Kosambari Recipe: ಗೌರಿ ಹಬ್ಬದ ದಿನ ಈ ಸ್ಪೆಷಲ್ ಕೋಸಂಬರಿಗಳನ್ನು ಟ್ರೈ ಮಾಡಿ

Gowri Ganesha Festival: ಎಲ್ಲರ ಮನೆಯಲ್ಲೂ ಮಾಡುವ ಹೆಸರುಬೇಳೆಯ ಕೋಸಂಬರಿಯಿಂದ ಹಿಡಿದು ಕೆಲ ವೆರೈಟಿ (Variety)  ಕೋಸಂಬರಿಗಳನ್ನು ಮಾಡುವ ವಿಧಾನವನ್ನು ನಾವಿಲ್ಲಿ ಕೊಟ್ಟಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗೌರಿ - ಗಣೇಶ ಹಬ್ಬದ (Gowri Ganesha Festival) ತಯಾರಿ ಈಗಾಗಲೇ ಎಲ್ಲೆಡೆ ಆರಂಭವಾಗಿದೆ. ಹಬ್ಬಕ್ಕೆ ಏನೆಲ್ಲಾ ಅಡುಗೆ ಮಾಡಬೇಕು ಯಾವ ರೀತಿ ರೆಡಿ ಆಗಬೇಕು ಎನ್ನುವ ಯೋಚನೆ ಸಹ ಶುರುವಾಗಿದೆ ಹೆಂಗಳೆಯರು ಒಂದೆಡೆ ಗೌರಿ ಪೂಜೆಗೆ (Gowri Pooja)  ಸಿದ್ದತೆ, ಇನ್ನೊಂದೆಡೆ ಹಬ್ಬದ ದಿನ ಏನು ವಿಶೇಷ ಮಾಡಬಹುದು ಎನ್ನುವ ಚಿಂತೆ ಸಹ ಇದೆ. ಸಾಮಾನ್ಯವಾಗಿ ಹಬ್ಬದ ದಿನ ಕೋಸಂಬರಿ (Kosambari)  ಮಾಡಲಾಗುತ್ತದೆ. ಪ್ರತಿ ಬಾರಿಯೂ ಒಂದೇ ರೀತಿ ಕೋಸಂಬರಿ ಮಾಡುವ ಬದಲು ವಿಭಿನ್ನವಾದ ಕೋಸಂಬರಿ ಮಾಡಲು ಈ ಬಾರಿ ಟ್ರೈ ಮಾಡಿ. ಎಲ್ಲರ ಮನೆಯಲ್ಲೂ ಮಾಡುವ ಹೆಸರುಬೇಳೆಯ ಕೋಸಂಬರಿಯಿಂದ ಹಿಡಿದು ಕೆಲ ವೆರೈಟಿ (Variety)  ಕೋಸಂಬರಿಗಳನ್ನು ಮಾಡುವ ವಿಧಾನವನ್ನು ನಾವಿಲ್ಲಿ ಕೊಟ್ಟಿದ್ದೇವೆ.

ಹೆಸರು ಬೇಳೆ ಕೋಸಂಬರಿ

ಬೇಕಾಗುವ ಸಾಮಾಗ್ರಿಗಳು

ಹೆಸರುಬೇಳೆ – 1 ಕಪ್
ಹಸಿತೆಂಗಿನತುರಿ – ಅರ್ಧ ಕಪ್
ಹಸಿಮೆಣಸಿನಕಾಯಿ – 3
ಕ್ಯಾರೆಟ್ ತುರಿ – ಅರ್ಧ ಕಪ್
ಸಾಸಿವೆ – ಅರ್ಧ ಚಮಚ
ಕರಿಬೇವು – 1 ಎಸಳು
ಇಂಗು – 1 ಚಿಟಿಕೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಹೆಸರುಬೇಳೆ ಕೋಸಂಬರಿ ಮಾಡುವ ವಿಧಾನ

ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಡಿ. ನಂತರ ಅದರಲ್ಲಿನ ನಿರನ್ನು ಬಸಿದು ಇಟ್ಟುಕೊಂಡಿರಿ. ಈಗ ಒಂದು ಬಾಣಲೆಯನ್ನು ತೆಗೆದುಕೊಂಡು ಎರಡು ಚಮಚ ಎಣ್ಣೆಯನ್ನು ಹಾಕಿ ಕಾಯಿಸಿ.  ಎಣ್ಣೆ ಕಾದ ನಂತರ ಅದಕ್ಕೆ ಇಂಗು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. ಅದನ್ನು ಆರಲು ಬಿಡಿ. ಒಗ್ಗರಣೆ ಆರಿದ ನಂತರ ಅದಕ್ಕೆ  ಹೆಸರುಬೇಳೆ,  ಹಸಿ ತೆಂಗಿನತುರಿ, ಕ್ಯಾರೆಟ್‌ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಅದಕ್ಕೆ ಅಗತ್ಯವಿದ್ದರೆ ನಿಂಬೆರಸ ಹಾಕಿದರೆ ಹೆಸರುಬೇಳೆ ಕೋಸಂಬರಿ ರೆಡಿ.

ಹೆಸರುಕಾಳು ಕೋಸಂಬರಿ

ಬೇಕಾಗುವ ಸಾಮಾಗ್ರಿಗಳು

ಮೊಳಕೆ ಬಂದ ಹೆಸರುಕಾಳು – 1 ಕಪ್

ಹಸಿತೆಂಗಿನ ತುರಿ – ಅರ್ಧ ಕಪ್

ಹಸಿಮೆಣಸಿನಕಾಯಿ – 4

ಕೊತ್ತಂಬರಿ ಸೊಪ್ಪು – ಸ್ವಲ್ಪ

ಉಪ್ಪು – ರುಚಿಗೆ ತಕ್ಕಷ್ಟು

ಹೆಸರುಕಾಳು ಕೋಸಂಬರಿ ಮಾಡುವ ವಿಧಾನ

ಹೆಸರುಕಾಳನ್ನು ಹಿಂದಿನ ರಾತ್ರಿ ಅಥವಾ 2 ದಿನ ಮೊದಲೇ ನೆನಸಿಡಿ. ನಿಮಗೆ ಹೆಚ್ಚು ಮೊಳಕೆ ಬರಬೇಕು ಎಂದರೆ 2 ದಿನ ನೆನೆಸಿಡಿ. ಮುಂದಿನ ದಿನ ಆ ಕಾಳುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ, ಅದಕ್ಕೆ ತೆಂಗಿನತುರಿ ಹಾಕಿ. ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಹೆಸರುಕಾಳು ಕೋಸಂಬರಿ ರೆಡಿ.

ತರಕಾರಿ ಕೋಸಂಬರಿ

ಬೇಕಾಗುವ ಪದಾರ್ಥಗಳು :

ಕ್ಯಾರೆಟ್ ತುರಿ – 2 ಕಪ್

ಬೀಟ್‌ರೂಟ್ ತುರಿ – 1 ಕಪ್

ಎಳೆ ಸೌತೆಕಾಯಿ – 2

ಸೀಮೆ ಬದನೆಕಾಯಿ ತುರಿ – 1 ಬದನೆಕಾಯಿ

ಹಸಿ ತೆಂಗಿನ ತುರಿ – 1 ವರೆ ಕಪ್

ಹಸಿಮೆಣಸಿನಕಾಯಿ – 4 ರಿಂದ 6

ಹಸಿಶುಂಠಿ – ಒಂದು ತುಂಡು

ಕರಿಬೇವು – 7 ರಿಂದ 8 ಎಸಳು

ಸಾಸಿವೆ – 1 ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಎಣ್ಣೆ – 4 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ತರಕಾರಿ ಕೊಸಂಬರಿ ಮಾಡುವ ವಿಧಾನ

ಸೌತೆಕಾಯಿ ಹಾಗೂ ಉಳಿದ ತರಕಾರಿಗಳನ್ನು ತುರಿದುಕೊಳ್ಳಿ. ಮುಖ್ಯವಾಗಿ ಸೌತೆಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಈಗ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ  ಎಣ್ಣೆಗೆ ಸಾಸಿವೆ, ಕರಿಬೇವು, ಶುಂಠಿ, ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಅದನ್ನು ಕೆಳಗಿಳಿಸಿ ತಣ್ಣಗಾಗಲು ಬಿಡಿ. ಫ್ರೈ ಮಾಡಿದ ಪದಾರ್ಥಗಳು ತಣ್ಣಗಾದ ನಂತರ ಅದಕ್ಕೆ  ಕ್ಯಾರೆಟ್, ಬೀಟ್‌ರೂಟ್, ಸೀಮೆಬದನೆಕಾಯಿ, ಹೆಚ್ಚಿದ ಸೌತೆಕಾಯಿ, ತೆಂಗಿನತುರಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ಅದರ ಮೇಲೆ ಕರಿಬೇವಿನ ಎಲೆಗಳನ್ನು ಹಾಕಿ.

ಇದನ್ನೂ ಓದಿ: ಪ್ರೊಟೀನ್ ಭರಿತ ಪದಾರ್ಥ ಸೇವನೆ ಮಾಡಿದ್ರೆ ಅಸ್ಥಿಸಂಧಿವಾತ ಸಮಸ್ಯೆ ನಿವಾರಣೆಯಾಗುತ್ತೆ

ಸೌತೆಕಾಯಿ ಕೋಸಂಬರಿ

ಬೇಕಾಗುವ ಪದಾರ್ಥಗಳು :

ಎಳೆ ಸೌತೆಕಾಯಿ – 2 ಅಥವಾ 3

ಹಸಿ ತೆಂಗಿನ ತುರಿ – 1 ಕಪ್

ಸಾಸಿವೆ – 1 ಚಮಚ

ಕರಿಬೇವು – 3 ರಿಂದ 4 ಎಸಳು

ಒಣಮೆಣಸಿನಕಾಯಿ – 3

ಕೊತ್ತಂಬರಿಸೊಪ್ಪು – ಸ್ವಲ್ಪ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 3 ಚಮಚ

ಇದನ್ನೂ ಓದಿ: ನಾಲಿಗೆ ನೀರೂರಿಸುವ ಉಪ್ಪಿನಕಾಯಿ ಈ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಂತೆ

ಸೌತೆಕಾಯಿ ಕೋಸಂಬರಿ ಮಾಡುವ ವಿಧಾನ:

ಮೊದಲು ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿಕೊಳ್ಳಿ. ಈಗ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ  ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಫ್ರೈ  ಮಾಡಿ. ಅದು ತಣ್ಣಗಾದ ನಂತರ ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಹಸಿತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಸೌತೆಕಾಯಿ ಕೋಸಂಬರಿ ರೆಡಿ.
Published by:Sandhya M
First published: