• Home
  • »
  • News
  • »
  • lifestyle
  • »
  • Breakfast Recipe: ಬರೀ 15 ನಿಮಿಷದಲ್ಲೇ ತಯಾರಿಸಿ ರುಚಿಯಾದ ಬ್ರೆಡ್ ದಹಿ ಉಪ್ಮಾ

Breakfast Recipe: ಬರೀ 15 ನಿಮಿಷದಲ್ಲೇ ತಯಾರಿಸಿ ರುಚಿಯಾದ ಬ್ರೆಡ್ ದಹಿ ಉಪ್ಮಾ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅದೇ ಸೂಜಿ ರವೆ, ತರಕಾರಿಗಳ ಮಿಶ್ರಣದಿಂದ ಮಾಡಿದ ಉಪ್ಪಿಟ್ಟು ತಿಂದು ಬೋರಾಗಿದೆ ಎನ್ನುವರು ಈ ಹೊಸ ರುಚಿ ಟ್ರೈ ಮಾಡಲೇ ಬೇಕು. ನಾವು ಇಲ್ಲಿ ನಿಮಗೆ ಬ್ರೆಡ್ ದಹಿ ಉಪ್ಮಾವನ್ನು ಹೇಗೆ ಮಾಡೋದು ಅಂತಾ ತಿಳಿಸಿಕೊಡುತ್ತಿದ್ದೇವೆ. ಪದಾರ್ಥಗಳು ಸಹ ನಿಮ್ಮ ಮನೆಯಲ್ಲೇ ಇರುವಂತವುಗಳಾಗಿದ್ದು, ಫಟಾಫಟ್ ಅಂತಾ ತಯಾರು ಮಾಡಿಬಿಡಬಹುದು. ಈ ಬ್ರೆಡ್ ದಹಿ ಉಪ್ಮಾವನ್ನು ಬಾಣಸಿಗ ರಣವೀರ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ರುಚಿಯಾದ, ವಿಭಿನ್ನವಾದ ಬ್ರೆಡ್ ಉಪ್ಮಾವನ್ನು ಹೇಗೆ ಮಾಡೋದು ನೋಡೋಣ ಬನ್ನಿ

ಮುಂದೆ ಓದಿ ...
  • Share this:

ಭಾರತೀಯ ಉಪಹಾರ (Indian Breakfast) ಪಾಕವಿಧಾನಗಳ ವೈವಿಧ್ಯತೆಗೇನು ಕಮ್ಮಿಯಿಲ್ಲ. ಬೆಳಿಗ್ಗಿನ ತಿಂಡಿಗೆ ದೋಸೆ, ಇಡ್ಲಿ, ಪಲಾವ್, ಚಿತ್ರನ್ನ, ಉಪ್ಪಿಟ್ಟು ಅಂತಾ ಬಗೆಗಬಗೆಯ ರುಚಿಗಳನ್ನು ಭಾರತೀಯರು (Indians) ಸವಿಯುತ್ತಾರೆ. ಇಲ್ಲಿ ಇನ್ನೊಂದು ವಿಶೇಷತೆ ಏನು ಗೊತ್ತಾ, ದೋಸೆ, ಇಡ್ಲಿ, ಉಪ್ಪಿಟ್ಟು (Upma) ಇವುಗಳನ್ನು ಒಂದೇ ರೀತಿ ಮಾಡಿಕೊಂಡು ತಿನ್ನಬೇಕಂತಿಲ್ಲ, ಇವುಗಳಲ್ಲೂ ಸಹ ಬಗೆಬಗೆಯ ಪಾಕವಿಧಾನಗಳಿವೆ. ನಮಗೆ ದೋಸೆ ಅಂದರೆ ಈರುಳ್ಳಿ ದೋಸೆ, ಮಸಾಲ ದೋಸೆ, ಇಡ್ಲಿ ಅಂದರೆ ತಟ್ಟೆ ಇಡ್ಲಿ, ರವಾ ಇಡ್ಲಿ ಹೀಗೆ ಬೇರೆ ಬೇರೆ ವೆರೈಟಿ (Variety) ಉಪಹಾರಗಳು ಸಿಗುತ್ತವೆ. ಇದೇ ರೀತಿ ಉಪ್ಪಿಟ್ಟಲ್ಲೂ ಸಹ ವೈವಿಧ್ಯತೆ ಇದೆ.


ಬ್ರೆಡ್, ಎಲ್ಲರಿಗೂ ಗೊತ್ತಿರುವ ಪದಾರ್ಥ. ಕೇವಲ ಟೀ, ಕಾಫಿ ಜೊತೆಗೆ ಸೀಮಿತವಾಗಿದ್ದ ಬ್ರೆಡ್ ನಿಂದ ಈಗ ಅನೇಕ ತಿಂಡಿ, ಸ್ನ್ಯಾಕ್ಸ್ ಮಾಡಬಹುದು, ಹಾಗೆ ಉಪ್ಪಿಟ್ಟನ್ನು ಕೂಡ ತಯಾರಿಸಬಹುದು ನೋಡಿ. ಉಪ್ಪಿಟ್ಟು ಅಂದರೆ ಮೂಗು ಮುರಿಯುವವರೇ ಜಾಸ್ತಿ. ಅದೇ ಸೂಜಿ ರವೆ, ತರಕಾರಿಗಳ ಮಿಶ್ರಣದಿಂದ ಮಾಡಿದ ಉಪ್ಪಿಟ್ಟು ತಿಂದು ಬೋರಾಗಿದೆ ಎನ್ನುವರು ಈ ಹೊಸ ರುಚಿ ಟ್ರೈ ಮಾಡಲೇ ಬೇಕು.


ನಾವು ಇಲ್ಲಿ ನಿಮಗೆ ಬ್ರೆಡ್ ದಹಿ ಉಪ್ಮಾವನ್ನು ಹೇಗೆ ಮಾಡೋದು ಅಂತಾ ತಿಳಿಸಿಕೊಡುತ್ತಿದ್ದೇವೆ. ಪದಾರ್ಥಗಳು ಸಹ ನಿಮ್ಮ ಮನೆಯಲ್ಲೇ ಇರುವಂತವುಗಳಾಗಿದ್ದು, ಫಟಾಫಟ್ ಅಂತಾ ತಯಾರು ಮಾಡಿಬಿಡಬಹುದು. ಈ ಬ್ರೆಡ್ ದಹಿ ಉಪ್ಮಾವನ್ನು ಬಾಣಸಿಗ ರಣವೀರ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ರುಚಿಯಾದ, ವಿಭಿನ್ನವಾದ ಬ್ರೆಡ್ ಉಪ್ಮಾವನ್ನು ಹೇಗೆ ಮಾಡೋದು ನೋಡೋಣ ಬನ್ನಿ


ಬ್ರೆಡ್ ದಹಿ ಉಪ್ಪಿಟ್ಟಿಗೆ ಬೇಕಾದ ಪದಾರ್ಥಗಳು


  • 6-7 ಕತ್ತರಿಸಿದ ಬ್ರೆಡ್ ತುಂಡುಗಳು

  • 2 ಟೀಸ್ಪೂನ್ ಮೊಸರು

  • ಉಪ್ಪು ರುಚಿಗೆ

  • 3 ಟೀಸ್ಪೂನ್ ಎಣ್ಣೆ

  • 1 ಟೀಸ್ಪೂನ್ ಸಾಸಿವೆ

  • 1 ಟೀಸ್ಪೂನ್ ಉದ್ದಿನ ಬೇಳೆ

  • 1 ಟೀಸ್ಪೂನ್ ಕಡ್ಲೆ ಬೇಳೆ

  • 1.5 tbsp ಶೇಂಗಾ

  • 1 ಕರಿಬೇವಿನ ಎಲೆಗಳು

  • 1 ಇಂಚು ಶುಂಠಿ

  • 2-3 ಚಮಚ ತುಪ್ಪ

  • 1 ಕತ್ತರಿಸಿದ ಈರುಳ್ಳಿ

  • 1 ಕತ್ತರಿಸಿದ ಟೊಮ್ಯಾಟೊ

  • ಕತ್ತರಿಸಿದ ಕೊತ್ತಂಬರಿ ಸೊಪ್ಪು


ಇದನ್ನೂ ಓದಿ: Breakfast Recipe: ಚಪಾತಿ, ರೋಟಿಗೆ ರುಚಿಕರ ಆಲೂ ಮಶ್ರೂಮ್​ ಮಾಡಿ


ಬ್ರೆಡ್ ದಹಿ ಉಪ್ಪಿಟ್ಟು ಮಾಡುವ ವಿಧಾನ


*ಒಂದು ಪಾತ್ರೆಯಲ್ಲಿ ಮೊಸರು, ನೀರು ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಅದಕ್ಕೆ ಕತ್ತರಿಸಿದ ಬ್ರೆಡ್ ಚೂರುಗಳನ್ನು ಸೇರಿಸಿ ಮಿಕ್ಸ್ ಮಾಡಿ ಅವುಗಳನ್ನು ಪಕ್ಕಕ್ಕೆ ಇರಿಸಿಕೊಳ್ಳಿ


*ಕಡಾಯಿಯಲ್ಲಿ, ಎಣ್ಣೆಯನ್ನು ಬಿಸಿ ಮಾಡಿ ಮತ್ತು ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಸೇರಿಸಿ ಮತ್ತು ಒಂದು ನಿಮಿಷ ಹುರಿಯಿರಿ, ನಂತರ ಕರಿಬೇವಿನ ಎಲೆಗಳು, ಶುಂಠಿ, ಹಸಿರು ಮೆಣಸಿನಕಾಯಿಗಳು, ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಮತ್ತೆ ಮಿಶ್ರಣ ಮಾಡಿ ಈರುಳ್ಳಿ ಹಸಿ ವಾಸನೆ ಹೋಗುವವರೆಗೂ ಸ್ವಲ್ಪ ಹುರಿಯಿರಿ. ನಂತರ ಇದಕ್ಕೆ ಸಣ್ಣಗೆ ಕತ್ತರಿಸಿದ ಟೊಮ್ಯಾಟೋ ಸೇರಿಸಿ ಮತ್ತೆ ಸ್ವಲ್ಪ ಹೊತ್ತು ಹುರಿಯಿರಿ.


*ನಂತರ ಈ ಒಗ್ಗರಣೆಗೆ ಉಪ್ಪು ಮತ್ತು ನೀರು ಹಾಕಿ ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿ, ನಂತರ ಮೊಸರಲ್ಲಿ ನೆನೆಸಿದ ಬ್ರೆಡ್ ಸೇರಿಸಿ. ಎರಡು ನಿಮಿಷಗಳ ಉರಿಯಲ್ಲಿ ಮಿಕ್ಸ್ ಮಾಡಿ. ಮೇಲೆ ತುಪ್ಪ ಸೇರಿಸಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಬಿಸಿಯಾದ ಬ್ರೆಡ್ ದಹಿ ಉಪ್ಮಾ ಸಿದ್ಧ. ಈ ಬ್ರೆಡ್ ಉಪ್ಪಿಟ್ಟಿನ ರುಚಿ ಹೆಚ್ಚಿಸಲು ನೀವು ಸೇವ್ ಅಥವಾ ಗ್ರೀನ್ ಚಟ್ನಿಯೊಂದಿಗೆ ತಿನ್ನಬಹುದು.


ಇದನ್ನೂ ಓದಿ:  Breakfast: ಬೆಳಗಿನ ತಿಂಡಿಗೆ ರಾಜಗಿರಾ ಬಾಳೆಹಣ್ಣು ಪುರಿ ರೆಸಿಪಿ ಮಾಡಿ


ಹಾಗಾದರೆ ನಾಳೆಯ ತಿಂಡಿಗೆ ನೀವು ಈ ಸುಲಭವಾದ ಬ್ರೆಡ್ ಉಪ್ಪಿಟ್ಟನ್ನು ಮಾಡಿಕೊಂಡು ಹೊಸ ರುಚಿಯನ್ನು ಟ್ರೈ ಮಾಡಿಬಿಡಿ.

Published by:Ashwini Prabhu
First published: