Muharram Special Recipe: ಮೊಹರಂ ಹಬ್ಬದ ಸ್ಪೆಷಲ್ ರುಚಿಕರವಾದ​ ಸಜ್ಜಕ ಮಾಡುವ ಸಿಂಪಲ್ ವಿಧಾನ ಇಲ್ಲಿದೆ

Muharram Special Recipe: ವಿಶೇಷವೆಂದರೆ ಈ ಕೇಸರಿಬಾತ್​ಗೆ ಸಕ್ಕರೆ ಹಾಕುವುದಿಲ್ಲ, ಬೆಲ್ಲ ಹಾಕಲಾಗುತ್ತದೆ. ಹಾಗಾದ್ರೆ ಮೊಹರಂ ವಿಶೇಷ ಕೇಸರಿ ಬಾತ್ ಅಥವಾ ಸಜ್ಜಕ ಮಾಡುವುದು ಹೇಗೆ ಎಂಬುದು ಇಲ್ಲಿದೆ.  

ಸಜ್ಜಕ

ಸಜ್ಜಕ

  • Share this:
ನಾಡಿನೆಲ್ಲೆಡೆ ಮೊಹರಂ ಹಬ್ಬದ (Muharram) ಸಂಭ್ರಮ ಜೋರಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ (Islamic) ಪ್ರಕಾರ ಮೊಹರಂನ್ನು ಮುಸ್ಲಿಂ ಸಮುದಾಯಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ವರ್ಷದ ಮೊದಲ ತಿಂಗಳು. ಈ ಸಂದರ್ಭದಲ್ಲಿ ಹಲವಾರು ರೀತಿಯ ಸಿಹಿತಿಂಡಿಗಳನ್ನು (Sweets)  ಮಾಡಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ವಿಭಿನ್ನ ರೀತಿಯ ಕೇಸರಿ ಬಾತ್​ ಸಹ ಮಾಡುತ್ತಾರೆ. ವಿಶೇಷವೆಂದರೆ ಈ ಕೇಸರಿಬಾತ್​ಗೆ ಸಕ್ಕರೆ ಹಾಕುವುದಿಲ್ಲ, ಬೆಲ್ಲ ಹಾಕಲಾಗುತ್ತದೆ. ಹಾಗಾದ್ರೆ ಮೊಹರಂ ವಿಶೇಷ ಕೇಸರಿ ಬಾತ್ ಅಥವಾ ಸಜ್ಜಕ (Sajjaka)  ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಕೇಸರಿ ಬಾತ್ ಮಾಡಲು ಬೇಕಾಗುವ ಸಾಮಾಗ್ರಿಗಳು

¼ ಕಪ್ ತುಪ್ಪ

10 ಗೋಡಂಬಿ

1 ಟೇಬಲ್ಸ್ಪೂನ್ ಒಣದ್ರಾಕ್ಷಿ

½ ಕಪ್ ದಪ್ಪ ರವೆ

1 ಕಪ್ ನೀರು

4 ರಿಂದ 5 ಚಮಚ ಬೆಲ್ಲ

¼ ಟೀಸ್ಪೂನ್ ಏಲಕ್ಕಿ ಪುಡಿ

ಅರ್ಧ ಕಪ್ ತೆಂಗಿನ ತುರಿ

ಮೊಹರಂ ವಿಶೇಷ ಕೇಸರಿಬಾತ್ ಮಾಡುವ ವಿಧಾನ

ಮೊದಲನೆಯದಾಗಿ ಒಂದು ಸಣ್ಣ ಪಾತ್ರೆ ಅಥವಾ ಒಗ್ಗರಣೆ ಪಾತ್ರೆ ತೆಗೆದುಕೊಳ್ಳಿ. ಅದಕ್ಕೆ 2 ಟೇಬಲ್ಸ್ಪೂನ್ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಕಾದ ನಂತರ 10 ಗೋಡಂಬಿ, 1 ಟೇಬಲ್ಸ್ಪೂನ್ ಒಣದ್ರಾಕ್ಷಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.ಈ ಗೋಡಂಬಿ ಚಿನ್ನದ ಬಣ್ಣಕ್ಕೆ ಬಂದ ನಂತರ ಕೇವಲ ಗೊಂಡಂಬಿಯನ್ನು ಪಕ್ಕಕ್ಕೆ ತೆಗೆದು ಇಟ್ಟುಕೊಳ್ಳಿ.

ಇದನ್ನೂ ಓದಿ: ರಾಖಿ ಕಟ್ಟಿ ಆದ್ಮೇಲೆ ಒಳ್ಳೆ ಊಟ ಕೊಡ್ಸಿ ಮಾರ್ರೆ, ಈ ಜಾಗಗಳಿಗೆ ಹೋಗಿ ಸಖತ್ ಊಟ ಸಿಗುತ್ತೆ

ಈಗ ಅದೇ ಉಳಿದ ತುಪ್ಪದಲ್ಲಿ ½ ಕಪ್ ದಪ್ಪ ರವೆಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಹಾಗೆಯೆ ಇದನ್ನು ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಹುರಿದುಕೊಳ್ಳಿ. ನಿಮಗೆ ರವೆ ಮತ್ತು ತುಪ್ಪದ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಪಕ್ಕಕ್ಕೆ ಇಟ್ಟುಕೊಳ್ಳಿ.  ಈ ಒಂದು ದೊಡ್ಡ ಪಾತ್ರೆಯಲ್ಲಿ  1 ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ.ಕಡಿಮೆ ಉರಿಯಲ್ಲಿ ಅದನ್ನು ಕುದಿಸಿ ನಂತರ ಅದಕ್ಕೆ  ½ ಕಪ್ ಹುರಿದ ದಪ್ಪ ರವೆಯನ್ನು ಸೇರಿಸಿ ಮಿಶ್ರಣ ಮಾಡಿ. ರವೆ ನೀರನ್ನು ಹೀರಿಕೊಳ್ಳುವವರೆಗೆ ಮತ್ತು ಉಂಡೆಗಳ ರೀತಿ ಆಗುದಂತೆ ನೀವು ಅದನ್ನು ಒಂದು ನಿಮಿಷವೂ ಬಿಡದೇ ಬೆರೆಸುತ್ತಲೇ ಇರಿ.

ರವೆ ನೀರನ್ನು ಹೀರಿಕೊಂಡ ನಂತರ ಅದಕ್ಕೆ ನಿಮಗೆ ಅಗತ್ಯವಿದ್ದಷ್ಟು ಬೆಲ್ಲ ಹಾಕಿ  ಕಡಿಮೆ ಉರಿಯಲ್ಲಿ ಬೇಯಿಸಿ. ಬೆಲ್ಲ ಮತ್ತು ರವೆ ಚೆನ್ನಾಗಿ ಮಿಶ್ರಣವಾಗುವ ತನಕ ಕೈ ಆಡಿಸುತ್ತಿರಿ. ನಂತರ ಇದಕ್ಕೆ ಅಗತ್ಯವಿದ್ದಷ್ಟು ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.  ಈ ಮಿಶ್ರಣವನ್ನು ಚೆನ್ನಾಗಿ ಬೆರೆಯುವಂತೆ ನೋಡಿಕೊಳ್ಳಿ. ಅಲ್ಲದೇ ಯಾವುದೇ ರೀತಿ ಗಂಟು ಗಂಟಾಗಿರಬಾರದು. ಇದು ಕೇಸರಿಬಾತ್​ನ ಸ್ವಾದವನ್ನು ಹಾಳು ಮಾಡುತ್ತದೆ.

ಇದನ್ನೂ ಓದಿ: ಅತ್ಯಂತ ರುಚಿಕರವಾದ ಚೋಂಗೆ ಮಾಡುವ ವಿಧಾನ ಇಲ್ಲಿದೆ

ಈಗ ಆ ಪಾತ್ರೆಯನ್ನು 2 ನಿಮಿಷಗಳ ಮುಚ್ಚಿಡಿ, ಅದು ಚೆನ್ನಾಗಿ ಕುದಿಯಬೇಕು. ರವೆ ಸಂಪೂರ್ಣವಾಗಿ ಬೇಯಿಸುವವರೆಗೆ ಹಾಗೆಯೇ ಬಿಡಿ. ಈಗ ಅದಕ್ಕೆ ಈಗಾಗಲೇ ಹುರಿದು ಇಟ್ಟುಕೊಂಡಿರುವ ಗೋಡಂಬಿ, ಒಣದ್ರಾಕ್ಷಿ ಮತ್ತು ¼ ಟೀಸ್ಪೂನ್ ಏಲಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿದರೆ ರುಚಿ ರುಚಿಯಾದ ಮೊಹರಂ ಸ್ಪೆಷಲ್​ ಕೇಸರಿಬಾತ್ ರೆಡಿ. ಇದನ್ನು ಬಡಿಸುವ ಮುನ್ನ ಅದಕ್ಕೆ ಮೇಲಿನಿಂದ ಸ್ವಲ್ಪ ತೆಂಗಿನ ತುರಿ ಹಾಕಿ ಅಲಂಕಾರ ಮಾಡಿ.
Published by:Sandhya M
First published: