ಮಕ್ಕಳು(Children) ಬೆಳೆಯಬೇಕಾದರೆ ಪೌಷ್ಟಿಕ ಆಹಾರ(Food) ಅವಶ್ಯಕ. ಓಡುತ್ತಿರುವ ಜೀವನದಲ್ಲಿ ಅನೇಕ ಬಾರಿ ಮಕ್ಕಳ ಕಡೆಗೆ ಗಮನ ಕೊಡಲು ಅಸಾಧ್ಯವಾದಾಗ ತಾಯಂದಿರು ರೆಡಿ ಫುಡ್ಗಳನ್ನು(Ready Food) ಕೊಡುತ್ತಾರೆ. ಇಂತಹ ರೆಡಿ ಫುಡ್ಗಳು ಮಕ್ಕಳ ಹೊಟ್ಟೆ ತುಂಬುತ್ತದೆ ಹೊರತು ಆರೋಗ್ಯ(Health) ಕಾಪಾಡೋಲ್ಲ. ಈಗಿನ ಮಕ್ಕಳು ಬಿಸ್ಕೆಟ್(Biscuit), ಚಾಕೊಲೇಟ್(Chocolate), ಕರಿದ ಪದಾರ್ಥಗಳನ್ನು(Oily Food) ತಿನ್ನುವುದರಿಂದ ಊಟ ಮಾಡಲು ಹಿಂಜರಿಯುತ್ತಾರೆ. ಅಲ್ಲದೇ ಕೆಲವು ಮಕ್ಕಳಿಗೆ ತಿನ್ನು ತಿನ್ನು ಎಂದು ಒತ್ತಾಯಿಸುತ್ತಿರಬೇಕು. ಹಾಗಾಗಿ ಬೆಳೆಯುವ ಮಕ್ಕಳಲ್ಲಿ ಅನೇಕ ಕೊರತೆಗಳು(Health Problems) ಕಾಣಬಹುದು. ಜೊತೆಗೆ ಕೆಲವು ಪೋಷಕರು ತಮ್ಮ ಮಕ್ಕಳು ಎತ್ತರವಾಗಿ ಬೆಳೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಚಿಂತಿತರಾಗಿರುತ್ತಾರೆ. ಶೈಶವಾವಸ್ಥೆಯ ಆರಂಭದ ವರ್ಷದಿಂದ ಹದಿಹರೆಯದವರೆಗೆ, ಪ್ರೋಟೀನ್ಗಳು(Protein) ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಅದು ಬಲವಾದ ದೇಹ ಮತ್ತು ಮನಸ್ಸುಗಳಿಗೆ ಕಾರಣವಾಗುತ್ತದೆ.
ಪ್ರೋಟೀನ್ ಒಂದು ನಿರ್ಣಾಯಕ ಅಂಶವಾಗಿದೆ ಏಕೆಂದರೆ ಇದು ಸ್ನಾಯುಗಳು, ಚರ್ಮ ಮತ್ತು ಮೂಳೆಗಳಂತಹ ಅಂಗಾಂಶಗಳನ್ನು ನಿರ್ಮಿಸಲು ಕಾರಣವಾಗಿದೆ. ಮಕ್ಕಳಿಗೆ ತಮ್ಮ ಬಾಲ್ಯದಲ್ಲಿ ತಮ್ಮ ಜೀವನದ ಇತರ ಸಮಯಗಳಿಗಿಂತ ಹೆಚ್ಚಿನ ಪ್ರೋಟೀನ್ಗಳು ಬೇಕಾಗುತ್ತವೆ.
ಮಕ್ಕಳಿಗೆ ಬೇಕೆ ಬೇಕು ಪ್ರೋಟೀನ್
ಮಕ್ಕಳಿಗೆ ಆಲಿವ್ಗಳು, ಬೀಜಗಳು, ಆವಕಾಡೊಗಳು ಮತ್ತು ಸಮುದ್ರಾಹಾರ, ಹೆಚ್ಚುವರಿ ಸಕ್ಕರೆ ಇಲ್ಲದೆ ಹಾಲಿನಲ್ಲಿ ಕೇವಲ ಹಾಲಿನ ಪುಡಿ ನೀಡುವುದರಿಂದ ಪ್ರೊಟೀನ್ ಅಂಶ ಸಿಗುತ್ತದೆ.. ಜೊತಗೆ ಮನೆಯಲ್ಲಿಯೇ ಮಕ್ಕಳಿಗೆ ಪ್ರೊಟೀನ್ ಸಿಗುವ ಪ್ರೊಟೀನ್ ಪೌಡರ್ ತಯಾರಿಸಬಹುದು.
ಇದನ್ನೂ ಓದಿ: ಗಂಡನಿಗೆ ಪ್ರೋಟೀನ್ ಶೇಕ್ ಎಂದು ವಿಷ ಕೊಡುತ್ತಿದ್ದ ಹೆಂಡತಿ, ಈ ಮಟ್ಟಿಗೆ ಸಿಟ್ಟು ಯಾಕೆ?
ಮನೆಯಲ್ಲಿ ಪ್ರೊಟೀನ್ ಪೌಡರ್ ಮಾಡುವುದು ಹೇಗೆ..?
ಮಾರ್ಕೆಟ್ ನಲ್ಲಿ ದೊರೆಯುವ ಪೌಡರ್ಗಿಂತ ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪುಡಿಗಳು ಹೆಚ್ಚು ಪ್ರಯೋಜನಕಾರಿ ಮತ್ತು ತಯಾರಿಸಲು ತುಂಬಾ ಸುಲಭ. ಮನೆಯಲ್ಲಿಯೇ ಮಾಡುವ ಪ್ರೋಟೀನ್ ಪುಡಿಗಳಿಂದ ಯಾವುದೇ ಸೈಡ್ ಇಫೆಕ್ಟ್ ಇಲ್ಲದ ಮಕ್ಕಳ ಆರೋಗ್ಯ ಸುಧಾರಣೆ ಆಗಲಿದೆ. ಜೊತೆಗೆ ವಯಸ್ಕರು ಕೂಡ ಇದನ್ನು ಸೇವನೆ ಮಾಡಬಹುದಾಗಿದೆ.
ಒಂದು ಕಪ್ ಶೇಂಗಾ, ಒಂದು ಕಪ್ ಬಾದಾಮಿ, ಒಂದು ಕಪ್ ಪಿಸ್ತಾ, ಒಂದು ಕಪ್ ಗೋಡಂಬಿ, ಒಂದು ಕಪ್ ವಾಲ್ನಟ್ ತೆಗೆದುಕೊಳ್ಳಿ. ಈ ಎಲ್ಲವನ್ನೂ ಒಂದೊಂದಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿದರೆ, ಪ್ರೋಟಿನ್ ಪೌಡರ್ ರೆಡಿ. ಒಂದು ಸ್ಪೂನ್ ಪ್ರೋಟಿನ್ ಪೌಡರ್ನ್ನು ಒಂದು ಗ್ಲಾಸ್ ಹಾಲಿಗೆ ಸೇರಿಸಿ ಕುಡಿಯಬೇಕು. ಬೆಳಿಗ್ಗೆ ಶಾಲೆಗೆ ಹೋಗುವ ಹೊತ್ತಿಗೆ ಕುಡಿದರೆ ಒಳ್ಳೆಯದು.
ಇದನ್ನೂ ಓದಿ: ಪ್ರೋಟೀನ್ ಕೊರತೆ ನಿಮ್ಮ ದೇಹದ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ಗೊತ್ತಾ..!
ಇನ್ನು ದೊಡ್ಡವರು ಕೂಡ ಈ ಪ್ರೋಟಿನ್ ಪೌಡರ್ ಬಳಸಬಹುದು. ಸೌಂದರ್ಯ ವರ್ಧನೆಗೆ ರಾತ್ರಿ ಮಲಗುವ ವೇಳೆ ಪ್ರೋಟಿನ್ ಪೌಡರ್ ಮತ್ತು ಹಾಲಿನ ಜೊತೆ, ಸ್ವಲ್ಪ ಕೇಸರಿ ದಳವನ್ನು ಸೇರಿಸಿ ಕುದಿಸಿ ಕುಡಿಯಿರಿ. ಇನ್ನು ಜಿಮ್ಗೆ ಹೋಗಿ ದೇಹ ದಂಡಿಸುವವರು, ಈ ಪ್ರೋಟಿನ್ ಪೌಡರ್ ಜೊತೆ ಎರಡು ಖರ್ಜೂರ, ಅಂಜೂರ ಮತ್ತು ಒಂದು ಬಾಳೆ ಹಣ್ಣು ಸೇರಿಸಿ ಮಿಕ್ಸಿ ಮಾಡಿ, ಬನಾನಾ ಮಿಲ್ಕ್ಶೇಕ್ ಮಾಡಿ ಕುಡಿಯಬಹುದು.
ಪ್ರೊಟೀನ್ ಪೌಡರ್ ನಿಂದಾಗುವ ಲಾಭಗಳು
ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪುಡಿ ವಯಸ್ಸಾದ ಮೇಲೆ ಬರುವ ಬೆನ್ನು ಮತ್ತು ಕೀಲು ನೋವಿಗೆ ಸಹಾಯ ಮಾಡುತ್ತದೆ ಮತ್ತು ದುರ್ಬಲ ದೃಷ್ಟಿ ಹೊಂದಿರುವ ಜನರಿಗೆ ಚೆನ್ನಾಗಿ ಕೆಲಸ ಮಾಡುತ್ತದೆ. ಜೊತೆಗೆ ಈ ಪ್ರೋಟೀನ್ ಪೌಡರ್ ತಯಾರಿಕೆಯಲ್ಲಿ ಬಳಸುವ ಮೂರು ಪ್ರಮುಖ ಪದಾರ್ಥಗಳಾದ ಮಖಾನಾ, ವಾಲ್್ನಟ್ಸ್ ಮತ್ತು ಬಾದಾಮಿ ಸೂಪರ್ ಪದಾರ್ಥಗಳಾಗಿದ್ದು, ಅನೇಕ ರೀತಿಯಲ್ಲಿ ನಮಗೆ ಪ್ರಯೋಜನಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ