Breakfast Recipe: ರುಚಿ ರುಚಿಯಾದ ಮಂಗಳೂರು ಬನ್ಸ್ ಮಾಡುವ ಸುಲಭ ವಿಧಾನ ಇಲ್ಲಿದೆ

Manglore Buns Recipe: ಬನ್ಸ್, ಸ್ವಲ್ಪ ಸಿಹಿ ಮಿಶ್ರಿತ ಎಣ್ಣೆಯಲ್ಲಿ ಕರಿದು ಮಾಡುವ ತಿಂಡಿಯಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಹ ಇದು ಲಭ್ಯವಿದೆ. ಇದನ್ನ ಮಾಡುವುದು ಸರಳ ಸಹ. ಬನ್ಸ್ ಮಾಡುವ ವಿಧಾನ ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಿಂಡಿ ಎನ್ನುವ ವಿಚಾರ ಮಹಿಳೆಯರಿಗೆ ತಲೆನೋವಾಗುತ್ತದೆ. ಮಾಡಿದ್ದನ್ನೇ ಮಾಡುವುದು ಅಥವಾ ತಿನ್ನುವುದು ಬೋರ್ ಆಗುತ್ತದೆ. ಅಲ್ಲದೇ ಮನೆಯಲ್ಲಿ ಮಕ್ಕಳಿದ್ದರಂತೂ ಏನಾದರು ಹೊಸದನ್ನು ಮಾಡಬೇಕು . ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods) ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ಮಂಗಳೂರು ಬನ್ಸ್ (Mangaluru Buns) ದಕ್ಷಿಣ ಕನ್ನಡದ (Dakshina Kannada)  ಜನಪ್ರಿಯ ಬೆಳಗ್ಗಿನ ತಿಂಡಿ ಅಥವಾ ಟೀ ಸಮಯದ ತಿಂಡಿಯಾಗಿದೆ. ಜಿಲ್ಲೆಯ ಹೋಟೆಲ್‍ಗಳಲ್ಲಿ ಸರ್ವೇ ಸಾಮಾನ್ಯವಾಗಿ ಸಿಗುವ ಬನ್ಸ್, ಸ್ವಲ್ಪ ಸಿಹಿ ಮಿಶ್ರಿತ ಎಣ್ಣೆಯಲ್ಲಿ ಕರಿದು ಮಾಡುವ ತಿಂಡಿಯಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಹ ಇದು ಲಭ್ಯವಿದೆ. ಇದನ್ನ ಮಾಡುವುದು ಸರಳ ಸಹ. ಬನ್ಸ್ ಮಾಡುವ ವಿಧಾನ ಇಲ್ಲಿದೆ.  

ಬನ್ಸ್​ ಮಾಡಲು ಬೇಕಾಗುವ ಸಾಮಾಗ್ರಿಗಳು

ಮೈದಾ ಹಿಟ್ಟು – 3 ಕಪ್
ಸಕ್ಕರೆ – ಅರ್ಧ ಕಪ್
ಮೊಸರು – ಅರ್ಧ ಕಪ್
ಅಡುಗೆ ಸೋಡಾ – 1 ಚಿಟಿಕೆ
ಬಾಳೆಹಣ್ಣು – 2
ಜೀರಿಗೆ – ಸ್ವಲ್ಪ
ಎಣ್ಣೆ – ಕರಿಯಲು
ಉಪ್ಪು- ರುಚಿಗೆ ತಕ್ಕಷ್ಟು

ಇದನ್ನೂ ಓದಿ: ಸ್ಪೈಸಿ ಅವರೆಕಾಳು ಪಲ್ಯ ಮಾಡುವ ಸುಲಭ ವಿಧಾನ ಇಲ್ಲಿದೆ

ಬನ್ಸ್ ಮಾಡುವ ವಿಧಾನ

ಬಾಳೆಹಣ್ಣಿನ ಸಿಪ್ಪೆ ತೆಗೆದು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಿವುಚಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನಿಮಗೆ ಕೈನಿಂದ ಸಾಧ್ಯವಾಗದಿದ್ದರೆ ಮಿಕ್ಸ್ರ್​ಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್​ಗೆ ಸಕ್ಕರೆ, ಜೀರಿಗೆ, ಸೋಡಾ, ಉಪ್ಪು, ಮೊಸರು ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಹಾಕಿರುವುದರಿಂದ ಕರಗಲು ಹೆಚ್ಚು ಸಮಯ ಬೇಕಾಗುತ್ತದೆ. ಅದು ಕರಗಿದ ನಂತರ ಸ್ವಲ್ಪ ಮೈದಾ ಹಿಟ್ಟನ್ನ  ಹಾಕಿ ಕಲಸಿ.

ಕಲಸಿದ ಹಿಟ್ಟನ್ನು ಸುಮಾರು 8-10 ಗಂಟೆಗಳ ಕಾಲ ನೆನೆಯಲು ಬಿಡಿ. ಇದನ್ನ ರಾತ್ರಿ ಮಾಡಿ ಇಟ್ಟರೆ ಬೆಳಗ್ಗೆ ಬನ್ಸ್ ತಯಾರಿಸಲು ಸುಲಭವಾಗುತ್ತದೆ. ಈಗ ಬೆಳಗ್ಗೆ ಒಂದು ಬಾಣಲೆಯನ್ನು ತೆಗೆದುಕೊಳ್ಳಿ, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಿಸಿ.

ಎಣ್ಣೆ ಕಾಯುತ್ತಿರುವಾಗ, ಒಂದು ಉಂಡೆ ಹಿಟ್ಟನ್ನ ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಿಟ್ಟನ್ನ ಹಾಕಿ ಪೂರಿಯ ಆಕಾರದಲ್ಲಿ, ಸ್ವಲ್ಪ ದಪ್ಪಗೆ ಲಟ್ಟಿಕೊಳ್ಳಿ, ಈಗ ಎಣ್ಣೆ ಕಾದ ನಂತರ ಅದನ್ನು ಎಣ್ಣೆಗೆ ಹಾಕಿ ಕರಿಯಿರಿ.

ಇದನ್ನೂ ಓದಿ: ಬೆಳಗಿನ ತಿಂಡಿಗೆ ಕೇರಳ ಸ್ಟೈಲ್ ಪುಟ್ಟು ಟ್ರೈ ಮಾಡಿ

ಸ್ವಲ್ಪ ಹೊತ್ತಿನ ಬಳಿಕ ಬನ್ಸ್ ಉಬ್ಬುತ್ತದೆ. ಕಂದು ಬಣ್ಣ ಬರುವವರೆಗೆ ಅದನ್ನ ಕರಿದು ಎಣ್ಣೆಯಿಂದ ತೆಗೆದರೆ ಬನ್ಸ್ ರೆಡಿ,. ಇದನ್ನ ಕಾಯಿ ಚಟ್ನಿ ಜೊತೆ ತಿಂದರೆ ರುಚಿಯೋ ರುಚಿ.
Published by:Sandhya M
First published: