Breakfast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಓಟ್ಸ್​ ಉಪ್ಪಿಟ್ಟು ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Oats Upma Recipe: ಅನೇಕ ಮನೆಗಳಲ್ಲಿ ಉಪ್ಪಿಟ್ಟು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮುಖ್ಯವಾಗಿ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ. ಆದರೆ ಮಕ್ಕಳಿಗೆ ಉಪ್ಪಿಟ್ಟು ಅಂದರೆ ಇಷ್ಟವಾಗುವುದಿಲ್ಲ. ಆದರೆ ಅದನ್ನು ಮಾಡುವ ಹಲವಾರು ವಿಧಾನಗಳಿಗೆ.

  • Share this:

ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ.


ಅನೇಕ ಮನೆಗಳಲ್ಲಿ ಉಪ್ಪಿಟ್ಟು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮುಖ್ಯವಾಗಿ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ. ಆದರೆ ಮಕ್ಕಳಿಗೆ ಉಪ್ಪಿಟ್ಟು ಅಂದರೆ ಇಷ್ಟವಾಗುವುದಿಲ್ಲ. ಆದರೆ ಅದನ್ನು ಮಾಡುವ ಹಲವಾರು ವಿಧಾನಗಳಿಗೆ. ಉಪ್ಪಿಟ್ಟಿನಲ್ಲಿ ಸಹ ವೆರೈಟಿ ಇದೆ. ಸಬ್ಬಕ್ಕಿ ಉಪ್ಪಿಟ್ಟು, ಓಟ್ಸ್ ಒಪ್ಪಿಟ್ಟು, ಹೀಗೆ. ಅದರಲ್ಲೂ ಹೆಚ್ಚು ಪ್ರಸಿದ್ದವಾದ ವಿಧ ಎಂದರೆ ಓಟ್ಸ್ ಉಪ್ಪಿಟ್ಟು​. ಹುಳಿ ಹುಳಿ ಖಾರ ಖಾರ ರುಚಿಯಾಗಿರುವ ಈ ಉಪ್ಪಿಟ್ಟು ಅಂದ್ರೆ ಮಕ್ಕಳಿಗೂ ಇಷ್ಟ. ಅಲ್ಲದೇ ಇದು ತೂಕ ಇಳಿಸಲು ಸಹ ಸಹಕಾರಿ. ಹಾಗಾದ್ರೆ ಕೇವಲ 10 ನಿಮಿಷದಲ್ಲಿ ಓಟ್ಸ್ ಉಪ್ಪಿಟ್ಟು ಮಾಡುವುದು ಹೇಗೆ ಎಂಬುದು ಇಲ್ಲಿದೆ.


ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡಿ ಬಿಸಿಬಿಸಿ ಶಾವಿಗೆ ಉಪ್ಪಿಟ್ಟು


ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳು


  1. 2 ಕಪ್ ಓಟ್ಸ್​

  2. 3 ಕಪ್ ನೀರು

  3. 1/2 ಟೀಸ್ಪೂನ್  ಉದ್ದಿನ ಬೇಳೆ

  4. 1 ದೊಡ್ಡ ಈರುಳ್ಳಿ

  5. 1 ಟೊಮ್ಯಾಟೊ

  6. 2 ಹಸಿರು ಮೆಣಸಿನಕಾಯಿ

  7. 6 ಕರಿ ಬೇವಿನ ಎಲೆ

  8. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ

  9. 1/4 ಟೀಸ್ಪೂನ್  ಅರಿಶಿನ ಪುಡಿ

  10.   ಅಡುಗೆ ಎಣ್ಣೆ ಅಗತ್ಯಕ್ಕೆ ತಕ್ಕಷ್ಟು

  11.  ರುಚಿಗೆ ತಕ್ಕಷ್ಟು ಉಪ್ಪು

  12.  2ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ

  13.  1/2ಕಪ್ ತೆಂಗಿನ ತುರಿ

  14.  1/2ಟೀಸ್ಪೂನ್ ಸಾಸಿವೆ.


ಓಟ್ಸ್​ ಉಪ್ಪಿಟ್ಟು ಮಾಡುವ ವಿಧಾನ


ಮೊದಲು ಈರುಳ್ಳಿ, ಟೊಮ್ಯಾಟೊ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟುಕೊಂಡು, ನಂತರ  ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ ಮತ್ತು ಉದ್ದಿನ ಬೆಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ.ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೊ ಹಾಕಿ.


ನಂತರ ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಚನ್ನಾಗಿ ಹುರಿಯಿರಿ.ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದಾಗ ಕೂಡಲೇ  ಓಟ್ಸ್​ ಹಾಕಿ ಮುಚ್ಚಿ ಇಡಿ.


ಇದನ್ನೂ ಓದಿ: ಓಟ್ಸ್​ನಿಂದ ಏನೆಲ್ಲಾ ತಿಂಡಿ ಮಾಡ್ಬೋದು ಗೊತ್ತಾ?


ಎರಡು ನಿಮಿಷದ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಿ. ಮತ್ತೆ ಮುಚ್ಚಳ ಮುಚ್ಚಿ 2-3 ನಿಮಿಷಗಳ ಕಾಲ ಬೇಯಲು ಬಿಡಿ. ಗ್ಯಾಸ್ ಆಫ್ ಮಾಡಿ. 5 ನಿಮಿಷಗಳ ಹಾಗೆಯೇ ಬಿಡಿ ನಂತರ ಸೇವಿಸಿ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು