Breakfast Recipe: ರೊಟ್ಟಿ ಜೊತೆ ಸುಟ್ಟ ಈರುಳ್ಳಿ ಚಟ್ನಿ ಇದ್ರೆ, ಆಹಾ! ಅದ್ರ ಟೇಸ್ಟೇ ಬೇರೆ

Onion Chutney Recipe: ನಂತರ ಫ್ರೈ ಮಾಡಿದ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಅದರ ಸಿಪ್ಪೆ ತೆಗೆದು, ಮಿಕ್ಸಿ ಜಾರಿಗೆ ಹಾಕಿ. ಅದೇ ಜಾರಿಗೆ ಮೊದಲೇ ತಯಾರಿಸಿಕೊಂಡ ಒಗ್ಗರಣೆ ಮಿಶ್ರಣವನ್ನು ಹಾಕಿ. 

ಈರುಳ್ಳಿ ಚಟ್ನಿ

ಈರುಳ್ಳಿ ಚಟ್ನಿ

  • Share this:
ದಕ್ಷಿಣ ಭಾರತದ (South Indian) ಭಕ್ಷ್ಯಗಳು (Foods) ವಿಭಿನ್ನ ಪಾಕ ಪದ್ಧತಿಯನ್ನು (Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆ. ಇನ್ನು ಇಲ್ಲಿ ಚಪಾತಿ, ರೊಟ್ಟಿಯ ಜೊತೆ ಪಲ್ಯ, ಚಟ್ನಿ ಇರಲೇಬೇಕು. ಹಾಗಾಗಿ ಇವತ್ತು ರುಚಿಕರ ಸುಟ್ಟ ಈರುಳ್ಳಿ ಚಟ್ನಿ (Onion Chutney) ಮಾಡುವ ವಿಧಾನ ಇಲ್ಲಿದೆ.

ಸುಟ್ಟ ಈರುಳ್ಳಿ ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು

6 ಸಣ್ಣ ಈರುಳ್ಳಿ•

6 ರಿಂದ 7 ಬೆಳ್ಳುಳ್ಳಿ ಎಸಳುಗಳು

2 ಟೀಸ್ಪೂನ್ ಎಣ್ಣೆ

1 ಟೀಸ್ಪೂನ್ ಉದ್ದಿನ ಬೇಳೆ

1 ಚಮಚ ಕಡೆಲೆ ಬೇಳೆ

1 ಟೀಸ್ಪೂನ್ ಕೊತ್ತಂಬರಿ ಬೀಜ

4 ಒಣ ಮೆಣಸಿನಕಾಯಿ

ಕರಿಬೇವಿನ ಎಲೆಗಳು 10

ಹುಣಸೆಹಣ್ಣು

½ ಟೀಸ್ಪೂನ್

ಉಪ್ಪು ರುಚಿಗೆ ತಕ್ಕಷ್ಟು

ನೀರು

ಸಾಸಿವೆ

ಇಂಗು

ಒಂದು ಚಮಚ ಅರಿಶಿನ

ಮೆಣಸಿನ ಪುಡಿ ಅರ್ಧ ಚಮಚ

ಸುಟ್ಟ  ಈರುಳ್ಳಿ ಚಟ್ನಿ ಮಾಡುವ ವಿಧಾನ

ಮೊದಲು, ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ  ಫ್ರೈ ಮಾಡಿಕೊಳ್ಳಿ. ಈರುಳ್ಳಿ ಮೃದುವಾಗಿ ಕಂದು ಬಣ್ಣಕ್ಕೆ ಬರುವವರೆಗೂ ಅದನ್ನು ಫ್ರೈ ಮಾಡುತ್ತಿರಿ. ಎಲ್ಲವೂ ಸರಿಯಾಗಿ ಫ್ರೈ ಆದ ನಂತರ ಅದನ್ನು ಬದಿಗಿರಿಸಿ. ಆರಲು ಬಿಡಿ.

ಇದನ್ನೂ ಓದಿ: ಹಸಿ ಮೆಣಸಿನಕಾಯಿ ಎರಡೇ ದಿನಕ್ಕೆ ಹಾಳಾಗ್ತಿದ್ರೆ ಹೀಗೆ ಸ್ಟೋರ್​ ಮಾಡಿ

ಈಗ ಒಂದು ಬಾಣಲಿಯನ್ನು ತೆಗೆದುಕೊಂಡು 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ, 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಣ ಮೆಣಸಿನಕಾಯಿ ಮತ್ತು  ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಅದನ್ನು ಸಹ ಆರಲು ಬಿಡಿ.

ನಂತರ ಫ್ರೈ ಮಾಡಿದ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಅದರ ಸಿಪ್ಪೆ ತೆಗೆದು, ಮಿಕ್ಸಿ ಜಾರಿಗೆ ಹಾಕಿ. ಅದೇ ಜಾರಿಗೆ ಮೊದಲೇ ತಯಾರಿಸಿಕೊಂಡ ಒಗ್ಗರಣೆ ಮಿಶ್ರಣವನ್ನು ಹಾಕಿ.  ಅದಕ್ಕೆ  ಹುಣಸೆಹಣ್ಣು, ½ ಟೀಸ್ಪೂನ್ ಉಪ್ಪು ಮತ್ತು ¾ ಕಪ್ ನೀರು ಸೇರಿಸಿ ಪೇಸ್ಟ್ ರೀತಿ ರುಬ್ಬಿಕೊಳ್ಳಿ.

ಇದನ್ನೂ ಓದಿ: ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿಂದ್ರೆ ಯಾವುದೇ ರೋಗಗಳು ಕಾಡಲ್ವಂತೆ

ಈಗ ಮತ್ತೊಮ್ಮೆ ಬಾಣಲಿಗೆ ಎಣ್ಣೆ ಹಾಕಿ ಕಾಯಿಸಿ, ಆ ಎಣ್ಣೆಗೆ  1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, 1 ಒಣ ಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆಗಳು ಮತ್ತು ಚಿಟಿಕೆ ಇಂಗನ್ನು ಹಾಕಿ, ಜೊತೆಗೆ, ¼ ಟೀಸ್ಪೂನ್ ಅರಿಶಿನ  ಸೇರಿಸಿ ಒಂದು ನಿಮಿಷ ಫ್ರೈ ಮಾಡಿ.  ಈಗ ಅದಕ್ಕೆ ಈಗಾಗಲೇ ರುಬ್ಬಿಕೊಂಡಿರುವ ಈರುಳ್ಳಿ ಮಿಶ್ರಣವನ್ನು ಹಾಕಿ ಕಲಸಿ, ಹಸಿ ವಾಸನೆ ಇದ್ದರೆ ಹೋಗುವ ತನಕ ಬೇಯಿಸಿ. ನಂತರ  ½ ಕಪ್ ನೀರು ಸೇರಿಸಿ, ಕಲಸಿದರೆ, ಸುಟ್ಟ ಈರುಳ್ಳಿ ಚಟ್ನಿ ರೆಡಿ.
Published by:Sandhya M
First published: