ (Soft), ರುಚಿಕರ (Tasty) ಮತ್ತು ಸುವಾಸನೆಭರಿತ ಪಿಜ್ಜಾ ಮಾಡಲು ಅದರದ್ದೇ ಆದ ಕೆಲವು ನಿಯಮಗಳಿವೆ. ಹಾಗಂತ ಅದೇನು ಬ್ರಹ್ಮ ವಿದ್ಯೆಯಲ್ಲ, ನೀವು ಕೂಡ ಅದನ್ನು ಮಾಡಬಹುದು. ನಾವು ಇಲ್ಲಿ ಹೇಳಿರುವ ಸರಳ ವಿಧಾನಗಳನ್ನು ಅನುಸರಿಸಿ, ರೆಸ್ಟೊರೆಂಟ್ ಶೈಲಿಯ ಪಿಜ್ಜಾ ತಯಾರಿಸಿ.
ರೆಸ್ಟೊರೆಂಟ್ ಶೈಲಿಯ ಪಿಜ್ಜಾ ಮಾಡಲು 6 ಸರಳ ಟಿಪ್ಸ್
ಸರಿಯಾದ ಸಾಮಾಗ್ರಿಗಳು : ಪಿಜ್ಜಾ ಮಾಡಲು ಕೆಲವೇ ಕೆಲವು ಸಾಮಾಗ್ರಿಗಳು ಸಾಕು ನಿಜ. ಆದರೆ ಅವು ಅರ್ಹವಾಗಿರಬೇಕು. ಅಂದರೆ, ಮೃದುವಾದ ಪಿಜ್ಜಾ ಮಾಡಲು ಒಣಗಿದ ಸಕ್ರಿಯ ಈಸ್ಟ್, ಉತ್ತಮ ಗುಣಮಟ್ಟದ ಮೈದಾ ಮತ್ತು ತಣ್ಣಗಿನ ಯಾವುದೇ ಮಾಲಿನ್ಯ, ಉಪ್ಪು ಹಾಗೂ ಖನಿಜಗಳನ್ನು ಹೊಂದಿರದ ಫಿಲ್ಟರ್ ನೀರನ್ನೇ ಬಳಸಿ.
ಸರಿಯಾದ ಹಿಟ್ಟನ್ನು ಆರಿಸಿ ಪಿಜ್ಜಾ ತಯಾರಿಯಲ್ಲಿ ಹಿಟ್ಟು ಪ್ರಮುಖ ಸಾಮಾಗ್ರಿ. ಸಾಮಾನ್ಯ ಮೈದಾ ಹಿಟ್ಟಲ್ಲಿ ಪಿಜ್ಜಾ ಮಾಡಬಹುದು, ಆದರೆ ಟೈಪ್ 00 ಹಿಟ್ಟು, ಉತ್ತಮ ಗಿರಣಿ ದರ್ಜೆಯ ಹಿಟ್ಟನ್ನು ಬಳಸಿದರೆ ಪಿಜ್ಜಾ ಇನ್ನಷ್ಟು ಚೆನ್ನಾಗಿ ಆಗುತ್ತದೆ.
ನಾದಿದಷ್ಟು ಒಳ್ಳೆಯದು ಪಿಜ್ಜಾದ ರಚನೆ, ನೀವು ಅದರ ಹಿಟ್ಟನ್ನು ಯಾವ ಮಟ್ಟಿಗೆ ನಾದಿದ್ದೀರಿ ಎಂಬುವನ್ನು ಅವಲಂಬಿಸಿರುತ್ತದೆ. ಹಾಗಾಗಿ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ನೀವು ಎರಡೂ ಕೈಗಳಿಂದ ಸುಮಾರು 10 ನಿಮಿಷ ಹಿಟ್ಟು ನಾದಬೇಕು. ಹಿಟ್ಟು ಉಬ್ಬಿದೆಯೇ ಎಂದು ಬೆರಳಿನಿಂದ ಒತ್ತಿ ಪರೀಕ್ಷಿಸಿ. ಅದು ಒತ್ತಿದಾಗ ಹಿಂದಕ್ಕೆ ಬೌನ್ಸ್ ಆದರೆ ಸಿದ್ಧವಾಗಿದೆ ಎಂದರ್ಥ. ಇಲ್ಲವಾದರೆ ಇನ್ನೂ 2-3 ನಿಮಿಷ ಹಿಟ್ಟನ್ನು ನಾದಬೇಕು.
ಹಿಟ್ಟನ್ನು ‘ಕೋಲ್ಡ್ - ಪ್ರೂವ್’ ಮಾಡಿ ‘ಕೋಲ್ಡ್ ಪ್ರೂವಿಂಗ್’ ಎಂದರೆ, ಹಿಟ್ಟನ್ನು ತಯಾರಿಸಿದ ನಂತರ ಫ್ರಿಡ್ಜ್ನಲ್ಲಿ ಸಂಗ್ರಹಿಸುವುದು. ಈಸ್ಟ್ ಕಾರ್ಬೋಹೈಡ್ರೆಟ್ಗಳನ್ನು ಒಡೆಯಲು ಆರಂಭಿಸಿದಾಗ, ಅದರ ಪರಿಮಳ ಮತ್ತು ಬ್ರೌನಿಂಗ್ ಗುಣ ಇನ್ನಷ್ಟು ಹೆಚ್ಚುತ್ತದೆ. ನೀವು ಹಿಟ್ಟನ್ನು ಉಬ್ಬಲು ಇಟ್ಟ ಬೌಲ್ಗೆ ಬೆಣ್ಣೆ ಸವರಿ ಇಡುವುದನ್ನು ಮರೆಯಬೇಡಿ.
ಹಿಗ್ಗಿಸುವುದು ನಾದಿದ ಹಿಟ್ಟಿನ ಸಣ್ಣ ಉಂಡೆಯನ್ನು ತೆಗೆದುಕೊಂಡು, ಒಣ ಹಿಟ್ಟಿನ ಮೇಲ್ಮೈಯಲ್ಲಿ ಇರಿಸಿ, ಕೈಗಳಿಗೂ ಹಿಟ್ಟು ಸವರಿಕೊಂಡು ವೃತ್ತಾಕಾರಕ್ಕೆ ತಟ್ಟಲು ಆರಂಭಿಸಿ. ಬೆರಳಿನಿಂದ ಹಿಟ್ಟನ್ನು ಹೊರಭಾಗಕ್ಕೆ ತಳ್ಳುತ್ತಾ ಹಿಗ್ಗಿಸಿ. ನಿಮ್ಮ ಪಿಜ್ಜಾ ಬೇಸ್ 12 ರಿಂದ 16 ಇಂಚು ಅಗಲ ಇರಬೇಕು. ನಿಯಾಪೊಲಿಟಿನ್ ಶೈಲಿಯ ಪಿಜ್ಜಾಗಳು ಮಾತ್ರ ತೆಳುವಾಗಿರುತ್ತವೆ. ಅಂದರೆ ನೀವು ಅದನ್ನು ಬೆಳಕಿಗೆ ಹಿಡಿದರೆ ಅದರ ಮೂಲಕ ನೋಡಲು ಸಾಧ್ಯವಾಗುತ್ತದೆ . ಆದರೆ ಈ ರೀತಿಯ ಬೇಸ್ ತಯಾರಿಸುವಾಗ ಹರಿಯದಂತೆ ಜಾಗರೂಕತೆ ವಹಿಸಬೇಕು.
ಟಾಪಿಂಗ್ಸ್ ಬಗ್ಗೆ ಕಾಳಜಿ ಇರಲಿ ಪಿಜ್ಜಾಗೆ ಟೊಮ್ಯಾಟೋ ಸಾಸ್ ಅನ್ನು ಮಿತವಾಗಿ ಬಳಸಬೇಕು. ಇಲ್ಲವಾದಲ್ಲಿ ಪಿಜ್ಜಾ ಹಿಟ್ಟು ಒದ್ದೆಯಾಗಿ, ಓವೆನ್ನಲ್ಲಿ ಇಡಲು ಕಷ್ಟವಾಗುತ್ತದೆ. ಅವುಗಳ ತುದಿಯ ಮೇಲೆ ಸಾಸ್ ಅಥವಾ ಬೇರೆ ಪದಾರ್ಥಗಳನ್ನು ಹಾಕಬೇಡಿ. ತಾಜಾ ಸಾಮಾಗ್ರಿಗಳನ್ನು ಬಳಸಿ. ಪಿಜ್ಜಾಗೆ ಮಾಂಸವನ್ನು ಸೇರಿಸುವ ಮೊದಲು ಬೇಯಿಸಿಕೊಳ್ಳುವುದು ಉತ್ತಮ.
ಓವನ್ ನಲ್ಲಿ 500 ಡಿಗ್ರಿ ಸೆಲ್ಸಿಯಸ್ನಲ್ಲಿ ಪಿಜ್ಜಾ ಬೇಯಿಸಿ. ಇದು ಪಿಜ್ಜಾ ತಯಾರಿಸಲು ಪರಿಪೂರ್ಣ ತಾಪಮಾನವಾಗಿದೆ. ಈ ತಾಪಮಾನ ಪಡೆಯಲು ಮರದ ಪೋರ್ಟಬಲ್ ಅಥವಾ ಗ್ಯಾಸ್ ಒಲೆಯ ಓವೆನ್ ಉತ್ತಮ. ರೆಸ್ಟೊರೆಂಟ್ ಓವೆನ್ಗಳು ಭಿನ್ನವಾಗಿರುವ ಕಾರಣ, ಅಲ್ಲಿನ ಪಿಜ್ಜಾದ ರಚನೆ, ರುಚಿ ಮತ್ತು ಸುವಾಸನೆ ಇನ್ನಷ್ಟು ಚೆನ್ನಾಗಿರುತ್ತದೆ. ಈ ಟಿಪ್ಸ್ ಗಳನ್ನು ಬಳಸಿಕೊಂಡು ನೀವು ಸಂಪೂಣವಾಗಿ ರೆಸ್ಟೊರೆಂಟ್ ಶೈಲಿಯ ಪಿಜ್ಜಾವನ್ನು ಅಲ್ಲದಿದ್ದರೂ, ಅದನ್ನು ಬಹುಪಾಲು ಹೋಲುವ ಪಿಜ್ಜಾವನ್ನು ಖಂಡಿತಾ ತಯಾರಿಸಬಹುದು.
Published by:Ashwini Prabhu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ