Chutney Recipe: ಹೋಟೆಲ್​ ಸ್ಟೈಲ್​ ಈರುಳ್ಳಿ ಚಟ್ನಿ ರೆಸಿಪಿ ಟ್ರೈ ಮಾಡಿ

Onion Chutney Recipe: ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆ. ಇನ್ನು ಇಲ್ಲಿ ಚಪಾತಿ, ರೊಟ್ಟಿಯ ಜೊತೆ ಪಲ್ಯ, ಚಟ್ನಿ ಇರಲೇಬೇಕು. ಹಾಗಾಗಿ ಇವತ್ತು ರುಚಿಕರ ಈರುಳ್ಳಿ ಚಟ್ನಿ ಮಾಡುವ ವಿಧಾನ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ (South Indian) ಭಕ್ಷ್ಯಗಳು  (Foods) ವಿಭಿನ್ನ ಪಾಕ ಪದ್ಧತಿಯನ್ನು (Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ  (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆ. ಇನ್ನು ಇಲ್ಲಿ ಚಪಾತಿ, ರೊಟ್ಟಿಯ ಜೊತೆ ಪಲ್ಯ, ಚಟ್ನಿ ಇರಲೇಬೇಕು. ಹಾಗಾಗಿ ಇವತ್ತು ರುಚಿಕರ ಈರುಳ್ಳಿ ಚಟ್ನಿ (Onion Chutney) ಮಾಡುವ ವಿಧಾನ ಇಲ್ಲಿದೆ.

ಈರುಳ್ಳಿ ಚಟ್ನಿ ಮಾಡಲು ಬೇಕಾಗುವ ವಿಧಾನ

1 ಕಪ್ ಕಾಯಿತುರಿ

ಇದನ್ನೂ ಓದಿ: ರುಚಿ ರುಚಿಯಾದ ಮಂಗಳೂರು ಬನ್ಸ್ ಮಾಡುವ ಸುಲಭ ವಿಧಾನ ಇಲ್ಲಿದೆ

1/4 ಸಣ್ಣ ಈರುಳ್ಳಿ (ಹೆಚ್ಚಿಕೊಳ್ಳಿ)

3 ರಿಂದ 4 ಹಸಿರು ಮೆಣಸಿನಕಾಯಿ

ಉಪ್ಪು (ರುಚಿಗೆ ತಕ್ಕಷ್ಟು ಉಪ್ಪು)

ಹುಣಸೆಹಣ್ಣು ನೀರಿನಲ್ಲಿ ನೆನಸಿಡಿ

ಸ್ವಲ್ಪ ಕೊತ್ತಂಬರಿ ಸೊಪ್ಪು

ಸ್ವಲ್ಪ ಬೆಲ್ಲ

1/2 ಕಪ್ ನೀರು

ಒಗ್ಗರಣೆಗೆ

1 ಟೇಬಲ್ ಚಮಚ ಎಣ್ಣೆ

ಅರ್ಧ ಟೇಬಲ್ ಚಮಚ ಸಾಸಿವೆ

ಇಂಗು

6 ಕರಿ ಬೇವಿನ ಎಲೆಗಳು

ಈರುಳ್ಳಿ-ಕಾಯಿಚಟ್ನಿ ಮಾಡುವ ವಿಧಾನ

ಮಿಕ್ಸರಿಗೆ ಕಾಯಿ, ಈರುಳ್ಳಿ,ಉಪ್ಪು, ಹಸಿರುಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಬೆಲ್ಲ, ಹುಣಸೆಹಣ್ಣು ಜೊತೆಗೆ ನೆನಸಿಟ್ಟ ನೀರನ್ನು ಹಾಕಿ ಮತ್ತು 1/4 ಕಪ್ ನೀರನ್ನು ಹಾಕಿ. ಅದನ್ನು ಸಣ್ಣಗೆ ರುಬ್ಬಿ.

ಇದನ್ನೂ ಓದಿ: ಬೆಳಗಿನ ತಿಂಡಿಗೆ ಕೇರಳ ಸ್ಟೈಲ್ ಪುಟ್ಟು ಟ್ರೈ ಮಾಡಿ

ಬೇಕಾದಲ್ಲಿ ಮತ್ತೆ ನೀರನ್ನು ಹಾಕಿ ಚಟ್ನಿಯ ಹದಕ್ಕೆ ತಿರುವಿ. ಚಟ್ನಿ ಈಗ ರೆಡಿ. ಒಂದು ಪಾತ್ರೆಗೆ ತೆಗೆದು ಒಗ್ಗರಣೆ ಹಾಕಿದರೆ ಸವಿಯಲು ಸಿದ್ದ.ಒಗ್ಗರಣೆಗೆ ಒಂದು ಸೌಟಿಗೆ ಚಮಚ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಮೇಲೆ ಸಾಸಿವೆ, ಇಂಗು ಹಾಕಿ. ಸಾಸಿವೆ ಚಟಗುಟ್ಟಿದ ಮೇಲೆ ಒಲೆ ಆರಿಸಿ ಕರಿಬೇವನ್ನು ಹಾಕಿ. ಇದನ್ನು ಚಟ್ನಿಗೆ ಹಾಕಿ ಮಿಕ್ಸ್ ಮಾಡಿ.
Published by:Sandhya M
First published: