Batasha: ಅಯ್ಯೋ, ಹೀಗೆಲ್ಲಾ ತಯಾರಿಸ್ತಾರಾ ಬೆಂಡು-ಬತ್ತಾಸು? ತಿನ್ನೋ ಮುಂಚೆ ಇಲ್ಲೊಮ್ಮೆ ನೋಡಿ

ಈ ಭಾರತೀಯ ಸಿಹಿತಿಂಡಿಯು ದೀಪಾವಳಿ ಹಬ್ಬ, ಜಾತ್ರೆ ಸಮಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಇದನ್ನು ಗಣೇಶ ಮತ್ತು ಲಕ್ಷ್ಮಿ ದೇವಿಗೆ ಮಂಡಕ್ಕಿ ಜೊತೆಗೆ ಸಮರ್ಪಿಸಲಾಗುತ್ತದೆ. ಇಷ್ಟೆಲ್ಲಾ ದೈವೀಕವಾಗಿರುವ ಬೆಂಡು ಬತ್ತಾಸು ತಯಾರಿಕೆಯ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದರೆ ಜನರು ಬೆಂಡು-ಬತ್ತಾಸು ದೇವರಿಗೆ ಅರ್ಪಿಸುವುದಿರಲಿ ತಿನ್ನೋದು ಬಿಟ್ರೂ ಆಶ್ಚರ್ಯವಿಲ್ಲ.

ಬೆಂಡು-ಬತ್ತಾಸು

ಬೆಂಡು-ಬತ್ತಾಸು

  • Share this:
ಜಾತ್ರೆ, ಪೂಜಾ ಸಾಮಾಗ್ರಿ ಅಂಗಡಿಯಲ್ಲಿ (Shops) ಈ ಮಂಡಕ್ಕಿ, ಜೆಲೇಬಿ ಜೊತೆಗೆ ಕಣ್ಮನ ಸೆಳೆಯುವ ಮತ್ತೊಂದು ತಿಂಡಿಯೆಂದರೆ ಅದು ಬೆಂಡು-ಬತ್ತಾಸು (Batasha). ಈ ಸಿಹಿ ಮತ್ತು ಗರಿಗರಿಯಾದ ಸಕ್ಕರೆ ತಿಂಡಿಯನ್ನು ಭಾರತೀಯ ದೇವತೆಗಳಿಗೆ (Indian Goddess) ನೈವೇದ್ಯಕ್ಕೆ ಇಡಲಾಗುತ್ತದೆ . ಸಕ್ಕರೆ ಮತ್ತು ನೀರಿನಿಂದ ತಯಾರಿಸಲಾದ ಈ ಪ್ರಾಚೀನ ಬಿಳಿ ಸಿಹಿತಿಂಡಿಯು (Snacks) ಯಾವುದೇ ಪೂಜಾ ಸಾಮಾಗ್ರಿ ಅಂಗಡಿಯಲ್ಲಿ ಅಥವಾ ಸಾಮಾನ್ಯ ದಿನಸಿ ಅಂಗಡಿಯಲ್ಲಿ ಸುಲಭವಾಗಿ ಲಭ್ಯವಾಗುತ್ತದೆ. ಈ ಭಾರತೀಯ ಸಿಹಿತಿಂಡಿಯು ದೀಪಾವಳಿ ಹಬ್ಬ, ಜಾತ್ರೆ ಸಮಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಇದನ್ನು ಗಣೇಶ ಮತ್ತು ಲಕ್ಷ್ಮಿ ದೇವಿಗೆ ಮಂಡಕ್ಕಿ ಜೊತೆಗೆ ಸಮರ್ಪಿಸಲಾಗುತ್ತದೆ.

ಇಷ್ಟೆಲ್ಲಾ ದೈವೀಕವಾಗಿರುವ ಬೆಂಡು ಬತ್ತಾಸು ತಯಾರಿಕೆಯ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದರೆ ಜನರು ಬೆಂಡು-ಬತ್ತಾಸು ದೇವರಿಗೆ ಅರ್ಪಿಸುವುದಿರಲಿ ತಿನ್ನೋದು ಬಿಟ್ರೂ ಆಶ್ಚರ್ಯವಿಲ್ಲ.

ಬೆಂಡು-ಬತ್ತಾಸು ತಿನ್ನೋ ಮುನ್ನ ಈ ವಿಡಿಯೋ ನೋಡಿ 
ನಮ್ಮಲ್ಲಿ ಅನೇಕರಿಗೆ ಬೆಂಡು ಬತ್ತಾಸು ರುಚಿ ಮಾತ್ರ ಗೊತ್ತು ಆದರೆ ಅದನ್ನು ಹೇಗೆ ತಯಾರಿಸುತ್ತಾರೆ ಅಂತಾನೇ ಗೊತ್ತಿಲ್ಲ. ಇತ್ತೀಚೆಗೆ, ಫುಡೀ ಇನ್ಕಾರ್ನೇಟ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆದಾರರಾದ ಫುಡ್ ಬ್ಲಾಗರ್ ಅಮನ್ ಸಿರೋಹಿ ಹಂಚಿಕೊಂಡ ವಿಡಿಯೋದಲ್ಲಿ ಈ ಬೆಂಡು- ಬತ್ತಾಸನ್ನು ಹೇಗೆ ತಯಾರಿಸಲಾಗುತ್ತದೆ ಎಂದು ತೋರಿಸಲಾಗಿದೆ.

ಇದನ್ನೂ ಓದಿ: Chief Candy Officer: ಟಾಫಿ, ಕ್ಯಾಂಡಿ ತಿಂದು ಟೇಸ್ಟ್​ ಹೇಳಿ... ಪ್ರತಿ ತಿಂಗಳು ಸಿಗುತ್ತೆ ಆರೂವರೆ ಲಕ್ಷ ರೂಪಾಯಿ ಸ್ಯಾಲರಿ!

ಆಗ್ರಾದ ಹಾಜಿ ಬಟಾಶಾ ಶಾಪ್ ಅನ್ನು ವಿಡಿಯೋ ಒಳಗೊಂಡಿದೆ, ಅಲ್ಲಿ ಪ್ರತಿದಿನ ಸಾಕಷ್ಟು ಬೆಂಡು- ಬತ್ತಾಸನ್ನು ತಯಾರಿಸಲಾಗುತ್ತದೆ. 3.30 ನಿಮಿಷಗಳ ವಿಡಿಯೋದಲ್ಲಿ ಬೆಂಡು- ಬತ್ತಾಸನ್ನು ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ತೋರಿಸುವುದರ ಜೊತೆಗೆ ಅಲ್ಲಿನ ಅಶುಚಿಯನ್ನು ಸಹ ಬಹಿರಂಗ ಪಡಿಸಲಾಗಿದೆ. ಅಷ್ಟೇ ಅಲ್ಲ ವಿಡಿಯೋ ನೋಡಿದ ಹಲವರಿಗೆ ಹೀಗೆ ತಯಾರಿಸುವ ಬೆಂಡು- ಬತ್ತಾಸನ್ನು ನಾವು ದೇವರಿಗೆ ಅರ್ಪಿಸಬೇಕಾ ಎಂದೆನಿಸುವುದು ಗ್ಯಾರೆಂಟಿ.

ಅಶುಚಿ ಜೊತೆ ಬೆಂಡು ಬತ್ತಾಸು ತಯಾರಿಕೆ
ಮೊದಲಿಗೆ ಬೆಂಡು-ಬತ್ತಾಸು ತಯಾರಿಸುವ ಪಾತ್ರೆ ಒಳಗೆ ಒಬ್ಬ ಕೂತುಕೊಂಡು ನೀರು ಹಾಕಿ ಪೊರಕೆಯಲ್ಲಿ ಅದನ್ನು ಉಜ್ಜಿ ತೊಳಿಯುತ್ತಾನೆ. ನಂತರ ಯಾವುದೋ ನೀರು ತಂದು ಪಾತ್ರೆಗೆ ಸುರಿದು ಕುದಿಯಲು ಬಿಡುತ್ತಾರೆ. ನಂತರ ಅದಕ್ಕೆ ಒಂದು ಚೀಲ ಸಕ್ಕರೆ ತಂದು ಬೆರೆಸಿ ಪಾಕದ ರೀತಿ ಮಾಡುತ್ತಾರೆ. ಅದನ್ನು ಒಂದು ದಪ್ಪನೆಯ ಹಲಗೆ ಮೇಲೆ ಬಿಡಲಾಗುತ್ತದೆ ನಂತರ ಅದು ಗಟ್ಟಿಯಾದ ಬೆಂಡು-ಬತಾಸ್ಸಾಗಿ ಬದಲಾಗುತ್ತದೆ. ಈ ವಿಡಿಯೋದಲ್ಲಿ ಗಮನಿಸಬೇಕಾದ ಅಂಶವೆಂದರೆ, ವ್ಯಕ್ತಿ ಪಾತ್ರೆಯನ್ನು ಪೊರಕೆಯಿಂದ ತೊಳೆಯುವುದು, ಚಪ್ಪಲಿ ಹಾಕಿಕೊಂಡು ಕೆಲಸ ಮಾಡುವುದು, ಕಾಲ ಕೆಳಗೆ ತಯಾರಾದ ಬೆಂಡು ಬತ್ತಾಸು ಇರುತ್ತದೆ. ಜೊತೆಗೆ ಅದರ ಮೇಲೆ ನೋಣಗಳು ಕೂಡ ಓಡಾಡುತ್ತಿವೆ. ವೀಡಿಯೊದ ಕೊನೆಯಲ್ಲಿ, ಬ್ಲಾಗರ್ ಅಮನ್ ಸಿರೋಹಿ ಬೆಂಡು ಬತ್ತಾಸು ತಯಾರಿಕೆಯ ಪ್ರಕ್ರಿಯೆಯಲ್ಲಿ ನಿರಾಶೆಯನ್ನು ಅನುಭವಿಸುತ್ತಾನೆ ಮತ್ತು ನಾವು ಪ್ರಕ್ರಿಯೆಯನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಿದರೆ, ತಯಾರಿಕೆಯು ತುಂಬಾ ಕಳಪೆಯಾಗಿದೆ ಎಂದಿದ್ದಾರೆ.




ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವಿಡಿಯೋ  
ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಕೇವಲ 3 ನಿಮಿಷವಿದ್ದರೆ ಅಮನ್ ಸಿರೋಹಿ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಪೂರ್ತಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ 4.83 ಲಕ್ಷ ವೀಕ್ಷಣೆಗಳು, 45.3k ಲೈಕ್ಸ್ ಮತ್ತು 600ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ. ವಿಡಿಯೋ ಮತ್ತು ಅಮನ್ ಸಿರೋಹಿ ವಾದಕ್ಕೆ ಓದುಗರೊಬ್ಬರು, "ಹಾಗಾದರೆ ಭಾರತದಲ್ಲಿನ ಇತರ ಬೀದಿ ಆಹಾರವು 100% ಆರೋಗ್ಯಕರವಾಗಿದೆ ಎಂದು ನೀವು ಭಾವಿಸುತ್ತೀರಾ?" ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಮನ್, "ಸಾಮಾನ್ಯ ಆಹಾರಕ್ಕೂ ಪ್ರಸಾದಕ್ಕೂ ವ್ಯತ್ಯಾಸವಿದೆ." ಅಂತಾ ಅವರಿಗೆ ಉತ್ತರಿಸಿದ್ದಾರೆ.

ಇದನ್ನೂ ಓದಿ:  Viral Video: ನೀವು ಎಂದಾದರೂ ದಾಲ್ ಮಖ್ನಿ ಐಸ್ ಕ್ರೀಮ್ ರೋಲ್‌ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ

ಒಟ್ಟಾರೆ ಫುಡ್ ಬ್ಲಾಗರ್ ಗಳು ಹಂಚಿಕೊಳ್ಳುವ ವಿಡಿಯೋದಲ್ಲಿ ಕೆಲವರಿಂದ ಮಾಹಿತಿ ಸಿಕ್ಕರೆ ಇನ್ನು ಕೆಲವು ಕಣ್ಣಿಗೆ ಕಾಣದ ಸತ್ಯವನ್ನು ಅನಾವರಣಗೊಳಿಸುತ್ತವೆ ಎನ್ನಬಹುದು.
Published by:Ashwini Prabhu
First published: