• Home
  • »
  • News
  • »
  • lifestyle
  • »
  • Breakfast Recipe: ಹಬ್ಬದ ದಿನ ಸ್ಪೆಷಲ್ ಹೆಸರು ಬೇಳೆ ಪರೋಟ ಮಾಡಿ ಸವಿಯಿರಿ

Breakfast Recipe: ಹಬ್ಬದ ದಿನ ಸ್ಪೆಷಲ್ ಹೆಸರು ಬೇಳೆ ಪರೋಟ ಮಾಡಿ ಸವಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Moong Dal Paratha Recipe: ಸಾಮಾನ್ಯವಾಗಿ ಹೆಚ್ಚಿನ ಜನರು ಹೆಸರು ಬೇಳೆ ಪರೋಟ (Moong dal Paratha) ಬಗ್ಗೆ ಕೇಳಿರುವುದಿಲ್ಲ. ಅದನ್ನು ಮಾಡುವುದು ಹೇಗೆ ಎಂಬುದು ಸಹ ತಿಳಿದಿರುವುದಿಲ್ಲ. ನೀವು ಅಂದುಕೊಂಡಂತೆ ಹೆಸರು ಬೇಳೆ ಪರೋಟ ಮಾಡುವುದು ಕಷ್ಟಕರವಲ್ಲ. ಹಾಗಾದ್ರೆ ಹೆಸರು ಬೇಳೆ ಪರೋಟ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಮುಂದೆ ಓದಿ ...
  • Share this:

ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆದರೆ, ಇನ್ನಿತರೆ ಭಕ್ಷ್ಯಗಳನ್ನು ಕಡಿಮೆ ಜನರು ಪ್ರಯತ್ನಿಸಿ ಮಾಡಿಕೊಳ್ಳುವುದುಂಟು. ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆ. ಕೆಲವೊಮ್ಮೆ ನಮಗೆ ಉತ್ತರ ಭಾರತೀಯ ಶೈಲಿಯ ತಿಂಡಿಗಳು ಸಹ ಇಷ್ಟವಾಗುತ್ತದೆ.


ಅದರಲ್ಲೂ ಪರೋಟ (Paratha) ಎಲ್ಲರ ನೆಚ್ಚಿನ ತಿಂಡಿಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಪರೋಟಗಳಲ್ಲಿ ಸಹ ಹಲವಾರು ವಿಧಗಳಿದೆ. ಆಲೂ ಪರೋಟ, ಮಲಬಾರ್ ಪರೋಟ, ಮೂಲಂಗಿ ಪರೋಟ ಹೀಗೆ. ಆದರೆ ಸಾಮಾನ್ಯವಾಗಿ ಹೆಚ್ಚಿನ ಜನರು ಹೆಸರು ಬೇಳೆ ಪರೋಟ (Moong dal Paratha) ಬಗ್ಗೆ ಕೇಳಿರುವುದಿಲ್ಲ. ಅದನ್ನು ಮಾಡುವುದು ಹೇಗೆ ಎಂಬುದು ಸಹ ತಿಳಿದಿರುವುದಿಲ್ಲ. ನೀವು ಅಂದುಕೊಂಡಂತೆ ಹೆಸರು ಬೇಳೆ ಪರೋಟ ಮಾಡುವುದು ಕಷ್ಟಕರವಲ್ಲ. ಹಾಗಾದ್ರೆ ಹೆಸರು ಬೇಳೆ ಪರೋಟ ಮಾಡುವುದು ಹೇಗೆ ಎಂಬುದು ಇಲ್ಲಿದೆ.


ಪನೀರ್ ಪರೋಟಾ ಮಾಡಲು ಬೇಕಾಗುವ ಸಾಮಗ್ರಿಗಳು:


ಹಿಟ್ಟಿಗೆ
¾ ಕಪ್ ಗೋಧಿ ಹಿಟ್ಟು
2 ಟೀಸ್ಪೂನ್ ಎಣ್ಣೆ
¼ ಟೀಚಮಚ ಉಪ್ಪು
ಹಿಟ್ಟನ್ನು ಬೆರೆಸಲು ನೀರು


ಸ್ಟಫಿಂಗ್ಗಾಗಿ
¼ ಕಪ್ ಹೆಸರು ಬೇಳೆ
1 ಟೀಚಮಚ ಎಣ್ಣೆ
¼ ಟೀಚಮಚ ಸಾಸಿವೆ
¼ ಟೀಚಮಚ ಜೀರಿಗೆ
1 ಹಸಿ ಮೆಣಸಿನಕಾಯಿ
ಇಂಗು
¼ ಟೀಚಮಚ ಅರಿಶಿನ ಪುಡಿ
¼ ಟೀಚಮಚ ಕೊತ್ತಂಬರಿ ಪುಡಿ
¼ ಟೀಚಮಚ ಜೀರಿಗೆ
¼ ಟೀಚಮಚ ಅಮ್ಚೂರ್ ಪುಡಿ
¼ ಟೀಚಮಚ ಚಾಟ್ ಮಸಾಲಾ
¼ ಟೀಚಮಚ ಗರಂ ಮಸಾಲಾ
ರುಚಿಗೆ ಉಪ್ಪು
ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಕತ್ತರಿಸಿಕೊಳ್ಳಿ)


ಹೆಸರು ಬೇಳೆ ಪರೋಟ ಮಾಡುವ ವಿಧಾನ



ಒಂದು ಅಗಲವಾದ ಪಾತ್ರೆಯಲ್ಲಿ, ಗೋಧಿ ಹಿಟ್ಟು, ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ ಮತ್ತು ನಿಧಾನವಾಗಿ ನೀರನ್ನು ಸೇರಿಸಿ  ಮೃದುವಾದ ಹಿಟ್ಟನ್ನು ತಯಾರಿಸಿ.  15-20 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ.


ಇದನ್ನೂ ಓದಿ: ಗ್ರೇಟ್​ ಇಂಡಿಯನ್ ಫೆಸ್ಟಿವಲ್​, ಕೈಗೆಟಕೋ ದರದಲ್ಲಿ ಸೂಪರ್ ಟ್ರೆಡಿಷನಲ್ ಡ್ರೆಸ್​ ನೀವೂ ಖರೀದಿಸಿ


ಬೇಳೆಯನ್ನು 15-20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಹೆಚ್ಚಿನ ಉರಿಯಲ್ಲಿ 1 ಸೀಟಿಗೆ ¾ ಕಪ್ ನೀರಿನಲ್ಲಿ ¼ ಕಪ್ ಬೇಳೆಯನ್ನು ಪ್ರೆಶರ್ ಕುಕ್ಕರ್​ನಲ್ಲಿ ಮಾಡಿ. ಉರಿ ಕಡಿಮೆ ಮಾಡಿ ಮತ್ತು 8-10 ನಿಮಿಷ ಬೇಯಿಸಿ.


ನಾನ್ ಸ್ಟಿಕ್ ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ. ಅವು ಸಿಡಿದ ನಂತರ ಜೀರಿಗೆ, ಹಸಿ ಮೆಣಸಿನಕಾಯಿ, ಇಂಗನ್ನು ಮತ್ತು ಬೇಯಿಸಿದ ಬೇಳೆಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.


ಈಗ ಈ ಮಿಶ್ರಣಕ್ಕೆ ¼ ಟೀಚಮಚ ಅರಿಶಿನ ಪುಡಿ , ¼ ಟೀಚಮಚ ಕೊತ್ತಂಬರಿ ಪುಡಿ , ¼ ಟೀಚಮಚ ಜೀರಿಗೆ , ¼ ಟೀಚಮಚ ಅಮ್ಚೂರ್ ಪುಡಿ, ¼ ಟೀಚಮಚ ಚಾಟ್ ಮಸಾಲಾ, ¼ ಟೀಚಮಚ ಗರಂ ಮಸಾಲಾ, ರುಚಿಗೆ ಉಪ್ಪು ಹಾಕಿ ಸರಿಯಾಗಿ ಮಿಶ್ರಣವಾಗುವಂತೆ ಕಲಸಿ.


ನಂತರ ಅದಕ್ಕೆ ಕತ್ತರಿಸಿಕೊಂಡಿರುವ ಕರಿ ಬೇವಿನ ಎಲೆಗಳನ್ನು ಹಾಕಿ ಮತ್ತೆ ಮಿಶ್ರಣ ಮಾಡಿ. ಈಗ ಉರಿಯನ್ನು ಆಫ್​ ಮಾಡಿ. ಇದನ್ನು ಬಳಸುವ ಮೊದಲು ಹಸಿ ಮೆಣಸಿನಕಾಯಿಯನ್ನು ತೆಗೆಯಿರಿ.


ಇದನ್ನೂ ಓದಿ: ಮರಳಲ್ಲಿ ಈ ಪದಾರ್ಥಗಳನ್ನು ಹುರಿದು ತಿಂದ್ರೆ ಆರೋಗ್ಯಕ್ಕೆ ಬಹಳ ಲಾಭವಂತೆ


ಅಗಲವಾಗಿ ತಯಾರಿಸಿಕೊಂಡಿರುವ ಲಟ್ಟಿಸಿಕೊಳ್ಳಿ. ಅದರ ಮಧ್ಯಕ್ಕೆ ಬೇಯಿಸಿದ  ಮಿಶ್ರಣವನ್ನು ಇಡಿ. ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿ.ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‍ಗೆ ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿದರೆ ಹೆಸರು ಬೇಳೆ ಪರೋಟ ರೆಡಿ.

Published by:Sandhya M
First published: