Breakfast Recipe: ಎಗ್​ ಲೆಸ್​ ಆಮ್ಲೆಟ್​ ಮಾಡೋಕೆ ಕೇವಲ 10 ನಿಮಿಷ ಸಾಕು

Egg Less Amlet Recipe; ಆಮ್ಲೆಟ್​ ಎಂದರೆ ಸಾಮಾನ್ಯವಾಗಿ ಮೊಟ್ಟೆ ಬಳಸಿ ಮಾಡಲಾಗುತ್ತದೆ ಆದರೆ ಆದರೆ ಇದಕ್ಕೆ ಕೇವಲ ಕಡಲೆ ಹಿಟ್ಟು ಸಾಕು. ಮುಂಜಾನೆ ಉಪಾಹಾರಕ್ಕಾಗಿ ಅಥವಾ ಟಿಫಿನ್ ಬಾಕ್ಸ್‌ಗೆ ಸಹ ಈ ಎಗ್​ಲೆಸ್​ ಆಮ್ಲೆಟ್​ ಉತ್ತಮವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ (South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆದರೆ, ಇನ್ನಿತರೆ ಭಕ್ಷ್ಯಗಳನ್ನು ಕಡಿಮೆ ಜನರು ಪ್ರಯತ್ನಿಸಿ ಮಾಡಿಕೊಳ್ಳುವುದುಂಟು. ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆಯೋ ಹಾಗೆಯೇ ಕೆಲವರಿಗೆ ದೋಸೆಯಲ್ಲಿ ವಿಭಿನ್ನವಾದದ್ದನ್ನ ಪ್ರಯತ್ನಿಸುವ ಆಸೆ ಇರುತ್ತದೆ. ದೋಸೆ ಎಂದರೆ ಎಲ್ಲರಿಗೂ ನೆನಪಾಗುವುದು ಖಾಲಿ ದೋಸೆ, ಮಸಾಲೆ ದೋಸೆ, ಸೆಟ್​ ದೋಸೆ ಹೀಗೆ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಎಗ್​ ಲೆಸ್​ ಆಮ್ಲೆಟ್​

ಆಮ್ಲೆಟ್​ ಎಂದರೆ ಸಾಮಾನ್ಯವಾಗಿ ಮೊಟ್ಟೆ ಬಳಸಿ ಮಾಡಲಾಗುತ್ತದೆ ಆದರೆ ಆದರೆ ಇದಕ್ಕೆ ಕೇವಲ ಕಡಲೇ ಹಿಟ್ಟು ಸಾಕು. ಮುಂಜಾನೆ ಉಪಾಹಾರಕ್ಕಾಗಿ ಅಥವಾ ಟಿಫಿನ್ ಬಾಕ್ಸ್‌ಗೆ ಸಹ ಈ ಎಗ್​ಲೆಸ್​ ಆಮ್ಲೆಟ್​ ಉತ್ತಮವಾಗಿದೆ. ಇತರ ಸಾಂಪ್ರದಾಯಿಕ ದಕ್ಷಿಣ ಭಾರತದ ದೋಸೆ ಪಾಕವಿಧಾನಕ್ಕಿಂತ ಇದು ಭಿನ್ನವಾಗಿದೆ.

ಇನ್ನೂ ಈ ಆಮ್ಲೆಟ್ ಅನ್ನು ಕೇವಲ 10 ನಿಮಿಷದಲ್ಲಿ ಮನೆಯಲ್ಲಿ ಇರುವ ಕೆಲವೇ ಪದಾರ್ಥಗಳನ್ನು ಬಳಸಿ ತಯಾರಿಸಬಹುದಾಗಿದೆ. ಈಗ ಮಕ್ಕಳಿಗೆ ಶಾಲೆ ಆರಂಭವಾಗಿದೆ ಎಲ್ಲವೂ ಬೆಳಗ್ಗೆ ಗಡಿಬಿಡಿಯಾಗುವುದರಿಂದ ಈ ಸಮಯದಲ್ಲಿ ನಿಮಗೆ ಈ ಎಗ್​ ಲೆಸ್​ ಆಮ್ಲೆಟ್​ ಸಹಾಯ​  ಮಾಡುತ್ತದೆ. ಹಾಗಾದ್ರೆ ಎಗ್​ ಲೆಸ್​ ಆಮ್ಲೆಟ್​ ಮಾಡುವುದು ಹೇಗಿದೆ ಇಲ್ಲಿದೆ ನೋಡಿ

ಎಗ್​ ಲೆಸ್​ ಆಮ್ಲೆಟ್​ ಮಾಡಲು ಬೇಕಾಗುವ ಸಾಮಾಗ್ರಿಗಳು

ಕಡಲೇ ಹಿಟ್ಟು - 1 ಕಪ್

ಜೀರಿಗೆ ಪುಡಿ - 1 ಚಮಚ

ಟೊಮ್ಯಾಟೋ- 2

ಈರುಳ್ಳಿ - 1

ನೀರು- ಸ್ವಲ್ಪ

ಉಪ್ಪು - ರುಚಿಗೆ ತಕ್ಕಷ್ಟು

ಹಸಿ ಮೆಣಸು- 2 (ಸಣ್ಣದಾಗಿ ಹೆಚ್ಚಿಕೊಳ್ಳಿ)

ಇದನ್ನೂ ಓದಿ: ಮಕ್ಕಳಿಗೆ ಈ ಅಭ್ಯಾಸ ಮಾಡಿಸಿದ್ರೆ ತುಂಬಾ ಸ್ಮಾರ್ಟ್​ ಆಗ್ತಾರಂತೆ

ಎಗ್​ ಲೆಸ್​ ಆಮ್ಲೆಟ್​ ಮಾಡುವ ವಿಧಾನ

ಮೊದಲು ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ  ಕಡಲೆಹಿಟ್ಟು ಹಾಕಿ, ಅದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಕಲಸಿ. ಇದನ್ನು ಕಲಸುವಾಗ ಹೆಚ್ಚು ಜಾಗರೂಕತೆಯಿಂದ ಕಲಸಬೇಕು. ಇದು ಬಹು ಬೇಗ ಗಂಟು ಗಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ನೀರನ್ನು ಸಹ ಎಚ್ಚರಿಕೆಯಿಂದ ಹಾಕಬೇಕಾಗುತ್ತದೆ. ಒಂದು ಬಾರಿ ಸರಿಯಾಗಿ ಗಂಟು ಉಂಟಾಗದೆ ಮಿಶ್ರಣವಾದ ಮೇಲೆ ಅದಕ್ಕೆ ಉಪ್ಪು, ಜೀರಿಗೆ ಪುಡಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ನೀವು ಒಮ್ಮೆ ಹಿಟ್ಟಿನ ರುಚಿ ನೋಡಿ ಅಗತ್ಯವಿದ್ದರೆ ಉಪ್ಪನ್ನ ಹಾಕಬಹುದು.

ಇದನ್ನೂ ಓದಿ: ರಾತ್ರಿ ನಿದ್ರೆ ಬರ್ತಿಲ್ಲ ಅಂದ್ರೆ ಮಿಸ್​ ಮಾಡ್ದೇ ಈ ಟಿಪ್ಸ್ ಫಾಲೋ ಮಾಡಿ

ನಂತರ ಆ ಮಿಶ್ರಣಕ್ಕೆ ಹೆಚ್ಚಿಕೊಂಡ  ಹಸಿ ಮೆಣಸನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ.  ಇನ್ನು ಅಗತ್ಯವಿದ್ದರೆ ನೀವು ಈ ಮಿಶ್ರಣಕ್ಕೆ ಸಾಸಿವೆ ಒಗ್ಗರಣೆಯನ್ನು ಸಹ ಹಾಕಬಹುದು ಅದು ವಿಭಿನ್ನವಾದ ರುಚಿ ನೀಡುತ್ತದೆ, ಅಲ್ಲದೆ ಸ್ವಲ್ಪ ಖಾರದ ಪುಡಿ ಅಥವಾ ಚಾಟ್​ ಮಸಾಲೆ ಸೇರಿಸಿದರೆ ಇನ್ನು ಹೆಚ್ಚಿನ ರುಚಿ ನೀಡುತ್ತದೆ.ಇನ್ನು ಇವೆಲ್ಲದರ ಮಿಶ್ರಣದ ಮಾಡಿದರೆ ಹಿಟ್ಟು ಸಿದ್ದವಾದಂತೆ. ಅದನ್ನು ಈಗ ಒಂದು ತವಾ ವನ್ನು ಕಾಯಿಸಿ ದೋಸೆ ಮಾಡಿ, ಕಾಯಿ ಅಥವಾ ಬೆಳ್ಳುಳ್ಳಿ ಚಟ್ನಿ ಜೊತೆ ನೀಡಿದರೆ ಟೇಸ್ಟ್ ಸೂಪರ್.
Published by:Sandhya M
First published: