Raisin Water: ಹೊಳೆಯುವ ತ್ವಚೆಗಾಗಿ ಒಣದ್ರಾಕ್ಷಿ ನೀರನ್ನು ಹೇಗೆ ತಯಾರಿಸಿ ಬಳಸಬೇಕು?

ಒಣದ್ರಾಕ್ಷಿಯಲ್ಲಿರುವ ಈ ಎಲ್ಲಾ ಗುಣಗಳು ದೇಹಕ್ಕೆ ಮಾತ್ರ ಅಲ್ಲದೆ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ ನೀಡುತ್ತದೆ. ಚರ್ಮದ ವಿಷಯಕ್ಕೆ ಬಂದಾಗ ಒಣದ್ರಾಕ್ಷಿಗಳನ್ನು ಕೆಲವು ವಿಭಿನ್ನ ರೀತಿಯಲ್ಲಿ ಬಳಕೆ ಮಾಡುವುದು ಪ್ರಯೋಜನ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಒಣದ್ರಾಕ್ಷಿಗಳನ್ನು (Raisins) ವಿವಿಧ ರೀತಿಯ ಬೆರ್ರಿ ಹಣ್ಣುಗಳಿಂದ (Berry Fruits) ತಯಾರು ಮಾಡಲಾಗುತ್ತದೆ. ಅವುಗಳು ವಿಭಿನ್ನ ಗುಣಲಕ್ಷಣ ಹೊಂದಿವೆ. ಒಣದ್ರಾಕ್ಷಿಗಳು ಪ್ರೋಟೀನ್ (Protein) ಸೇರಿದಂತೆ ಇದು ಕಬ್ಬಿಣ ಮತ್ತು ಫೈಬರ್ ನಲ್ಲಿ (Fiber) ಸಮೃದ್ಧವಾಗಿದೆ. ಪ್ರತಿ ದಿನ ಒಣದ್ರಾಕ್ಷಿ ತಿಂದರೆ ವಿಟಮಿನ್ ಬಿ6, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ತಾಮ್ರದ ಸಂಪೂರ್ಣ ಡೋಸ್ ದೇಹಕ್ಕೆ ಸಿಗುತ್ತದೆ. ಈ ಸಿಹಿಯಾದ ಒಣ ಹಣ್ಣಿನಿಂದ ದೇಹವು ಆಂಟಿ-ಆಕ್ಸಿಡೆಂಟ್‌ ಸಹ ಪಡೆಯುತ್ತದೆ. ಇದು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದ ಕೂಡ ಪ್ರಯೋಜನ ಪಡೆಯುತ್ತದೆ. ಒಣದ್ರಾಕ್ಷಿಯಲ್ಲಿ ವಿಟಮಿನ್-ಇ ಕೂಡ ಇದೆ. ಮತ್ತು ಇದರ ಹೊರತಾಗಿ ಇದು ದೇಹದಲ್ಲಿ ಆರೋಗ್ಯಕರ ಕೊಬ್ಬನ್ನು ಹೆಚ್ಚಿಸುತ್ತದೆ.

    ಒಣದ್ರಾಕ್ಷಿಯಲ್ಲಿರುವ ಈ ಎಲ್ಲಾ ಗುಣಗಳು ದೇಹಕ್ಕೆ ಮಾತ್ರ ಅಲ್ಲದೆ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ ನೀಡುತ್ತದೆ. ಅದಾಗ್ಯೂ ಒಂದು ದಿನದಲ್ಲಿ ಸೀಮಿತ ಪ್ರಮಾಣದ ಒಣದ್ರಾಕ್ಷಿ ಸೇವನೆ ಸಾಧ್ಯ ಆಗಲ್ಲ. ಹಾಗಾಗಿ ಇದು ಚರ್ಮದ ವಿಷಯಕ್ಕೆ ಬಂದಾಗ ಒಣದ್ರಾಕ್ಷಿಗಳನ್ನು ಕೆಲವು ವಿಭಿನ್ನ ರೀತಿಯಲ್ಲಿ ಬಳಕೆ ಮಾಡುವುದು ಪ್ರಯೋಜನ ನೀಡುತ್ತದೆ.

    ಒಣದ್ರಾಕ್ಷಿ ನೀರನ್ನು ಹೇಗೆ ತಯಾರಿಸುವುದು?

    ಹೊಳೆಯುವ ಮತ್ತು ಆರೋಗ್ಯಕರ ಚರ್ಮಕ್ಕಾಗಿ ನೀವು ಒಣದ್ರಾಕ್ಷಿ ನೀರು ತಯಾರಿಸಿ ಬಳಕೆ ಮಾಡಬಹುದು. ಇದನ್ನು ಎಷ್ಟು ಬಾರಿ ಬಳಕೆ ಮಾಡಿದರೂ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ ಎಂಬ ಚಿಂತೆ ಇರಲ್ಲ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಒಣದ್ರಾಕ್ಷಿ ನೀರು ತಯಾರಿಸಲು ನಿಮಗೆ ಕನಿಷ್ಠ ನೂರು ಇಲ್ಲವೇ ಐವತ್ತು ಗ್ರಾಂ ಒಣದ್ರಾಕ್ಷಿ ಮತ್ತು ಎರಡು ಕಪ್ ನೀರು ಬೇಕು. ಮೊದಲು ಒಣದ್ರಾಕ್ಷಿಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು. ಒಣದ್ರಾಕ್ಷಿಯನ್ನು ಒಂದು ಪಾತ್ರೆಯಲ್ಲಿ ಇರಿಸಿ. ಅದಕ್ಕೆ ನೀರು ಸೇರಿಸಿ ಮತ್ತು ರಾತ್ರಿಯಿಡೀ ಹಾಗೇ ನೆನೆಸಿಡಿ.

    ಪ್ರತಿದಿನ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೀರು ಸೇವಿಸುವುದು ಜೀರ್ಣಕ್ರಿಯೆಗೆ ಸಂಬಂಧಪಟ್ಟ ತೊಂದರೆಗಳನ್ನು ದೂರ ಮಾಡುತ್ತದೆ. ಇದಲ್ಲದೆ ಒಣದ್ರಾಕ್ಷಿ ನೀರನ್ನು ತ್ವಚೆಗೆ ಹಲವು ರೀತಿಯಲ್ಲಿ ಬಳಕೆ ಮಾಡಬಹುದು.

    ಒಣದ್ರಾಕ್ಷಿ ವಾಟರ್ ಫೇಸ್ ಪ್ಯಾಕ್

    ಒಣದ್ರಾಕ್ಷಿ ನೀರಿನಲ್ಲಿ ಕೆಲವು ಹನಿ ಜೇನುತುಪ್ಪ ಮಿಶ್ರಣ ಮಾಡಿ. ಇದು ದಪ್ಪವಾಗಲು ಬೇಳೆ ಹಿಟ್ಟು ಅಥವಾ ಅಕ್ಕಿ ಹಿಟ್ಟು ಸೇರಿಸಿ. ಇವೆಲ್ಲವನ್ನು ಸೇರಿಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ.

    ಒಣ ತ್ವಚೆಗೆ ಈ ಫೇಸ್ ಪ್ಯಾಕ್ ತುಂಬಾ ಪ್ರಯೋಜನಕಾರಿ. ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ, ಅದರಲ್ಲಿ ಕೆಲವು ನಿಂಬೆ ಹನಿ ಸೇರಿಸಿ.

    ಮುಖದ ಟೋನರ್ ಆಗಿ ಬಳಸುವುದು

    ಒಣದ್ರಾಕ್ಷಿ ನೀರನ್ನು ಮುಖದ ಟೋನರ್ ಆಗಿ ಬಳಕೆ ಮಾಡಲು, ಅದಕ್ಕೆ ರೋಸ್ ವಾಟರ್ ಮತ್ತು ನಿಂಬೆ ಪಾನಕ ಸೇರಿಸಿ. ಈ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ. ರಾತ್ರಿ ಮಲಗುವ ಮುನ್ನ ಚರ್ಮದ ಮೇಲೆ ಸ್ಪ್ರೇ ಮಾಡಿ. ಸ್ವಲ್ಪ ಸಮಯ ಕಾಯಿರಿ. ಮತ್ತು ನಂತರ ಮುಖ ತೊಳೆಯಿರಿ. ಒಣದ್ರಾಕ್ಷಿಗಳ ಕಾರಣ ನೀರು ಜಿಗುಟಾದ ಕಾರಣ ಮುಖ ತೊಳೆಯುವುದು ತುಂಬಾ ಮುಖ್ಯ.

    ಚರ್ಮಕ್ಕೆ ಒಣದ್ರಾಕ್ಷಿ ನೀರು ಹಲವು ಪ್ರಯೋಜನ ನೀಡುತ್ತದೆ

    ಒಣದ್ರಾಕ್ಷಿ ನೀರು ಆಂಟಿಮೈಕ್ರೊಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ಚರ್ಮದ ಮೇಲೆ ಯಾವುದೇ ಸೋಂಕಿನ ಅಪಾಯ ಕಡಿಮೆ ಮಾಡುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಗುಣಗಳಿಂದ ಸಮೃದ್ಧವಾಗಿರುವ ಒಣದ್ರಾಕ್ಷಿ ನೀರು, ಚರ್ಮದ ಸತ್ತ ಜೀವಕೋಶ ತೆಗೆದು ಹಾಕುತ್ತದೆ. ಮತ್ತು ಮುಖದ ಹೊಳಪು ಹೆಚ್ಚಿಸುತ್ತದೆ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ವಿಟಮಿನ್ ಸಿ ಕಾರಣ, ಚರ್ಮದ ಕೋಶ ಸರಿಪಡಿಸುತ್ತದೆ. ಒಣದ್ರಾಕ್ಷಿ ನೀರು ಮುಖದ ಬಣ್ಣವನ್ನು ಹಗುರ ಮಾಡುತ್ತದೆ. ಈ ನೀರು ಮುಖ ಬಿಳಿಯಾಗಿಸಲು ಅಥವಾ ಕಲೆ ನಿವಾರಿಸಲು ಪರಿಣಾಮಕಾರಿ.
    Published by:renukadariyannavar
    First published: