Exam Tips: ಒಂದೇ ತಿಂಗಳಲ್ಲಿ ಪರೀಕ್ಷೆಗೆ ರೆಡಿಯಾಗೋದು ಹೇಗೆ? ಹೀಗೆ ಮಾಡಿ ಒಳ್ಳೆ ಮಾರ್ಕ್ಸ್ ಬರುತ್ತೆ!

Exam preparation: ನೀವು ಪರೀಕ್ಷೆಗೆ ಸಿದ್ದವಾಗುತ್ತಿದ್ದಾರೆ ಎಂದರೇ ಮೊದಲು ಟೈಮ್ ಟೇಬಲ್ ಹಾಕಿಕೊಳ್ಳುವುದು ಉತ್ತಮ. ಯಾವ ವಿಷಯಕ್ಕೆ ಎಷ್ಟು ಸಮಯ ನೀಡಬೇಕು ಯಾವ ವಿಷಯದ ಮೇಲೆ ಎಷ್ಟು ಅವಧಿ ಓದಬೇಕು, ಇತರ ಚಟುವಟಿಕೆಗಳಿಗೆ ಎಷ್ಟು ಸಮಯ ನೀಡಬೇಕು ಎಂಬ ಟೈಮ್ ಟೇಬಲ್ ಹಾಕಿಕೊಂಡು ಓದಲು ಪ್ರಾರಂಭಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಾರ್ಚ್(March) ತಿಂಗಳು(Month) ಸಮೀಪಿಸುತ್ತಿದೆ.. ಶಾಲಾ(School) ಕಾಲೇಜು ವಿದ್ಯಾರ್ಥಿಗಳಿಗೆ(Student) ಪರೀಕ್ಷೆಯ(Exam) ಸಮಯ(Time).. ಇದರಲ್ಲಿ ಎಸ್ಸೆಸ್ಸೆಲ್ಸಿ(SSLC) ಹಾಗೂ ಪಿಯುಸಿ(PUC) ವಿದ್ಯಾರ್ಥಿಗಳಿಗೆ ಈ ಸಮಯ ಬಹುಮುಖ್ಯವಾದದ್ದು.. ಹೀಗಾಗಿ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಶ್ರಮವಹಿಸಿ ಅಧ್ಯಯನ(Study) ಮಾಡುತ್ತಿದ್ದಾರೆ. ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಅಂತಿಮ ಹಂತದ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದಾರೆ.. ಕೆಲವೊಂದಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಆರಂಭಿಸುವುದು ಸೂಕ್ತ.. ಅಲ್ಲದೇ ವಿದ್ಯಾರ್ಥಿಗಳಿಗೆ ಹೇಗೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು ಎಂಬ ಮಾರ್ಗದರ್ಶನ ಈ ಸಮಯದಲ್ಲಿ ಅತ್ಯವಶ್ಯಕ.. ಆಗಿದ್ರೆ ವಿದ್ಯಾರ್ಥಿಗಳು ಪರೀಕ್ಷೆಗೆ ಯಾವ ರೀತಿ ತಯಾರಾಗಬೇಕು ಎಂಬ ಮಾಹಿತಿ ಇಲ್ಲಿದೆ.

    1)ಏಕಾಗ್ರತೆ: ಈಗಂತೂ ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ ಟಿವಿ ಯುಗ. ಸದ್ಯದ ಮಟ್ಟಿಗೆ ಅಂದರೆ ಪರೀಕ್ಷೆ ಮುಗಿಯುವರೆಗೆ ಅದಕ್ಕೆಲ್ಲಕ್ಕೂ ವಿದಾಯ ಹೇಳಿ ಬಿಡಿ. ಫೋನ್‌ ಸ್ವಿಚ್‌ ಆಫ್‌ ಆಗಿರಲಿ. ಸಾಧ್ಯವಾದಷ್ಟು ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳಿ. ಮನೆಯವರಿಗೂ ನಿಮ್ಮನ್ನು ಡಿಸ್ಟರ್ಬ್‌ ಮಾಡದಂತೆ ಹೇಳಿ. ಒಂದೇ ಸ್ಥಳದಲ್ಲಿ ಕುಳಿತುಕೊಂಡು ಆ ವಾತಾವರಣಕ್ಕೆ ಮನಸ್ಸು ಹೊಂದಿಕೊಳ್ಳುವಂತೆ ನೋಡಿಕೊಂಡು ಅಲ್ಲೇ ಅಧ್ಯಯನ ಮಾಡಿ. ಗೆಳೆಯ-ಗೆಳತಿಯರು, ಕ್ರಿಕೆಟ್‌ ಪಂದ್ಯ ಮೊದಲಾದ ಆಕರ್ಷಣೆಗೆ ಒಳಗಾಗಬೇಡಿ. ಸಾಧ್ಯವಾದರೆ ನಿಮ್ಮ ಮನಸ್ಥಿತಿಗೆ ಹೊಂದುವ ಗೆಳೆಯರೊಂದಿಗೆ ಗ್ರೂಪ್‌ ಸ್ಟಡಿ ಬೇಕಾದರೆ ಮಾಡಿ.

    ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾದವರು ಈ ಯೋಗಾಸನಗಳನ್ನು ಮಾಡುವುದು ಒಳಿತು..

    2) ಸಮಯ ನಿರ್ವಹಣೆ: ಪರೀಕ್ಷೆಗೆ ಓದುವ ಸಮಯದಲ್ಲಿ ನೀವು ಹೇಗೆ ಯಾವ ವಿಷಯಕ್ಕೆ ಎಷ್ಟು ಸಮಯ ಕೊಡುತ್ತೀರಾ ಎಂಬುದು ಬಹುಮುಖ್ಯ.. ಇಡೀ ದಿನ ಒಂದು ವಿಷಯ ಓದುವುದಲ್ಲ.. ಅದರ ಬದಲಿಗೆ ಯಾವ ವಿಷಯಕ್ಕೆ ಎಷ್ಟು ಸಮಯ ಕೊಡುತ್ತೀರಾ ಎಂಬುದನ್ನು ನಿರ್ಧಾರ ಮಾಡಿಕೊಂಡು ಓದಿ.. ದೀರ್ಘಾವಧಿ ಯಾವುದು ನಿಮಗೆ ಯಾವ ವಿಷಯದ ಮೇಲೆ ಆಸಕ್ತಿ ಬರುವಂತೆ ಮಾಡಬಹುದು.. ಅಲ್ಲದೇ ಓದುವ ಸಮಯದಲ್ಲಿ ಸಮಯವನ್ನು ಹೇಗೆ ನಿರ್ವಹಣೆ ಮಾಡುತ್ತೀರಾ ಎಂಬುದನ್ನು ಕಲಿಯಿರಿ.

    3) ಟಿಪ್ಪಣಿಗಳನ್ನು ತಯಾರಿಸಿ: ನೀವು ಓದುವ ಸಮಯದಲ್ಲಿ ಕೇವಲ ಓದು ಕೊಂಡುಹೋಗುವ ಅಭ್ಯಾಸವನ್ನು ಇಟ್ಟುಕೊಳ್ಳಬೇಡಿ.. ನೀವು ಏನು ಓದುತ್ತಿರುವ ಅದರಲ್ಲಿ ಕೆಲವೊಂದು ಟಿಪ್ಪಣಿ ಅಂಶಗಳನ್ನು ಬರೆದಿಟ್ಟುಕೊಳ್ಳಿ.. ಸಮಯ ಸಿಕ್ಕಾಗಲೆಲ್ಲಾ ಈ ಟಿಪ್ಪಣಿ ಅಂಶಗಳ ಕಡೆಗೆ ಕಣ್ಣಾಡಿಸುವುದು ರಿಂದ ನಿಮಗೆ ಆ ವಿಷಯ ಸದಾ ನೆನಪಿನಲ್ಲಿ ಉಳಿಯುತ್ತದೆ.

    4) ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ನೋಡಿ: ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಹಲವು ವರ್ಷದ ಪ್ರಶ್ನೆಗಳು ಪುನರಾವರ್ತನೆ ಯಾಗಿರುತ್ತದೆ.. ಹೀಗಾಗಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಹಿಂದಿನ ಹಲವು ವರ್ಷಗಳ ಪ್ರಶ್ನೆಪತ್ರಿಕೆಯನ್ನು ನೋಡಿ ಅಭ್ಯಾಸಮಾಡಿದರೆ ಪರೀಕ್ಷೆ ಸಮಯದಲ್ಲಿ ಅದು ಉಪಯೋಗಕ್ಕೆ ಬರಲಿದೆ.

    5) ಪರೀಕ್ಷೆ ಆರಂಭಕ್ಕೆ ಕೆಲವೇ ಸಮಯ ಇರುವಾಗ ಓದಬೇಡಿ: ಕೆಲವರು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆಗೆ ಕೆಲವೇ ಕೆಲವು ಗಂಟೆಗಳ ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ.. ಆದರೆ ಹೀಗೆ ಮಾಡುವುದರಿಂದ ನಿಮಗೆ ನೆನಪಿರುವ ವಿಷಯವು ಮರೆತು ಹೋಗುವ ಸಾಧ್ಯತೆಯಿರುತ್ತದೆ.. ಪರೀಕ್ಷೆಗೆ ಕೆಲವು ಗಂಟೆಗಳು ಉಳಿದಿರುವಾಗ ಆದಷ್ಟು ನೀವು ಓದುವುದನ್ನು ನಿಲ್ಲಿಸಿ ನಿಮ್ಮ ಮನಸ್ಸನ್ನೂ ಏಕಾಗ್ರತೆಯಿಂದ ಇಟ್ಟುಕೊಳ್ಳಿ.

    6) ಭಯಪಡಬೇಡಿ: ಕೆಲವು ಮಕ್ಕಳಿಗೆ ಪರೀಕ್ಷೆ ಅಂದರೆ ಭಯ.. ಹೀಗಾಗಿ ಮಕ್ಕಳು ಪರೀಕ್ಷೆ ಸಮಯದಲ್ಲಿ ಹೆಚ್ಚು ಭಯಭೀತರಾಗುವ ಸಾಧ್ಯತೆ ಇರುತ್ತದೆ.. ಆದರೆ ಭಯ ಪಡದೆ ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸುವ ಹವ್ಯಾಸ ಇಟ್ಟುಕೊಳ್ಳಬೇಕು.

    7) 24 ಗಂಟೆಗಳ ಮೊದಲು ಎಲ್ಲಾ ಓದು ಮುಗಿಸಿ: ಪರೀಕ್ಷೆಗೆ 24 ಗಂಟೆ ಇದೆ ಎನ್ನುವಾಗಲೇ ನೀವು ಎಲ್ಲರಿಗೂ ಓದು ಮುಗಿಸಿ ಕೇವಲ ಮನನ ಮಾಡಿಕೊಳ್ಳಿ.. ಅಂತಿಮ ಹಂತದಲ್ಲಿ ಸಿದ್ಧತೆ ಮಾಡುವುದರಿಂದ ನಿಮಗೆ ಸಾಕಷ್ಟು ಗೊಂದಲ ಉಂಟಾಗಬಹುದು..

    ಇದನ್ನೂ ಓದಿ: ಒತ್ತಡದ ಜೀವನಶೈಲಿಯಿಂದ ಹೊರಬರಲು ತಪ್ಪದೇ ಈ ಹವ್ಯಾಸ ಬೆಳೆಸಿಕೊಳ್ಳಿ

    8) ಟೈಮ್ ಟೇಬಲ್ ಹಾಕಿಕೊಳ್ಳಿ: ನೀವು ಪರೀಕ್ಷೆಗೆ ಸಿದ್ದವಾಗುತ್ತಿದ್ದಾರೆ ಎಂದರೇ ಮೊದಲು ಟೈಮ್ ಟೇಬಲ್ ಹಾಕಿಕೊಳ್ಳುವುದು ಉತ್ತಮ. ಯಾವ ವಿಷಯಕ್ಕೆ ಎಷ್ಟು ಸಮಯ ನೀಡಬೇಕು ಯಾವ ವಿಷಯದ ಮೇಲೆ ಎಷ್ಟು ಅವಧಿ ಓದಬೇಕು, ಇತರ ಚಟುವಟಿಕೆಗಳಿಗೆ ಎಷ್ಟು ಸಮಯ ನೀಡಬೇಕು ಎಂಬ ಟೈಮ್ ಟೇಬಲ್ ಹಾಕಿಕೊಂಡು ಓದಲು ಪ್ರಾರಂಭಿಸಿ.
    Published by:ranjumbkgowda1 ranjumbkgowda1
    First published: