Breakfast Recipe: ಬೆಳಗಿನ ತಿಂಡಿಗೆ ಸ್ಪೆಷಲ್​ ಈರುಳ್ಳಿ ಪರೋಟ ರೆಸಿಪಿ

Onion Paratha Recipe: ಪರೋಟಗಳಲ್ಲಿ ಸಹ ಹಲವಾರು ವಿಧಗಳಿದೆ. ಆಲೂ ಪರೋಟ, ಮಲಬಾರ್ ಪರೋಟ, ಮೂಲಂಗಿ ಪರೋಟ ಹೀಗೆ. ಆದರೆ ಸಾಮಾನ್ಯವಾಗಿ ಹೆಚ್ಚಿನ ಜನರು ಈರುಳ್ಳಿ ಪರೋಟ (Onion Paratha)  ಬಗ್ಗೆ ಕೇಳಿರುವುದಿಲ್ಲ. ಅದನ್ನು ಮಾಡುವುದು ಹೇಗೆ ಎಂಬುದು ಸಹ ತಿಳಿದಿರುವುದಿಲ್ಲ. ನೀವು ಅಂದುಕೊಂಡಂತೆ ಈರುಳ್ಳಿ ಪರೋಟ ಮಾಡುವುದು ಕಷ್ಟಕರವಲ್ಲ. ಹಾಗಾದ್ರೆ ಈರುಳ್ಳಿ ಪರೋಟ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಈರುಳ್ಳಿ ಪರೋಟ

ಈರುಳ್ಳಿ ಪರೋಟ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆದರೆ, ಇನ್ನಿತರೆ ಭಕ್ಷ್ಯಗಳನ್ನು ಕಡಿಮೆ ಜನರು ಪ್ರಯತ್ನಿಸಿ ಮಾಡಿಕೊಳ್ಳುವುದುಂಟು. ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆ. ಕೆಲವೊಮ್ಮೆ ನಮಗೆ ಉತ್ತರ ಭಾರತೀಯ ಶೈಲಿಯ ತಿಂಡಿಗಳು ಸಹ ಇಷ್ಟವಾಗುತ್ತದೆ. ಅದರಲ್ಲೂ ಪರೋಟ(Paratha) ಎಲ್ಲರ ನೆಚ್ಚಿನ ತಿಂಡಿಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಪರೋಟಗಳಲ್ಲಿ ಸಹ ಹಲವಾರು ವಿಧಗಳಿದೆ. ಆಲೂ ಪರೋಟ, ಮಲಬಾರ್ ಪರೋಟ, ಮೂಲಂಗಿ ಪರೋಟ ಹೀಗೆ. ಆದರೆ ಸಾಮಾನ್ಯವಾಗಿ ಹೆಚ್ಚಿನ ಜನರು ಈರುಳ್ಳಿ ಪರೋಟ (Onion Paratha)  ಬಗ್ಗೆ ಕೇಳಿರುವುದಿಲ್ಲ. ಅದನ್ನು ಮಾಡುವುದು ಹೇಗೆ ಎಂಬುದು ಸಹ ತಿಳಿದಿರುವುದಿಲ್ಲ. ನೀವು ಅಂದುಕೊಂಡಂತೆ ಈರುಳ್ಳಿ ಪರೋಟ ಮಾಡುವುದು ಕಷ್ಟಕರವಲ್ಲ. ಹಾಗಾದ್ರೆ ಈರುಳ್ಳಿ ಪರೋಟ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಈರುಳ್ಳಿ ಪರೋಟಾ ಮಾಡಲು ಬೇಕಾಗುವ ಸಾಮಗ್ರಿಗಳು:
ಈರುಳ್ಳಿ – 2 ಕಪ್ (ಸಣ್ಣದಾಗಿ ಹೆಚ್ಚಿಕೊಂಡಿರಿ)
ಈರುಳ್ಳಿ – 1
ಬೆಳ್ಳುಳ್ಳಿ ಪೇಸ್ಟ್ – 3 ಚಮಚ
ಜೀರಿಗೆ ಪುಡಿ – 1 ಚಮಚ
ಗರಮ್ ಮಸಾಲಾ -1 ಚಮಚ

ಇದನ್ನೂ ಓದಿ: ಆರೋಗ್ಯಕ್ಕೂ ಉತ್ತಮ ಈ ಮಿಕ್ಸ್ ತರಕಾರಿ ದೋಸೆ - ನೀವೂ ಟ್ರೈ ಮಾಡಿ

ಕಾಳುಮೆಣಸು ಪುಡಿ- 1 ಚಮಚ
ದನಿಯಾ ಪುಡಿ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಗೋಧಿ ಹಿಟ್ಟು- 1 ಕಪ್ ಅರಿಶಿನ ಪುಡಿ- ಸ್ವಲ್ಪ
ಅಡುಗೆ ಎಣ್ಣೆ ಅಥವಾ ತುಪ್ಪಸ್ವಲ್ಪ

ಈರುಳ್ಳಿ ಪರೋಟ ಮಾಡುವ ವಿಧಾನ

ಮೊದಲಿಗೆ 3 ರಿಂದ 4 ಈರುಳ್ಳಿಯನ್ನು ಚನ್ನಾಗಿ ತೊಳೆದುಕೊಂಡು ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಅದಕ್ಕೆ ಈರುಳ್ಳಿ ಹಾಕಿ ಹುರಿಯಿರಿ.

ಈರುಳ್ಳಿ ಕಂದು ಬಣ್ಣಕ್ಕೆ ಬಂದಾಗ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಗೋಧಿ ಹಿಟ್ಟನ್ನು ಹಾಕಿ ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ.

ಅಗಲವಾಗಿ ಇದನ್ನು ಲಟ್ಟಿಸಿಕೊಳ್ಳಿ. ಅದರ ಮಧ್ಯಕ್ಕೆ ಬೇಯಿಸಿದ ಮಿಶ್ರಣವನ್ನು ಇಡಿತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿ.

ಇದನ್ನೂ ಓದಿ:  ಒಂದೇ ರೀತಿ ಇಡ್ಲಿ ತಿನ್ನೋದು ಸಾಕು ಈ ಪಾಲಕ್ ಇಡ್ಲಿ ಎಷ್ಟು ರುಚಿಕರ ನೋಡಿ

ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ.ಪರೋಟಾವನ್ನು ಬಿಸಿಯಾಗಿರುವ ಪ್ಯಾನ್ಗೆ ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿದರೆ ಈರುಳ್ಳಿ ಪರೋಟ ರೆಡಿ.
Published by:Sandhya M
First published: