• Home
  • »
  • News
  • »
  • lifestyle
  • »
  • DIY Hacks: ಮನೆಯಲ್ಲಿಯೇ ಈ ಹೇರ್​ ಡೈ ಮಾಡಿ ಬಳಸಿ, ಬೂದು ಕೂದಲಿಗೆ ಹೇಳಿ ಟಾಟಾ

DIY Hacks: ಮನೆಯಲ್ಲಿಯೇ ಈ ಹೇರ್​ ಡೈ ಮಾಡಿ ಬಳಸಿ, ಬೂದು ಕೂದಲಿಗೆ ಹೇಳಿ ಟಾಟಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Homemade Hair Dye: ಕಪ್ಪನೆಯ, ದಪ್ಪ ಕೂದಲು ನಮ್ಮ ಅಂದ ಹೆಚ್ಚಿಸುವಲ್ಲಿ, ಯಂಗ್ ಆಗಿ ಕಾಣುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಲ್ಲ.  ಈ ಬೂದು ಕೂದಲು ಬಹುತೇಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

  • Share this:

ಹಿಂದಿನ ಕಾಲದಲ್ಲಿ ನಾವು 40 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ  ಮಾತ್ರ ಬೂದು ಕೂದಲು (Grey Hair) ಅಥವಾ ಬಿಳಿ ಕೂದಲನ್ನು ಕಾಣುತ್ತಿದ್ದೆವು. ಆದರೆ ಇಂದಿನ ದಿನಗಳಲ್ಲಿ 20 ವರ್ಷದ ಯುವಕ, ಯುವತಿಯರಲ್ಲಿ ಕೂಡ ಬೂದು ಕೂದಲಿನ ಸಮಸ್ಯೆ (Problem) ಆರಂಭವಾಗಿದೆ. ಇದು ಯುವ ಜನತೆಯ ಚಿಂತೆಗೆ ಸಹ ಕಾರಣವಾಗಿದೆ. ಕಪ್ಪನೆಯ, ದಪ್ಪ ಕೂದಲು (Hair) ನಮ್ಮ ಅಂದ ಹೆಚ್ಚಿಸುವಲ್ಲಿ, ಯಂಗ್ ಆಗಿ ಕಾಣುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಲ್ಲ.  ಈ ಬೂದು ಕೂದಲು ಬಹುತೇಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಯುಮೆಲನಿನ್ ಮತ್ತು ಬಯೋಮೆಲನಿನ್ ಎಂಬ ವರ್ಣದ್ರವ್ಯಗಳು ನಮ್ಮ ಕೂದಲಿನ ಕಪ್ಪು ಬಣ್ಣಕ್ಕೆ ಕಾರಣವಾಗುತ್ತದೆ. ಈ ವರ್ಣದ್ರವ್ಯಗಳ ಉತ್ಪಾದನೆಯು ಕಡಿಮೆಯಾದಂತೆ, ಕಪ್ಪು ಕೂದಲುಗಳು ಬೂದು ಬಣ್ಣಕ್ಕೆ ತಿರುಗುತ್ತವೆ. 


ಇದಲ್ಲದೆ, ಅನುವಂಶಿಕ ಕಾರಣಗಳು, ಧೂಮಪಾನ, ಮದ್ಯಪಾನ, ಜಂಕ್ ಫುಡ್​, ಪ್ರೋಟೀನ್ ಕೊರತೆ, ವಿಟಮಿನ್ ಕೊರತೆ ಇತ್ಯಾದಿಗಳಿಂದ ಕೂಡ ಬೂದು ಕೂದಲು ಉಂಟಾಗುತ್ತದೆ. ಇದಕ್ಕೆ ಪರಿಹಾರ ಎಂದು ಅಂಗಡಿಯಿಂದ ಡೈಗಳನ್ನು ತಂದು ಹಾಕುತ್ತಾರೆ. ಅದು ಕೇವಲ ತಕ್ಷಣದ ಪರಿಣಾಮ ಮಾತ್ರ ಬೀರುತ್ತದೆ. ಆದರೆ ಅಂಗಡಿಯಲ್ಲಿ ಖರೀದಿಸುವ ಬಣ್ಣಗಳು ರಾಸಾಯನಿಕಗಳನ್ನು ಒಳಗೊಂಡಿರುವುದರಿಂದ ನೈಸರ್ಗಿಕ ಪದಾರ್ಥಗಳಿಂದ ಮನೆಯಲ್ಲಿ ತಯಾರಿಸಿದ ಬಣ್ಣಗಳನ್ನು ಬಳಸುವುದು ಉತ್ತಮ. ಇದರಲ್ಲಿ ಹೆನ್ನಾ ಅಥವಾ ಮೆಹೆಂದಿ ಪ್ರಮುಖ ಪಾತ್ರ ವಹಿಸುತ್ತದೆ.


ಮೆಹೆಂದಿಯಿಂದ ತಯಾರಿಸಿದ ಬಣ್ಣವು 100% ಸುರಕ್ಷಿತ ಮತ್ತು ನೈಸರ್ಗಿಕವಾಗಿರುವುದರಿಂದ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಕೇವಲ ಮೆಹೆಂದಿಯನ್ನು ಬಳಸುವುದರಿಂದ ಕೂದಲ ಬಣ್ಣ ಕಂದು ಬಣ್ಣಕ್ಕೆ ತಿರುಗುತ್ತದೆ ಎಂದು ಅನಿಸಿದರೆ, ನೀವು ಅದಕ್ಕೆ ಬೇರೆ ಬೇರೆ ವಸ್ತುಗಳನ್ನು ನೀವು ಬಳಸಬಹುದು.


ಅಲ್ಲದೇ ಮನೆಯಲ್ಲಿಯೇ ನೀವು ಮೆಹೆಂದಿ ಬಳಸಿ ಕೆಲ ಹೇರ್ ಡೈ ತಯಾರಿಸಬಹುದು. ಹಾಗೆಯೇ ಮೆಹೆಂದಿ ಬಳಸದೇ ಸಹ ಡೈ ತಯಾರಿಸಬಹುದು. ಅದರ ಕೆಲ ವಿಧಗಳು ಇಲ್ಲಿದ್ದು, ಟ್ರೈ ಮಾಡಿ.


ಇದನ್ನೂ ಓದಿ: ಸೂಪರ್ ಟೇಸ್ಟಿ ಚಾಟ್​ ಮಸಾಲಾವನ್ನು ಅಂಗಡಿಯಿಂದ ತರ್ಬೇಡಿ, ನೀವೇ ಮನೆಯಲ್ಲಿ ಮಾಡಿ


ಬ್ಲ್ಯಾಕ್​ ಟೀ ಹೇರ್​ ಡೈ
ಬ್ಲ್ಯಾಕ್​ ಟೀ ಪೌಡರ್​ ಅನ್ನು ನೀರಿಗೆ ಹಾಕಿ ಕುದಿಸಿ ಮತ್ತು ಅದಕ್ಕೆ ಒಂದು ಮೊಟ್ಟೆಯ ಹಳದಿ ಲೋಳೆ, ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ಈಗ ಇದಕ್ಕೆ ಒಂದು ಚಮಚ ಕಾಫಿ ಪುಡಿ ಮತ್ತು ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ರಾತ್ರಿಯಿಡೀ ಹಾಗೆಯೇ ಬಿಡಿ.




ಇದನ್ನು ಮರುದಿನ ಬೆಳಗ್ಗೆ ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಸುಮಾರು 2 ಗಂಟೆಗಳ ಕಾಲ ಬಿಡಿ ಮತ್ತು ನಿಮ್ಮ ಕೂದಲನ್ನು ಶಾಂಪೂ ಹಾಕಿ ತೊಳೆಯಿರಿ.  ನೀವು ಮೊಟ್ಟೆಗಳನ್ನು ಬಳಸಲು ಆಗುವುದಿಲ್ಲ ಎಂದರೆ, ಅದಕ್ಕೆ ಮೊಸರನ್ನು ಸೇರಿಸಬಹುದು. ಇದರಿಂದ ನಿಮ್ಮ ಕೂದಲಿನಲ್ಲಿರುವ ಬೂದು ಬಣ್ಣ ಮಾಯವಾಗಿ ಕಪ್ಪಾಗುತ್ತದೆ.


ಮೆಹೆಂದಿ ಡೈ
ಒಂದು ಹಿಡಿ ಎಲೆಗಳು ಎಲೆಗಳು, ಎರಡು ನೆಲ್ಲಿಕಾಯಿ ಅಥವಾ ನೆಲ್ಲಿಕಾಯಿ ಪುಡಿ, 4 ಕಾಫಿ ಬೀಜಗಳನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಚೆನ್ನಾಗಿ ರುಬ್ಬಿ, ನುಣ್ಣಗೆ ಪೇಸ್ಟ್​ ಮಾಡಿಕೊಳ್ಳಿ.  ಅದನ್ನು ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರು ಬಳಸಿ ತಲೆಸ್ನಾನ ಮಾಡಿ. ಇದನ್ನು ವಾರಕ್ಕೆ 2 ಬಾರಿ ಮಾಡಿದರೆ ನಿಮ್ಮ ಬೂದು ಕೂದಲಿಗೆ ಪರಿಹಾರ ಸಿಗುತ್ತದೆ.


ಇದನ್ನೂ ಓದಿ: ಮಕ್ಕಳನ್ನು ಕಾಡುವ ಶೀತ, ಕೆಮ್ಮಿಗೆ ಈ 2 ವಸ್ತುಗಳಿದ್ರೆ ಸಾಕು ಪರಿಹಾರ ಸಿಗುತ್ತೆ


ನೆಲ್ಲಿಕಾಯಿ, ಟೀ ಪುಡಿ ಡೈ
ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ ಅದಕ್ಕೆ ಟೀ ಪುಡಿ ಹಾಕಿ ಚೆನ್ನಾಗಿ ಕುದಿಯಲು ಬಿಡಿ. ನಂತರ ಈ ನೀರನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ನೆಲ್ಲಿಕಾಯಿ ಪುಡಿ, ಕಹಿ ಬೇವಿನ ಪುಡಿ, ಮೆಹೆಂದಿ ಪುಡಿ ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಮೊಸರು ಮತ್ತು ತಯಾರಿಸಿಕೊಂಡಿರುವ ಟೀ ಡಿಕಾಕ್ಷನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು 1-2 ಗಂಟೆಗಳ ಕಾಲ ನೆನೆಯಲು ಬಿಡಿ. ಮರುದಿನ ಇದನ್ನು ನಿಮ್ಮ ಕೂದಲಿಗೆ ಹಚ್ಚಿ, 1 ಗಂಟೆಯ ನಂತರ ತಲೆಸ್ನಾನ ಮಾಡಿ.

Published by:Sandhya M
First published: