Breakfast Recipe: ಗಡಿಬಿಡಿಯಲ್ಲೂ ಮಾಡ್ಬೋದು ಈ ಪಾಪಡ್​ ದೋಸೆ, ಟೇಸ್ಟ್​ ಮಾತ್ರ ಸೂಪರ್

Papad Dosa Recipe: ಫಟಾಫಟ್ ಅಂತ ರೆಡಿಯಾಗುವ, ರುಚಿಕರವಾದ ತಿಂಡಿಯನ್ನು ನಾವು ನಿಮಗೆ ಹೇಳಿಕೊಡ್ತೀವಿ. ಅದೇ ಪಾಪಡ್​ ದೋಸೆ. ಅರೇ, ಇದೇನಪ್ಪಾ ಅಂತ ತಲೆ ಕೆರೆದುಕೊಳ್ಳಬೇಡಿ. ಇದನ್ನು ಮಾಡುವ ವಿಧಾನವನ್ನು ನಾವು ನಿಮಗೆ ತೋರಿಸ್ತೀವಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗ್ಗೆ (Morning) ಎದ್ದು ತಿಂಡಿ (Breakfast) ಅಡುಗೆ ಮಾಡುವುದು ಸುಲಭದ ಮಾತಲ್ಲ. ದಿನಕ್ಕೊಂದು ತಿಂಡಿ ಹುಡುಕುವುದು ಕಷ್ಟ. ಅದರಲ್ಲೂ ಆಫೀಸ್​ಗೆ (Office)  ಲೇಟ್​ ಆದಾಗ ಏನು ಮಾಡಬೇಕು ಎಂಬುದರ ಬಗ್ಗೆ ತಲೆ ಓಡುವುದಿಲ್ಲ. ಕೇವಲ ಒಬ್ಬರೇ ಇದ್ದರೆ ಹೊರಗಡೆ ತಿಂದು ಹೋಗಬಹುದು. ಆದರೆ ಮನೆಯಲ್ಲಿ ಜನ ಇದ್ದಾಗ, ಅದರಲ್ಲೂ ಮಕ್ಕಳಿದ್ದಾಗ (Kids) ತಿಂಡಿ ಮಾಡದೇ ಬೇರೆ ವಿಧಿ ಇರುವುದಿಲ್ಲ. ಬ್ರೇಕ್‌ಫಾಸ್ಟ್‌ ಮಿಸ್ ಮಾಡಲು ಸಾಧ್ಯವಿಲ್ಲ. ಆದರೆ ಗಂಟೆ ಗಂಟಲೆ ಕುಳಿತು ತಿಂಡಿ ಮಾಡುವುದಕ್ಕೆ ಆಗುವುದಿಲ್ಲ ಎಂದಾಗ ಚಿಂತೆ ಮಾಡಬಾರದು. ಫಟಾಫಟ್ ಅಂತ ರೆಡಿಯಾಗುವ, ರುಚಿಕರವಾದ ತಿಂಡಿಯನ್ನು ನಾವು ನಿಮಗೆ ಹೇಳಿಕೊಡ್ತೀವಿ. ಅದೇ ಪಾಪಡ್​ ದೋಸೆ (Papad Dosa). ಅರೇ, ಇದೇನಪ್ಪಾ ಅಂತ ತಲೆ ಕೆರೆದುಕೊಳ್ಳಬೇಡಿ. ಇದನ್ನು ಮಾಡುವ ವಿಧಾನವನ್ನು ನಾವು ನಿಮಗೆ ತೋರಿಸ್ತೀವಿ.

ದಕ್ಷಿಣ ಭಾರತದಲ್ಲಿ(South India) ವಿಭಿನ್ನ ರೀತಿಯ ತಿಂಡಿ(Breakfast) ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಒಂದೊಂದು ಹೆಚ್ಚು ವಿಭಿನ್ನವಾಗಿರುತ್ತದೆ.  ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆದರೆ, ಇನ್ನಿತರೆ ಭಕ್ಷ್ಯಗಳನ್ನು ಕಡಿಮೆ ಜನರು ಪ್ರಯತ್ನಿಸಿ ಮಾಡಿಕೊಳ್ಳುವುದುಂಟು. ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆಯೋ ಹಾಗೆಯೇ ಕೆಲವರಿಗೆ ದೋಸೆಯಲ್ಲಿ ವಿಭಿನ್ನವಾದದ್ದನ್ನ ಪ್ರಯತ್ನಿಸುವ ಆಸೆ ಇರುತ್ತದೆ. ದೋಸೆ ಎಂದರೆ ಎಲ್ಲರಿಗೂ ನೆನಪಾಗುವುದು ಖಾಲಿ ದೋಸೆ, ಮಸಾಲೆ ದೋಸೆ, ಸೆಟ್​ ದೋಸೆ ಹೀಗೆ. ಈ ದೋಸೆ ಸಹ ಬಹಳ ಡಿಫರೆಂಟ್​.

ದನ್ನೂ ಓದಿ: ಅಂಡರ್ ಆರ್ಮ್ ವಿಚಾರದಲ್ಲಿ ಈ ತಪ್ಪು ಮಾಡ್ತಿದ್ರೆ ಈಗ್ಲೇ ನಿಲ್ಲಿಸಿ

ಪಾಪಡ್​ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು
ಹಪ್ಪಳ-  10 ರಿಂದ 12
ಹಸಿಮೆಣಸಿನಕಾಯಿ - ಮೂರು
ಈರುಳ್ಳಿ - ಒಂದು
ಕ್ಯಾರೆಟ್ - ಒಂದು
ನೀರು ಅಗತ್ಯಕ್ಕೆ ತಕ್ಕಷ್ಟು
ಉಪ್ಪು ರುಚಿಗೆ ತಕ್ಕಷ್ಟು

 ಪಾಪಡ್​ ದೋಸೆ ಮಾಡುವ ವಿಧಾನ:

ಮೊದಲು ಹಪ್ಪಳವನ್ನು ಸಣ್ಣದಾಗಿ ಕತ್ತರಿಸಿ ಒಂದು ಬೌಲ್‌ಗೆ ಹಾಕಿ ನೀರು ಹಾಕಿ ನೆನೆಸಿ ಇಡಿ. ಸುಮಾರು ಹತ್ತು ನಿಮಿಷದ ನಂತರ  ಹಪ್ಪಳವನ್ನು ನೀರಿನಿಂದ ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.ನುಣ್ಣಗೆ ಚೆನ್ನಾಗಿ ಪೇಸ್ಟ್​ ಮಾಡಿಕೊಳ್ಳಿ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆ ಹಿಟ್ಟಿನ ರೀತಿ ತಯಾರಿಸಿಕೊಳ್ಳಿ.

ಈಗ ಈ ಹಿಟ್ಟಿಗೆ  ಸಣ್ಣಗೆ ಈರುಳ್ಳಿ ಕತ್ತರಿಸಿ ಹಾಕಿ ಮತ್ತು ಕ್ಯಾರೆಟ್‌ ತುರಿದು ಹಾಕಿ ಮಿಶ್ರಣ ಮಾಡಿ. ಈಗ ಅದಕ್ಕೆ ಹಸಿಮೆಣಸಿನಕಾಯಿಯನ್ನು ಸಹ ಸೇರಿಸಿ ಮಿಕ್ಸ್ ಮಾಡಿ.  ಸದ್ಯ ಪಾಪಡ್​ ದೋಸೆ ಹಿಟ್ಟಿನ ಮಿಶ್ರಣ ಸಿದ್ದವಾಗಿದೆ.

ಇದನ್ನೂ ಓದಿ: ಗರ್ಭಿಣಿಯರು ಮೊದಲ ಮೂರು ತಿಂಗಳು ಎಷ್ಟು ಕಾಳಜಿವಹಿಸಿದ್ರೂ ಸಾಲದು, ಡಾಕ್ಟರ್​ ಹೇಳೊದೇನು ಕೇಳಿ

ಒಂದು ಪ್ಯಾನ್​ ತೆಗೆದುಕೊಂಡು ಎಣ್ಣೆ ಹಚ್ಚಿ ಬಿಡಿ. ಪ್ಯಾನ್​ ಕಾದ ನಂತರ ಅದಕ್ಕೆ ದೋಸೆ ಹಿಟ್ಟನ್ನು ಹಾಕಿ, ದೋಸೆ ಮಾಡಿದರೆ ಗರಿಗರಿಯಾದ ಪಾಪಡ್​ ದೋಸೆ ರೆಡಿ. ಇದನ್ನು ಸಾಂಬಾರ್ ಮತ್ತು ಕಾಯಿ ಚಟ್ನಿ ಜೊತೆ ಸವಿಯಬಹುದು.
Published by:Sandhya M
First published: