Chutney Recipe: ದೋಸೆ ಜೊತೆ ಬೆಳ್ಳುಳ್ಳಿ ಚಟ್ನಿ ಗಮ್ಮತ್ತೇ ಬೇರೆ -ಈ ರೆಸಿಪಿ ಟ್ರೈ ಮಾಡಿ
Garlic Chutney Recipe: ಆದರೆ ದೋಸೆಗೆ ಬೆಳ್ಳುಳ್ಳಿ (Garlic) ಚಟ್ನಿ ಇದ್ದರೆ ಅದರ ರುಚಿಯೇ ಬೇರೆ. ಬೆಳ್ಳುಳ್ಳಿ ವಿಭಿನ್ನ ಪರಿಮಳಯುಕ್ತ ರುಚಿ ಇನ್ನೂ ಬೇಕು ಅಂತ ಅನಿಸುತ್ತದೆ. ಇದನ್ನು ದೋಸೆ, ಪಟ್ಟು ಮಾತ್ರವಲ್ಲದೇ ಅನ್ನದ ಜೊತೆ ಸಹ ತಿನ್ನಬಹುದು. ಹಾಗಾದ್ರೆ ಬೆಳ್ಳುಳ್ಳಿ ಚಟ್ನಿ ಮಾಡೋದು ಹೇಗೆ ಎನ್ನುವುದು ಇಲ್ಲಿದೆ.
ಯಾವುದೇ ತಿಂಡಿಯಾಗಲಿ (Breakfast Tips) ಅದಕ್ಕೆ ಜೊತೆಗೆ ಏನಾದರೂ ಇರಲೇಬೇಕು. ಉದಾಹರಣೆಗೆ ಇಡ್ಲಿ (Idli) ಸಾಂಬಾರ್, ದೋಸೆ ಚಟ್ನಿ (Dosa) . ಈ ಚಟ್ನಿ ಎಂದರೆ ನೀರು ಚಟ್ನಿ (chutney) ಎಲ್ಲರಿಗೂ ನೆನಪಾಗುತ್ತದೆ. ಆದರೆ ದೋಸೆಗೆ ಬೆಳ್ಳುಳ್ಳಿ (Garlic) ಚಟ್ನಿ ಇದ್ದರೆ ಅದರ ರುಚಿಯೇ ಬೇರೆ. ಬೆಳ್ಳುಳ್ಳಿ ವಿಭಿನ್ನ ಪರಿಮಳಯುಕ್ತ ರುಚಿ ಇನ್ನೂ ಬೇಕು ಅಂತ ಅನಿಸುತ್ತದೆ. ಇದನ್ನು ದೋಸೆ, ಪಟ್ಟು ಮಾತ್ರವಲ್ಲದೇ ಅನ್ನದ ಜೊತೆ ಸಹ ತಿನ್ನಬಹುದು. ಹಾಗಾದ್ರೆ ಬೆಳ್ಳುಳ್ಳಿ ಚಟ್ನಿ ಮಾಡೋದು ಹೇಗೆ ಎನ್ನುವುದು ಇಲ್ಲಿದೆ.
ಒಂದು ಬಾಣಲೆಯನ್ನು ತೆಗೆದುಕೊಂಡು ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಜೀರಿಗೆ ಹಾಕಿ. ಅದಕ್ಕೆ ಶುಂಠಿಯನ್ನು ಚನ್ನಾಗಿ ಜಜ್ಜಿಕೊಂಡು ಹಾಕಿ ಜೊತೆಗೆ ಬೆಳ್ಳುಳ್ಳಿ ಸೇರಿಸಿ ಚನ್ನಾಗಿ ಫ್ರೈ ಮಾಡಿಕೊಳ್ಳಿ.
ಬೆಳ್ಳುಳ್ಳಿ ಎಸಳುಗಳು ಕಂದು ಬಣ್ಣಕ್ಕೆ ತಿರುಗಿದ ಮೇಲೆ, ಕೆಂಪು ಮೆಣಸನ್ನು ಸೇರಿಸಿ.ನಂತರ 3 ನಿಮಿಷಗಳ ಕಾಲ ಹುರಿಯಬೇಕು. ಹುರಿದುಕೊಂಡು ನಂತರ ಉಪ್ಪು ಮತ್ತು ಅರಿಶಿನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಎಲ್ಲ ಪದಾರ್ಥಗಳು ಹುರಿದ ಮೇಲೆ ಆಫ್ ಮಾಡಿ ಆರಿಸಲು ಬಿಡಿ. ತಣ್ಣಗಾದ ನಂತರ ಮಿಕ್ಸ್ರ್ ಜಾರಿಗೆ ಹಾಕಿ ನುಣ್ಣಗೆ ಪೇಸ್ಟ್ ರೀತಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ನಿಂಬೆ ರಸ ಹಾಕಿದರೆ ರುಚಿ ರುಚಿಯಾದ ಬೆಳ್ಳುಳ್ಳಿ ಚಟ್ನಿ ರೆಡಿ.
Published by:Sandhya M
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ