• Home
  • »
  • News
  • »
  • lifestyle
  • »
  • DIY Hacks: ಮನೆಯಲ್ಲಿ ನೀವೂ ತಯಾರಿಸ್ಬಹುದು ಡಿಯೋಡ್ರೆಂಟ್​, ಹೇಗೆ ಅಂತೀರಾ? ಇಲ್ಲಿದೆ ನೋಡಿ ಸರಳ ವಿಧಾನ

DIY Hacks: ಮನೆಯಲ್ಲಿ ನೀವೂ ತಯಾರಿಸ್ಬಹುದು ಡಿಯೋಡ್ರೆಂಟ್​, ಹೇಗೆ ಅಂತೀರಾ? ಇಲ್ಲಿದೆ ನೋಡಿ ಸರಳ ವಿಧಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Homemade Deodorant: ಮಾರುಕಟ್ಟೆಯಲ್ಲಿ ಲಭ್ಯವಿರುವ ಡಿಯೋಡ್ರೆಂಟ್​ ಅನ್ನು ಬಳಸುವುದು ದೇಹಕ್ಕೆ ಆರೋಗ್ಯಕ್ಕೆ ಹಾನಿಕಾರಕ. ಡಿಯೋಡರೆಂಟ್‌ಗಳ ಬಳಕೆ ಮಾಡುವುದು ನೆನಪಿನ ಸಮಸ್ಯೆ ಮತ್ತು ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೂ ಕಾರಣವಾಗಬಹುದು

  • Share this:

ನಾವು ನಮ್ಮ ಚರ್ಮದ (Skin) ಬಗ್ಗೆ ಕಾಳಜಿವಹಿಸುವ ಅವಶ್ಯಕತೆ ಬಹಳಷ್ಟಿದೆ. ಅದರಲ್ಲೂ ಧೂಳಿನಲ್ಲಿ ಓಡಾಡುವುದು ಹೆಚ್ಚಿರುವ ಕಾರಣ ಚರ್ಮಕ್ಕೆ ಸಮಸ್ಯೆಗಳು (Skin Problem)  ಹಲವಾರು. ಅದರಲ್ಲೂ ಬೆವರುವುದು ಒಂದು ಸಾಮಾನ್ಯ ಸಮಸ್ಯೆ ಎನ್ನಬಹುದು. ಈ ಬೆವರಿನ ವಾಸನೆ ನಮಗೆ ಕಿರಿಕಿರಿ ಮಾತ್ರವಲ್ಲದೇ, ಮುಜುಗರ ಕೂಡ ಉಂಟು ಮಾಡುತ್ತದೆ. ಹಾಗಾಗಿ ನಾವು ಡಿಯೋಡ್ರೆಂಟ್​ಗಳನ್ನು (deodorant) ಬಳಕೆ ಮಾಡುತ್ತೇವೆ. ಆದರೆ, ಅವುಗಳು ರಾಸಾಯನಿಕಗಳನ್ನು (Chemicals)  ಹೊಂದಿರುತ್ತದೆ. ಅದರ ಬದಲು ನಾವೇ ಮನೆಯಲ್ಲಿಯೇ ಅವುಗಳನ್ನು ತಯಾರಿಸಬಹುದು. ಇದನ್ನು ಮಾಡುವುದರಿಂದ ನಮ್ಮ ಚರ್ಮಕ್ಕೆ ಉಂಟಾಗುವ ಬೆವರಿನಿಂದ ಮುಕ್ತಿ ನೀಡುವುದು ಮಾತ್ರವಲ್ಲದೇ, ರಾಸಾಯನಿಕ ಮುಕ್ತವಾಗಿರುವುದರಿಂದ ಉತ್ತಮ ಕೂಡ. 


ಮಾರುಕಟ್ಟೆಯಲ್ಲಿ ಲಭ್ಯವಿರುವ ಡಿಯೋಡ್ರೆಂಟ್​ ಅನ್ನು ಬಳಸುವುದು ದೇಹಕ್ಕೆ ಆರೋಗ್ಯಕ್ಕೆ ಹಾನಿಕಾರಕ. ಡಿಯೋಡರೆಂಟ್‌ಗಳ ಬಳಕೆ ಮಾಡುವುದು ನೆನಪಿನ ಸಮಸ್ಯೆ ಮತ್ತು ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೂ ಕಾರಣವಾಗಬಹುದು ಎಂದು ಸಂಶೋಧನೆಗಳು ಬಹಿರಂಗ ಮಾಡಿದೆ. ಅದರ ಬದಲು ಮನೆಯಲ್ಲಿ ಲಭ್ಯವಿರುವ ನೈಸರ್ಗಿಕ ವಸ್ತುಗಳಿಂದ ನೀವು ಈ ಡಿಯೋಡ್ರೆಂಟ್​  ತಯಾರಿಸಿ ಬಳಸಿ.


ನೀರಿನ ಡಿಯೋಡ್ರೆಂಟ್​


ಇದಕ್ಕೆ ಬೇಕಾಗುವ ಪದಾರ್ಥಗಳು


ಅರ್ಧ  ಚಮಚ ಅಡಿಗೆ ಸೋಡಾ


¼ ಕಪ್ ಶುದ್ಧ ನೀರು (ಬಟ್ಟಿ ಇಳಿಸಿದ್ದರೆ ಉತ್ತಮ)


ಚಹಾ ಮರದ ಎಣ್ಣೆ, ಲ್ಯಾವೆಂಡರ್ ಅಥವಾ ರೋಸ್ಮರಿ ಎಣ್ಣೆ 2 ರಿಂದ 3 ಹನಿ


ಇದನ್ನೂ ಓದಿ: ಒತ್ತಡದಿಂದ ಮುಕ್ತಿ ನೀಡುತ್ತೆ ಈ ಮಂಡಲಾ ಆರ್ಟ್ ಥೆರಪಿ, ಮಾಡುವ ವಿಧಾನ ಇಲ್ಲಿದೆ


ನೀರಿನ ಡಿಯೋಡ್ರೆಂಟ್​  ಮಾಡುವ ವಿಧಾನ


ಖಾಲಿ ಸ್ಪ್ರೇ ಬಾಟಲಿಯನ್ನು ತೆಗೆದುಕೊಳ್ಳಿ, ಅದಕ್ಕೆ  ¼ ಕಪ್ ನೀರನ್ನು ಹಾಕಿ. ನಂತರ ಆ ನೀರಿಗೆ ಅಡಿಗೆ ಸೋಡಾವನ್ನು ಹಾಕಿ, ಬಾಟಲಿಯನ್ನು ಮುಚ್ಚಿ. ಈ ಎರಡು ವಸ್ತುಗಳು ಸರಿಯಾಗಿ ಮಿಶ್ರಣ ಆಗುವ ತನಕ ಚೆನ್ನಾಗಿ ಅಲುಗಾಡಿಸಿ. ಈಗ ಅದಕ್ಕೆ ಚಹಾ ಮರದ ಎಣ್ಣೆ, ಲ್ಯಾವೆಂಡರ್ ಅಥವಾ ರೋಸ್ಮರಿ ಎಣ್ಣೆ ಯಾವುದಾದರೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೆ ಬಾಟಲಿಯ ಮುಚ್ಚಳ ಮುಚ್ಚಿ ಅಲ್ಲಾಡಿಸಿದರೆ ನೀರಿನ ಡಿಯೋಡ್ರೆಂಟ್​ ರೆಡಿ.




ತೆಂಗಿನ ಎಣ್ಣೆ ಡಿಯೋಡ್ರೆಂಟ್​


ಬೇಕಾಗುವ ಪದಾರ್ಥಗಳು


1/3 ಕಪ್ ತೆಂಗಿನ ಎಣ್ಣೆ


1/4 ಕಪ್ ಅಡಿಗೆ ಸೋಡಾ


1/4 ಕಪ್ ಆರೋರೂಟ್ ಪೇಸ್ಟ್


​ಸಾರಭೂತ ತೈಲಗಳ 6 ರಿಂದ 10 ಹನಿಗಳು


ತೆಂಗಿನ ಎಣ್ಣೆ ಡಿಯೋಡ್ರೆಂಟ್​​  ಮಾಡುವ ವಿಧಾನ


ಅಡಿಗೆ ಸೋಡಾ ಮತ್ತು ಆರೋರೂಟ್ ಚೆನ್ನಾಗಿ ಮಿಶ್ರಣ ಮಾಡಿ.ಮಿಶ್ರಣವಾಗುವವರೆಗೆ ತೆಂಗಿನ ಎಣ್ಣೆಯಲ್ಲಿ ಮ್ಯಾಶ್ ಮಾಡಿ. ಅದಕ್ಕೆ ನಿಮ್ಮಿಷ್ಟದ ಸಾರಭೂತ ತೈಲಗಳನ್ನು ಸೇರಿಸಿ.ಮಿಶ್ರಣವನ್ನು ಖಾಲಿ ಗಾಜಿನ ಜಾರ್​ ನಲ್ಲಿ ಇರಿಸಿ. ಅದು ಲಿಕ್ವಿಡ್​ ರೂಪಕ್ಕೆ ಬರುವವರೆಗೂ ಅದನ್ನು ಬಿಸಿ ಮಾಡುತ್ತಿರಿ.


ತೆಂಗಿನ ಎಣ್ಣೆಯ ಡಿಯೋಡ್ರೆಂಟ್​ ವಿಧಾನ 2


ಬೇಕಾಗುವ ಪದಾರ್ಥಗಳು


5 ಚಮಚ ತೆಂಗಿನ ಎಣ್ಣೆ


3 ಚಮಚ ಶಿಯಾ ಬೆಣ್ಣೆ


3 ಚಮಚ ಕಾರ್ನ್ ಸ್ಟಾರ್ಚ್​


ಲ್ಯಾವೆಂಡರ್ ಆಯಿಲ್


5 ಚಮಚ ಅಡಿಗೆ ಸೋಡಾ


ಬೇರೆ ವಿಧಾನದಲ್ಲಿ ತೆಂಗಿನ ಎಣ್ಣೆ ಡಿಯೋಡ್ರೆಂಟ್​ ಮಾಡುವುದು ಹೇಗೆ?


ಮೊದಲು ಶಿಯಾ ಬೆಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಒಟ್ಟಿಗೆ ಹಾಕಿ ಚೆನ್ನಾಗಿ ಕರಗಿಸಿ. ದೊಡ್ಡ ಉರಿಯಲ್ಲಿ ಕರಗಿಸುವುದು ಸೂಕ್ತ. ನಂತರ ಅದನ್ನು ತಣ್ಣಗಾಗಲು ಬಿಡಿ. ಈ ಮಿಶ್ರಣ ತಣ್ಣಗಾದ ನಂತರ ಅದಕ್ಕೆ ಅಡಿಗೆ ಸೋಡಾ ಮತ್ತು ಕಾರ್ನ್ ಸ್ಟಾರ್ಚ್​ ಸೇರಿಸಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.


ಇದನ್ನೂ ಓದಿ: ಯಾರಿಗೂ ಗೊತ್ತಿಲ್ಲದ ಮರಸೇಬು ಹಣ್ಣಿನ ಪ್ರಯೋಜನಗಳಿವು, ದಿನಕ್ಕೊಂದರಂತೆ ತಿಂದರೆ ಆರೋಗ್ಯ ಹದಗೆಡಲ್ಲ


ಎಲ್ಲವೂ ಸರಿಯಾಗಿ ಹೊಂದಿಕೊಂಡರೆ ಮಾತ್ರ ಫಲಿತಾಂಶ ಚೆನ್ನಾಗಿರುತ್ತದೆ. ಅಲ್ಲದೇ, ಅವುಗಳು ದೇಹಕ್ಕೆ ಅಂಟಿಕೊಳ್ಳುವುದಿಲ್ಲ. ಈಗ ಅದಕ್ಕೆ ಸಾರಭೂತ ತೈಲ ಯಾವುದಾದರೂ ಬಳಕೆ ಮಾಡಬಹುದು. ಲ್ಯಾವೆಂಡರ್ ಎಣ್ಣೆ ಸೂಕ್ತ.  

Published by:Sandhya M
First published: