Breakfast Recipe: ಇಡ್ಲಿ ಜೊತೆ ಕೇವಲ 15 ನಿಮಿಷದಲ್ಲಿ ಮಾಡಿ ರವೆ ವಡೆ, ಇಲ್ಲಿದೆ ರೆಸಿಪಿ

How to Prepare Rava Vada: ಇಡ್ಲಿ ಜೊತೆ ವಡೆ ಮಾಡಲು ಸಮಯ ಸಾಕಾಗಲ್ಲ. ಆದರೆ ನಾವು ಇವತ್ತು ಕೇವಲ 15 ನಿಮಿಷದಲ್ಲಿ ವಿಭಿನ್ನವಾದ ವಡೆ ಮಾಡುವುದನ್ನ ಹೇಳಿಕೊಡ್ತೀವಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಡ್ಲಿ (Idli) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬೆಳಗ್ಗೆಯ ಉಪಾಹಾರಕ್ಕೆ (breakfast)  ಆರೋಗ್ಯಕರವೆಂದೇ ಪರಿಗಣಿಸಿರುವ ಇಡ್ಲಿಯನ್ನು (Healthy Idli) ವಿಭಿನ್ನವಾಗಿ ಮಾಡುವುದು ಉಂಟು. ತಟ್ಟೆ ಇಡ್ಲಿ, ರವೆ ಇಡ್ಲಿ, ಪುಡಿ ಇಡ್ಲಿ, ಕಾಂಚಿಪುರಂ ಇಡ್ಲಿ ಹೀಗೆ ಅನೇಕ ತರಹದ ಇಡ್ಲಿಗಳನ್ನು (Varieties of Idli) ಮಾಡುತ್ತಾರೆ.ಹಾಗೆಯೇ ಇಡ್ಲಿ ಎಂದ ತಕ್ಷಣ ಅದರ ಜೊತೆಯಾಗಿ ನೆನಪಿಗೆ ಬರುವುದು ವಡೆ. ಇಡ್ಲಿ – ವಡೆ ಒಂದು ಜೋಡಿ ಪದದಂತೆ ಆಗಿದೆ. ಇದನ್ನು ಒಟ್ಟಿಗೆ ತಿಂದರೆ ಅದರ ರುಚಿಯೇ ಬೇರೆ. ಆದರೆ ಬೆಳಗ್ಗೆ ಇಡ್ಲಿ ಜೊತೆ ವಡೆ ಮಾಡಲು ಸಮಯ ಸಾಕಾಗಲ್ಲ. ಆದರೆ ನಾವು ಇವತ್ತು ಕೇವಲ 15 ನಿಮಿಷದಲ್ಲಿ ವಿಭಿನ್ನವಾದ ವಡೆ ಮಾಡುವುದನ್ನ ಹೇಳಿಕೊಡ್ತೀವಿ. ಆದರೆ ಇದು ಉದ್ದಿನ ವಡೆ ಅಲ್ಲ ರವೆ ವಡೆ (Rava Vada).

ಮಾಡಲು ಬೇಕಾಗುವ ಸಾಮಾಗ್ರಿಗಳು
½ ಟೀ ಸ್ಪೂನ್ ಉಪ್ಪು

1 ಟೀ ಸ್ಪೂನ್ ಎಣ್ಣೆ

1½ ಕಪ್ ರವೆ

1 ಟೀ ಸ್ಪೂನ್ ಜೀರಿಗೆ

½ ಟೀ ಸ್ಪೂನ್ ಮೆಣಸಿನ ಪುಡಿ

ಕರಿಬೇವಿನ ಎಲೆಗಳು 4 ರಿಂದ 5 ಎಲೆ (ಸಣ್ಣದಾಗಿ ಹೆಚ್ಚಿಕೊಳ್ಳಿ)

2 ಮೆಣಸಿನಕಾಯಿ (ಸಣ್ಣದಾಗಿ ಹೆಚ್ಚಿಕೊಳ್ಳಿ)

2 ಚಮಚ ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಕೊಚ್ಚಿಕೊಳ್ಳಿ)

2 ಟೀ ಸ್ಪೂನ್ ನಿಂಬೆ ರಸ

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ದಿನ ಉಪವಾಸ ಮಾಡಿದ್ರೆ ಎಷ್ಟೆಲ್ಲಾ ಲಾಭ ಇದೆ ನೋಡಿ

ರವೆ ವಡೆ ಮಾಡುವ ವಿಧಾನ

ಮೊದಲು ದೊಡ್ಡ ಪಾತ್ರೆ ತೆಗೆದುಕೊಳ್ಳಿ. ಅದಕ್ಕೆ 2 ಕಪ್ ನೀರು, ½ ಟೀ ಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಸುಮಾರು 2 ನಿಮಿಷಗಳ ನಂತರ ಅದು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ  1½ ಕಪ್ ರವಾ ಸೇರಿಸಿ, ನಿರಂತರವಾಗಿ ಬೆರೆಸಿ, ರವೆ ನೀರನ್ನು ಹೀರಿಕೊಂಡು ಗಟ್ಟಿಯಾಗುವವರೆಗೂ ಅದನ್ನು ಬೇಯಿಸಿ.

ಈಗ ಬೇಯಿಸಿದ ರವೆಯನ್ನು ದೊಡ್ಡ ಬಟ್ಟಲಿಗೆ ಹಾಕಿ, ಅದಕ್ಕೆ 1 ಟೀ ಸ್ಪೂನ್ ಜೀರಿಗೆ, ½ ಟೀ ಸ್ಪೂನ್ ಮೆಣಸಿನ ಪುಡಿ, ಹೆಚ್ಚಿಕೊಂಡಿರುವ ಕರಿಬೇವಿನ ಎಲೆ, ಹೆಚ್ಚಿಕೊಂಡಿರುವ 2 ಮೆಣಸಿನಕಾಯಿ, 2 ಟೀ ಸ್ಪೂನ್ ಕೊತ್ತಂಬರಿ ಮತ್ತು 2 ಟೀ ಸ್ಪೂನ್ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಕ್ಸ್ ಆಗುವಂತೆ ನೋಡಿಕೊಳ್ಳಿ.

ಈಗ ಕೈಗೆ ಎಣ್ಣೆ ಹಚ್ಚಿಕೊಂಡು, ಮಿಶ್ರಣವನ್ನು ಸ್ವಲ್ಪ ಉಂಡೆ ತೆಗೆದುಕೊಂಡು ವಡೆಯ ಆಕಾರಕ್ಕೆ ತಟ್ಟಿ. ಮತ್ತೊಂದು ಕಡೆ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಎಣ್ಣೆಯಲ್ಲಿ ವಡೆವನ್ನು ಡೀಪ್ ಫ್ರೈ ಮಾಡಿ, ಗೋಲ್ಡನ್ ಬ್ರೌನ್​ ಬಂದ ನಂತರ ತೆಗೆಯಿರಿ.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಯಂದು ಈ ಸ್ಪೆಷಲ್​ ರೆಸಿಪಿಗಳನ್ನು ಟ್ರೈ ಮಾಡಿ

ಇದನ್ನು ಇಡ್ಲಿ ಹಾಗೂ ಚಟ್ನಿ ಜೊತೆ ಸವಿದರೆ ಸೂಪರ್. ಅಲ್ಲದೇ ಇದನ್ನು ಸಂಜೆ ಸಹ ಸ್ಯಾಕ್ಸ್​ ರೀತಿ ಇದನ್ನು ಕಾಫಿ ಅಥವಾ ಟೀ ಜೊತೆ ಸವಿಯಬಹುದು.
Published by:Sandhya M
First published: