• Home
  • »
  • News
  • »
  • lifestyle
  • »
  • Breakfast Recipe: ಕೇವಲ 15 ನಿಮಿಷದಲ್ಲಿ ಮಾಡಿ ಸ್ಪೆಷಲ್ ರವಾ ದೋಸೆ, ಇಲ್ಲಿದೆ ರೆಸಿಪಿ

Breakfast Recipe: ಕೇವಲ 15 ನಿಮಿಷದಲ್ಲಿ ಮಾಡಿ ಸ್ಪೆಷಲ್ ರವಾ ದೋಸೆ, ಇಲ್ಲಿದೆ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Rava Dosa Recipe: ಹಿಂದಿನಿಂದಲೂ ಮಸಾಲೆ ದೋಸೆ ಎಲ್ಲರಿಗೂ ಇಷ್ಟ. ಈ ಮಸಾಲೆಯನ್ನು ಕೊಂಚ ಬದಲಿಸುವ ಮೂಲಕ ಈ ದೋಸೆಯ ರುಚಿಯನ್ನ ಭಿನ್ನವಾಗಿಸಿ ಇನ್ನಷ್ಟು ರುಚಿಕರವಾಗಿಸಬಹುದು.

  • Share this:

ದಕ್ಷಿಣ ಭಾರತದ (South India) ಅತ್ಯಂತ ಜನಪ್ರಿಯ ತಿಂಡಿ (Breakfast) ಅಂದರೆ ದೋಸೆ (Dosa). ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೂ ಸಹ ಇದನ್ನು ಬೇಡವೆನ್ನುವವರಿಲ್ಲ. ದೋಸೆಗಳಲ್ಲಿ ಅಪಾರವಾದ ವಿಧಗಳಿವೆ. ಒಂದು ರಾತ್ರಿ ನೆನೆಸಿಡಬೇಕಾದ ಉದ್ದಿನ ದೋಸೆಯಿಂದ ಹಿಡಿದು ತಕ್ಷಣ ಮಾಡಬಹುದಾದ ಮೈದಾಹಿಟ್ಟಿನ ದೋಸೆ ಹಾಗೂ ನೀರುದೋಸೆ ಹೀಗೆ ಹಲವಾರು ವಿಧಗಳಿದೆ. ಇಂದು ದೋಸೆ (Dosa) ಹಿಟ್ಟು ಸಿದ್ಧ ರೂಪದಲ್ಲಿ ಅಂಗಡಿಗಳಲ್ಲಿ ಸಿಗುತ್ತಿರುವ ಕಾರಣ ನೆನೆಸಿಟ್ಟು ರುಬ್ಬುವ ತೊಂದರೆಯೇ ಇಲ್ಲ. ಆದರೆ ಮನೆಯಲ್ಲಿಯೇ ಅಕ್ಕಿ, ಉದ್ದಿನ ಬೇಳೆಯನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ರುಬ್ಬುವ ಮೂಲಕ ಹೆಚ್ಚಿನ ಕಷ್ಟವಿಲ್ಲದೇ ರುಚಿಕರ ದೋಸೆ ತಯಾರಿಸಬಹುದು.


ಹಿಂದಿನಿಂದಲೂ ಮಸಾಲೆ ದೋಸೆ ಎಲ್ಲರಿಗೂ ಇಷ್ಟ. ಈ ಮಸಾಲೆಯನ್ನು ಕೊಂಚ ಬದಲಿಸುವ ಮೂಲಕ ಈ ದೋಸೆಯ ರುಚಿಯನ್ನ ಭಿನ್ನವಾಗಿಸಿ ಇನ್ನಷ್ಟು ರುಚಿಕರವಾಗಿಸಬಹುದು. ದೋಸೆಯ ರುಚಿಯೇ ವಿಭಿನ್ನ , ಮಸಾಲೆ ದೋಸೆ, ದಾವಣಗೆರೆ ಬೆಣ್ಣೆ ದೋಸೆ, ನೀರು ದೋಸೆ, ರಾಗಿ ದೋಸೆ, ಪುದೀನಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ಗ್ರೀನ್ ಪೀಸ್ ದೋಸೆ ಹೀಗೆ ಇದರ ಪಟ್ಟಿ ಬೆಳೆಯುತ್ತದೆ. ಇವುಗಳಲ್ಲಿಯೇ ವಿಶೇಷವಾದದ್ದು ಮತ್ತು ಸುಲಭವಾದದ್ದು ರವೆ ದೋಸೆ. ಇದರ ರುಚಿಯೇ ವಿಭಿನ್ನ. ಜೊತೆಗೆ ನೀವು ಬೇಗ ಸಹ ಮಾಡಬಹುದು.


ನೀವು ಹಿಂದಿನ ದಿನ ದೋಸೆ ಹಿಟ್ಟು ನೆನೆಸಲು ಮರೆತು ಹೋಗಿದ್ರೆ ಅಥವಾ ಯಾವುದೋ ಎಮರ್ಜೆನ್ಸಿ ಬಂದಾಗ ಈ ತಿಂಡಿ ಮಾಡುವುದು ಸುಲಭ ಹಾಗೂ ಸಹಕಾರಿ. ಇನ್ನೊಂದು ಮುಖ್ಯ ವಿಚಾರ ಎಂದರೆ ಇದನ್ನು ಮಾಡಲು ನಿಮಗೆ ನಿಮಗೆ ಕೇವಲ ಮೂರು ಸಾಮಾಗ್ರಿಗಳು ಸಾಕು.  ಹಾಗಾದ್ರೆ ರವೆ ದೋಸೆ ಮಾಡೋದು ಹೇಗೆ ಇಲ್ಲಿದೆ ನೋಡಿ.


ಇದನ್ನೂ ಓದಿ: ಪಿರಿಯಡ್ಸ್​ ಹೊಟ್ಟೆ ನೋವು ಕಡಿಮೆ ಆಗ್ಬೇಕು ಅಂದ್ರೆ ಇಲ್ಲಿದೆ ನೋಡಿ ಪರಿಹಾರ


ರವೆ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು 


ಸಣ್ಣ ರವೆ - ಒಂದು ಕಪ್​


ಮೊಸರು-100 ಗ್ರಾಂ


ಉಪ್ಪು- ಅಗತ್ಯಕ್ಕೆ ತಕ್ಕಷ್ಟು


ರವೆ ದೋಸೆ ಮಾಡುವ ವಿಧಾನ 


ಮೊದಲು ನಿಮಗೆ ಬೇಕಾದಷ್ಟು ರವೆ ತೆಗೆದುಕೊಳ್ಳಿ. ಅದನ್ನು ಮೊಸರಿನ ಜೊತೆ ಕಲಸಿ ಅರ್ಧ ಗಂಟೆಗಳ ಕಾಲ ನೆನೆಸಿ ಇಡಿ. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ದೋಸೆಯ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಅದಕ್ಕೆ ಅಗತ್ಯ ಬಿದ್ದರೆ ನೀರು ಸೇರಿಸಿ. ನಂತರ ಚಿಟಿಕೆ ಉಪ್ಪನ್ನ ಹಾಕಿ ಕಲಸಿಕೊಳ್ಳಿ.


ಇದನ್ನೂ ಓದಿ: ಈ ಸಲ ರಾಖಿ ಹಬ್ಬಕ್ಕೆ ಸಖತ್ ಡಿಫರೆಂಟ್ ಗಿಫ್ಟ್ ಗಳು ಬಂದಿವೆ, ನೀವೂ ಒಮ್ಮೆ ನೋಡಿ


ನಾನ್ ಸ್ಟಿಕ್ ದೋಸೆ ತವಾವನ್ನು ಸ್ಟೌ ಮೇಲಿಟ್ಟು ಅದು ಕಾದ ಕೂಡಲೇ ಎಣ್ಣೆಯನ್ನು ಹಚ್ಚಿ ಮೊದಲೇ ತಯಾರಿಸಿಕೊಂಡಿರುವ ದೋಸೆ ಹಿಟ್ಟನ್ನ ಹಾಕಿ ದೋಸೆ ಮಾಡಿ.  ಮೊದಲ ಬಾರಿ ಮಾಡುತ್ತಿದ್ದರೆ, ದೋಸೆ ಬರುತ್ತಿಲ್ಲ ಅನಿಸುತ್ತದೆ. ಆದರೆ ನಂತರ ಸರಿಯಾಗಿ ಬರುತ್ತದೆ. ನೀವು ಇದಕ್ಕೆ ಅಗತ್ಯ ಬಿದ್ದರೆ ಅದರಲ್ಲೂ ನಿಮಗೆ ಇನ್ನೂ ರುಚಿಯಾಗಿ ಬೇಕು ಎನಿಸಿದರೆ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ, ಸಾಸಿವೆ ಹಾಕಿ ಸಿಡಿಸಿ. ಅದನ್ನು ಹಿಟ್ಟಿನ ಜೊತೆ ಹಾಕಿ ಮಿಶ್ರಣ ಮಾಡಿ. ಇದನ್ನು ದೋಸೆ ಮಾಡಿ ತಿಂದರೆ ಮತ್ತೊಂದು ರೀತಿಯ ಟೇಸ್ಟ್​ ಸಿಗುತ್ತದೆ. ಇದನ್ನೂ ಕಾಯಿ ಚಟ್ನಿ ಜೊತೆ ತಿನ್ನಿ.

Published by:Sandhya M
First published: