Breakfast Recipe: ಬೆಳಗಿನ ತಿಂಡಿಗೆ ಪಟ್​ ಪಟ್​ ಅಂತ ತಯಾರಿಸಿ ಜೋಳದ ಉಪ್ಪಿಟ್ಟು - ಇಲ್ಲಿದೆ ರೆಸಿಪಿ

Jowar Upma Recipe: ನೋಡಲು ವಿಭಿನ್ನವಾಗಿರುವ ಇದು ರುಚಿಕರ ಕೂಡ. ಸ್ವಲ್ಪ ಸ್ಪೈಸಿ, ಸ್ವಲ್ಪ ಹುಳಿ ಹೀಗೆ ವಿಧವಿಧವಾಗಿ ಇದನ್ನು ತಯಾರಿಸಬಹುದು. ಇಲ್ಲದ್ದಕ್ಕಿಂತ ಹೆಚ್ಚಾಗಿ ಅತಿ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದು ಎಂಬುದು ಇದರ ವಿಶಿಷ್ಟ ಗುಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆದರೆ, ಇನ್ನಿತರೆ ಭಕ್ಷ್ಯಗಳನ್ನು ಕಡಿಮೆ ಜನರು ಪ್ರಯತ್ನಿಸಿ ಮಾಡಿಕೊಳ್ಳುವುದುಂಟು. ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆ. ಹಾgeಯೇ ವಿವಿಧ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಲು ಬಯಸುತ್ತೇವೆ. ನಾವು ಒಂದು ಪದಾರ್ಥದಿಂದ ಹಲವಾರು ವಿಭಿನ್ನ ಪದಾರ್ಥಗಳನ್ನು ಮಾಡಲು ಇಷ್ಟಪಡುತ್ತೇವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಜೋಳದ ಉಪ್ಪಿಟ್ಟು. 

ಈ ಜೋಳದ ಹೆಚ್ಚಿನ ಜನರು ಬೇರೆ ಬೇರೆ  ಪದಾರ್ಥಗಳನ್ನು ಮಾಡಲಾಗುತ್ತದೆ.  ರೊಟ್ಟಿ ಮಾಡುತ್ತಾರೆ. ಹಾಗೆಯೇ ಇದರಿಂದ ಉಪ್ಪಿಟ್ಟು ಸಹ ಮಾಡಬಹುದು. ಮಕ್ಕಳಿಗೆ ಮೊದಲೇ ಉಪ್ಪಿಟ್ಟು ಎಂದರೆ ಅಲರ್ಜಿ. ಹಾಗಾಗಿ ಉಪ್ಪಿಟ್ಟು ಎಂಬ ಹೆಸರು ಕೇಳಿದರೇ ಸಾಕು ಓಡಿ ಹೋಗುತ್ತಾರೆ. ಆದರೆ ಇದು ಸಾಮಾನ್ಯ ಉಪ್ಪಿಟ್ಟಿನಂತಲ್ಲ,ಬಹಳ ವಿಭಿನ್ನ.

ನೋಡಲು ವಿಭಿನ್ನವಾಗಿರುವ ಇದು ರುಚಿಕರ ಕೂಡ. ಸ್ವಲ್ಪ ಸ್ಪೈಸಿ, ಸ್ವಲ್ಪ ಹುಳಿ ಹೀಗೆ ವಿಧವಿಧವಾಗಿ ಇದನ್ನು ತಯಾರಿಸಬಹುದು. ಇಲ್ಲದ್ದಕ್ಕಿಂತ ಹೆಚ್ಚಾಗಿ ಅತಿ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದು ಎಂಬುದು ಇದರ ವಿಶಿಷ್ಟ ಗುಣ. ಹಾಗಾದ್ರೆ ಜೋಳದ ಉಪ್ಪಿಟ್ಟು ಮಾಡೋದು ಹೇಗೆ ಇಲ್ಲಿದೆ.

ಜೋಳದ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು

ಜೋಳದ ರವೆ– 1 ಕಪ್

ಕಡಲೆ ಬೇಳೆ

ಸಾಸಿವೆ

ಜೀರಿಗೆ

ಕತ್ತರಿಸಿದ ಈರುಳ್ಳಿ

ಕ್ಯಾರೆಟ್​

ಹಸಿ ಮೆಣಸಿನಕಾಯಿ

ಇದನ್ನೂ ಓದಿ: ಇಂದು ನಿಮ್ಮ ಮನೆಯಲ್ಲಿ ಮಾಡಿ ಬಾಯಲ್ಲಿ ನೀರೂರಿಸುವ ಬಂಗಾಳಿ ಶೈಲಿಯ ರೇಜಲ್ ಚಿಕನ್

ಟೊಮೆಟೊ

ಕರಿಬೇವು ಮತ್ತು ಉಪ್ಪು

ಜೋಳದ ಉಪ್ಪಿಟ್ಟು ಮಾಡುವ ವಿಧಾನ

ಮೊದಲು ಬಾಣಲೆಯನ್ನು ತೆಗೆದುಕೊಳ್ಳಿ, ಅದು ಸ್ವಲ್ಪ ಕಾದ ನಂತರ ಅದಕ್ಕೆ  ಒಂದು ಕಪ್ಪು ಜೋಳದ ರವೆಯನ್ನು ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿಯಿರಿ. ಅದನ್ನು ಬದಿಗೆ ತೆಗೆದಿಟ್ಟುಕೊಳ್ಳಿ.  ಈ ಆ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಅದಕ್ಕೆ  ಸಾಸಿವೆ, ಕಡಲೆ ಬೇಳೆ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಅದಕ್ಕೆ ಹಸಿ ಮೆಣಸಿನ ಕಾಯಿ, ಕ್ಯಾರೆಟ್​, ಟೊಮೆಟೊ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ.

ಇದನ್ನೂ ಓದಿ: ನಿಮಗೆ ಆಗಾಗ್ಗೆ ಈ ಕನಸುಗಳು ಬೀಳುತ್ತದೆಯೇ? ಹಾಗಿದ್ರೆ ಅದು ಇದರ ಸೂಚನೆಯಂತೆ

ಈಗ ಎಲ್ಲಾ ರೆಡಿಯಾದ ಮೇಲೆ ಮೂರು ಕಪ್ಪು ನೀರು ಮತ್ತು ಉಪ್ಪನ್ನು ಹಾಕಿ ಕುದಿಸಿ. ನೀರು ಚೆನ್ನಾಗಿ ಕುದಿ ಬಂದ ಮೇಲೆ ಹುರಿದ ರವೆಯನ್ನು ನಿಧಾನವಾಗಿ ಸೇರಿಸಿ, ಮಿಕ್ಸ್​ ಮಾಡಿ. ಈಗ ಕಡಿಮೆ ಉರಿಯಲ್ಲಿ ಮೃದುವಾಗುವವರೆಗೂ ಚೆನ್ನಾಗಿ ಬೇಯಿಸಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕಾರ ಮಾಡಿದರೆ ಈಗ ಬಿಸಿ ಬಿಸಿಯಾಗಿರುವ ಜೋಳದ ಉಪ್ಪಿಟ್ಟು ಸವಿಯಲು ಸಿದ್ಧ.
Published by:Sandhya M
First published: