ಶಿಕ್ಷಣ (Education) ಅಥವಾ ಕೆಲಸ (Job) ಅರಸಿ ಎಷ್ಟೋ ಜನರು ಮನೆಯಿಂದ ಹೊರಗೆ ಇರುತ್ತಾರೆ. ಮಹಾನಗರಗಳಲ್ಲಿ ಇಂದು ಹಲವು ಪೇಯಿಂಗ್ ಗೆಸ್ಟ್/ ಹಾಸ್ಟೆಲ್ಗಳಿವೆ (Hostel). ಆದರೆ ಅಲ್ಲಿ ಕೊಡುವ ಒಂದೇ ರೀತಿಯಲ್ಲಿ ತಿಂಡಿ ತಿಂದು ಬಹುತೇಕರಿಗೆ ಬೇಜಾರು ಆಗಿರುತ್ತದೆ. ನಾವೇ ಅಡುಗೆ ಮನೆಗೆ (Kitchen) ಹೋಗಿ ಮಾಡೋಣ ಅಂದ್ರೆ ಪಿಜಿ ಮಾಲೀಕರು (Paying Guest) ಅನುಮತಿ ಕೊಡಲ್ಲ. ಯಾವುದೇ ಅಡುಗೆ (Cooking) ಮಾಡಲು ಒಲೆ (Stove) ಮುಖ್ಯ. ಒಲೆಯ ರೂಪದ ಯಾವುದೇ ಸಾಧನ ಬೇಕೇ ಬೇಕು. ಇಂದು ನಾವು ನಿಮಗೆ ಒಲೆ ಬಳಸದೇ ರುಚಿಯಾದ ಅವಲಕ್ಕಿ (Poha Recipe) ಮಾಡುವ ವಿಧಾನ ಹೇಳುತ್ತಿದ್ದೇವೆ.
ಕೋವಿಡ್ (COVID 19) ಬಂದಾಗಿನಿಂದ ಬಹುತೇಕ ಜನರು ಬಿಸಿನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಸ್ಟೆಲ್ ಇರಲಿ ಅಥವಾ ಪಿಜಿ ಇರಲಿ ಬಿಸಿನೀರಿಗಾಗಿ ಕೆಟಲ್ನ್ನು ಜೊತೆಯಲ್ಲಿ ಇಟ್ಟುಕೊಂಡಿರುತ್ತಾರೆ.
ಈಗ ಇದೇ ಕೆಟಲ್ (Kettle) ಬಳಸಿ ರುಚಿಯಾದ ಅವಲಕ್ಕಿ ತಯಾರಿಸಬಹುದು. ಅದು ಹೇಗೆ ಎಂದು ಹೇಳುತ್ತಿದ್ದೇವೆ.
ಅವಲಕ್ಕಿ ಮಾಡುವ ವಿಧಾನ
ಅವಲಕ್ಕಿ: 100 ಗ್ರಾಂ
ಈರುಳ್ಳಿ: ಒಂದು (ಮಧ್ಯಮ ಗಾತ್ರದ್ದು)
ಕರಿಬೇವು: 4 ರಿಂದ 5 ದಳ
ಸಾಸವೆ ಮತ್ತು ಜೀರಿಗೆ: ಒಂದು ಟೀ ಸ್ಪೂನ್
ಹಸಿಮೆಣಸಿನಕಾಯಿ: 2 ರಿಂದ 3
ಎಣ್ಣೆ: ಎರಡು ಟೀ ಸ್ಪೂನ್
ನಿಂಬೆ ಹಣ್ಣು: ಮೂರು ಟೀ ಸ್ಪೂನ್
ಅರಿಶಿಣ: ಅರ್ಧ ಟೀ ಸ್ಪೂನ್
ಕೋತಂಬರಿ ಸೊಪ್ಪು
ಶೇಂಗಾ: ಮೂರು ಟೀ ಸ್ಪೂನ್ (ಹುರಿದುಕೊಂಡಿರುವ ಶೇಂಗಾ)
ಉಪ್ಪು ರುಚಿಗೆ ತಕ್ಕಷ್ಟು
ಕೆಟಲ್ನಲ್ಲಿ ಅವಲಕ್ಕಿ ಮಾಡುವ ವಿಧಾನ
*ಮೊದಲಿಗೆ ಈರುಳ್ಳಿ, ಹಸಿ ಮೆಣಸಿನಕಾಯಿ, ಕೋತಂಬರಿ ಸೊಪ್ಪು ತೊಳೆದುಕೊಂಡು ಸಣ್ಣದಾಗಿ ಕತ್ತರಿಸಿಕೊಳ್ಳಿ.
*ಮತ್ತೊಂದು ಕಡೆ ಅವಲಕ್ಕಿಯನ್ನು ಸ್ವಚ್ಚ ಮಾಡಿಕೊಂಡು ನೀರಿನಲ್ಲಿ ಎರಡರಿಂದ ಮೂರು ನಿಮಿಷ ನೆನಸಿಟ್ಟುಕೊಳ್ಳಿ.
*ಈಗ ಕೆಟಲ್ ಆನ್ ಮಾಡಿಕೊಂಡು ಎರಡು ಟೀ ಸ್ಪೂನ್ ಅಡುಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿ ಆಗ್ತಿದ್ದಂತೆ ಸಾಸವೆ ಮತ್ತು ಜೀರಿಗೆ ಸೇರಿಸಿ.
*ತದನಂತರ ಈರುಳ್ಳಿ ಸೇರಿಸಿ ಎರಡು ನಿಮಿಷ ಕೆಟಲ್ ಮುಚ್ಚಿ. ಈರುಳ್ಳಿಯ ಹಸಿ ವಾಸನೆ ಹೋಗುತ್ತಿದ್ದಂತೆ ಹಸಿಮೆಣಸಿನಕಾಯಿ, ಕರಿಬೇವು, ಶೇಂಗಾ, ಚಿಟಿಕೆ ಅರಿಶಿನ ಸೇರಿಸಿ.
*ತದನಂತರ ಮತ್ತೆ ಎರಡು ನಿಮಿಷ ಕೆಟಲ್ ಮುಚ್ಚಿ ಬೇಯಿಸಿ. ತದನಂತರ ಮುಚ್ಚಳ ತೆಗೆದು ಮಸಾಲೆಯನ್ನು ದೊಡ್ಡದಾದ ಪಾತ್ರೆಗೆ ಹಾಕಿಕೊಳ್ಳಿ.
*ಈಗ ಈ ಮಸಾಲೆಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆಹಣ್ಣಿನ ರಸ ಸೇರಿಸಿ.
*ಕೊನೆಯದಾಗಿ ಸಿದ್ಧವಾಗಿರುವ ಮಸಾಲೆಗೆ ನೆನಸಿಟ್ಟುಕೊಂಡಿರುವ ಅವಲಕ್ಕಿಯನ್ನು ಸೇರಿಸಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಈಗ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿದ್ರೆ ಸವಿಯಲು ರುಚಿಯಾದ ಪೋಹಾ / ಅವಲಕ್ಕಿ ಸಿದ್ಧ
ಮ್ಯಾಗಿ ಸಹ ಮಾಡಬಹುದು
ಕೆಟಲ್ ಬಳಸಿ ಮ್ಯಾಗಿ ಸಹ ಮಾಡಬಹುದು. ಕೆಟಲ್ ನಲ್ಲಿ ನೀರು ಕುದಿಯುತ್ತಿರುವಾಗ ಮ್ಯಾಗಿ ಬೇಯಿಸಬಹುದು. ನಂತರ ಮ್ಯಾಗಿ ಮಸಲಾ ಸೇರಿಸಿದ್ರೆ ಕೇವಲ ಐದೇ ನಿಮಿಷದಲ್ಲಿ ನಿಮ್ಮ ತಿಂಡಿ ಸಿದ್ಧವಾಗುತ್ತದೆ.
ಇದನ್ನೂ ಓದಿ: Morning Breakfast: ಉತ್ತಪ್ಪ ಮಾಡುವಾಗ ಈರುಳ್ಳಿ-ಟೊಮ್ಯಾಟೋ ಎಷ್ಟು ಬಳಸಬೇಕು?
ಇಂದು ಮಾರುಕಟ್ಟೆಯಲ್ಲಿ ಎಲ್ಲಾ ಮಸಾಲೆ, ತರಕಾರಿ ಮಿಶ್ರಿತ ರೆಡಿಮೇಡ್ ಉಪ್ಮಾ, ಮ್ಯಾಗಿ, ಅವಲಕ್ಕಿ ಸಿಗುತ್ತದೆ. ನಿಮ್ಮ ಬಳಿಯಲ್ಲಿ ಕೆಟಲ್ ಇದ್ರೆ ಐದೇ ನಿಮಿಷದಲ್ಲಿ ತಿಂಡಿ ಮಾಡಬಹುದು. ಈ ಪ್ಯಾಕಿಂಗ್ ಫುಡ್ಗೆ ಬಿಸಿ ನೀರು ಸೇರಿಸಿದ್ರೆ ತಿಂಡಿ ಸಿದ್ದವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ