Breakfast Recipe: 15 ನಿಮಿಷದಲ್ಲಿ ಬಟಾಣಿ ಉಪ್ಪಿಟ್ಟು ಮಾಡೋದು ಎಷ್ಟು ಸುಲಭ ನೋಡಿ, ಮಕ್ಕಳಿಗೂ ಇಷ್ಟವಾಗುತ್ತೆ

Green Peas Upma: ಅನೇಕ ಮನೆಗಳಲ್ಲಿ ಉಪ್ಪಿಟ್ಟು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮುಖ್ಯವಾಗಿ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ. ಆದರೆ ಮಕ್ಕಳಿಗೆ ಉಪ್ಪಿಟ್ಟು ಅಂದರೆ ಇಷ್ಟವಾಗುವುದಿಲ್ಲ. ಆದರೆ ಅದನ್ನು ಮಾಡುವ ಹಲವಾರು ವಿಧಾನಗಳಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ.

ಅನೇಕ ಮನೆಗಳಲ್ಲಿ ಉಪ್ಪಿಟ್ಟು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮುಖ್ಯವಾಗಿ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ. ಆದರೆ ಮಕ್ಕಳಿಗೆ ಉಪ್ಪಿಟ್ಟು ಅಂದರೆ ಇಷ್ಟವಾಗುವುದಿಲ್ಲ. ಆದರೆ ಅದನ್ನು ಮಾಡುವ ಹಲವಾರು ವಿಧಾನಗಳಿದೆ. ಉಪ್ಪಿಟ್ಟಿನಲ್ಲಿ ಸಹ ವೆರೈಟಿ ಇದೆ. ಸಬ್ಬಕ್ಕಿ ಉಪ್ಪಿಟ್ಟು, ಓಟ್ಸ್ ಒಪ್ಪಿಟ್ಟು, ಹೀಗೆ. ಅದರಲ್ಲೂ ಹೆಚ್ಚು ಅಪರೂಪದ ವಿಧ ಎಂದರೆ ಬಟಾಣಿ ಉಪ್ಪಿಟ್ಟು. ಹುಳಿ ಹುಳಿ ಖಾರ ಖಾರ ರುಚಿಯಾಗಿರುವ ಈ ಉಪ್ಪಿಟ್ಟು ಅಂದ್ರೆ ಮಕ್ಕಳಿಗೂ ಇಷ್ಟವಾಗುತ್ತೆ. ಅಲ್ಲದೇ ಬಟಾಣಿ ಬಾಯಿಗೆ ಸಿಗುವುದರಿಂದ ಮಜಾವಾಗಿರುತ್ತದೆ. ಹಾಗಾದ್ರೆ ಕೇವಲ 15 ನಿಮಿಷದಲ್ಲಿ ಬಟಾಣಿ ಉಪ್ಪಿಟ್ಟು ಮಾಡುವ ವಿಧಾನ ಇಲ್ಲಿದೆ.

ಬಟಾಣಿ ಉಪ್ಪಿಟ್ಟು ಮಾಡುವ ವಿಧಾನ

1 ಕಪ್ ಬೇಯಿಸಿದ ಬಟಾಣಿ

2 ಕಪ್ ಉಪ್ಪಿಟ್ಟಿನ ರವೆ

3 ಕಪ್ ನೀರು

1/2 ಟೀಸ್ಪೂನ್ ಉದ್ದಿನ ಬೇಳೆ

1 ದೊಡ್ಡ ಈರುಳ್ಳಿ

1 ಟೊಮ್ಯಾಟೊ

2 ಹಸಿರು ಮೆಣಸಿನಕಾಯಿ

1 ಆಲೂಗೆಡ್ಡೆ

6 ಕರಿ ಬೇವಿನ ಎಲೆ

1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ

1/4 ಟೀಸ್ಪೂನ್ ಅರಿಶಿನ ಪುಡಿ

8 ಟೀಸ್ಪೂನ್ ಅಡುಗೆ ಎಣ್ಣೆ

ರುಚಿಗೆ ತಕ್ಕಷ್ಟು ಉಪ್ಪು

2ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ

1/2ಕಪ್ ತೆಂಗಿನ ತುರಿ

1/2ಟೀಸ್ಪೂನ್ ಸಾಸಿವೆ.

ಬಟಾಣಿ ಉಪ್ಪಿಟ್ಟು ಮಾಡುವ ವಿಧಾನ
ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ರವೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೂ ಮೊದಲು  ಈರುಳ್ಳಿ,  ಟೊಮ್ಯಾಟೊ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟುಕೊಳ್ಳಿ.

ಇದನ್ನೂ ಓದಿ: ನಿಮ್ಮ ಮುದ್ದಿನ ನಾಯಿಗೆ ಬೇಕಾದ A to Z ವಸ್ತುಗಳು ಬೆಂಗಳೂರಿನ ಈ ಅಂಗಡಿಗಳಲ್ಲಿ ಸಿಗುತ್ತೆ

ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ ಮತ್ತು ಉದ್ದಿನ ಬೆಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ.ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೊ ಹಾಕಿ.

ನಂತರ ಬೇಯಿಸಿದ ಬಟಾಣಿ,  ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಚನ್ನಾಗಿ ಹುರಿಯಿರಿ.ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದಾಗ ಕೂಡಲೇ ಹುರಿದಿಟ್ಟ  ರವೆ ಹಾಕಿ ಮುಚ್ಚಿ ಇಡಿ.

ಇದನ್ನೂ ಓದಿ: ಅಪ್ಪಿ ತಪ್ಪಿ ಕಡಿಮೆ ನೀರು ಕುಡಿದ್ರೆ ಈ ಸಮಸ್ಯೆಗಳು ಬರುತ್ತವೆ

ಎರಡು ನಿಮಿಷದ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಿ. ಮತ್ತೆ ಮುಚ್ಚಳ ಮುಚ್ಚಿ 2-3 ನಿಮಿಷಗಳ ಕಾಲ ಬೇಯಲು ಬಿಡಿ. ಗ್ಯಾಸ್ ಆಫ್ ಮಾಡಿ. 5 ನಿಮಿಷಗಳ ಹಾಗೆಯೇ ಬಿಡಿ ನಂತರ ಸೇವಿಸಿ.
Published by:Sandhya M
First published: