DIY Hacks: ಕೊರಿಯನ್ ಸುಂದರಿಯರ ರೀತಿ ಆಕರ್ಷಕ ತುಟಿ ನಿಮ್ಮದಾಗ್ಬೇಕು ಅಂದ್ರೆ ಮನೆಯಲ್ಲೇ ತಯಾರಿಸುವ ಈ ಲಿಪ್ ಬಾಮ್ ಬಳಸಿ

Lip Balm at Home: ವಿಶೇಷವಾಗಿ ಕೊರಿಯನ್ ಮಹಿಳೆಯರು ತಮ್ಮ ತುಟಿಗಳನ್ನು ಸುಂದರವಾಗಿ ಕಾಣುವಂತೆ ಮನೆಯಲ್ಲಿ ಲಿಪ್ ಬಾಮ್​ಗಳನ್ನು ಬಳಸುತ್ತಾರೆ ಎಂದು ಹೇಳಲಾಗುತ್ತದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುರಾತನ ಕಾಲದಿಂದ ಆಧುನಿಕ ಆಂಡ್ರಾಯ್ಡ್ (Android) ಯುಗದವರೆಗೆ, ಕಾವ್ಯ, ಗದ್ಯ, ಪದ್ಯಗಳಲ್ಲಿ ಮಹಿಳೆಯರ ತುಟಿಗಳನ್ನು(Lips)  ವಿವರಿಸಲಾಗುತ್ತದೆ.  ಕವಿಗಳು ತುಟಿಗಳನ್ನು  ಹಣ್ಣಿನಂತೆ ಕೆಂಪು (Red) ಎಂದು ವಿವರಿಸುತ್ತಾರೆ. ಆ ಮಟ್ಟಿಗೆ ಹೆಣ್ಣಿನ (Women)  ಮುಖದ ಅಂದ ಹೆಚ್ಚಿಸುವಲ್ಲಿ ತುಟಿಗಳ ಪಾತ್ರ ಮಹತ್ವದ್ದು. ಆದರೆ ಇಂದಿನ ಒತ್ತಡದ ಜೀವನಶೈಲಿಯಲ್ಲಿ (Lifestyle), ಅನೇಕ ತ್ವಚೆಯ (Skin) ಜನರು ತಮ್ಮ ತುಟಿಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಲಿಪ್ ಬಾಮ್‌ಗಳು (lip Balm) ಮತ್ತು ಲಿಪ್‌ಸ್ಟಿಕ್‌ಗಳನ್ನು (Lip Stick) ಬಳಸುತ್ತಾರೆ. 

ಇದು ತುಟಿಗಳಿಗೆ ಹಾನಿಯಾಗುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ. ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುವ ಬದಲು, ರಾಸಾಯನಿಕ ಆಧಾರಿತ ಸೌಂದರ್ಯವರ್ಧಕಗಳನ್ನು ಬಳಸುವ ಅಭ್ಯಾಸವು ಪ್ರಪಂಚದಾದ್ಯಂತ ಅನೇಕ ದೇಶಗಳ ಮಹಿಳೆಯರಲ್ಲಿ ಕಂಡುಬರುತ್ತದೆ. ಆದರೆ ಕೊರಿಯಾದ ಮಹಿಳೆಯರು ತಮ್ಮ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಯಾವಾಗಲೂ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಾರೆ. ಅವರ ಮುಖ ಮತ್ತು ಚರ್ಮವು ಗಾಜಿನಂತೆ ಹೊಳೆಯುತ್ತದೆ. ಅದಕ್ಕೆ ಅವರ ಕೆಲ ಟಿಪ್ಸ್​ಗಳಿದೆ.

ಅವರ ಕೆಲ ಟಿಪ್ಸ್ ಫಾಲೋ ಮಾಡುವುದರಿಂದ  ತುಟಿಗಳು ಕೆಂಪು ಮತ್ತು ತೇವವಾಗಿ ಕಾಣುತ್ತವೆ. ಅದಕ್ಕೆ ಸಂಪೂರ್ಣ ಕಾರಣವೆಂದರೆ ಸಾಂಪ್ರದಾಯಿಕ ವಿಧಾನದೊಂದಿಗೆ ಇತ್ತೀಚಿನ ಸಲಹೆಗಳನ್ನು  ತೆಗೆದುಕೊಂಡು  ಮನೆಯಲ್ಲಿ ತಯಾರಿಸಿದ ಮೇನ್ ಆರೈಕೆ ಉತ್ಪನ್ನಗಳು ಎನ್ನಲಾಗುತ್ತದೆ. ವಿಶೇಷವಾಗಿ ಕೊರಿಯನ್ ಮಹಿಳೆಯರು ತಮ್ಮ ತುಟಿಗಳನ್ನು ಸುಂದರವಾಗಿ ಕಾಣುವಂತೆ ಮನೆಯಲ್ಲಿ ಲಿಪ್ ಬಾಮ್​ಗಳನ್ನು ಬಳಸುತ್ತಾರೆ ಎಂದು ಹೇಳಲಾಗುತ್ತದೆ. ನಿಮ್ಮ ಮಂದ ತುಟಿಗಳು ಕೊರಿಯನ್ ಮಹಿಳೆಯರ ತುಟಿಗಳಂತೆ ಕೆಂಪು ಬಣ್ಣ ಪಡೆದು ಹೊಳೆಯುವಂತೆ ಮಾಡಲು ನೀವು ಬಯಸಿದರೆ, ಕೆಳಗಿನ ಲಿಪ್ ಬಾಮ್ ರೆಸಿಪಿ ನಿಮಗೆ ಸಹಾಯ ಮಾಡುತ್ತದೆ. ನೀವು ಸಹ ಇದನ್ನು ಮನೆಯಲ್ಲಿ ಟ್ರೈ ಮಾಡಿದರೆ, ಸುಂದರ ತುಟಿಗಳು ನಿಮ್ಮದಾಗುತ್ತದೆ.

ನೀವು ಮನೆಯಲ್ಲಿಯೇ ತಯಾರಿಸಬಹುದಾದ ಈ ಲಿಪ್ ಬಾಮ್ ಅತ್ಯುತ್ತಮ ಕೊರಿಯನ್ ಲಿಪ್ ಬಾಮ್‌ಗಳಲ್ಲಿ ಒಂದಾಗಿದೆ, ಇದು ನಿಮ್ಮ ತುಟಿಗಳನ್ನು ಮೃದುವಾಗಿ ಮತ್ತು ನೋಡುಗರ ಕಣ್ಣು ಸೆಳೆಯುವಂತೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದ್ರೆ ಲಿಪ್ ಬಾಮ್ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲಿ ಈ ಸಿಂಪಲ್ ಚೇಂಜ್ ಮಾಡಿದ್ರೆ ವೇಸ್ಟ್​ ಅನ್ನೋದು ಆಗೋದೇ ಇಲ್ಲ

ಲಿಪ್ ಬಾಮ್ ಮಾಡಲು ಅಗತ್ಯವಿರುವ ವಸ್ತುಗಳು:

ನೀವು ಲಿಪ್ ಬಾಮ್ ಮಾಡಲು ನಿರ್ಧರಿಸಿದ್ದರೆ, ಮೊದಲು ಈ ಕೆಳಗಿನ ಪದಾರ್ಥಗಳನ್ನು ರೆಡಿ ಮಾಡಿಕೊಳ್ಳಿ.

ಸ್ಟ್ರಾಬೆರಿಗಳು - 2 (ಪೇಸ್ಟ್​ ಮಾಡಿಕೊಳ್ಳಿ)

ಜೆಲಾಟಿನ್ ಪುಡಿ - 1 ಟೀಸ್ಪೂನ್

ತೆಂಗಿನ ಎಣ್ಣೆ - 2 ಟೀಸ್ಪೂನ್

ನಿಂಬೆ ಸಾರಭೂತ ತೈಲ - 3-4 ಹನಿಗಳು

ಲಿಪ್ ಬಾಮ್ ಮಾಡುವ ವಿಧಾನ 

ಮೊದಲು ತೆಂಗಿನ ಎಣ್ಣೆಯನ್ನು ಮೈಕ್ರೋವೇವ್‌ನಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಬಿಸಿ ಮಾಡಿ. ಜೊತೆಗೆ ಚೆನ್ನಾಗಿ ಪೇಸ್ಟ್​ ಮಾಡಿಕೊಂಡ ಸ್ಟ್ರಾಬೆರಿ ಮತ್ತು ಜಿಲೆಟಿನ್ ಪುಡಿ ಸೇರಿಸಿ ಮಿಶ್ರಣ ಮಾಡಿ. 50 ಸೆಕೆಂಡುಗಳ ಕಾಲ ಬಿಸಿ ಮಾಡಿ. ಇದರಲ್ಲಿರುವ ಜೆಲಾಟಿನ್ ಚೆನ್ನಾಗಿ ಕರಗಬೇಕು. ಅದಕ್ಕೆ 3 ರಿಂದ 4 ಹನಿ ನಿಂಬೆ ಸಾರಭೂತ ತೈಲವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನೂ ಓದಿ: ಈ ಆಹಾರಗಳು ಚರ್ಮದ ಆರೋಗ್ಯಕ್ಕೆ ಹಾನಿಕಾರಕ, ತಜ್ಞರು ಹೇಳೋದೇನು ಕೇಳಿ

ಈ ಬಿಸಿ ಮಿಶ್ರಣವನ್ನು ತಣ್ಣಗಾಗಿಸಿ ಮತ್ತು ಗಾಜಿನ ಜಾರ್​ನಲ್ಲಿ ಹಾಕಿ. ಈ ಲಿಪ್ ಬಾಮ್ ಅನ್ನು ಬಳಸುವ ಮೊದಲು ನಿಮ್ಮ ತುಟಿಗಳನ್ನು ಚೆನ್ನಾಗಿ ಮಸಾಜ್ ಮಾಡಿ ಮತ್ತು ನಂತರ ಅದನ್ನು  ಹಚ್ಚಿ. ಈ ಲಿಪ್ ಬಾಮ್ ನಿಮ್ಮ ತುಟಿಗಳಿಗೆ ತುಂಬಾ ಸುರಕ್ಷಿತವಾಗಿದೆ ಏಕೆಂದರೆ ಇದನ್ನು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗುತ್ತದೆ.
Published by:Sandhya M
First published: